ಹಬ್ಬಹರಿದಿನಗಳಲ್ಲಿ ಊಟದಲ್ಲಿ ಸಿಹಿ ಪದಾರ್ಥಗಳಿರುವಾಗ ಸ್ವಲ್ಪ ಹಸಿವು ಇಟ್ಟುಕೊಂಡು ಊಟ ಮಾಡಿರಿ !

ವೈದ್ಯ ಮೇಘರಾಜ ಪರಾಡಕರ್

ಗಣೇಶಚತುರ್ಥಿ, ಮಹಾಲಯ ಶ್ರಾದ್ಧ, ನವರಾತ್ರಿ, ದೀಪಾವಳಿ ಮತ್ತು ಇತರ ಹಬ್ಬದ ದಿನಗಳಲ್ಲಿ ಊಟ ಜೊತೆಗೆ ಬೇಯಿಸಿದ ಮೋದಕಗಳು, ಹೋಳಿಗೆ ಮುಂತಾದ ಸಿಹಿ ಪದಾರ್ಥಗಳು ಇರುತ್ತವೆ. ಈ ಪದಾರ್ಥಗಳು ಪಚನವಾಗಲು ಜಡವಾಗಿರುತ್ತವೆ. ಪಚನಕ್ಕೆ ಜಡವಿರುವ ಪದಾರ್ಥಗಳನ್ನು ಹೊಟ್ಟೆ ತುಂಬ ತಿಂದರೆ ಜಠರಾಗ್ನಿಯು ಮಂದವಾಗಿ ಶರೀರವು ಜಡವಾಗುವುದು, ಆಲಸ್ಯ ಬರುವುದು, ಜೀರ್ಣವಾಗದಿರುವುದು, ಹೊಟ್ಟೆ ತೊಳೆಸಿದಂತಾಗುವುದು, ವಾಂತಿ ಅಥವಾ ಭೇದಿಯಾಗುವುದು, ಶೀತ, ಜ್ವರ ಮುಂತಾದ ವ್ಯಾಧಿಗಳಾಗುತ್ತವೆ. ಅದನ್ನು ತಡೆಯಲು ಆಹಾರಪದಾರ್ಥಗಳ ರುಚಿ ಪಡೆಯಲು ಜಡ ಪದಾರ್ಥಗಳು ಊಟದಲ್ಲಿರುವಾಗ ನಾಲ್ಕು ತುತ್ತು ಕಡಿಮೆ, ಅಂದರೆ ಹಸಿವು ಇಟ್ಟು ಊಟ ಮಾಡಬೇಕು.

ಬೇಯಿಸಿದ ಮೋದಕಗಳು, ಹೋಳಿಗೆ, ಶ್ರೀಖಂಡ ಈ ಪದಾರ್ಥಗಳ ಮೇಲೆ ೨ ಚಮಚ ತುಪ್ಪ ಹಾಕಿ ಊಟ ಮಾಡಬೇಕು.

ಊಟದ ಮೊದಲು ಸುಲಿದ ಅಡಿಕೆಯಷ್ಟಿರುವ ಶುಂಠಿಯ ತುಂಡನ್ನು ರುಚಿಗೆ ತಕ್ಕಷ್ಟು ಉಪ್ಪು ಹಚ್ಚಿ ಜಗಿದು ತಿನ್ನಬೇಕು. ಊಟದ ಮೊದಲು ಹಸಿಶುಂಠಿ ತಿನ್ನಲು ಆಗದಿದ್ದರೆ ಅದನ್ನು ಊಟದ ನಂತರ ತಿನ್ನಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೯.೯.೨೦೧೮)

Leave a Comment