ಪೂಜಾಮಂಟಪ

ಪ್ರತಿಯೊಬ್ಬರ ದೃಷ್ಟಿಯಲ್ಲಿ ಪೂಜೆ, ಅರ್ಚನೆ ಇತ್ಯಾದಿಗಳು ಮಹತ್ವಪೂರ್ಣದ್ದಾಗಿರುತ್ತವೆ. ಇದರಿಂದ ಪ್ರತಿಯೊಂದು ಮನೆಯಲ್ಲಿಯೂ ಪೂಜಾಮಂಟಪವು ಇರುವುದು ಅನಿವಾರ್ಯವಾಗಿದೆ. ಬಹಳಷ್ಟು ಮನೆಗಳಲ್ಲಿ, ಅಂಗಡಿಗಳಲ್ಲಿ, ಅಷ್ಟೇ ಅಲ್ಲದೇ ಅನೇಕ ಕಾರ್ಖಾನೆಗಳಲ್ಲಿ ಮತ್ತು ಸಂಸ್ಥಾಪನೆಗಳಲ್ಲಿ ಚಿಕ್ಕದಾದರೂ ಒಂದು ಪೂಜಾಮಂಟಪವು ಅವಶ್ಯವಾಗಿ ಕಾಣಿಸುತ್ತದೆ. ಈ ನಿಟ್ಟಿನಲ್ಲಿ ಪೂಜಾಮಂಟಪದ ಬಗ್ಗೆ ಕೆಲವು ಮಹತ್ವಪೂರ್ಣ ವಿಷಯಗಳನ್ನು ತಿಳಿದುಕೊಳ್ಳೋಣ…

ಪೂಜಾಮಂಟಪವನ್ನು ಯಾವುದರಿಂದ ಮಾಡಬೇಕು ?

ಸಾಧ್ಯವಿದ್ದಷ್ಟು ಪೂಜಾಮಂಟಪವನ್ನು ಶ್ರೀಗಂಧ ಅಥವಾ ಸಾಗುವಾನಿಯ ಮರದಿಂದ ಮಾಡಿಸಬೇಕು. ಸಾಮಾನ್ಯವಾಗಿ ಎಲ್ಲರಿಗೂ ಚಂದನದ ಪೂಜಾ ಮಂಟಪವನ್ನು ಮಾಡಿಸಲು ಆಗುವುದಿಲ್ಲ. ಇತರ ಕಟ್ಟಿಗೆಗಳ ತುಲನೆಯಲ್ಲಿ ಸಾಗುವಾನಿಯಲ್ಲಿ ಸಾತ್ತ್ವಿಕ ಲಹರಿಗಳನ್ನು ಸಂಗ್ರಹಿಸಿಟ್ಟುಕೊಳ್ಳು ವುದರೊಂದಿಗೆ ಅವುಗಳನ್ನು ಪ್ರಕ್ಷೇಪಿಸುವ  ಕ್ಷಮತೆಯೂ ಅಧಿಕವಿರುತ್ತದೆ. ಪೂಜಕನಿಗೆ ಭಗವಂತನ ಬಗ್ಗೆ ಎಂತಹ ಭಾವವಿರುವುದೋ ಅದಕ್ಕನುಸಾರ ಸಾಗುವಾನಿಯಿಂದ ಪೂಜಾಮಂಟಪದ ಮೇಲಿನ  ಕಲಶವಿರುವ ಭಾಗದೆಡೆಗೆ ದೇವಿ-ದೇವತೆಗಳ ಲಹರಿಗಳು ಆಕರ್ಷಿತವಾಗುತ್ತವೆ. ಇದಾದ ನಂತರ ಆವಶ್ಯಕತೆಗನುಸಾರ ವಾಸ್ತುವಿನಲ್ಲಿ ಅದು ಪ್ರಕ್ಷೇಪಿತವಾಗುತ್ತದೆ.

ಕಟ್ಟಿಗೆಯಿಂದ ತಯಾರಿಸಿದ ಪೂಜಾಮಂಟಪವು ಯಾವ ಬಣ್ಣದ್ದಾಗಿರಬೇಕು?

ಪೂಜಾಮಂಟಪದ ಹಲಗೆಯು ಕಂದು ಬಣ್ಣದ್ದಾಗಿದ್ದರೆ ಉತ್ತಮ. ಏಕೆಂದರೆ ಈಶ್ವರನ ಎರಡು ತತ್ತ್ವಗಳಿವೆ, ಅವುಗಳೆಂದರೆ ಸಗುಣ ಮತ್ತು ನಿರ್ಗುಣ ತತ್ತ್ವ. ಪಂಚತತ್ತ್ವಗಳಿಂದ ಕೂಡಿರುವ ಮನುಷ್ಯನು ‘ಸಗುಣ’ನಾಗಿದ್ದಾನೆ, ಆದರೆ ನಿರಾಕಾರ ಈಶ್ವರನು ‘ನಿರ್ಗುಣ’ ನಾಗಿದ್ದಾನೆ. ಕಂದು ಬಣ್ಣವು ಸಗುಣತತ್ತ್ವ ಮತ್ತು ನಿರ್ಗುಣತತ್ತ್ವಗಳ ಸೀಮಾರೇಖೆಯ ಅಂದಾರೆ ಸಗುಣದಿಂದ ನಿರ್ಗುಣದ ಕಡೆಗೆ ಹೋಗುವುದರ ಪ್ರತೀಕವಾಗಿದೆ. ಪೂಜಾ ಮಂಟಪವು ಕಂದು ಬಣ್ಣದ್ದಾಗಿದ್ದರೆ ಅದು ಸಗುಣ-ನಿರ್ಗುಣಗಳ ಸೀಮಾರೇಖೆಯಲ್ಲಿರುತ್ತದೆ ಮತ್ತು ಅದು ಪೂಜಕನನ್ನು ಸಗುಣದಿಂದ ಈಶ್ವರನ ನಿರ್ಗುಣತತ್ತ್ವದವರೆಗೆ ತಲುಪಿಸಲು ಸಹಾಯಕವಾಗುತ್ತದೆ.

ಪೂಜಾಮಂಟಪದ ಆಕಾರವು ಹೇಗಿರಬೇಕು ?

ಯಾವುದೇ ತ್ರಿಮಿತಿ ವಸ್ತುವಿನ ಆಕಾರ ವನ್ನು ತೋರಿಸುವಾಗ, ಅದರ ‘ಉದ್ದ x ಅಗಲ x ಎತ್ತರ’ ಈ ಪ್ರಕಾರದಲ್ಲಿ ತೋರಿಸಲಾಗುತ್ತದೆ.
ಪೂಜಾಮಂಟಪವು ‘೨:೧:೪’ ಈ ಅನುಪಾತದಲ್ಲಿರಬೇಕು. ಪೂಜಾ ಮಂಟಪ ಇಷ್ಟೇಕೆ ಎತ್ತರವಾಗಿರಬೇಕು ಎಂದು ಕೆಲವರಿಗೆ ಪ್ರಶ್ನೆ ಬಂದಿರಬಹುದು. ಇದನ್ನು ದೇವಾಲಯಗಳ ಗರ್ಭಗುಡಿ ದಂತೆಯೇ ಇಡಲಾಗಿದೆ. ಇದರ ಶಾಸ್ತ್ರವೇನೆಂದರೆ ಪೂಜಾಮಂಟಪದ ಖಾಲಿ ಸ್ಥಳದಲ್ಲಿ ಸಾತ್ತ್ವಿಕ ಸ್ಪಂದನಗಳು ಆಕರ್ಷಿತವಾಗುತ್ತವೆ.

ಪೂಜಾಮಂಟಪಕ್ಕೆ ಕಲಶದ ಆವಶ್ಯಕತೆಯಿದೆಯೇ ?

ಕಲಶವು ವಾತಾವರಣದಲ್ಲಿನ ಚೈತನ್ಯ ತರಂಗಗಳನ್ನು ಆಕರ್ಷಿಸಿ ಅವುಗಳನ್ನು ದೂರದ ವರೆಗೆ ಪ್ರಕ್ಷೇಪಿಸುವ ಕಾರ್ಯವನ್ನು ಮಾಡುತ್ತದೆ. ಸಾಮಾನ್ಯ ವ್ಯಕ್ತಿಯು ಮಾಡುವ ದೇವತಾ ಪೂಜೆಯಿಂದ ಬಹಳ ಕಡಿಮೆ ಪ್ರಮಾಣದಲ್ಲಿ ಚೈತನ್ಯವು ನಿರ್ಮಾಣವಾಗುತ್ತದೆ. ಅದು ಕಲಶದ ಮೂಲಕ ದೂರ ಹೋಗಬಾರದು ಮತ್ತು ಪೂಜಕನಿಗೆ ಅದರ ಲಾಭವಾಗಬೇಕೆಂಬ ಉದ್ದೇಶದಿಂದ ಪೂಜಾ ಮಂಟಪದ ಮೇಲೆ ಕಲಶವು ಇಲ್ಲದಿರುವುದು ಒಳ್ಳೆಯದೆಂದು ತಿಳಿಯುವುದು.

ಪೂಜಾಮಂಟಪದ ರಚನೆಯು ವಾಸ್ತುವಿನ ನಿಗದಿತ ಸ್ಥಳಕ್ಕೆ ಸೀಮಿತವಾಗಿರುತ್ತದೆ. ಪೂಜಾಮಂಟಪದ ಮೇಲೆ ಚಿಕ್ಕ ಗೊಮ್ಮಟಾಕಾರದ ಕಲಶವಿರುತ್ತದೆ. ಈ ಕಲಶವು ದೇವತಾಪೂಜೆಯಿಂದ ನಿರ್ಮಾಣವಾದ ಚೈತನ್ಯವನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕಾರ್ಯವನ್ನು ಮಾಡುತ್ತದೆ.

ಪೂಜಾಮಂಟಪವನ್ನು ಯಾವ ಕೋಣೆಯಲ್ಲಿಡಬೇಕು ?

ದೇವತಾಪೂಜೆಗಾಗಿ ಪ್ರತ್ಯೇಕ ಕೋಣೆಯಿದ್ದರೆ ಬಹಳ ಉತ್ತಮ, ಆದರೆ ಬಹಳಷ್ಟು ಸಲ ಇದು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಪೂಜಾಮಂಟಪವನ್ನು ಯಾವ ಕೋಣೆಯಲ್ಲಿಡಬೇಕು ಎಂಬ ಪ್ರಶ್ನೆಯು ನಿರ್ಮಾಣವಾಗುತ್ತದೆ. ಇದಕ್ಕಾಗಿ ಒಂದು ತುಲನಾತ್ಮಕ ಭಾಗವನ್ನು ನೋಡೋಣ. ಈ ತುಲನೆಯು ಆಧ್ಯಾತ್ಮಿಕ ದೃಷ್ಟಿಯಿಂದ ಮಡಲಾಗಿದೆ ಎಂಬುದನ್ನು ಗಮನದಲ್ಲಿ ಇಡಬೇಕು.

ದೇವರಪೂಜೆಗೆ ಪ್ರತ್ಯೇಕ ಕೋಣೆಯಿದ್ದರೆ ಅದಕ್ಕೆ ಶೇ. ೧೦೦ ರಷ್ಟು ಮಹತ್ವವಿದೆ. ಒಂದು ವೇಳೆ ದೇವರ ಮಂಟಪವು ತುಂಬಾ ಒಳಗಿನ ಕೊಠಡಿಯಲ್ಲಿದ್ದರೆ ಅದಕ್ಕೆ ಶೇ. ೧೦ ರಷ್ಟು ಮಹತ್ವವಿದೆ. ಪೂಜಾ ಮಂಟಪವು ಅಡುಗೆ ಮನೆಯಲ್ಲಿದ್ದರೆ ಅದಕ್ಕೆ ಶೇ. ೩೦ ರಷ್ಟು ಮಹತ್ವವಿದೆ. ಆದರೆ ಅಡುಗೆಯನ್ನು ಮಾಡುವ ಸ್ಥಳವು ಪೂಜಾ ಮಂಟಪದಿಂದ ಸ್ವಲ್ಪ ದೂರದಲ್ಲಿರಬೇಕು. ಧನವನ್ನು ಇಡುವ ಸ್ಥಳದಲ್ಲಿ ಪೂಜಾ ಮಂಟಪವಿದ್ದರೆ ಅದಕ್ಕೆ ಶೇ. ೩೦ ರಷ್ಟು ಮಹತ್ವವಿದೆ. ಮಲಗುವ ಕೋಣೆಯಲ್ಲಿ ದೇವರಕೋಣೆಯಿದ್ದರೆ ಅದಕ್ಕೆ ಕೇವಲ ಶೇ. ೧೦ ರಷ್ಟು ಮಹತ್ವವಿದೆ.

Leave a Comment