ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 8

ರಾಜಕೀಯ ಪಕ್ಷಗಳು ಮತ್ತು ಯೂನಿಯನ್ನವರು ಸ್ವಾರ್ಥಕ್ಕಾಗಿ ಒಟ್ಟಾಗುತ್ತಾರೆ, ಹೀಗಿದ್ದಾಗ ನಿಃಸ್ವಾರ್ಥ ಹಿಂದುತ್ವವಾದಿ ಸಂಘಟನೆಗಳು ಹಿಂದೂ ಧರ್ಮದ ಸ್ಥಾಪನೆಯ ನ್ಯಾಯ ಬೇಡಿಕೆಗಾಗಿ ಏಕೆ ಒಟ್ಟಾಗಲಾರವು ?

ಸ್ವಾತಂತ್ರ್ಯ ಸಿಗುವುದಕ್ಕಿಂತ ಮೊದಲನಿಂದಲೂ ಹಿಂದೂ ಸಂಘಟನೆಗಳು ಕಾರ್ಯನಿರತವಾಗಿದ್ದವು; ಆದರೆ ಅವು ಎಂದಿಗೂ ಒಂದಾಗಲೇ ಇಲ್ಲ. ಒಂದು ವೇಳೆ ಒಂದಾಗಿದ್ದರೆ ಹಿಂದೂ ರಾಷ್ಟ್ರದ ಸ್ಥಾಪನೆ ಆ ಕಾಲದಲ್ಲಿಯೇ ಸಾಧ್ಯವಾಗುತ್ತಿತ್ತು.

ಸ್ವಾತಂತ್ರ್ಯದ ಬಹಳಷ್ಟು ವರ್ಷಗಳ ನಂತರ ಹಿಂದೂ ಸಂಘಟನೆಗಳು ವಿಶ್ವ ಹಿಂದೂ ಪರಿಷತ್ನ ಮಾಧ್ಯಮದಿಂದ ಒಂದಾದಂತೆ ಕಂಡವು; ಆದರೆ ದುರ್ದೈವದಿಂದ ಅದೂ ಹೆಚ್ಚು ಸಮಯ ಉಳಿಯಲಿಲ್ಲ. ನಮಗೆ ಹಳೆಯ ಇತಿಹಾಸದ ಪುನರಾವರ್ತನೆಯನ್ನು ಮಾಡುವುದಲ್ಲ, ಬದಲಾಗಿ ಹಿಂದೂ ಐಕ್ಯದ ಹೊಸ ಇತಿಹಾಸವನ್ನೇ ಬರೆಯಬೇಕಾಗಿದೆ. ನಿಜವಾಗಿ ನೋಡಿದರೆ ಹಿಂದೂ ಸಮಾಜದ ಅಗತ್ಯಗಳೇನು ಎಂಬ ವಿಶಾಲ ದೃಷ್ಟಿಯಿಂದ ನೋಡಿದರೆ ಹಿಂದೂ ಐಕ್ಯ ಸಾಧ್ಯವಾಗಬಹುದು.

ಕೆಲವರಿಗೆ ಈಗಿನವರೆಗೆ ಸಾಧ್ಯವಾಗದೇ ಇದ್ದದ್ದು ಈಗ ಹೇಗೆ ಸಾಧ್ಯವಾಗುವುದು ? ಎಂದೆನಿಸಬಹುದು. ಈ ಸಂದರ್ಭದಲ್ಲಿ ಮುಂದಿನ ವಿಚಾರವನ್ನು ಗಮನಕ್ಕೆ ತೆಗೆದುಕೊಳ್ಳಬಹುದು, ಇಂದು ವಿಭಿನ್ನ ವಿಚಾರಧಾರೆಯ ರಾಜಕೀಯ ಪಕ್ಷಗಳು ಒಂದಾಗಿ ಆಡಳಿತ ನಡೆಸುತ್ತವೆ. ಸಾವಿರಾರು ಅಥವಾ ಲಕ್ಷಗಟ್ಟಲೆ ಜನರ ‘ಕಾರ್ಮಿಕರ ಸಂಘ’ಗಳಿರುತ್ತವೆ. ರಾಜಕೀಯ ಪಕ್ಷಗಳು ಮತ್ತು ಯೂನಿಯನ್ನವರು ಆಡಳಿತ, ಅಧಿಕಾರ ಇತ್ಯಾದಿಗಳಿಗಾಗಿ, ಅಂದರೆ ಸ್ವಾರ್ಥಕ್ಕಾಗಿ ಒಂದಾಗುತ್ತಾರೆ; ಹಾಗಾದರೆ ನಿಃಸ್ವಾರ್ಥ ಹಿಂದುತ್ವವಾದಿ ಸಂಘಟನೆಗಳು ಹಿಂದೂ ರಾಷ್ಟ್ರಕ್ಕಾಗಿ ಏಕೆ ಒಂದಾಗಲು ಸಾಧ್ಯವಿಲ್ಲ ? ಖಂಡಿತ ಸಾಧ್ಯವಿದೆ ! ಏಕೆಂದರೆ ಹಿಂದುತ್ವವಾದಿ ಸಂಘಟನೆಗಳ ಕಾರ್ಯದ ಹಿಂದೆ ಯಾವುದೇ ಸ್ವಾರ್ಥವಿಲ್ಲ. ಇಂದಿನ ವರೆಗೆ ಹಿಂದುತ್ವವಾದಿ ಸಂಘಟನೆಗಳು ಒಟ್ಟಾಗುವುದರಲ್ಲಿ ಬಂದ ಅಡಚಣೆಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ದೂರಗೊಳಿಸಲು ಪ್ರಯತ್ನಿಸಬೇಕು.

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂಗಳ ವ್ಯಾಪಕ ಸಂಘಟನೆಯಾಗಲು ಹಿಂದೂ ಸಂಘಟನೆಗಳು ಪರಸ್ಪರರಿಗೆ ಸಹಾಯ, ಅನುಭವಗಳ ವಿನಿಮಯ, ಪರಸ್ಪರರಿಗೆ ಪೂರಕ ಕಾರ್ಯ ಇತ್ಯಾದಿ ಕೃತಿಗಳ ಜೊತೆ ನೀಡಿದರೆ ಈ ಸಂಘಟನೆಯು ಸಹಜವಾಗಿ ಸಾಧ್ಯವಾಗಬಹುದು !

ಹಿಂದುತ್ವನಿಷ್ಠ ಸಂಘಟನೆಗಳು ರಾಷ್ಟ್ರೀಯ ಸ್ತರದಲ್ಲಿ ಒಟ್ಟಾಗಿ ಕಾರ್ಯ ಮಾಡುವುದರಿಂದಾಗುವ ಲಾಭ

ಸ್ಥಳೀಯ ಸ್ತರದಲ್ಲಿನ ಹಿಂದೂ ಆಂದೋಲನಗಳ ರಾಷ್ಟ್ರೀಕರಣವಾಗುವುದು ! : ಇಂದು ಅನೇಕ ಹಿಂದುತ್ವವಾದಿ ಸಂಘಟನೆಗಳು ವಿವಿಧ ರಾಜ್ಯಗಳಲ್ಲಿ ಕಾರ್ಯ ಮಾಡುತ್ತಿವೆ. ಈ ಪೈಕಿ ಹೆಚ್ಚಿನ ಸಂಘಟನೆಗಳ ಕಾರ್ಯದ ಸ್ವರೂಪವು ಗೋಹತ್ಯೆ ತಡೆಯುವುದು, ಮತಾಂತರವನ್ನು ವಿರೋಧಿಸುವುದು, ಇತರ ಧರ್ಮೀಯರಿಂದ ಹಿಂದೂಗಳ ಮೇಲಾಗುತ್ತಿರುವ ಅತ್ಯಾಚಾರಗಳನ್ನು ವಿರೋಧಿಸುವುದು, ಸಂಸ್ಕೃತಿರಕ್ಷಣೆ ಇತ್ಯಾದಿ ಸ್ವರೂಪದ, ಅಂದರೆ ಧರ್ಮರಕ್ಷಣೆಯ ಕಾರ್ಯಗಳೇ ಆಗಿವೆ. ಈ ಎಲ್ಲ ಹಿಂದೂ ಸಂಘಟನೆಗಳು ಒಟ್ಟಾಗಿ ಕಾರ್ಯ ಮಾಡತೊಡಗಿದರೆ ಧರ್ಮರಕ್ಷಣೆಯ ಕಾರ್ಯಕ್ಕೆ ರಾಷ್ಟ್ರೀಯ ಸ್ವರೂಪ ಬರುವುದು ! ಯಾವುದಾದರೊಂದು ಹಿಂದೂ ಸಂಘಟನೆಯ ಕಾರ್ಯವು ಒಂದು ರಾಜ್ಯಕ್ಕಷ್ಟೇ ಸೀಮಿತವಾಗಿದ್ದರೂ ಅದರ ರಾಷ್ಟ್ರ ಮತ್ತು ಧರ್ಮಹಾನಿಯ ಸಮಸ್ಯೆಗಳ ಸಂದರ್ಭದಲ್ಲಿನ ಆಂದೋಲನಕ್ಕೆ ದೇಶದೆಲ್ಲೆಡೆಯ ಹಿಂದೂ ಸಂಘಟನೆಗಳ ಬೆಂಬಲ ಸಿಗುವುದು, ಅಂದರೆ ಸ್ಥಳೀಯ ಸ್ತರದಲ್ಲಿನ ಆಂದೋಲನಗಳ ರಾಷ್ಟ್ರೀಕರಣವಾಗುವುದು !

(ಆಧಾರ : ಸನಾತನ ನಿರ್ಮಿತ ಗ್ರಂಥ ಹಿಂದೂ ರಾಷ್ಟ್ರ ಸ್ಥಾಪನೆಯ ದಿಶೆ)

Leave a Comment