ಅಹಂನ ಸೂಕ್ಷ್ಮ ಅಂಶಗಳು

೧. ಅಹಂನ ಸೂಕ್ಷ್ಮ ಅಂಶಗಳು ಮಹತ್ವದ್ದಾಗಿವೆ

ಅಹಂ ಎಂದು ಹೇಳಿದ ತಕ್ಷಣ ನಾವು ಅದರಲ್ಲಿನ ಸ್ಥೂಲ ಅಂಶವನ್ನು ನೋಡುತ್ತೇವೆ; ಆದರೆ ಅದರ ಸೂಕ್ಷ್ಮ ಅಂಶಗಳು ಅಂದರೆ ಮನಸ್ಸಿನಲ್ಲಿ ಬರುವ ಪ್ರತಿಕ್ರಿಯೆಗಳು ಹೆಚ್ಚು ಹಾನಿಕರವಾಗಿರುತ್ತವೆ,  ಅವುಗಳು ಹೆಚ್ಚು ಮಹತ್ವದ್ದಾಗಿರುತ್ತವೆ. ನಾವು ಅವುಗಳನ್ನು ದುರ್ಲಕ್ಷಿಸುತ್ತೇವೆ. ಇತರರ ಮನಸ್ಸು ನೋಯಿಸುವುದು, ಮಾತನಾಡುವಾಗ ಹೀಯಾಳಿಸಿ ಮಾತನಾಡುವುದು, ಇವೆಲ್ಲ ‘ಅಹಂ’ನ ಸ್ಥೂಲ ಅಂಶಗಳಾಗಿವೆ. ಪ್ರತಿದಿನ ಇತರ ವ್ಯಕ್ತಿಗಳ ಮೇಲಿನ ಕೋಪವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು, ಆ ವ್ಯಕ್ತಿಯೊಂದಿಗೆ ಮಾತನಾಡದಿರುವುದು, ಇವೆಲ್ಲ ‘ಅಹಂ’ನ ಸೂಕ್ಷ್ಮ ಅಂಶಗಳಾಗಿವೆ. ನಾವು ‘ಅಹಂ’ನ ಸ್ಥೂಲ ಅಂಶಗಳ ಬಗ್ಗೆ ಎಷ್ಟೇ ಪ್ರಯತ್ನಿಸಿದರೂ, ಸೂಕ್ಷ್ಮ ಅಂಶಗಳ ವಿಷಯದಲ್ಲಿ ಪ್ರಯತ್ನಿಸದಿದ್ದರೆ, ನಾವು ಇಚ್ಛಿಸಿದಷ್ಟು ಅಹಂ ಕಡಿಮೆಯಾಗುವುದಿಲ್ಲ.

೨. ಸೂಕ್ಷ್ಮ ಅಂಶಗಳ ಬಗ್ಗೆ ಪ್ರಯತ್ನಿಸುವುದರ ಮಹತ್ವ

‘ಅಹಂ’ನ ಸೂಕ್ಷ್ಮ ಅಂಶಗಳು ನಮ್ಮ ಸಾಧನೆಗೆ ಹೆಚ್ಚು ಹಾನಿಕಾರಕವಾಗಿರುತ್ತವೆ. ಅಹಂ ಎನ್ನುವುದು ಒಂದು ಕಳೆಗಿಡದಂತೆ. ಸ್ಥೂಲ ಅಂಶವೆಂದರೆ ಅದರ ಎಲೆಗಳು ಹಾಗೂ ಹೂವುಗಳು. ಸೂಕ್ಷ್ಮ ಅಂಶವೆಂದರೆ ಅದರ ಬೇರುಗಳೆಂದು ತಿಳಿದುಕೊಳ್ಳಬೇಕು. ಕಳೆಗಿಡಗಳನ್ನು ಹೇಗೆ ಬುಡದಿಂದಲೇ ಕಿತ್ತು ಹಾಕಬೇಕಾಗುತ್ತದೆಯೋ ಹಾಗೆಯೇ ಅಹಂನ್ನು ನಾಶಗೊಳಿಸಲು ಮೊದಲು ನಾವು ಅದರ ಸೂಕ್ಷ್ಮ ಅಂಶವನ್ನು ನಾಶಗೊಳಿಸುವತ್ತ ಪ್ರಯತ್ನಿಸಬೇಕು.

೩. ಅಹಂನ ಸ್ಥೂಲ ಮತ್ತು ಸೂಕ್ಷ್ಮ ಅಂಶಗಳು

ಅಹಂನ ಸ್ಥೂಲ ಅಂಶಗಳು ಅಹಂನ ಸೂಕ್ಷ್ಮ ಅಂಶಗಳು
೧. ಖರ್ಚಾಗುವ ಶಕ್ತಿ ಶಾರೀರಿಕ ಮಾನಸಿಕ
೨. ಉಳಿದುಕೊಳ್ಳುವ ಕಾಲಾವಧಿ ಕ್ಷಣಿಕ ದೀರ್ಘಕಾಲ
೩. ನಾಶಗೊಳಿಸಲು ತಗಲುವ ಕಾಲಾವಧಿ ಅಲ್ಪ ಅಧಿಕ
೪. ಇತರರ ಸಹಾಯ ಪಡೆಯುವ ಅವಕಾಶ ಇದೆ ಇಲ್ಲ
೫. ಕೆಟ್ಟ ಶಕ್ತಿಯ ತೊಂದರೆಯಾಗುವ ಸಾಧ್ಯತೆ ಕಡಿಮೆ ಹೆಚ್ಚು
೬. ಸಾಧನೆಗೆ ಹಾನಿ ಕಡಿಮೆ ಹೆಚ್ಚು
೭. ಉದಾಹರಣೆ ಕೃತಿಯ ಸ್ತರದ ತಪ್ಪುಗಳು ಪ್ರತಿಕ್ರಿಯೆಗಳು

೪. ಸೂಕ್ಷ್ಮ ಅಂಶಗಳ ನಿರ್ಮೂಲನೆಗಾಗಿ ಸ್ವತಃ ಪ್ರಯತ್ನ ಮಾಡಬೇಕಾಗುತ್ತದೆ

ನಮ್ಮ ಮುಖದ ಮೇಲಿರುವ ಕಲೆಯನ್ನು ಸ್ವತಃ ನೋಡಲಿಕ್ಕಾಗುವುದಿಲ್ಲ. ಅದಕ್ಕಾಗಿ ನಾವು ಕನ್ನಡಿಯ ಸಹಾಯ ಪಡೆಯಬೇಕಾಗುತ್ತದೆ, ಅದರಂತೆ ‘ಅಹಂ’ನ ಸ್ಥೂಲ ಅಂಶಗಳು ನಮಗೆ ತಿಳಿಯುತ್ತವೆ ಅಥವಾ ಇತರರು ನಮಗೆ ಸಹಾಯ ಮಾಡಬಹುದು; ಆದರೆ ಸೂಕ್ಷ್ಮ ಅಂಶಗಳ ಸಂದರ್ಭದಲ್ಲಿ ಹಾಗಿರುವುದಿಲ್ಲ. ನಮ್ಮ ಮನಸ್ಸಿನಲ್ಲಿ ಬರುವ ವಿಚಾರಗಳನ್ನು ಇತರರು ಯಾರೂ ಗುರುತಿಸಲು ಸಾಧ್ಯವಿಲ್ಲ. ಆದ್ದರಿಂದ ಸೂಕ್ಷ್ಮ ಅಂಶಗಳು ಸಾಧನೆಗೆ ಹೆಚ್ಚು ಹಾನಿಕರವಾಗಿವೆ.

೫. ಸೂಕ್ಷ್ಮ ಅಹಂನ ಕೆಲವು ಉದಾಹರಣೆಗಳು

ಅ. ಯಾವುದೇ ಪ್ರಸಂಗದಲ್ಲಿ ಮನಸ್ಸಿನಲ್ಲಿ ಪ್ರತಿಕ್ರಿಯೆ ಬರುವುದು; ಆದರೆ ಅದು ಹೊರಗೆ ಕಾಣಿಸುವುದಿಲ್ಲ (ಅಂದರೆ ವ್ಯಕ್ತಪಡಿಸುವುದಿಲ್ಲ)
ಆ. ಇತರರನ್ನು ಪ್ರಶಂಸಿಸಿದಾಗ ತನಗೆ ಅವರ ಬಗ್ಗೆ ಮತ್ಸರವೆನಿಸುವುದು
ಇ. ತನಗೆ ಹೊಂದಾಣಿಕೆ ಆಗದಿರುವವರೊಂದಿಗೆ ಮಾತನಾಡಬಾರದೆಂದು ಅನಿಸುವುದು
ಈ. ಇತರರಿಗಿಂತ ತನಗೇನಾದರೂ ಒಳ್ಳೆಯದಾದಾಗ ತುಂಬ ನೆಮ್ಮದಿಯಾಗುವುದು, ಉದಾ. ಇತರರಿಗಿಂತ ತನಗೆ ಹೆಚ್ಚು ಸಂಬಳದ ನೌಕರಿ ದೊರೆಯುವುದು
ಉ. ಕಷ್ಟ ಕಾಲದಲ್ಲಿ ಇತರರ ಸಹಾಯ ಪಡೆದುಕೊಳ್ಳದಿರುವುದು; ಏಕೆಂದರೆ ಸಹಾಯ ಪಡೆಯುವುದರಿಂದ ತನ್ನ ಘನತೆಗೆ ಕಡಿಮೆಯೆನಿಸುವುದು
ಊ. ಎದುರಿನ ವ್ಯಕ್ತಿ ಏನಾದರೂ ವಿಷಯ ಹೇಳುತ್ತಿರುವಾಗ, ‘ಅದು ನನಗೆ ತಿಳಿದಿದೆ’, ಎಂದೆನಿಸಿ ಅದನ್ನು ಸರಿಯಾಗಿ ಗಮನಿಸದಿರುವುದು
ಎ. ಇತರರಿಗೆ ಸತತ ಸಲಹೆ ನೀಡುವುದು
ಏ. ಸತತ ಇತರರ ತಪ್ಪಿನ ಬಗ್ಗೆ ವಿಚಾರ ಅಥವಾ ಚಿಂತನೆ ಮಾಡುವುದು

೬.  ಹಾನಿಕರ ಸೂಕ್ಷ್ಮ ಅಹಂ ನಾಶಗೊಳಿಸಲು ಮಾಡಬೇಕಾದ ಪ್ರಯತ್ನ

ಅ. ನಾವು ಪ್ರಾಮಾಣಿಕವಾಗಿ ದೇವರಲ್ಲಿ ಪ್ರಾರ್ಥನೆ ಮಾಡಬೇಕು; ಏಕೆಂದರೆ ಇಂತಹ ಸೂಕ್ಷ್ಮ ಅಹಂನ್ನು ನಾಶಗೊಳಿಸಲು ದೇವರಿಗೆ ಮಾತ್ರ ಸಾಧ್ಯ.
ಆ. ಇಂತಹ ಅಂಶಗಳನ್ನು ಆಳವಾಗಿ ಅಧ್ಯಯನ ಮಾಡುವುದು ಹಾಗೂ ಅವುಗಳನ್ನು ತಖ್ತೆಯಲ್ಲಿ ಬರೆಯುವುದು. ಅದು ಮರುಕಳಿಸಬಾರದೆಂದು ಉಪಾಯಯೋಜನೆ ಮಾಡುವುದು.
ಈ. ‘ಪ್ರೇಮಭಾವ’ ಹೆಚ್ಚಿಸಲು ಪ್ರಯತ್ನಿಸಬೇಕು.
ಉ. ಸೂಕ್ಷ್ಮ ಅಹಂ ಇರುವ ಪ್ರಸಂಗಗಳಲ್ಲಿ ಕೆಟ್ಟಶಕ್ತಿಗಳು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಆದ್ದರಿಂದ ನಿಯಮಿತವಾಗಿ ಉಪಾಯ ಮಾಡುವುದು ಅಥವಾ ಇಂತಹ ಅಂಶಗಳು ಅರಿವಾದರೆ ಉಪಾಯಕ್ಕಾಗಿ ಹೆಚ್ಚು ಪ್ರಯತ್ನಿಸುವುದು ಮುಂತಾದ ಕೃತಿ ಮಾಡಬೇಕು.

– ಸೌ.ಪೂಜಾ

Leave a Comment