ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 11

ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಅವಶ್ಯಕ ಧರ್ಮಜಾಗೃತಿ !

ಹಿಂದೂ ರಾಷ್ಟ್ರದ ಸ್ಥಾಪನೆಯ ಪ್ರಸಾರ ಮಾಡುವವರನ್ನು ಮತ್ತು ಹಿಂದೂ ಧರ್ಮದ ಪರವಾಗಿ ಮಾತನಾಡುವ ವಕ್ತಾರರನ್ನು ಸಿದ್ಧಗೊಳಿಸಿರಿ ! : ಇಂದು ದೂರದರ್ಶನ ವಾಹಿನಿಗಳಲ್ಲಿ ಹಿಂದೂ ಧರ್ಮದ ಪರವಾಗಿ ಮಾತನಾಡುವ ವಕ್ತಾರರು ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದಾರೆ. ಆದ್ದರಿಂದ ದೂರದರ್ಶನ ವಾಹಿನಿಗಳ ಚರ್ಚಾಕೂಟಗಳಲ್ಲಿ ಹಿಂದೂ ಧರ್ಮಕ್ಕೆ ಅತ್ಯಧಿಕ ಹಾನಿಯಾಗುತ್ತಿದೆ. ಈ ಹಾನಿಯನ್ನು ತಡೆಗಟ್ಟುವುದು, ಹಾಗೆಯೇ ಸನಾತನ ಧರ್ಮದ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಪ್ರಸಾರ ಮಾಡುವುದು, ಇವುಗಳಿಗಾಗಿ ದೂರದರ್ಶನ ವಾಹಿನಿಗಳಲ್ಲಿ ಪ್ರಭಾವಿಯಾಗಿ ವಿಚಾರ ಮಂಡಿಸುವ ವಕ್ತಾರರನ್ನು ನಾವು ನಿರ್ಮಿಸಬೇಕಾಗಿದೆ. ಪ್ರತಿಯೊಂದು ಸಂಘಟನೆಯು ಪ್ರತಿವರ್ಷ ಇಬ್ಬರು ವಕ್ತಾರರನ್ನು ನಿರ್ಮಿಸುವ ಧ್ಯೇಯವನ್ನು ಸಾಧ್ಯಗೊಳಿಸಿದರೆ, ಹಿಂದೂ ರಾಷ್ಟ್ರದ ದೃಷ್ಟಿಯಿಂದ ಸಮಾಜದಲ್ಲಿ ದೊಡ್ಡ ವೈಚಾರಿಕ ಜಾಗೃತಿಯಾಗುವುದು. (೨೪.೫.೨೦೧೫)

ಪ್ರತಿಯೊಂದು ತಾಲೂಕು ಮತ್ತು ಜಿಲ್ಲೆಯಲ್ಲಿ ರಾಷ್ಟ್ರೀಯ ಹಿಂದೂ ಆಂದೋಲನದ ಉಪಕ್ರಮ ನಡೆಸಿ ! : ಸಂಘೇ ಶಕ್ತಿಃ ಕಲೌ ಯುಗೇ | ಅಂದರೆ ‘ಕಲಿಯುಗದಲ್ಲಿ ಸಂಘಟಿತರಾಗಿರುವವರಲ್ಲಿಯೇ ಶಕ್ತಿಯಿರುತ್ತದೆ ಎಂಬ ತತ್ತ್ವಕ್ಕನುಸಾರ ಒಂದೊಂದು ಸಂಘಟನೆಯು ಯಾವುದಾದರೊಂದು ವಿಷಯದ ಮೇಲೆ ಆಂದೋಲನ ಮಾಡುವುದಕ್ಕಿಂತ ಅನೇಕರು ಒಂದೇ ವಿಷಯದ ಮೇಲೆ ಆಂದೋಲನ ಮಾಡಿದರೆ ಅದು ಹೆಚ್ಚು ಫಲದಾಯಕವಾಗಿರುತ್ತದೆ. ಹಿಂದೂ ಸಂಪ್ರದಾಯಗಳು ಮತ್ತು ಸಂಘಟನೆಗಳು ಧರ್ಮರಕ್ಷಣೆಗಾಗಿ ಒಂದೆಡೆ ಬರಬಲ್ಲವು ಎಂಬುದನ್ನು ಪ್ರತಿ ತಿಂಗಳು ಪ್ರತಿಯೊಂದು ತಾಲೂಕು ಮತ್ತು ಜಿಲ್ಲೆಯಲ್ಲಿ ನಡೆಯುವ ದೇಶವ್ಯಾಪಿ ‘ರಾಷ್ಟ್ರೀಯ ಹಿಂದೂ ಆಂದೋಲನವು ಸಿದ್ಧಪಡಿಸಿದೆ. ಈ ರಾಷ್ಟ್ರೀಯ ಹಿಂದೂ ಆಂದೋಲನಗಳು ಧರ್ಮಕ್ರಾಂತಿಯ ಬೀಜಗಳಾಗಿವೆ. ಈ ಧರ್ಮಕ್ರಾಂತಿಯೇ ಮುಂದೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ! (೨೪.೫.೨೦೧೫)

ಹಿಂದೂಗಳ ಪ್ರಭಾವಿ ಸಂಘಟನಾಶಕ್ತಿಯನ್ನು ನಿರ್ಮಿಸುವುದು ಧರ್ಮಕ್ರಾಂತಿಯ ಮಹತ್ವದ ಹಂತವಾಗಿದ್ದು, ಅದರ ಮೂಲಕವೇ ಹಿಂದೂ ರಾಷ್ಟ್ರ ಸ್ಥಾಪಿಸಲು ಸಾಧ್ಯ ! : ಆಂದೋಲನಗಳು, ನಿದರ್ಶನಗಳು, ಮೋರ್ಚಾ, ಚಳುವಳಿ ಇಂತಹದ್ದೇನಾದರೂ ಮಾಡಿದರೆ ಮಾತ್ರ ರಾಜಕಾರಣಿಗಳು ಜನರ ಸಮಸ್ಯೆಗಳನ್ನು ಬಿಡಿಸಲು ಪ್ರಯತ್ನಿಸುತ್ತಾರೆ. ಯಾರಿಗೆ ಯಾವ ಭಾಷೆ ತಿಳಿಯುತ್ತದೆಯೋ, ಅವರಿಗೆ ಅದೇ ಭಾಷೆಯಲ್ಲಿ ಹೇಳಬೇಕು. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಸಂಘಟನೆಗಳ ರಾಷ್ಟ್ರವ್ಯಾಪಿ ಏಕತ್ರೀಕರಣ ಮಾಡಿದ ನಂತರ ಅವರ ಆಂದೋಲನಗಳಿಂದ ಹಿಂದೂ ಸಮಾಜದ ಪ್ರಭಾವಿ ಸಂಘಟನಾಶಕ್ತಿಯು ನಿರ್ಮಾಣವಾಗುವುದು. ಹಿಂದೂಗಳ ಇಂತಹ ಪ್ರಭಾವಿ ಸಂಘಟನಾಶಕ್ತಿಯನ್ನು ನಿರ್ಮಿಸುವುದು ಧರ್ಮಕ್ರಾಂತಿಯಲ್ಲಿನ ಮಹತ್ವದ ಹಂತವಾಗಿದೆ. ಇದರ ಪರಿಣಾಮದಿಂದ ರಾಜಕಾರಣಿಗಳಿಗೆ ಆಂದೋಲನಗಳನ್ನು ಪರಿಗಣಿಸಲೇಬೇಕಾಗುತ್ತದೆ. ಇದರ ಒಂದು ಉದಾಹರಣೆಯೆಂದರೆ ಸಮಾಜಸೇವಕರಾದ ಅಣ್ಣಾ ಹಜಾರೆಯವರು ಭ್ರಷ್ಟಾಚಾರಿ ರಾಜಕಾರಣಿಗಳ ಮೇಲೆ ಅಂಕುಶವನ್ನಿಡಲು ಲೋಕಪಾಲ ಮಸೂದೆಯನ್ನು ತರಬೇಕು, ಎಂಬುದಕ್ಕಾಗಿ ದೇಶದಾದ್ಯಂತ ಭ್ರಷ್ಟಾಚಾರವಿರೋಧಿ ಸಂಘಟನೆಗಳನ್ನು ಏಕತ್ರಿತಗೊಳಿಸಿ ದೇಶವ್ಯಾಪಿ ಆಂದೋಲನ ಮಾಡಿದರು.

ಈ ಆಂದೋಲನದ ಪರಿಣಾಮದಿಂದ ಭ್ರಷ್ಟ ರಾಜಕಾರಣಿಗಳಿಗೆ ಭ್ರಷ್ಟಾಚಾರ ವಿರೋಧಿ ಲೋಕಪಾಲ ಮಸೂದೆಯನ್ನು ಜ್ಯಾರಿಗೊಳಿಸಬೇಕಾಯಿತು. ಒಂದು ವೇಳೆ ಇಂತಹ ಘಟನೆ ನಡೆಯುತ್ತದೆ ಎಂದಾದರೆ, ಹಿಂದೂ ಸಂಘಟನೆಗಳ ರಾಷ್ಟ್ರವ್ಯಾಪಿ ಆಂದೋಲನಗಳಿಂದ ನಿರ್ಮಾಣವಾಗುವ ಪ್ರಭಾವಿ ಸಂಘಟನಶಕ್ತಿಯಿಂದ ಜಾತ್ಯತೀತ ರಾಜಕಾರಣಿಗಳಿಗೆ ‘ಭಾರತವು ಹಿಂದೂ ರಾಷ್ಟ್ರವಾಗಿದೆ ಎಂದು ಸಂವಿಧಾನದ ಮೂಲಕ ಘೋಷಿಸಲೇಬೇಕಾಗುತ್ತದೆ. ಈ ಧ್ಯೇಯವನ್ನು ಸಾಧ್ಯಗೊಳಿಸಲು ಹಿಂದೂಗಳು ಭಾಷೆ, ಪ್ರಾಂತ್ಯ, ಜಾತಿ, ಸಂಪ್ರದಾಯ, ಸಂಘಟನೆ, ಪಕ್ಷ ಇವುಗಳಲ್ಲಿ ವಿಭಜಿಸಲ್ಪಟ್ಟ ಹಿಂದೂ ಸಮಾಜವನ್ನು ದೇಶವ್ಯಾಪಿ ಬೃಹತ್ ಸಂಘಟನೆಯನ್ನು ತಯಾರು ಮಾಡಬೇಕಾಗುವುದು. ಇದರ ಮೂಲಕವೇ ಪ್ರಭಾವಿ ಸಂಘಟನಶಕ್ತಿ ಉದಯವಾಗುವುದು ಮತ್ತು ಅದರ ಮೂಲಕವೇ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆವಶ್ಯಕ ಧರ್ಮಕ್ರಾಂತಿ ಸಾಧ್ಯವಾಗುವುದು. (೨೧.೧೦.೨೦೧೫)

(ಆಧಾರ : ಸನಾತನ ನಿರ್ಮಿತ ಗ್ರಂಥ ಹಿಂದೂ ರಾಷ್ಟ್ರ ಸ್ಥಾಪನೆಯ ದಿಶೆ)

Leave a Comment