ಅಹಂಭಾವ ಕಡಿಮೆ ಮಾಡಲು ಮಹತ್ವದ ಘಟಕಗಳು

ಈಶ್ವರ ಎಂದರೆ ಶೂನ್ಯ ಅಹಂ; ಆದ್ದರಿಂದ ಅಹಂಭಾವವನ್ನು ನಾಶಮಾಡುವ ಸರ್ವೋತ್ತಮ ಮಾರ್ಗವೆಂದರೆ ಈಶ್ವರನಂತೆ ಆಗುವುದು, ಅರ್ಥಾತ್ ಈಶ್ವರನಲ್ಲಿ ಏಕರೂಪವಾಗಲು ಪ್ರಯತ್ನಿಸುವುದು. ಈಶ್ವರನಲ್ಲಿ ಏಕರೂಪವಾಗುವುದೆಂದರೆ ಅವನ ವಿವಿಧ ಗುಣಗಳನ್ನು ತನ್ನಲ್ಲಿ ತರುವುದು. ಇದಕ್ಕಾಗಿ ಪ್ರತಿದಿನ ಮಾಡಬೇಕಾದ ಪ್ರಯತ್ನವೆಂದರೆ ಸಾಧನೆ. ಸಂಕ್ಷಿಪ್ತವಾಗಿ ಹೇಳಬೇಕಾದರೆ ಒಂದು ದಿನದಲ್ಲಿ ನಾವು ಎಷ್ಟು ಹೆಚ್ಚು ಸಮಯ ಸಾಧನೆ ಮಾಡುವೆವೋ ಅಷ್ಟು ಬೇಗನೆ ನಮ್ಮಲ್ಲಿರುವ ಅಹಂಭಾವದ ಪ್ರಮಾಣವು ಕಡಿಮೆಯಾಗಲು ಅವಕಾಶವಿದೆ. ಅಹಂಭಾವ ಕಡಿಮೆ ಮಾಡಲು ಸಾಧನೆಯಲ್ಲಿನ ಮಹತ್ವದ ಅಂಗಗಳು ಮತ್ತು ಅವು ಹೇಗೆ ಉಪಯುಕ್ತವಾಗಿವೆ ಎನ್ನುವುದನ್ನು ಇಲ್ಲಿ ಸಂಕ್ಷಿಪ್ತವಾಗಿ ಕೊಡಲಾಗಿದೆ. ಅಹಂಭಾವ ಕಡಿಮೆ ಮಾಡುವುದಕ್ಕಾಗಿ ಸಾಧನೆ ಮಾಡುತ್ತಿರುವಾಗ ನಮ್ಮ ದೃಷ್ಟಿಕೋನವು ಹೇಗಿರಬೇಕು ಮತ್ತು ಅದಕ್ಕೆ ಸಂಬಂಧ ಪಟ್ಟಂತೆ ಕೃತಿಗಳನ್ನು ಹೇಗೆ ಮಾಡಬೇಕು ಎನ್ನುವುದನ್ನು ‘ಅಹಂ ದೂರಗೊಳಿಸುವ ಉಪಾಯಗಳು’ ಇದರಲ್ಲಿ ಕೊಡಲಾಗಿದೆ.

ಅ. ಸೇವೆ

೧. ಸೇವೆಯನ್ನು ಮಾಡುವಾಗ ‘ಇದು ಶ್ರೇಷ್ಠ, ಇದು ಕನಿಷ್ಠ’ ಎಂದು ಭಾವಿಸದೇ ಸೇವೆಯು ತನು, ಮನ, ಧನ, ಬುದ್ಧಿ ಮತ್ತು ಅಹಂಭಾವವನ್ನು ಅರ್ಪಿಸುವ ಒಂದು ಮಾಧ್ಯಮವಾಗಿದೆ ಎನ್ನುವ ಭಾವವನ್ನಿಟ್ಟುಕೊಳ್ಳಬೇಕು.

೨. ಶೂದ್ರವರ್ಣದ ಸೇವೆಯಿಂದ ಉದಾ. ಪಾತ್ರೆ ತೊಳೆಯುವುದು, ಸ್ವಚ್ಛತೆ ಮಾಡುವುದು ಇವುಗಳಿಂದ ಅಹಂಭಾವ ಬೇಗನೇ ಕಡಿಮೆಯಾಗಲು ಸಹಾಯವಾಗುತ್ತದೆ.

೩. ದೈನಂದಿನ ಜೀವನದಲ್ಲಿನ ಕೆಲಸಗಳನ್ನು ಸೇವೆ ಎಂದು ಮಾಡಲು ಪ್ರಯತ್ನಿಸಬೇಕು, ಉದಾ. ತನ್ನ ಬಟ್ಟೆಗಳನ್ನು ಇಸ್ತ್ರಿ ಮಾಡುತ್ತಿರುವಾಗ ಅದು ಗುರುಸೇವೆಯೇ ಆಗಿದೆ ಎನ್ನುವ ಭಾವದಿಂದ ಮಾಡಿದರೆ ಸೇವಾವೃತ್ತಿ ಬೆಳೆಯಲು ಸಹಾಯವಾಗುತ್ತದೆ. ‘ನಾನು ಸೇವಕ ನಾಗಿದ್ದೇನೆ’ ಎನ್ನುವ ಭಾವವು ಎಷ್ಟು ಹೆಚ್ಚು ನಿರ್ಮಾಣವಾಗುವುದೋ, ಅಷ್ಟು ಬೇಗ ಅಹಂಭಾವವು ಕಡಿಮೆಯಾಗುವುದು.

ಆ. ತ್ಯಾಗ

೧. ತನಗೆ ಇಷ್ಟವಾಗುವ ಯಾವುದಾದರೊಂದು ವಸ್ತುವನ್ನು ಇನ್ನೊಬ್ಬರಿಗೆ ಕೊಡುವುದೆಂದರೆ ತನ್ನ ಆಸೆಗಳನ್ನು ಕಡಿಮೆ ಮಾಡಿಕೊಳ್ಳುವುದು. ಹೀಗೆ ಮಾಡುವುದರಿಂದ ನಿಧಾನವಾಗಿ ತನ್ನ ವಿಚಾರಗಳು ಕಡಿಮೆಯಾಗಿ ಅಹಂಭಾವವು ಕಡಿಮೆಯಾಗುತ್ತದೆ.

ಇ. ಪ್ರೀತಿ (ನಿರಪೇಕ್ಷ ಪ್ರೇಮ)

ಸಾಮಾನ್ಯವಾಗಿ ನಾವು ವ್ಯವಹಾರದಲ್ಲಿ ಯಾರನ್ನು ಪ್ರೀತಿಸುತ್ತೇವೆಯೋ ಅವರಿಂದ ನಮಗೆ ಒಂದಲ್ಲ ಒಂದು ವಿಧದ ಅಪೇಕ್ಷೆಯಿರುತ್ತದೆ. ಈಶ್ವರನ ಮೇಲೆ ಹಾಗೂ ಈಶ್ವರನು ನಿರ್ಮಿಸಿರುವ ಜಗತ್ತಿನಲ್ಲಿರುವ ಪ್ರತಿಯೊಂದು ವಿಷಯದ ಮೇಲೆ ಅಪೇಕ್ಷೆ ಇಲ್ಲದೇ ಪ್ರೇಮವೆನಿಸುವುದೆಂದರೆ ಪ್ರೀತಿ. ನಾವು ಇತರರ ಬಗ್ಗೆ ಹೆಚ್ಚು ವಿಚಾರ ಮಾಡಿದಷ್ಟು ನಮ್ಮ ಬಗೆಗಿನ ವಿಚಾರಗಳು ಕಡಿಮೆಯಾಗುತ್ತವೆ ಮತ್ತು ಮನಸ್ಸು ವ್ಯಾಪಕವಾಗಲು ಸಹಾಯವಾಗುತ್ತದೆ. ಹೀಗೆ ಮಾಡುತ್ತಾ ಹೋದರೆ ನಾವು ‘ಈ ವಿಶ್ವವೇ ನನ್ನ ಮನೆ’ ಎನ್ನುವ ಸ್ಥಿತಿಯವರೆಗೆ ಹೋಗಬಲ್ಲೆವು.

ಈ. ನಾಮಜಪ

ನಾಮಜಪವು ನಡೆಯುತ್ತಿರುವಷ್ಟು ಕಾಲವಾದರೂ ಅಹಂ ಇರುವುದಿಲ್ಲ. ಇದರ ವಿರುದ್ಧವಾಗಿ ನಾಮಜಪವು ನಡೆಯದಿರುವಾಗ ಮನಸ್ಸಿನಲ್ಲಿ ನಿರ್ಮಾಣವಾದ ವಿಚಾರಗಳು ದೂರವಾಗಲು ಬಹಳ ಸಮಯ ಬೇಕಾಗುತ್ತದೆ. ಅದಕ್ಕಾಗಿ ಮನಸ್ಸಿನೊಂದಿಗೆ ಬಹಳ ಹೋರಾಡಬೇಕಾಗುತ್ತದೆ.

(ಈಶ್ವರನ ವಿವಿಧ ಗುಣಗಳನ್ನು ಸನಾತನದ ಗ್ರಂಥ ‘ಪರಮೇಶ್ವರ ಮತ್ತು ಈಶ್ವರ’ ಇದರಲ್ಲಿ ಕೊಡಲಾಗಿದೆ. ಸಾಧನೆಯಲ್ಲಿನ ವಿವಿಧ ಮಾರ್ಗಗಳು, ಸಾಧನೆಯಲ್ಲಿನ ಅಂಗಗಳು, ಸಾಧನೆಯಿಂದ ಹೊಂದಲಾಗುವ ಉನ್ನತಿಯ ಹಂತಗಳು ಮುಂತಾದವುಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ.)

(ಆಧಾರ : ಸನಾತನ ನಿರ್ಮಿತ ‘ಅಹಂ ನಿರ್ಮೂಲನೆಗಾಗಿ ಸಾಧನೆ’ ಗ್ರಂಥ)

Leave a Comment