ಗಂಗಾ ರಕ್ಷಣೆಯ ಸಂದರ್ಭದಲ್ಲಿ ಜನತೆಯ ಕೆಲವು ಅಯೋಗ್ಯ ಕೃತಿಗಳು

ಅ. ಗಂಗೆಯನ್ನು ಕಲುಷಿತಗೊಳಿಸುವವರನ್ನು ತಡೆಯಲು ಹಿಂಜರಿಯುವ ಹಿಂದೂಗಳು !

ಅನೇಕ ಜನರು ಸಾಕುಪ್ರಾಣಿಗಳು ಮತ್ತು ಕೆಸರು ತಗಲಿದ ಪ್ರಾಣಿಗಳನ್ನು ಗಂಗಾ ನದಿಯಲ್ಲಿ ತಂದು ತೊಳೆಯುತ್ತಾರೆ. ಭಕ್ತರು ಗಂಗೆಯಲ್ಲಿ ಬಾಯಿ ಮುಕ್ಕಳಿಸುವುದು, ಸಾಬೂನು ಹಚ್ಚಿಕೊಂಡು ಸ್ನಾನ ಮಾಡುವುದು, ಪಾತ್ರೆಗಳನ್ನು ತಿಕ್ಕುವುದು ಮತ್ತು ಕೊಳೆಯನ್ನು ಹಾಕುವುದು ಇತ್ಯಾದಿ ಕೃತಿಗಳನ್ನು ಮಾಡುತ್ತಾರೆ. ಕೆಲವರು ಜೊತೆಗೆ ತಂದಿದ್ದ ಕಸವನ್ನು ಗಂಗೆಯಲ್ಲಿಯೇ ಹಾಕುತ್ತಾರೆ. ಕೆಲವು ಜನರು ಗಂಗಾ ನದಿಯ ದಡದಲ್ಲಿಯೇ ಮಲ-ಮೂತ್ರವಿಸರ್ಜನೆ ಮಾಡುತ್ತಾರೆ. (ಈ ರೀತಿ ಮಾಡುವುದು ಮಹಾಪಾಪವಾಗಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಓದಿ.) ಇಂತಹ ಕೃತಿಗಳಿಂದಾಗಿ ಗಂಗೆಯು ಕಲುಷಿತಗೊಳ್ಳುತ್ತಿರುವಾಗ ಅಪರಾಧ ಮಾಡುವವರನ್ನು ಹಿಂದೂಗಳು ತಡೆಯುವುದೂ ಇಲ್ಲ.

ಆ. ಗಂಗೆಯ ಪಾವಿತ್ರ‍್ಯತೆಯ ರಕ್ಷಣೆಗೆ ಸಹಾಯ ಮಾಡದ ಅನ್ಯಪಂಥೀಯರು !

ಹಿಂದೂಗಳ ಮನಸ್ಸಿನಲ್ಲಿ ಮೋಕ್ಷದಾಯಿನಿ ಗಂಗೆಯ ಬಗ್ಗೆ ಯಾವ ಉದಾತ್ತ ಭಾವನೆಯಿದೆಯೋ, ಅದು ಅನ್ಯಪಂಥೀಯರ ಮನಸ್ಸಿನಲ್ಲಿಲ್ಲ. ಹಿಂದೂಗಳು ಗಂಗೆಯನ್ನು ಪವಿತ್ರಳೆಂದು ಭಾವಿಸಿದರೂ, ಅನ್ಯಪಂಥೀಯರು ಅವಳನ್ನು ಪವಿತ್ರಳೆಂದು ತಿಳಿಯುವುದೇ ಇಲ್ಲ. ಅದರಿಂದಾಗಿ ಗಂಗೆಯ ನೀರಿನಿಂದ ಪ್ರತಿದಿನ ಪ್ರತ್ಯಕ್ಷ ಲಾಭವನ್ನು ಪಡೆದುಕೊಂಡರೂ ಅವರು ಕೆಲವು ಅಪವಾದಗಳನ್ನು ಹೊರತುಪಡಿಸಿ ‘ಗಂಗೆಯ ಮಲಿನತೆ ನಾಶವಾಗಬೇಕು’ ಎಂದು ಎಂದಿಗೂ ರಸ್ತೆಗೆ ಇಳಿಯಲೇ ಇಲ್ಲ.

ಇ. ಗಂಗಾತೀರದ ರಕ್ಷಣೆಯನ್ನು ಮಾಡುವ ಕೆಲವು ಸಂಘಟನೆಗಳ ಅಯೋಗ್ಯ ಕೃತಿಗಳು

ವಾರಾಣಸಿಯಲ್ಲಿನ ಗಂಗೆಯ ಘಟ್ಟದ ಮೇಲೆ ಸ್ವಚ್ಛತೆ, ದುರುಸ್ತಿ ಮತ್ತು ಆರತಿ ಈ ಕೃತಿಗಳನ್ನು ಮಾಡುವ ಉದ್ದೇಶದಿಂದ ಕೆಲವು ಗಂಗಾರಕ್ಷಕ ಸಂಘಟನೆಗಳು ಕಾರ್ಯನಿರತವಾಗಿವೆ. ಅವುಗಳಲ್ಲಿನ ಕೆಲವು ಸಂಘಟನೆಗಳ ಕಾರ್ಯವು ಮುಂದೆ ಹೇಳಿದಂತೆ ಅಯೋಗ್ಯ ರೀತಿಯಲ್ಲಿ ನಡೆದಿರುವುದು ಕಾಣಿಸುತ್ತದೆ.

ಇ ೧. ಗಂಗಾತೀರದ ರಕ್ಷಣೆಯ ಹೆಸರಿನಲ್ಲಿ ಭಕ್ತರಿಂದ ಹಣ ವಸೂಲಿ ಮಾಡುವುದು :
ಅ. ಈ ಸಂಘಟನೆಗಳು ಗಂಗಾತೀರದ ರಕ್ಷಣೆ ಮತ್ತು ಸಂವರ್ಧನೆಗಾಗಿ ವಿದೇಶಿ ಪ್ರವಾಸಿಗರು ಹಾಗೂ ಶ್ರದ್ಧಾಳುಗಳಿಂದ ಚಂದಾ ವಸೂಲಿ ಮಾಡುತ್ತವೆ. ಪ್ರತ್ಯಕ್ಷದಲ್ಲಿ ಅವರು ಗಂಗಾತೀರದ ರಕ್ಷಣೆ ಮತ್ತು ಸಂವರ್ಧನೆಯನ್ನು ಮಾಡುವುದು ಕಾಣಿಸುವುದಿಲ್ಲ.
ಆ. ಸರಕಾರದಿಂದ ಈ ಸಂಘಟನೆಗಳಿಗೆ ಬಹಳಷ್ಟು ಅನುದಾನ ಸಿಗುತ್ತದೆ. ಈ ಅನುದಾನದಿಂದ ಸ್ವಲ್ಪ ಗಂಗೆಯ ಸೇವೆಯನ್ನು ಮಾಡುವುದು ಹಾಗೂ ಉಳಿದ ಸಮಯದಲ್ಲಿ ಸಾರ್ವಜನಿಕರ ಹಣವನ್ನು ಸ್ವಹಿತಕ್ಕಾಗಿ ಉಪಯೋಗಿಸುವುದು, ಈ ರೀತಿ ಕೆಲವು ಸಂಘಟನೆಗಳು ಭ್ರಷ್ಟಾಚಾರ ಮಾಡುತ್ತಿವೆ.
ಇ. ಇದಲ್ಲದೆ ಈ ಸಂಘಟನೆಗಳು ಘಟ್ಟದಲ್ಲಿನ ಮತ್ತು ಪರಿಸರದಲ್ಲಿನ ಅಂಗಡಿಯವರಿಂದಲೂ ಪ್ರತೀ ತಿಂಗಳು ಚಂದಾ ವಸೂಲಿ ಮಾಡುತ್ತವೆ.

ಇ ೨. ಹಣಸಂಗ್ರಹದ ವೃತ್ತಿ ಮತ್ತು ಶೂನ್ಯಫಲಶ್ರುತಿಯ ಗಂಗಾಸೇವೆ !
ಕೆಲವು ಗಂಗಾರಕ್ಷಕ ಸಂಘಟನೆಗಳು ಜನಸೇವೆ ಕಡಿಮೆ ಮತ್ತು ಹಣಸಂಗ್ರಹವನ್ನು ಹೆಚ್ಚೆಚ್ಚು ಮಾಡುತ್ತಿವೆ. ಅವರ ಗಂಗಾ ಶುದ್ಧೀಕರಣದ ಕೃತಿಯು ಗಂಗಾ ಮಾಲಿನ್ಯದ ತುಲನೆಯಲ್ಲಿ ಅತೀ ಕ್ಷುಲ್ಲಕವಾಗಿದೆ. ಎಲ್ಲ ಗಂಗಾ ರಕ್ಷಕ ಸಂಘಟನೆಗಳು ಯೋಗ್ಯ ರೀತಿಯಲ್ಲಿ ಕೆಲಸವನ್ನು ಮಾಡಿದ್ದರೆ, ಗಂಗಾತಟದಲ್ಲಿ ಶೌಚಕ್ಕೆ ಕುಳಿತುಕೊಳ್ಳುವವರು ಹಾಗೂ ಅಲ್ಲಿ ಕಸವನ್ನು ಎಸೆಯುವವರ ಮೇಲೆ ನಿರ್ಬಂಧ ಬರುತ್ತಿತ್ತು. ಹಾಗೆಯೇ ಗಂಗಾ ತೀರದಲ್ಲಿ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ತೊಂದರೆಯನ್ನು ಕೊಡುವ ಮತ್ತು ಮೋಸ ಮಾಡುವ ಜನರಿಗೆ ಹೆದರಿಕೆಯಾಗುತ್ತಿತ್ತು. ಅಲ್ಲಿ ಹೀಗೇನು ನಡೆಯುವುದು ಕಾಣಿಸುವುದಿಲ್ಲ. ಗಂಗಾರಕ್ಷಕ ಸಂಘಟನೆಯ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಿ ಅನೇಕ ಜನರು ಮಾತ್ರ ಲಕ್ಷಾಧಿಪತಿಗಳಾಗಿದ್ದಾರೆ.

ಈ. ಗಂಗೆಯು ಧಾರ್ಮಿಕ ಕೃತಿಗಳಿಂದಾಗಿ ಕಲುಷಿತಗೊಳ್ಳುತ್ತಿದ್ದಾಳೆ ಎಂದು ಹೇಳುವ ಹಿಂದೂ ಧರ್ಮದ್ವೇಷಿ ಪರಿಸರತಜ್ಞರು !

‘ಗಂಗೆಯಲ್ಲಿ ನಿರ್ಮಾಲ್ಯ, ಮೂರ್ತಿ ಮತ್ತು ಅಸ್ಥಿಗಳ ವಿಸರ್ಜನೆ ಹಾಗೂ ಅವಳ ತೀರದಲ್ಲಿ ಶವದಹನ ಮಾಡುವುದರಿಂದಾಗಿ ಗಂಗೆಯು ಕಲುಷಿತಳಾಗಿದ್ದಾಳೆ’, ಎಂದು ಹಿಂದೂ ಧರ್ಮದ್ವೇಷಿ ಅಭಿಪ್ರಾಯವನ್ನು ಒಂದು ಪರಿಸರ ಸಮ್ಮೇಳನದಲ್ಲಿ ಓರ್ವ ಪರಿಸರತಜ್ಞರು ವ್ಯಕ್ತಪಡಿಸಿದ್ದರು. ಇದು ಮಾನವೀ ಅನಾಚಾರಗಳಿಗೆ ಧಾರ್ಮಿಕ ಬಣ್ಣ ನೀಡಿ ಧಾರ್ಮಿಕ ಕೃತಿಗಳನ್ನು ಹೀಗಳೆಯುವ ಒಂದು ಪ್ರಕಾರವಾಗಿದೆ. ಗಂಗೆಯ ಮಾಲಿನ್ಯತೆಯ ಬಗೆಗಿನ ಅವರ ವಿಚಾರಗಳು ಮುಂದಿನ ಕಾರಣಗಳಿಂದಾಗಿ ಅಯೋಗ್ಯವಾಗಿವೆ.

೧. ಒಂದು ವೇಳೆ ಧಾರ್ಮಿಕ ಕೃತಿಗಳಿಂದಾಗಿ ಗಂಗೆಯು ಕಲುಷಿತವಾಗುತ್ತಿದ್ದರೆ, ಅವಳು ಸಾವಿರಾರು ವರ್ಷಗಳ ಹಿಂದೆಯೇ ಕಣ್ಮರೆಯಾಗಬೇಕಾಗಿತ್ತು; ಏಕೆಂದರೆ ಧಾರ್ಮಿಕ ಕೃತಿಗಳನ್ನು ಗಂಗಾ ತೀರದಲ್ಲಿ ಸಾವಿರಾರು ವರ್ಷಗಳಿಂದ ಮಾಡಲಾಗುತ್ತಿದೆ.
೨. ಗಂಗೆಯ ದಡದಲ್ಲಿರುವ ಕೈಗಾರಿಕೆ (ಉದ್ದಿಮೆಗಳು) ಹಾಗೂ ಇತರ ವ್ಯವಹಾರಗಳು ಮತ್ತು ನಗರಗಳ ತ್ಯಾಜ್ಯ ನೀರಿನಿಂದ ಗಂಗೆ ಅತ್ಯಧಿಕ ಕಲುಷಿತಗೊಳ್ಳುತ್ತಿದ್ದಾಳೆ, ಎಂದು ಸರಕಾರದ ಮಾನ್ಯತೆಯನ್ನು ಪಡೆದಿರುವ ಪ್ರಯೋಗಶಾಲೆ, ಹಾಗೆಯೇ ಅಂತರರಾಷ್ಟ್ರೀಯ ಸಂಸ್ಥೆಗಳ ವರದಿಗಳು ಹೇಳುತ್ತವೆ.
೩. ಗಂಗೆಯ ಮೇಲೆ ಅಣೆಕಟ್ಟುಗಳನ್ನು ಕಟ್ಟಿರುವುದರಿಂದ ಗಂಗೆಯ ವೇಗವನ್ನು ತಡೆಹಿಡಿಯಲಾಗಿದೆ. ಧರ್ಮಶಾಸ್ತçವು, ‘ನದೀ ವೇಗೇನ ಶುದ್ಧ್ಯತಿ |’, ಅಂದರೆ ‘ನದಿಯ ನೀರು ಅವಳ ವೇಗದಿಂದ ಶುದ್ಧವಾಗುತ್ತಿರುತ್ತದೆ’ ಎಂದು ಹೇಳುತ್ತದೆ.

Leave a Comment