ಅಧಿಕ ಮಾಸದ ಮಹತ್ವ (ಪುರುಷೋತ್ತಮ ಮಾಸ)
ಈ ಅವಧಿಯಲ್ಲಿ ಮಾಡಬೇಕಾದ ವ್ರತಗಳು ಮತ್ತು ಪುಣ್ಯಪ್ರದ ಕಾರ್ಯಗಳು ಹಾಗೂ ಅವುಗಳನ್ನು ಮಾಡುವ ಹಿಂದಿರುವ ಶಾಸ್ತ್ರ
ಚಾಂದ್ರಮಾನದ ಪ್ರಕಾರ ಪ್ರತೀ 2-3 ವರ್ಷಗಳಿಗೊಮ್ಮೆ ಬರುವ ಹದಿಮೂರನೇ ತಿಂಗಳಿಗೆ ಅಧಿಕ ಮಾಸ ಎಂಬ ಹೆಸರಿದೆ. ಅಧಿಕ ಮಾಸಕ್ಕೆ ಮುಂಬರುವ ಮಾಸದ ಹೆಸರನ್ನು ಕೊಡುತ್ತಾರೆ — ಅಂದರೆ ‘(ತಿಂಗಳಿನ ಹೆಸರು) ಅಧಿಕ ಮಾಸ’, ನಂತರ ಬರುವ ತಿಂಗಳಿಗೆ ‘ನಿಜ (ತಿಂಗಳಿನ ಹೆಸರು)’. ಅಧಿಕ ಮಾಸ ಒಂದು ದೊಡ್ಡ ಹಬ್ಬದಂತೆ ಇರುತ್ತದೆ. ಆದುದರಿಂದ ಈ ಮಾಸದಲ್ಲಿ ಧಾರ್ಮಿಕ ಕಾರ್ಯಗಳನ್ನು, ದಾನಾದಿ ಕರ್ಮಗಳನ್ನು ಮಾಡುತ್ತಾರೆ.
ಅಧಿಕ ಮಾಸದಲ್ಲಿ ವ್ರತ ಮತ್ತು ಪುಣ್ಯದಾಯಕ ಕಾರ್ಯಗಳನ್ನು ಏಕೆ ಮಾಡುತ್ತಾರೆೆ
ಪ್ರತಿಯೊಂದು ಮಾಸದಲ್ಲಿ ಒಂದೊಂದು ರಾಶಿಯಲ್ಲಿ ಸೂರ್ಯನ ಸಂಕ್ರಮಣವಾಗುತ್ತದೆ; ಆದರೆ ಅಧಿಕ ಮಾಸದಲ್ಲಿ ಸೂರ್ಯ ಯಾವುದೇ ರಾಶಿಯಲ್ಲಿ ಸಂಕ್ರಮಣ ಮಾಡುವುದಿಲ್ಲ, ಅಂದರೆ ಅಧಿಕ ಮಾಸದಲ್ಲಿ ಸೂರ್ಯ ಸಂಕ್ರಮಣದಲ್ಲಿರುವುದಿಲ್ಲ. ಆದುದರಿಂದ ಚಂದ್ರ ಮತ್ತು ಸೂರ್ಯನ ವೇಗಲ್ಲಿ ವ್ಯತ್ಯಾಸವಾಗುತ್ತದೆ ಮತ್ತು ವಾತಾವರಣದಲ್ಲಿಯೂ ಗ್ರಹಣಕಾಲದಂತೆ ಬದಲಾವಣೆಗಳಾಗುತ್ತವೆ.
ಬದಲಾಗುತ್ತಿರುವ ಈ ಅನಿಷ್ಟ ವಾತಾವರಣದಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು ಎಂದು ಈ ಮಾಸದಲ್ಲಿ ವ್ರತಗಳು ಮತ್ತು ಪುಣ್ಯದಾಯಕ ಕಾರ್ಯಗಳನ್ನು ಮಾಡಬೇಕು ಎಂದು ಶಾಸ್ತ್ರಗಳಲ್ಲಿ ಹೇಳಿದ್ದಾರೆ.
“ಪುರುಷೋತ್ತಮ ಮಾಸದಲ್ಲಿ ನಿರಂತರ ನಾಮಜಪದಿಂದ ಪುರುಷೋತ್ತಮ ಶ್ರೀ ಕೃಷ್ಣನ ಕೃಪೆಯಾಗುತ್ತದೆ!”
— ಶಾಸ್ತ್ರಗಳುಅಧಿಕ ಮಾಸದಲ್ಲಿ ಇವನ್ನು ಮಾಡಿ
ಅಧಿಕ ಮಾಸದಲ್ಲಿ ಶ್ರೀ ಪುರುಷೋತ್ತಮಪ್ರೀತ್ಯರ್ಥ 1 ತಿಂಗಳು : ಉಪವಾಸ ಮಾಡಬೇಕು. ಅದು ಆಗದಿದ್ದರೆ
- ಆಯಾಚಿತ ಭೋಜನ — ಆಕಸ್ಮಿಕವಾಗಿ ಯಾರದ್ದಾದರೂ ಮನೆಗೆ ಊಟಕ್ಕೆ ಹೋಗುವುದು
- ನಕ್ತ ಭೋಜನ — ಹಗಲಲ್ಲಿ ಊಟ ಮಾಡದೇ ಕೇವಲ ರಾತ್ರಿಯ ಮೊದಲನೇ ಪ್ರಹರದಲ್ಲಿ ಒಂದೇ ಬಾರಿ ಊಟ ಮಾಡುವುದು (ಸಾಧಾರಣ ಸಂಜೆ 6 ರಿಂದ 9 ಗಂಟೆಯೊಳಗೆ)
- ಏಕಭುಕ್ತರಾಗಿ — ದಿನದಲ್ಲಿ ಒಂದೇ ಬಾರಿ ಊಟ ಮಾಡುವುದು
ಅಶಕ್ತ ವ್ಯಕ್ತಿಯು ಈ ನಾಲ್ಕು ಪ್ರಕಾರಗಳಲ್ಲಿ ಒಂದು ಪ್ರಕಾರವನ್ನು ಕಡಿಮೆ ಪಕ್ಷ ಮೂರು ದಿನಗಳು ಅಥವಾ ಒಂದು ದಿನವಾದರೂ ಆಚರಿಸಬೇಕು.
ಪ್ರತಿದಿನ ಒಂದೇ ಬಾರಿ ಊಟ ಮಾಡಬೇಕು. ಊಟ ಮಾಡುವಾಗ ಮಾತನಾಡಬಾರದು. ಇದರಿಂದ ಆತ್ಮಬಲ ಹೆಚ್ಚಾಗುತ್ತದೆ. ಮೌನವಾಗಿದ್ದು ಊಟ ಮಾಡುವುದರಿಂದ ಪಾಪಕ್ಷಾಲನವಾಗುತ್ತದೆ.
ತೀರ್ಥಸ್ನಾನ ಮಾಡಬೇಕು. ಕಡಿಮೆಪಕ್ಷ ಒಂದು ದಿನವಾದರೂ ಗಂಗಾಸ್ನಾನವನ್ನು ಮಾಡಿದರೆ ಎಲ್ಲ ಪಾಪಗಳಿಂದ ನಿವೃತ್ತಿಯಾಗುತ್ತದೆ.
ಅಧಿಕ ಮಾಸದಲ್ಲಿ ಪ್ರತಿದಿನವೂ ದಾನ ನೀಡಬೇಕೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇಡೀ ತಿಂಗಳಿನಲ್ಲಿ ದಾನ ನೀಡುವುದು ಸಾಧ್ಯವಿಲ್ಲದಿದ್ದರೆ ಮುಂದೆ ನೀಡಿರುವ ದಿನಗಳಂದು ವಿಶೇಷ ದಾನಧರ್ಮ ಮಾಡಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ:
- ಶುಕ್ಲ ಮತ್ತು ಕೃಷ್ಣ ದ್ವಾದಶಿ
- ಹುಣ್ಣಿಮೆ
- ಕೃಷ್ಣ ಅಷ್ಟಮಿ, ನವಮಿ, ಚತುರ್ದಶಿ
- ಅಮಾವಾಸ್ಯೆ
- ವ್ಯತಿಪಾತ ಹಾಗೂ ವೈಧೃತಿ ಯೋಗಗಳಲ್ಲಿ
ಅಧಿಕ ಮಾಸದಲ್ಲಿ ಪ್ರತಿದಿನ ಪುರುಷೋತ್ತಮ ಶ್ರೀ ಕೃಷ್ಣನ ಪೂಜೆ ಮತ್ತು ನಾಮಜಪವನ್ನು ಮಾಡಬೇಕು. ದೇವರ ಅಖಂಡ ಅನುಸಂಧಾನದಲ್ಲಿರಲು ಪ್ರಯತ್ನಿಸಬೇಕು.
ದೀಪದಾನ ಮಾಡಬೇಕು. ದೇವರ ಮುಂದೆ ಅಖಂಡ ದೀಪವನ್ನು ಹಚ್ಚಿಟ್ಟರೆ ಲಕ್ಷ್ಮಿ ಪ್ರಾಪ್ತವಾಗುತ್ತದೆ.
ತೀರ್ಥಯಾತ್ರೆ ಮಾಡಬೇಕು. ದೇವರ ದರ್ಶನ ಪಡೆಯಬೇಕು.
ತಾಂಬೂಲದಾನ (ವೀಳ್ಯದೆಲೆ-ದಕ್ಷಿಣೆ) ಮಾಡಬೇಕು. ಒಂದು ತಿಂಗಳು ತಾಂಬೂಲದಾನ ನೀಡಿದರೆ ಸೌಭಾಗ್ಯಪ್ರಾಪ್ತಿಯಾಗುತ್ತದೆ ಎಂದು ನಂಬಿಕೆಯಿದೆ.
ಗೋಪೂಜೆ ಮಾಡಬೇಕು. ಗೋಗ್ರಾಸ ಕೊಡಬೇಕು.
ಅಪೂಪದಾನ (ಅನಾರಸಗಳ ದಾನ) ಮಾಡಬೇಕು.
ಸನಾತನದ ಆಶ್ರಮಗಳಿಗಾಗಿ ಅನ್ನದಾನ ಮಾಡಿ
ಅಧಿಕ ಮಾಸದಲ್ಲಿ ದಾನ ನೀಡಲಿಚ್ಛಿಸುವವರು, ಮನೆಯಿಂದಲೇ ಸನಾತನದ ಆಧ್ಯಾತ್ಮಪ್ರಸಾರದ ಕಾರ್ಯಕ್ಕೆ ದಾನ ನೀಡಬಹುದು.
ಅಧಿಕ ಮಾಸದಲ್ಲಿ ಯಾವ ಕಾರ್ಯಗಳನ್ನು ಮಾಡಬೇಕು ?
ಈ ಮಾಸದಲ್ಲಿ ದಿನನಿತ್ಯ ಮತ್ತು ನೈಮಿತ್ತಿಕ ಕರ್ಮಗಳನ್ನು ಮಾಡಬೇಕು. ಗತ್ಯಂತರವಿಲ್ಲದಂತಹ ಕರ್ಮಗಳನ್ನು ಮಾಡಬೇಕು:
ಜ್ವರಶಾಂತಿ, ಪರ್ಜನ್ಯೇಷ್ಟಿ ಇತ್ಯಾದಿ ದೈನಂದಿನ ಸಕಾಮ ಕರ್ಮಗಳನ್ನು ಮಾಡಬೇಕು.
ಈ ಮಾಸದಲ್ಲಿ ದೇವರ ಪುನಃ ಪ್ರತಿಷ್ಠಾಪನೆ ಮಾಡಬಹುದು.
ಗ್ರಹಣಶ್ರಾದ್ಧ, ಜಾತಕರ್ಮ, ನಾಮಕರ್ಮ, ಅನ್ನಪ್ರಾಶನ ಇತ್ಯಾದಿ ಸಂಸ್ಕಾರಗಳನ್ನು ಮಾಡಬಹುದು.
ಮನ್ವಾದಿ ಮತ್ತು ಯುಗಾದಿ ಸಂಬಂಧಿತ ಶ್ರಾದ್ಧಾದಿ ಕೃತಿಗಳನ್ನು ಮಾಡಬೇಕು. ತೀರ್ಥಶ್ರಾದ್ಧ, ದರ್ಶಶ್ರಾದ್ಧ ಮತ್ತು ನಿತ್ಯಶ್ರಾದ್ಧ ಮಾಡಬಹುದು.
ಅಧಿಕ ಮಾಸದಲ್ಲಿ ಯಾವ ಕೆಲಸಗಳನ್ನು ಮಾಡಬಾರದು?
ದೈನಂದಿನ ಕಾಮ್ಯ ಕರ್ಮಗಳನ್ನು ಹೊರತುಪಡಿಸಿ ಇತರ ಕಾಮ್ಯಕರ್ಮಗಳ ಆರಂಭ ಮತ್ತು ಸಮಾಪ್ತಿ ಮಾಡಬಾರದು:
ಅಪೂರ್ವ ದೇವದರ್ಶನ (ಮೊದಲು ಎಂದೂ ದರ್ಶನ ಪಡೆಯದಿರುವ ಸ್ಥಳಕ್ಕೆ ದೇವದರ್ಶನಕ್ಕೆ ಹೋಗುವುದು), ಗೃಹಾರಂಭ, ವಾಸ್ತುಶಾಂತಿ, ಸಂನ್ಯಾಸಗ್ರಹಣ, ಹೊಸ ವ್ರತ ಗ್ರಹಣದೀಕ್ಷೆ, ವಿವಾಹ, ಉಪನಯನ, ಚೌಲ, ದೇವತಾಪ್ರತಿಷ್ಠೆ, ಮಹಾದಾನ (ತುಂಬಾ ದೊಡ್ಡ ದಾನ) ಇತ್ಯಾದಿಗಳನ್ನು ಮಾಡಬಾರದು.
ಅಧಿಕ ಮಾಸದಲ್ಲಿ ಹುಟ್ಟುಹಬ್ಬ ಬಂದರೆ ಏನು ಮಾಡಬೇಕು?
ವ್ಯಕ್ತಿಯ ಜನನ ಯಾವ ಮಾಸದಲ್ಲಿ ಆಗಿದೆಯೋ, ಅದು ಈ ಬಾರಿ ಅಧಿಕ ಮಾಸವಾಗಿದ್ದರೆ, ಆ ವ್ಯಕ್ತಿಯ ಹುಟ್ಟುಹಬ್ಬವನ್ನು ನಿಜ ಮಾಸದಲ್ಲಿ ಆಚರಿಸಬೇಕು — ಅಧಿಕ ಮಾಸದಲ್ಲಿ ಆಚರಿಸಬಾರದು.
2025 ರಲ್ಲಿ ಜ್ಯೇಷ್ಠ ಮಾಸದಲ್ಲಿ ಜನಿಸಿದ ಮಗುವಿನ ಹುಟ್ಟುಹಬ್ಬವನ್ನು ಈ ವರ್ಷ ಜ್ಯೇಷ್ಠ ಮಾಸ ಅಧಿಕವಾಗಿದ್ದರಿಂದ ಅಧಿಕಮಾಸದಲ್ಲಿ ಆಚರಿಸದೇ ನಿಜ ಜ್ಯೇಷ್ಠ ಮಾಸದಲ್ಲಿ ಆಯಾ ತಿಥಿಯಂದು ಆಚರಿಸಬೇಕು. ಈ ವರ್ಷದಲ್ಲಿ ಅಧಿಕ ಜ್ಯೇಷ್ಠ ಮಾಸದಲ್ಲಿ ಮಗುವಿನ ಜನನವಾದರೆ ಆ ಮಗುವಿನ ಹುಟ್ಟುಹಬ್ಬವನ್ನು ಪ್ರತಿವರ್ಷ ಜ್ಯೇಷ್ಠ ಮಾಸದಲ್ಲಿ ಆಯಾ ತಿಥಿಯಂದು ಆಚರಿಸಬೇಕುಬೇಕು.
ಅಧಿಕ ಮಾಸವಿದ್ದರೆ ಶ್ರಾದ್ಧ ಯಾವಾಗ ಮಾಡಬೇಕು?
ಶಕೆ 1947 ರ (ಅಂದರೆ ಹಿಂದಿನ ವರ್ಷದ) ಜ್ಯೇಷ್ಠ ಮಾಸದಲ್ಲಿ ಮರಣ ಹೊಂದಿದ್ದರೆ, ಆ ವ್ಯಕ್ತಿಯ ಪ್ರಥಮ ವರ್ಷಶ್ರಾದ್ಧವನ್ನು ಶಕೆ 1948 ರ (ಈ ವರ್ಷದ) ಅಧಿಕ ಜ್ಯೇಷ್ಠ ಮಾಸದಲ್ಲಿ ಆ ತಿಥಿಗೆ ಮಾಡಬೇಕು.
ಪ್ರತಿವರ್ಷದ ಜ್ಯೇಷ್ಠ ಮಾಸದ ಪ್ರತಿಸಾಂವತ್ಸರಿಕ ಶ್ರಾದ್ಧವನ್ನು ಈ ವರ್ಷದ ನಿಜ ಜ್ಯೇಷ್ಠ ಮಾಸದಲ್ಲಿ ಮಾಡಬೇಕು; ಆದರೆ ಹಿಂದಿನ ಅಧಿಕ ಜ್ಯೇಷ್ಠ ಮಾಸದಲ್ಲಿ ನಿಧನರಾದವರ ಪ್ರತಿಸಾಂವತ್ಸರಿಕ ಶ್ರಾದ್ಧವನ್ನು ಈ ವರ್ಷ ಅಧಿಕ ಜ್ಯೇಷ್ಠ ಮಾಸದಲ್ಲೇ ಮಾಡಬೇಕು.
ಹಿಂದಿನ ವರ್ಷ (ಶಕೆ 1947 ರಲ್ಲಿ) ಆಶಾಢ, ಶ್ರಾವಣ, ಇತ್ಯಾದಿ ಮಾಸಗಳಲ್ಲಿ ನಿಧನರಾದವರ ಪ್ರಥಮ ವರ್ಷಶ್ರಾದ್ಧ ಆಯಾ ಮಾಸದ ಆಯಾ ತಿಥಿಯಂದೇ ಮಾಡಬೇಕು. 13 ಮಾಸಗಳಾಗುತ್ತವೆ; ಎಂದು 1 ಮಾಸ ಮೊದಲು ಮಾಡಬಾರದು.
ಈ ವರ್ಷ ಅಧಿಕ ಜ್ಯೇಷ್ಠ ಅಥವಾ ನಿಜ ಜ್ಯೇಷ್ಠ ಮಾಸದಲ್ಲಿ ನಿಧನರಾದರೆ ಅವರ ಪ್ರಥಮ ವರ್ಷಶ್ರಾದ್ಧ ಮುಂದಿನ ವರ್ಷ ಜ್ಯೇಷ್ಠ ಮಾಸದಲ್ಲಿ ಆ ತಿಥಿಯಂದು ಮಾಡಬೇಕು.
ಆಧಾರ: ಧರ್ಮ ಸಿಂಧು-ಮಲಮಾಸ ನಿರ್ಣಯ, ವರ್ಜಾವರ್ಜ್ಯ ಕರ್ಮಗಳು ವಿಭಾಗ
ಅಧಿಕ ಮಾಸವೆಂದರೇನು?
ಸೂರ್ಯ ಮತ್ತು ಚಂದ್ರರು ಸಂಯೋಗಗೊಳ್ಳುವ ಸಮಯದಿಂದ, ಅಂದರೆ ಒಂದು ಅಮಾವಾಸ್ಯೆಯಿಂದ ಪುನಃ ಇಂತಹ ಸಂಯೋಗವಾಗುವ ವರೆಗೆ, ಅಂದರೆ ಮುಂದಿನ ಮಾಸದ ಅಮಾವಾಸ್ಯೆಯ ವರೆಗಿನ ಕಾಲವೆಂದರೆ ಚಾಂದ್ರಮಾಸ. ಹಬ್ಬ, ಉತ್ಸವ, ವ್ರತಗಳು, ಉಪಾಸನೆ, ಹವನ, ಶಾಂತಿ, ವಿವಾಹ ಇತ್ಯಾದಿ ಹಿಂದೂ ಧರ್ಮಶಾಸ್ತ್ರದಲ್ಲಿರುವ ಎಲ್ಲ ಕಾರ್ಯಗಳು ಚಾಂದ್ರಮಾಸದಂತೆ (ಚಂದ್ರ ಗತಿಗನುಗುಣವಾಗಿ) ನಿರ್ಧರಿಸಲ್ಪಟ್ಟಿವೆ. ಚಾಂದ್ರಮಾಸದ ಹೆಸರು ಆಯಾ ಮಾಸದಲ್ಲಿ ಬರುವ ಹುಣ್ಣಿಮೆಯ ನಕ್ಷತ್ರದಿಂದ ಬಂದಿದೆ. ಉದಾ. ಚೈತ್ರ ಮಾಸದ ಹುಣ್ಣಿಮೆಗೆ ಚಿತ್ರಾ ನಕ್ಷತ್ರವಿರುತ್ತದೆ.
ಚೈತ್ರಮಾಸದಿಂದ ಪ್ರಾರಂಭವಾಗಿ ಫಾಲ್ಗುಣ ಮಾಸದಲ್ಲಿ ಕೊನೆಗೊಳ್ಳುವ ಅವಧಿಯನ್ನು ಚಾಂದ್ರವರ್ಷ ಎಂದು ಕರೆಯುತ್ತಾರೆೆ. ಒಂದು ಚಾಂದ್ರವರ್ಷದಲ್ಲಿ ಸಾಧಾರಣವಾಗಿ 354 ದಿನಗಳಿರುತ್ತವೆ, ಅದೇ ಅಧಿಕ ಮಾಸವಿರುವ ಚಾಂದ್ರವರ್ಷದಲ್ಲಿ 384 ದಿನಗಳಿರುತ್ತವೆ.
ಒಂದು ಸೂರ್ಯ ಸಂಕ್ರಾಂತಿಯಿಂದ ಮುಂದಿನ ಸೂರ್ಯ ಸಂಕ್ರಾಂತಿಯವರೆಗಿನ ಸಮಯವನ್ನು ಸೌರಮಾಸ ಎಂದು ಕರೆಯುತ್ತೇವೆೆ.
ಋತುಗಳು ಸೌರಮಾಸದಂತೆ (ಸೂರ್ಯನ ವೇಗಕ್ಕನುಗುಣವಾಗಿ) ನಿರ್ಧರಿಸಲ್ಪಟ್ಟಿವೆ. ಸೂರ್ಯನು ಅಶ್ವಿನಿ ನಕ್ಷತ್ರದಿಂದ ಸಂಚರಿಸುತ್ತಾ ಪುನಃ ಅದೇ ಸ್ಥಳಕ್ಕೆ ಬರುತ್ತಾನೆ. ಅಷ್ಟು ಕಾಲಾವಧಿಗೆ ಸೌರವರ್ಷ ಎಂದು ಹೇಳುತ್ತಾರೆ.
ಚಾಂದ್ರವರ್ಷದಲ್ಲಿ 354 ದಿನಗಳು ಮತ್ತು ಸೌರವರ್ಷದಲ್ಲಿ 365 ದಿನಗಳು ಇರುತ್ತವೆ, ಅಂದರೆ ಈ ಎರಡು ವರ್ಷಗಳ ಗಣನೆಯಲ್ಲಿ 11 ದಿನಗಳ ಅಂತರವಿರುತ್ತದೆ. ಈ ಅಂತರ ಸರಿದೂಗಿಸಲು, ಹಾಗೆಯೇ ಚಾಂದ್ರವರ್ಷ ಮತ್ತು ಸೌರವರ್ಷಗಳು ತಾಳೆಯಾಗಬೇಕು; ಎಂದು ಸಾಧಾರಣವಾಗಿ ಸುಮಾರು 32½ (ಮೂವತ್ತೆರಡೂವರೆ) ಮಾಸಗಳ ಬಳಿಕ ಒಂದು ಅಧಿಕ ಮಾಸವೆಂದು ಪರಿಗಣಿಸುತ್ತಾರೆ, ಅಂದರೆ 27 ರಿಂದ 35 ಮಾಸಗಳಲ್ಲಿ 1 ಅಧಿಕ ಮಾಸ ಬರುತ್ತದೆ.
ಅಧಿಕ ಮಾಸದ ಇತರ ಹೆಸರುಗಳು
ಅಧಿಕ ಮಾಸವನ್ನು ಮಲಮಾಸ ಎಂದು ಕರೆಯುತ್ತಾರೆ. ಅಧಿಕಮಾಸದಲ್ಲಿ ಮಂಗಲಕಾರ್ಯಗಳ ಬದಲಾಗಿ ವಿಶೇಷ ವ್ರತಗಳು ಮತ್ತು ಪುಣ್ಯದಾಯಕ ಕಾರ್ಯಗಳನ್ನು ಮಾಡಲಾಗುತ್ತದೆ; ಆದ್ದರಿಂದ ಇದನ್ನು ಪುರುಷೋತ್ತಮ ಮಾಸ ಎಂದೂ ಕರೆಯುತ್ತಾರೆ.
ಯಾವ್ಯಾವ ಮಾಸದಲ್ಲಿ ಅಧಿಕ ಮಾಸ ಬರುತ್ತದೆ?
ಚೈತ್ರದಿಂದ ಆಶ್ವಯುಜ ಈ ಏಳು ತಿಂಗಳುಗಳಲ್ಲಿ ಒಂದು ಅಧಿಕವಾಗಿ ಬರುತ್ತದೆ. ಅದರ ನಂತರ ಬರುವ ತಿಂಗಳು ನಿಜ ಮಾಸವೆಂದು ಕರೆಯಲ್ಪಡುತ್ತದೆ.
ಯಾವಾಗಲಾದರೊಮ್ಮೆ ಫಾಲ್ಗುಣ ಮಾಸವೂ ಅಧಿಕ ಮಾಸ ಎಂದು ಬರುತ್ತದೆ.
ಕಾರ್ತಿಕ, ಮಾರ್ಗಶಿರ ಮತ್ತು ಪುಷ್ಯ ಈ ಮಾಸಗಳಿಗೆ ಹೊಂದಿಕೊಂಡಂತೆ ಅಧಿಕ ಮಾಸ ಬರುವುದಿಲ್ಲ.
ಕ್ಷಯ ಮಾಸ
ಅಧಿಕ ಮಾಸವಿದ್ದಂತೆಯೇ ಅಪರೂಪವಾಗಿ ಕ್ಷಯ ಮಾಸ ಕೂಡ ಇರಬಹುದು. ಕಾರ್ತಿಕ, ಮಾರ್ಗಶಿರ ಮತ್ತು ಪುಷ್ಯ ಈ ಮೂರು ಮಾಸಗಳಲ್ಲಿ ಯಾವುದಾದರೊಂದು ಮಾಸ ಕ್ಷಯ ಮಾಸವಾಗುವ ಸಾಧ್ಯತೆಯಿದೆ; ಏಕೆಂದರೆ ಈ ಮೂರು ಮಾಸಗಳಲ್ಲಿ ಸೂರ್ಯನ ವೇಗ ಅಧಿಕವಿರುವುದರಿಂದ ಒಂದು ಚಾಂದ್ರಮಾಸದಲ್ಲಿ ಅದರ ಎರಡು ಸಂಕ್ರಮಣಗಳಾಗುವ ಸಾಧ್ಯತೆಯಿದೆ.
ಕ್ಷಯ ಮಾಸ ಬಂದಾಗ, ಒಂದು ವರ್ಷದಲ್ಲಿ ಕ್ಷಯ ಮಾಸದ ಮೊದಲು 1 ಮತ್ತು ನಂತರ 1, ಹೀಗೆ 2 ಅಧಿಕ ಮಾಸಗಳು ಹತ್ತಿರತ್ತಿರ ಬರುತ್ತವೆ.
ಮಾಘ ಮಾಸ ಮಾತ್ರ ಅಧಿಕ ಅಥವಾ ಕ್ಷಯ ಮಾಸವಾಗುವುದಿಲ್ಲ.
ಅಧಿಕ ಮಾಸ ಯಾವಾಗ ಬರುತ್ತದೆ ಎಂಬುವುದರ ಲೆಕ್ಕಾಚಾರ
ಯಾವ ಮಾಸದ ಕೃಷ್ಣ ಪಂಚಮಿಗೆ ಸೂರ್ಯನ ಸಂಕ್ರಮಣವಾಗುತ್ತದೆಯೋ, ಅದೇ ಮಾಸ ಬಹುತೇಕವಾಗಿ ಮುಂದಿನ ವರ್ಷ ಅಧಿಕ ಮಾಸವಾಗುತ್ತದೆ; ಆದರೆ ಇದು ಸಾಮಾನ್ಯ ಲೆಕ್ಕಾಚಾರವಾಗಿದೆ.
ಆಗ ಶೇಷ 9 ಅಥವಾ ಅದಕ್ಕಿಂತ ಕಡಿಮೆ ಉಳಿದರೆ, ಆ ವರ್ಷ ಅಧಿಕ ಮಾಸ ಬರುವುದು ಎಂದು ತಿಳಿಯಬೇಕು.
ಉಳಿಯುವ ಸಂಖ್ಯೆೆ → ಅಧಿಕ ಮಾಸ
30, 49, 68, 87, 106, 125 → ಚೈತ್ರ
11, 76, 95, 114, 133, 152 → ವೈಶಾಖ
0, 8, 19, 27, 38, 46, 57, 65, 84, 103, 122, 141, 149 → ಜ್ಯೇಷ್ಠ
16, 35, 54, 73, 92, 111, 130, 157 → ಆಷಾಢ
5, 23, 46, 62, 70, 81, 82, 89, 100, 108, 119, 127, 138, 146 → ಶ್ರಾವಣ
13, 32, 51 → ಭಾದ್ರಪದ
2, 21, 40, 59, 78, 97, 135, 143, 145, 166 → ಆಶ್ವಯುಜ
ಇತರ ಸಂಖ್ಯೆಗಳು ಶೇಷ ಉಳಿದರೆ → ಅಧಿಕ ಮಾಸ ಬರುವುದಿಲ್ಲ.
ಮುಂಬರುವ ಅಧಿಕ ಮಾಸಗಳ ಕೋಷ್ಟಕ
| ಇಸವಿ | ಶಾಲಿವಾಹನ ಶಕೆ | ಅಧಿಕ ಮಾಸ |
|---|---|---|
| 2029 | 1951 | ಚೈತ್ರ |
| 2032 | 1953 | ಭಾದ್ರಪದ |
| 2035 | 1956 | ಆಷಾಢ |
| 2038 | 1959 | ಜ್ಯೇಷ್ಠ |
| 2041 | 1961 | ಆಶ್ವಯುಜ |
| 2044 | 1964 | ಶ್ರಾವಣ |
| 2047 | 1967 | ಜ್ಯೇಷ್ಠ |
ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಿತ ವಿಶಾರದೆ ಮತ್ತು ಅಂಕಶಾಸ್ತ್ರ ವಿಶಾರದೆ (22.4.2026)
ಅಧಿಕ ಮಾಸವು ಮೂರು ವರ್ಷಗಳಿಗೊಮ್ಮೆ ಬರುತ್ತದೆ. ಈ ಕಾಲದಲ್ಲಿ ಜಪ, ಸತ್ಸಂಗ, ಸತ್ಸೇವೆ, ತ್ಯಾಗ ಮತ್ತು ದಾನಕ್ಕೆ ಅಸಾಧರಣ ಮಹತ್ವವಿದೆ. ಈ ಮಾಸದಲ್ಲಿ ದಾನ ಮಾಡಿದರೆ ಅದರ ಫಲವು ಹಲವು ಪಟ್ಟು ಹೆಚ್ಚಾಗಿ ಸಿಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ವಸ್ತ್ರದಾನ, ಅನ್ನದಾನ ಮತ್ತು ಜ್ಞಾನದಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ.
ಸನಾತನ ಸಂಸ್ಥೆಯು 1999 ರಿಂದ ಅಧ್ಯಾತ್ಮಪ್ರಸಾರ, ಧರ್ಮಜಾಗೃತಿ ಮತ್ತು ರಾಷ್ಟ್ರರಕ್ಷಣೆಯ ಕಾರ್ಯವನ್ನು ದೇಶದಾದ್ಯಂತವಿರುವ ಆಶ್ರಮ, ಸೇವಾಕೇಂದ್ರಗಳ ಮೂಲಕ ನಿರಂತರವಾಗಿ ಮಾಡುತ್ತಿದೆೆ. ಇಲ್ಲಿ ನೂರಾರು ಸಾಧಕರು ಪೂರ್ಣವೇಳೆ ಸಾಧನೆಯನ್ನುು ಮತ್ತು ರಾಷ್ಟ್ರ ಮತ್ತು ಧರ್ಮಸೇವೆಯನ್ನುು ಮಾಡುತ್ತಿದ್ದಾರೆ. ಈ ಸಾಧಕರಿಗಾಗಿ ಮತ್ತು ಆಶ್ರಮಗಳಲ್ಲಿ ನಡೆಯುವ ಅನೇಕ ಶಿಬಿರಗಳಿಗಾಗಿ ವಿವಿಧ ಪ್ರದೇಶಗಳಿಂದ ಆಗಮಿಸಿ ಪಾಲ್ಗೊಳ್ಳುವ ಶಿಬಿರಾರ್ಥಿಗಳಿಗೆ ಅನ್ನದಾನ ಮಾಡುವ ಅವಕಾಶ ಪುರುಷೋತ್ತಮ ಮಾಸದ ನಿಮಿತ್ತ ಒದಗಿದೆೆ!
ಸನಾತನದ ಆಶ್ರಮಗಳಿಗಾಗಿ ಅನ್ನದಾನ ಮಾಡಿ
ಅಧಿಕ ಮಾಸದಲ್ಲಿ ದಾನ ನೀಡಲಿಚ್ಛಿಸುವವರು, ಮನೆಯಿಂದಲೇ ಸನಾತನದ ಆಧ್ಯಾತ್ಮಪ್ರಸಾರದ ಕಾರ್ಯಕ್ಕೆ ದಾನ ನೀಡಬಹುದು.
ಧಾರ್ಮಿಕ ಕೃತಿಗಳ ಆರಂಭದಲ್ಲಿ ಮಾಡಿದ ಸಂಕಲ್ಪ ಮತ್ತು ಕೊನೆಗೆ ಅದರಿಂದ ಸಿಗುವ ಫಲವನ್ನು ಈಶ್ವರನಿಗೆ ಅರ್ಪಿಸುವುದರ ಮಹತ್ವ
ಧಾರ್ಮಿಕ ಕೃತಿಗಳನ್ನು ಮಾಡುವಾಗ ಸಾಮಾನ್ಯವಾಗಿ ಪಾಲಿಸಬೇಕಾದ ನಿಯಮಗಳು !
ಮೃತ ವ್ಯಕ್ತಿಯು ಬಳಸಿದ ವಸ್ತುಗಳನ್ನು ದಾನ ಮಾಡಬಹುದೇ?
ಮೃತ್ಯುನಂತರದ ಕ್ರಿಯಾಕರ್ಮಗಳು (13 ನೇ ದಿನದ ಕರ್ಮಗಳ ವರೆಗೆ)
ಮೃತ್ಯುನಂತರದ ಕ್ರಿಯಾಕರ್ಮಗಳು (ಅಂತ್ಯಯಾತ್ರೆಯ ಸಿದ್ಧತೆ ವರೆಗೆ)
ಪಿತೃಲೋಕದ ವ್ಯಾಖ್ಯೆ ಮತ್ತು ಅದರ ವಿಧಗಳು