ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 10

ಹಿಂದೂ ರಾಷ್ಟ್ರಪ್ರೇಮಿಗಳೇ, ‘ಮುಂದೆ ಹಿಂದೂ ರಾಷ್ಟ್ರವನ್ನು ಯಾರು ಸಂಭಾಳಿಸುವರು ? ಎಂಬುದರ ಕಾಳಜಿಯನ್ನು ಮಾಡಬೇಡಿರಿ !

ಸ್ವಾತಂತ್ರ್ಯದ ನಂತರದ ಕಾಲದಲ್ಲಿ, ಅಂದರೆ ಕಳೆದ ೬೦-೭೦ ವರ್ಷಗಳಲ್ಲಿ ಸ್ವಭಾಷೆ, ಹಿಂದೂ ಸಂಸ್ಕೃತಿ, ಹಿಂದೂ ಧರ್ಮ ಇತ್ಯಾದಿಗಳ ವಿಷಯದಲ್ಲಿ ಮಕ್ಕಳ ಮೇಲೆ ಸಂಸ್ಕಾರಗಳು ಆಗಬಾರದು ಮತ್ತು ಹಿರಿಯರಲ್ಲಿರುವ ಸಂಸ್ಕಾರಗಳು ಅಳಿಸಿ ಹೋಗಬೇಕು ಎಂಬುದಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳ ಸರಕಾರಗಳು ಸ್ಪರ್ಧೆಯಿಂದ ಪ್ರಯತ್ನಿಸಿದವು. ಆದುದರಿಂದ ಬಹಳಷ್ಟು ಮಕ್ಕಳಿಗೆ ಈಗ ತಮ್ಮ ಮಾತೃಭಾಷೆಯೇ ಸರಿಯಾಗಿ ಬರುವುದಿಲ್ಲ. ಇಷ್ಟೇ ಅಲ್ಲ, ‘ಮಾತೃಭಾಷೆ ಬರುವುದಿಲ್ಲ ಮತ್ತು ಆಂಗ್ಲ ಭಾಷೆ ಬರುತ್ತದೆ’ ಎಂಬುದರ ಬಗ್ಗೆ ಅವರಿಗೆ ಅಭಿಮಾನವೆನಿಸುತ್ತದೆ.

ಕಾನ್ವೆಂಟ್ ಶಾಲೆಗಳಲ್ಲಿ ಕಲಿತಿದ್ದರಿಂದ ಅವರಿಗೆ ಹಿಂದೂ ಸಂಸ್ಕೃತಿ ಮತ್ತು ಧರ್ಮದ ಮುಖಪರಿಚಯವೂ ಇಲ್ಲ. ಈ ಮಕ್ಕಳು ದೊಡ್ಡವರಾದಾಗ ತಮ್ಮ ಮಕ್ಕಳ ಮೇಲೆಯೂ ‘ಅಪ್ಪ-ಅಮ್ಮ’ನ ಬದಲು ‘ಮಮ್ಮಿ-ಡ್ಯಾಡಿ’ಯ ಸಂಸ್ಕಾರವನ್ನು ಮಾಡುವರು. ಈ ರೀತಿಯಲ್ಲಿ ಮುಂದಿನ ಎರಡು ಪೀಳಿಗೆಗಳಲ್ಲಿ ಹಿಂದೂ ರಾಷ್ಟ್ರವನ್ನು ನಡೆಸುವ ಯೋಗ್ಯತೆಯವರು ಯಾರೂ ಇರುವುದಿಲ್ಲ.

ಇಂತಹ ಸ್ಥಿತಿಯಲ್ಲಿ ೨೦೨೩ ರಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾದ ನಂತರ ಅದನ್ನು ಆದರ್ಶ ರೀತಿಯಲ್ಲಿ ಯಾರು ನಡೆಸುವರು ? ಎಂಬುದರ ಕಾಳಜಿಯು ಬಹಳಷ್ಟು ಹಿಂದುತ್ವವಾದಿಗಳಿಗೆ ಅನಿಸುತ್ತದೆ. ಬಾಹ್ಯತಃ ಹೀಗೆ ಅನಿಸುವುದು ಯೋಗ್ಯವೇ ಆಗಿದೆ. ಪ್ರತ್ಯಕ್ಷದಲ್ಲಿ ಈಶ್ವರನ ಆಯೋಜನೆಯು ಗಮನಕ್ಕೆ ಬಂದರೆ ಅದರಲ್ಲಿ ಕಾಳಜಿ ಮಾಡುವಂತಹದ್ದೇನೂ ಇಲ್ಲ ಎಂಬುದು ಗಮನಕ್ಕೆ ಬರುತ್ತದೆ.

ಇಂದು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಿರತವಾಗಿರುವವರು ಮುಂದಿನ ೩೦ ವರ್ಷಗಳವರೆಗೆ ಹಿಂದೂ ರಾಷ್ಟ್ರವನ್ನು ನಡೆಸುವರು.

‘ಅದರ ನಂತರ ಏನು ?’, ಇದರ ಉತ್ತರ ಹೀಗಿದೆ. ಹಿಂದೂ ರಾಷ್ಟ್ರವನ್ನು ನಡೆಸಲು ಅನೇಕ ಜೀವಾತ್ಮಗಳು ಉಚ್ಚ ಸ್ವರ್ಗಲೋಕ ಮತ್ತು ಮಹರ್ಲೋಕದಿಂದ ಪೃಥ್ವಿಯ ಮೇಲೆ ಜನಿಸುತ್ತಿವೆ. ಸನಾತನ ಸಂಸ್ಥೆಯ ಸಂದರ್ಭದಲ್ಲಿ ಇದರ ಉದಾಹರಣೆಯನ್ನು ನೋಡೋಣ. ಕಳೆದ ೪-೫ ವರ್ಷಗಳಲ್ಲಿ ೧೫-೧೬ ವರ್ಷದ ಬಹಳಷ್ಟು ಬಾಲಕಿಯರು ಪೂರ್ಣವೇಳೆ ಸಾಧಕಿಯರಾಗಿ ರಾಮನಾಥಿ (ಫೋಂಡಾ, ಗೋವಾ)ಯಲ್ಲಿನ ಸನಾತನ ಆಶ್ರಮಕ್ಕೆ ಬಂದಿದ್ದಾರೆ. ಆಶ್ರಮದಲ್ಲಿ ಕೇವಲ ೩ ರಿಂದ ೬ ವರ್ಷಗಳ ವರೆಗೆ ವಾಸಿಸಿದ ನಂತರ ಅವರು ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುತ್ತ ಆಶ್ರಮದ ವ್ಯವಸ್ಥಾಪನೆಯನ್ನೂ ಕಲಿತರು. ಇದರಿಂದ ಈಗ ೧೮ ರಿಂದ ೨೨ ವರ್ಷ ವಯೋಮಾನದ ಸಾಧಕಿಯರು ವಿವಿಧ ಆಶ್ರಮಗಳನ್ನೂ ನೋಡಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲ, ಇನ್ನೂ ಕೆಲವರು ಕೆಲವು ಜಿಲ್ಲೆಗಳಲ್ಲಿನ ಧರ್ಮಪ್ರಸಾರದ ಕಾರ್ಯವನ್ನೂ ನೋಡಿಕೊಳ್ಳುತ್ತಿದ್ದಾರೆ. ಹೀಗೆಯೇ ಮುಂದುವರಿದು ಅವರು ರಾಜ್ಯಮಟ್ಟದ ಜವಾಬ್ದಾರಿಯನ್ನೂ ನಿರ್ವಹಿಸಬಲ್ಲರು. ಈ ಅನುಭವ ಬಂದಿದ್ದರಿಂದ ಅವರಿಗೆ ೧೫-೨೦ ವರ್ಷಗಳ ನಂತರ ಮೊದಲಿಗೆ ರಾಜ್ಯ ಮತ್ತು ನಂತರ ರಾಷ್ಟ್ರವನ್ನು ನಡೆಸುವುದೂ ಸಹಜ ಸಾಧ್ಯವಿದೆ. ಅವರ ಹಿಂದೆಯೇ ೧೦-೧೨ ವರ್ಷದ ಬಾಲಕರಷ್ಟೇ ಅಲ್ಲ, ೧ ತಿಂಗಳಿನಿಂದ ೩-೪ ವರ್ಷದ ವರೆಗಿನ ಉಚ್ಚ ಸ್ವರ್ಗಲೋಕ ಮತ್ತು ಮಹರ್ಲೋಕದಿಂದ ಪೃಥ್ವಿಯ ಮೇಲೆ ಜನಿಸಿರುವ ಮಕ್ಕಳೂ ರಾಮನಾಥಿ ಆಶ್ರಮಕ್ಕೆ ಬಂದಿದ್ದಾರೆ. ೨೫ ರಿಂದ ೩೦ ವರ್ಷಗಳಲ್ಲಿ ಅವರೂ ಹಿಂದೂ ರಾಷ್ಟ್ರವನ್ನು ನಡೆಸಲು ಸಕ್ಷಮರಾಗುವರು.

ಇದರ ಕಾರಣವೇನೆಂದರೆ, ಉಚ್ಚ ಸ್ವರ್ಗಲೋಕ ಮತ್ತು ಮಹರ್ಲೋಕದಿಂದ ಪೃಥ್ವಿಯ ಮೇಲೆ ಜನಿಸಿದ್ದರಿಂದ ಅವರಿಗೆ ಭಗವಾನ ಶ್ರೀಕೃಷ್ಣನೊಂದಿಗೆ ಸತತ ಅನುಸಂಧಾನವಿರುತ್ತದೆ. ಇದರಿಂದ ಅವರಿಗೆ ‘ಒಳಗಿನಿಂದಲೇ ಯಾವುದು ಯೋಗ್ಯ ಯಾವುದು ಅಯೋಗ್ಯ ?’ ಎಂಬುದು ಕೂಡಲೇ ತಿಳಿಯುತ್ತದೆ. ಉಚ್ಚ ಆಧ್ಯಾತ್ಮಿಕ ಮಟ್ಟದಿಂದಾಗಿ ಅವರ ವಾಣಿಯಲ್ಲಿ ಚೈತನ್ಯವಿದೆ. ಇತರರ ಮೇಲೆ ಅದರ ಪ್ರಭಾವವುಂಟಾಗಿ ಈ ಮಕ್ಕಳು ಅವರನ್ನು ಹಿಂದೂ ರಾಷ್ಟ್ರವನ್ನು ನಡೆಸಲು ಸಕ್ಷಮರನ್ನಾಗಿಸುವರು. ಈ ರೀತಿಯಲ್ಲಿ ಮುಂದೆ ೧೦೦೦ ವರ್ಷಗಳ ವರೆಗೆ ಅಸ್ತಿತ್ವದಲ್ಲಿರುವ ಹಿಂದೂ ರಾಷ್ಟ್ರದ ಅಡಿಪಾಯವು ಗಟ್ಟಿಯಾಗಲಿದೆ.

(ಆಧಾರ : ಸನಾತನ ನಿರ್ಮಿತ ಗ್ರಂಥ ಹಿಂದೂ ರಾಷ್ಟ್ರ ಸ್ಥಾಪನೆಯ ದಿಶೆ)

Leave a Comment