ಭಕ್ತಾದಿಗಳು ಗಂಗೆಯ ಸಂದರ್ಭದಲ್ಲಿ ಮಾಡಬೇಕಾದ ಸಮಷ್ಟಿ ಸಾಧನೆ (ಉಪಾಸನೆ)

ಅ. ಗಂಗಾ ನದಿಯ ನಿಂದಕರನ್ನು ತಡೆಯುವುದು

ಅ ೧. ಧರ್ಮಶಾಸ್ತ್ರಕ್ಕನುಸಾರ ಗಂಗೆಯ ನಿಂದನೆಯು ಪಾಪವಾಗಿದೆ : ವೇದ, ದೇವ, ಭಕ್ತ, ಗುರು, ಪತಿವ್ರತೆ, ಯತಿ (ಸಂನ್ಯಾಸಿ), ವ್ರತ, ಪೂಜೆ, ಮಂತ್ರ, ಗಂಗೆ, ತುಳಸಿ ಮುಂತಾದವುಗಳನ್ನು ನಿಂದಿಸುವ ವ್ಯಕ್ತಿಯ ಅಧೋಗತಿಯಾಗುತ್ತದೆ ಮತ್ತು ಅವನಿಗೆ ಹಾವು ಕಚ್ಚುವುದು, ಮಲಮೂತ್ರ ಭಕ್ಷಣೆ ಮುಂತಾದ ಯಾತನೆಗಳನ್ನು ಭೋಗಿಸಬೇಕಾಗುತ್ತದೆ ಎಂದು ಹಿಂದೂ ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗೆಯೇ ನಿಂದಿಸುವುದು ಮತ್ತು ನಿಂದನೆಯಾಗುತ್ತಿರುವಾಗ ನಿಷ್ಕ್ರಿಯರಾಗಿದ್ದು ಆ ನಿಂದನೆಗೆ ಒಂದು ರೀತಿಯಲ್ಲಿ ಮೂಕಸಮ್ಮತಿಯನ್ನು ನೀಡುವುದೂ ಪಾಪವೇ ಆಗಿದೆ. ಆದುದರಿಂದ ಗಂಗೆಯನ್ನು ನಿಂದಿಸುವವರನ್ನು ಅದರಿಂದ ವಿಮುಖ ಗೊಳಿಸುವುದು ಮತ್ತು ಅವರು ವಿಮುಖರಾಗದೇ ಇದ್ದಲ್ಲಿ ಯೋಗ್ಯ ಮಾರ್ಗದಿಂದ ತಡೆಯುವುದು ಹಿಂದೂಗಳ ಕರ್ತವ್ಯವೇ ಆಗಿದೆ.

ಅ ೧ ಅ. ಗಂಗೆಗೆ ‘ಗಟಾರಗಂಗಾ’ ಎಂದು ಹೇಳಿ ಹೀಯಾಳಿಸುವುದೂ ಒಂದು ರೀತಿಯ ಗಂಗೆಯ ನಿಂದನೆಯೇ ! : ಇತ್ತೀಚೆಗೆ ಕೆಲವರು ಗಂಗೆಯ ಪಾವಿತ್ರ್ಯವನ್ನು ತೆಗಳಲು ಅವಳನ್ನು ‘ಗಟಾರಗಂಗಾ’ ಎಂದು ಹೀಯಾಳಿಸುತ್ತಾರೆ. ಹೀಗೆ ಸಂಬೋಧಿಸುವುದು ಅಥವಾ ‘ಗಟಾರಗಂಗಾ’ ಎಂಬ ಉಪಮೆಯನ್ನು ಇತರ ಹೊಲಸು ನೀರಿನ ಹಳ್ಳಗಳಿಗೆ ಕೊಡುವುದು ಒಂದು ರೀತಿಯಲ್ಲಿ ಗಂಗೆಯನ್ನು ನಿಂದಿಸುವುದೇ ಆಗಿರುವುದರಿಂದ ಅದರಿಂದ ಪಾಪ ತಗಲುತ್ತದೆ.

ಅ ೨. ಗಂಗೆಯನ್ನು ದ್ವೇಷಿಸುವವರ ಕೆಲವು ಉದಾಹರಣೆಗಳು

ಅ ೨ ಅ. ಹಿಂದೂದ್ವೇಷಿ ಚಿತ್ರಕಾರ ಮ.ಫಿ. ಹುಸೇನ್ : ಇವರು ಹಿಂದೂ ಧರ್ಮದ್ವೇಷದಿಂದ ದೇವತೆಗಳ ನಗ್ನ ಮತ್ತು ಅಶ್ಲೀಲ ಚಿತ್ರಗಳನ್ನು ಚಿತ್ರಿಸಿದರು. ಅವುಗಳಲ್ಲಿ ಒಂದು ‘ನೀರಿನಲ್ಲಿ ಪವಡಿಸಿದ ನಗ್ನ ಗಂಗಾ ಮತ್ತು ಯಮುನೆ’ಯರ ಚಿತ್ರವಿದೆ. ಗಂಗೆಯನ್ನು ನಿಂದಿಸುವವರ ವಿರೋಧದಲ್ಲಿ ನಿಷ್ಕ್ರಿಯರಾಗಿರುವವರ ಮೇಲಲ್ಲ, ಸಕ್ರಿಯವಾಗಿ ಮುಂದಾಳತ್ವ ವಹಿಸಿಕೊಳ್ಳುವವರ ಮೇಲೆ ಗಂಗೆಯ ಕೃಪೆಯಾಗುವುದು ಮತ್ತು ಅವರಿಗೆ ಮಾತ್ರ ಗಂಗಾಸ್ನಾನದ ನಿಜವಾದ ಲಾಭವಾಗುವುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಅ ೨ ಆ. ಪತ್ರಕರ್ತ ಗ್ಲೇನ್ ಬೇಕ್ : ಡಿಸೆಂಬರ್ ೨೦೦೯ ರಲ್ಲಿ ಅಮೇರಿಕಾದ ‘ಫಾಕ್ಸ್’ ವಾಹಿನಿಯ ‘ದ ವನ್ ಥಿಂಗ್’ ಕಾರ್ಯಕ್ರಮದಲ್ಲಿ ನಿರೂಪಕರಾದ ಮತ್ತು ಪತ್ರಕರ್ತರಾದ ಗ್ಲೇನ್ ಬೇಕ್‌ರು ‘ಗಂಗಾ ನದಿಯ ಹೆಸರು ಒಂದು ರೋಗದ ಹೆಸರಾಗಿದೆ’, ಎಂದು ಹೇಳಿದರು.

ಅ ೩. ಗಂಗೆಯ ನಿಂದಕರನ್ನು ತಡೆಯಲು ಮಾಡಬೇಕಾದ ಪ್ರಯತ್ನ

ಅ ೩ ಅ. ಗಂಗೆಯನ್ನು ನಿಂದಿಸುವ ಪ್ರಸಾರಮಾಧ್ಯಮಗಳಲ್ಲಿ ಸ್ಪಷ್ಟೀಕರಣವನ್ನು ಕೇಳಿ ! : ‘ಆಗಸ್ಟ್ ೨೦೧೧ ರಲ್ಲಿ ಆಸ್ಟ್ರೇಲಿಯಾದ ‘ಟುಡೇ ಎಫ್.ಎಮ್.’ ಆಕಾಶವಾಣಿ ಕೇಂದ್ರದ ಕಾಯಿಲ್ ಸ್ಯಾಂಡಿಲ್ಯಾಂಡಸ್ ಎಂಬ ರೇಡಿಯೋ ನಿವೇದಕನು ‘ಕಾಯಿಲ್ ಆಂಡ್ ಜ್ಯಾಕಿ ಒ’ ಎಂಬ ಕಾರ್ಯಕ್ರಮದ ಸಮಯದಲ್ಲಿ ಭಾರತವನ್ನು ಶಿಟ್‌ಹೋಲ್ (ಶೌಚವನ್ನು ಮಾಡುವ ಸ್ಥಳ) ಮತ್ತು ಪವಿತ್ರ ಗಂಗಾ ನದಿಯನ್ನು ಜಂಕ್‌ಯಾರ್ಡ್ (ತಿಪ್ಪೆಗುಂಡಿ) ಎಂದು ಉಲ್ಲೇಖಿಸಿದ್ದನು. ಜಾಗೃತ ಹಿಂದೂಗಳು ಅದರ ಬಗ್ಗೆ ಪತ್ರ ಬರೆದು ಮತ್ತು ದೂರವಾಣಿ ಕರೆ ಮಾಡಿ ಈ ಆಕಾಶ ವಾಣಿ ಕೇಂದ್ರಕ್ಕೆ ಸ್ಪಷ್ಟೀಕರಣವನ್ನು ಕೇಳಿದ ನಂತರ ಆಕಾಶವಾಣಿ ಕೇಂದ್ರ ‘ಟುಡೆ ಎಫ್.ಎಮ್’ ಮತ್ತು ಅದರ ನಿವೇದಕರಾದ ಕಾಯಲೆಯವರು ಹಿಂದೂಗಳಲ್ಲಿ ಕ್ಷಮೆಯಾಚಿಸಿದರು.’ (೧೮)

ಕೇವಲ ಪ್ರಸಾರಮಾಧ್ಯಮಗಳಷ್ಟೇ ಅಲ್ಲ, ಗಂಗೆಯನ್ನು ನಿಂದಿಸುವ ಕಲೆ, ಸಾಹಿತ್ಯ, ರಾಜಕಾರಣ ಮುಂತಾದ ಎಲ್ಲ ಸ್ತರಗಳಲ್ಲಿನ ನಿಂದಕರಲ್ಲಿ ನಿಷೇಧವನ್ನು ವ್ಯಕ್ತಪಡಿಸಿ ಅವರಿಗೆ ಅದರ ಬಗ್ಗೆ ಸ್ಪಷ್ಟೀಕರಣವನ್ನು ಕೇಳಿರಿ !

ಅ ೩ ಆ. ಗಂಗೆಯನ್ನು ನಿಂದಿಸುವ ಕರಪತ್ರಗಳನ್ನು ಹಂಚುವ ಮಿಶನರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ! : ೨೦೦೯ ರಲ್ಲಿ ಪ್ರಯಾಗದ ಮಾಘಮೇಳದಲ್ಲಿ ಪವಿತ್ರ ತ್ರಿವೇಣಿ ಸಂಗಮದಿಂದ ಒಂದು ಕಿಲೋಮೀಟರ್ ಅಂತರದಲ್ಲಿರುವ ಪೆರೇಡ್ ಮೈದಾನದಲ್ಲಿ ನಾಲ್ಕು ಜನ ಮಿಶನರಿಗಳು ಧರ್ಮಪ್ರಸಾರದ ಉದ್ದೇಶದಿಂದ ಗಂಗಾ ನದಿಯನ್ನು ನಿಂದಿಸುವ ಕರಪತ್ರಗಳನ್ನು ವಾಹನದಲ್ಲಿ ತಿರುಗಾಡುತ್ತಾ ಹಂಚುತ್ತಿದ್ದರು. ಈ ಸುದ್ದಿ ತಿಳಿಯುತ್ತಲೇ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಅವರನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದರು.

ಮಿಶನರಿಗಳು ಹಿಂದೂಗಳ ಧಾರ್ಮಿಕಭಾವನೆಯನ್ನು ನೋಯಿಸಲು ಗಂಗಾ ನದಿಯನ್ನು ನಿಂದಿಸುತ್ತಾರೆ; ಆದುದರಿಂದ ಪೊಲೀಸ್ ಠಾಣೆಯಲ್ಲಿ ಧಾರ್ಮಿಕ ಭಾವನೆಯನ್ನು ನೋಯಿಸಿರುವುದರ ಕಾರಣವನ್ನು ಹೇಳಿ ಅವರ ವಿರುದ್ಧ ಭಾರತದ ದಂಡಸಂಹಿತೆ ‘೨೯೫ ಅ’ಗನುಸಾರ ದೂರು ದಾಖಲಿಸಿರಿ !

ಆ. ಗಂಗಾ ನದಿಯನ್ನು ಮಲಿನಗೊಳಿಸುವವರನ್ನು ತಡೆಯುವುದು

ಆ ೧. ಗಂಗೆಯನ್ನು ಮಲಿನಗೊಳಿಸುವುದು ಧರ್ಮಶಾಸ್ತ್ರಕ್ಕೆ ಅಸಮ್ಮತ ! : ಗಂಗಾ ಜಲವನ್ನು ಮಲಿನಗೊಳಿಸುವ ಕರ್ಮಗಳನ್ನು ಬ್ರಹ್ಮಾಂಡಪುರಾಣದಲ್ಲಿ (ಅಧ್ಯಾಯ ೧, ಶ್ಲೋಕ ೫೩೫ ರಲ್ಲಿ) ಸ್ಪಷ್ಟ ಶಬ್ದಗಳಲ್ಲಿ ಮುಂದಿನಂತೆ ನಿಷೇಧಿಸಲಾಗಿದೆ.

ಶೌಚಮಾಚಮನಂ ಕೇಶನಿರ್ಮಾಲ್ಯಮಘಮರ್ಷಣಮ್ |
ಗಾತ್ರಸಂವಾಹನಂ ಕ್ರೀಡಾ ಪ್ರತಿಗ್ರಹಮಥೋ ರತಿಮ್ ||
ಅನ್ಯತೀರ್ಥರತಿಂ ಚೈವ ಅನ್ಯತೀರ್ಥಪ್ರಶಂಸನಮ್ |
ವಸ್ತ್ರತ್ಯಾಗಮಥಾಘಾತಸಂತಾರಂ ಚ ವಿಶೇಷತಃ ||

ಅರ್ಥ : ಗಂಗೆಯ ಹತ್ತಿರ ಶೌಚ ಮಾಡುವುದು, ಬಾಯಿ ಮುಕ್ಕಳಿಸುವುದು, ತಲೆ ಬಾಚುವುದು ಅಥವಾ ಕೂದಲನ್ನು ವಿಸರ್ಜಿಸುವುದು, ನಿರ್ಮಾಲ್ಯವನ್ನು ಎಸೆಯುವುದು, ಕಸ ಬಿಸಾಡುವುದು, ಮಲ-ಮೂತ್ರವಿಸರ್ಜನೆ, ಹಾಸ್ಯವಿನೋದ ಮಾಡುವುದು, ದಾನ ಪಡೆಯುವುದು, ಮೈಥುನ ಮಾಡುವುದು, ಇತರ ತೀರ್ಥಗಳ ಬಗ್ಗೆ ಪ್ರೇಮವನ್ನು ವ್ಯಕ್ತಪಡಿಸುವುದು, ಇತರ ತೀರ್ಥಗಳನ್ನು ಸ್ತುತಿಸುವುದು, ವಸ್ತ್ರಗಳನ್ನು ತ್ಯಜಿಸುವುದು, ಗಂಗಾಜಲವನ್ನು ಕೈಯಿಂದ ಹೊಡೆಯುವುದು ಮತ್ತು ಗಂಗೆಯಲ್ಲಿ ಜಲಕ್ರೀಡೆ ಮಾಡುವುದು, ಈ ೧೪ ಕರ್ಮಗಳನ್ನು ಗಂಗೆಯಲ್ಲಿ ಅಥವಾ ಗಂಗೆಯ ಹತ್ತಿರದಲ್ಲಿ ಮಾಡುವುದು ನಿಷಿದ್ಧವಾಗಿದೆ.

ಗಂಗೆಯಲ್ಲಿ ಅಥವಾ ಗಂಗೆಯ ಸಮೀಪ ನಿಷಿದ್ಧವಾಗಿರುವ ೧೪ ಕರ್ಮಗಳ ಪೈಕಿ ೭ ಕರ್ಮಗಳು ಜಲಮಾಲಿನ್ಯಕ್ಕೆ ಸಂಬಂಧಿಸಿವೆ.

ಆ ೨. ಗಂಗಾಮಾಲಿನ್ಯವನ್ನು ತಡೆಯಲು ಮಾಡಬೇಕಾದ ಪ್ರಯತ್ನ : ಗಂಗಾ ನದಿಯ ಪಾವಿತ್ರ್ಯ ರಕ್ಷಣೆಗಾಗಿ ಪ್ರಯತ್ನಿಸುವುದು ಒಂದು ರೀತಿಯ ಧರ್ಮಪಾಲನೆಯೇ ಆಗಿದೆ. ಇದಕ್ಕಾಗಿ ಮುಂದಿನಂತೆ ಪ್ರಯತ್ನಿಸಬೇಕು.

ಅ. ಗಂಗೆಯನ್ನು ಮಲಿನಗೊಳಿಸುವ ಭಕ್ತಾದಿಗಳಿಗೆ ಪ್ರಬೋಧನೆ ಮಾಡುವುದು

ಆ. ಗಂಗಾರಕ್ಷಣೆಯ ಬಗ್ಗೆ ವಾರ್ತಾಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವುದು ಅಥವಾ ಸಮಾಜದಲ್ಲಿ ಪ್ರಬೋಧನಾತ್ಮಕ ಕರಪತ್ರಗಳನ್ನು ಹಂಚುವುದು

ಇ. ಗಂಗೆಯಲ್ಲಿ ಕೊಳಚೆನೀರನ್ನು ಬಿಡುವ ಕಾರ್ಖಾನೆ ಮತ್ತು ನಗರಪಾಲಿಕೆಗಳ ಅಧಿಕಾರಿಗಳಲ್ಲಿ ಜಾಗೃತಿ ಮೂಡಿಸುವುದು

ಈ. ಗಂಗೆಯ ಪರಿಸರದಲ್ಲಿ ಕಾರ್ಯನಿರತವಾಗಿರುವ ಜನಪ್ರತಿನಿಧಿಗಳನ್ನು (ನಗರ ಸೇವಕರು, ಮಹಾಪೌರರು, ಶಾಸಕರು, ಸಂಸದರು ಮುಂತಾದವರನ್ನು) ಭೇಟಿಯಾಗಿ ಅವರಿಗೆ ಪ್ರಬೋಧನೆ ಮಾಡುವುದು.

(ಗಂಗಾನದಿಯ ಶುದ್ಧೀಕರಣ ಮತ್ತು ರಕ್ಷಣೆಗಾಗಿ ಮಾಡಬೇಕಾದ ಪ್ರಯತ್ನಗಳ ಸವಿಸ್ತಾರ ವಿವೇಚನೆಯನ್ನು ಸನಾತನ ನಿರ್ಮಿತ ‘ಪವಿತ್ರ ಗಂಗಾ ನದಿಯನ್ನು ರಕ್ಷಿಸಿರಿ !’ ಎಂಬ ಗ್ರಂಥದಲ್ಲಿ ಮಾಡಲಾಗಿದೆ.)

ಇ. ಗಂಗೆಯ ಅಲೌಕಿಕತೆಯನ್ನು ಜಗತ್ತಿನ ಎದುರಿಗೆ ತನ್ನಿರಿ !

ಇಂದಿನ ಪೀಳಿಗೆಗೆ ಗಂಗೆಯ ಅಲೌಕಿಕ ಮಹಾತ್ಮೆ ಮತ್ತು ಅವಳ ವರ್ತಮಾನ ದುಃಸ್ಥಿತಿಯ ಬಗ್ಗೆ ಜ್ಞಾನವೇ ಇಲ್ಲ ಎಂಬುದು ಕಟು ಸತ್ಯವಾಗಿದೆ. ಭಾರತೀಯರಿಗೆ ಸರ್ವಪಾಪವಿನಾಶಿನಿ ಮತ್ತು ಸರ್ವತೀರ್ಥಮಯಿಯಾದ ಗಂಗೆಯ ಮಹಾತ್ಮೆಯು ತಿಳಿದರೆ, ಅವಳ ಪಾವಿತ್ರ್ಯರಕ್ಷಣೆಗೆ ಸತರ್ಕರಾಗುವರು. ಗಂಗಾಮಾಲಿನ್ಯವು ಪಾಪಕೃತ್ಯವಾಗಿದೆ ಎಂಬ ಧರ್ಮಶಿಕ್ಷಣ ದೊರಕಿದರೆ ಮಾಲಿನ್ಯ ಮಾಡುವವರಿಗೆ ನೈತಿಕ ದೃಷ್ಟಿಯಿಂದ ನಿರ್ಬಂಧ ಉಂಟಾಗುವುದು. ‘ಪವಿತ್ರ ಗಂಗಾ ನದಿಯ ರಕ್ಷಣೆಯು ಪ್ರತಿಯೊಬ್ಬ ಹಿಂದೂವಿನ ಧಾರ್ಮಿಕ, ಸಾಮಾಜಿಕ, ಮಾನವೀಯ ಮತ್ತು ಮೊದಲ ರಾಷ್ಟ್ರೀಯ ಕರ್ತವ್ಯವಾಗಿದೆ’ ಎಂಬುದನ್ನು ಪ್ರತಿಯೊಬ್ಬರ ಮನಸ್ಸಿನ ಮೇಲೆ ಬಿಂಬಿಸಿದರೆ ಅವಳ ರಕ್ಷಣೆಗಾಗಿ ಅಖಿಲ ಭಾರತೀಯ ಸಮುದಾಯವು ಮುಂದಾಳತ್ವ ವಹಿಸುವುದು. ಆದುದರಿಂದಲೇ ಗಂಗೆಯ ಅಲೌಕಿಕತೆಯನ್ನು ಜಗತ್ತಿನ ಎದುರಿಗೆ ತರುವುದು ಅತ್ಯಂತ ಆವಶ್ಯಕವೇ ಆಗಿರುತ್ತದೆ. ಅದಕ್ಕಾಗಿ ಮುಂದಿನಂತೆ ಪ್ರಯತ್ನಿಸಬಹುದು.

೧. ಸಂತರ ಸತ್ಸಂಗ, ಕೀರ್ತನೆ (ಹರಿಕಥೆ), ವ್ಯಾಖ್ಯಾನ, ಪ್ರವಚನ ಇತ್ಯಾದಿಗಳ ಮಾಧ್ಯಮದಿಂದ ಗಂಗಾಮಹಾತ್ಮೆ ಮತ್ತು ಗಂಗಾರಕ್ಷಣೆಯ ವಿಷಯವನ್ನು ಮಂಡಿಸುವುದು.

೨. ಶಿಕ್ಷಣಮಂಡಳಿಯಲ್ಲಿ ‘ಗಂಗೆಯ ಮಹಿಮೆಯನ್ನು ಹೇಳುವ ಪಾಠಗಳನ್ನು ಪಠ್ಯಕ್ರಮಗಳಲ್ಲಿ ಸೇರಿಸಬೇಕು’, ಎಂದು ಆಗ್ರಹಿಸುವುದು.

೩. ಸನಾತನ ನಿರ್ಮಿತ ಗಂಗಾಮಹಾತ್ಮೆ ಗ್ರಂಥ, ಹಾಗೆಯೇ ಗಂಗಾರಕ್ಷಣೆಯ ಬಗೆಗಿನ ಗ್ರಂಥಗಳನ್ನು ಪ್ರಾಯೋಜಿಸುವುದು ಮತ್ತು ಆಪ್ತರಿಗೆ ಉಡುಗೊರೆ ಎಂದು ನೀಡುವುದು.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಗಂಗಾಮಹಾತ್ಮೆ’ ಗ್ರಂಥ)

Leave a Comment