ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 6

ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿನ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರಗಳ ಹಂತಗಳು

ಅ. ಶಾರೀರಿಕ ಸ್ತರ (ವರ್ಷ ೨೦೧೮ ರಿಂದ ೨೦೨೩) : ‘ಈ ಕಾಲದಲ್ಲಿ ಆಗುವ ಮೂರನೇ ಜಾಗತಿಕ ಮಹಾಯುದ್ಧದಲ್ಲಿ ಪ್ರಚಂಡ ಪ್ರಮಾಣದಲ್ಲಿ ಮನುಷ್ಯಹಾನಿಯಾಗುವುದು. ಭಾರತಕ್ಕೂ ಈ ಯುದ್ಧದ ಬಿಸಿಯು ದೊಡ್ಡ ಪ್ರಮಾಣದಲ್ಲಿ ತಗಲುವುದು. ಎಲ್ಲೆಡೆ ಮನೆಗಳು, ರಸ್ತೆ, ಸೇತುವೆ, ಕಾರ್ಖಾನೆ ಇತ್ಯಾದಿಗಳ ಅಪರಿಮಿತ ಹಾನಿಯಾಗುವುದು. ಯುದ್ಧದ ಕೊನೆಯಲ್ಲಿ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಿರುತ್ತದೆ.

ಆ. ಮಾನಸಿಕ ಸ್ತರ (ವರ್ಷ ೨೦೨೪ ರಿಂದ ೨೦೫೦) : ಯುದ್ಧದ ಆಘಾತದಿಂದ ಹೊರಬರಲು ಸಜ್ಜನರಿಗೆ ಮತ್ತು ಸಜ್ಜನರಾಗಲು ಇಚ್ಛಿಸುವವರಿಗೆ ‘ಮಾನಸಿಕ ದೃಷ್ಟಿಯಿಂದ ಹೇಗೆ ಸಕ್ಷಮರಾಗಬೇಕು ಎಂಬುದನ್ನು ಕಲಿಸಲಾಗುವುದು.

ಇ. ಆಧ್ಯಾತ್ಮಿಕ ಸ್ತರ (ವರ್ಷ ೨೦೫೦ ರ ನಂತರ) : ಸಾಧನೆಯನ್ನು ಕಲಿಸಿದ್ದರಿಂದ ಎಲ್ಲರೂ ಸಾಧಕರಾಗಿರುವರು ಮತ್ತು ಆಗಲೇ ಅದು ನಿಜವಾದ ಅರ್ಥದಲ್ಲಿ ರಾಮರಾಜ್ಯವಾಗಿರುವುದು. (೨೪.೧೧.೨೦೧೪)

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ತಗಲುವ ಕಾಲಾವಧಿಯ ಬಗ್ಗೆ ಸಂತರು ಹೇಳುತ್ತಿರುವ ಭಾಷೆಯಲ್ಲಿನ ವ್ಯತ್ಯಾಸ !

ಕೆಲವು ಸಂತರು ‘ಹಿಂದೂ ರಾಷ್ಟ್ರವು ೨೦೨೩ ರಲ್ಲಿ ಸ್ಥಾಪನೆಯಾಗುವುದು’ ಎಂದು ಹೇಳಿದರೆ ಯೋಗತಜ್ಞ ದಾದಾಜಿ ವೈಶಂಪಾಯನರು ‘ಹಿಂದೂ ರಾಷ್ಟ್ರದ ಸ್ಥಾಪನೆಯು ೫೦ ವರ್ಷಗಳ ನಂತರ ಆಗುವುದು’ ಎಂದು ಹೇಳುತ್ತಾರೆ.

‘ಸಂತರ ಹೇಳಿಕೆಯಲ್ಲಿ ಹೀಗೆ ವ್ಯತ್ಯಾಸವೇಕೆ ?’, ಎಂಬ ಪ್ರಶ್ನೆ ಯಾರಿಗಾದರೂ ಬರಬಹುದು. ಇದರ ಉತ್ತರ ಹೀಗಿದೆ, ಸಂತರ ಹೇಳಿಕೆಯಂತೆ ೨೦೨೩ ರಲ್ಲಿ ಯಾವ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದೋ ಅದು ಸ್ಥೂಲದ್ದಾಗಿರುತ್ತದೆ. ನಿಜವಾದ ಅರ್ಥದಲ್ಲಿ ‘ಹಿಂದೂ ರಾಷ್ಟ್ರ’ ಅಂದರೆ ‘ರಾಮರಾಜ್ಯ’ ಸ್ಥಾಪನೆಯಾಗಲು ಒಂದು ಪೀಳಿಗೆಯ ಮೇಲೆ ಸಾಧನೆಯ ಸಂಸ್ಕಾರಗಳನ್ನು ಮಾಡಬೇಕಾಗುತ್ತದೆ. ಯೋಗತಜ್ಞ ದಾದಾಜಿ ವೈಶಂಪಾಯನರ ಉದ್ಗಾರವು ಈ ಸಂದರ್ಭದಲ್ಲಿನದ್ದಾಗಿದೆ. (೨೭.೧೨.೨೦೧೪)

ನಿಜವಾದ ಹಿಂದೂ ರಾಷ್ಟ್ರದ ನಿರ್ಮಿತಿಗಾಗಿ ಒಂದೆರಡು ಪೀಳಿಗೆಗಳು ಬೇಕಾಗಿರುವುದರ ಕಾರಣ !

ಇಂದು ಹೆಚ್ಚಿನ ಮಕ್ಕಳು ಆಂಗ್ಲ ಮಾಧ್ಯಮದ ಅಥವಾ ಕ್ರೈಸ್ತರ ಕಾನ್ವೆಂಟ್ ಶಾಲೆಗಳಲ್ಲಿ ಕಲಿಯುತ್ತಾರೆ, ಇದು ಅವರ ಶಿಕ್ಷಣವು ಯೋಗ್ಯವಿಲ್ಲದಿರುವುದರ ಏಕೈಕ ಕಾರಣವಲ್ಲ. ಮನೆಯಲ್ಲಿನ ಸಂಸ್ಕಾರಹೀನತೆ, ಜಗಳಗಳು, ಹಾಗೆಯೇ ದಿನಪತ್ರಿಕೆ ಮತ್ತು ದೂರಚಿತ್ರವಾಹಿನಿಗಳಲ್ಲಿ ಬರುವ ಸ್ವೇಚ್ಛಾಚಾರ, ಭ್ರಷ್ಟಾಚಾರ, ಜಾತ್ಯಾಂಧತೆ, ಅಪಹರಣ, ಬಲಾತ್ಕಾರ, ಹತ್ಯೆ ಇತ್ಯಾದಿ ವಾರ್ತೆಗಳಿಂದ ಅವರ ಮೇಲೆ ಅನಿಷ್ಟ ಸಂಸ್ಕಾರಗಳಾಗುತ್ತವೆ. ಮುಂದೆ ಇಂತಹ ವಾರ್ತೆಗಳನ್ನು ನೋಡಿದರೆ ಅವರಿಗೆ ಏನೂ ಅನಿಸುವುದಿಲ್ಲ ಮತ್ತು ಕೆಲವು ಸಮಯದ ನಂತರ ಅವರಲ್ಲಿನ ಕೆಲವರು ತಾವೇ ಸ್ವತಃ ಇಂತಹ ವಿಷಯಗಳನ್ನು ಮಾಡಲು ಆರಂಭಿಸುತ್ತಾರೆ. ಮಕ್ಕಳ ಮೇಲೆ ಅನಿಷ್ಟ ಸಂಸ್ಕಾರಗಳು ನಿರ್ಮಾಣವಾಗದಿರಲು ‘ಸಮಾಜದಲ್ಲಿ ಅನಿಷ್ಟ ವಿಷಯಗಳು ಘಟಿಸದಿರಲು ಪ್ರಾಧಾನ್ಯತೆಯನ್ನು ನೀಡಬೇಕಾಗುವುದು. ಇದರಲ್ಲಿಯೇ ಒಂದು ಪೀಳಿಗೆಯ ಅಂದರೆ ೩೦ ವರ್ಷದ ಕಾಲಾವಧಿ ಕಳೆದು ಹೋಗುವುದು. ಅನಂತರದ ಪೀಳಿಗೆಯಲ್ಲಿ ಮಕ್ಕಳ ಮೇಲೆ ಚಿಕ್ಕಂದಿನಿಂದಲೇ ಒಳ್ಳೆಯ ಸಂಸ್ಕಾರಗಳು ಆಗುವುದರಿಂದ ಹಿಂದೂ ರಾಷ್ಟ್ರಕ್ಕೆ ಅಪೇಕ್ಷಿತವಿರುವ ಮೊದಲನೇ ಪೀಳಿಗೆಯು ಸಿದ್ಧವಾಗಲು ಆರಂಭವಾಗುತ್ತದೆ. (೨೬.೧೧.೨೦೧೪)

ಹಿಂದೂ ರಾಷ್ಟ್ರದ ಸ್ಥಾಪನೆಯ ವೇಳಾಪಟ್ಟಿ

ಈ ವೇಳಾಪಟ್ಟಿಯು ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಮಾಡುವವರ ಭಕ್ತಿಗನುಸಾರ ಹಿಂದೆ-ಮುಂದೆ ಆಗಬಹುದು. (೨೪.೫.೨೦೧೨)

ಹಿಂದುತ್ವವಾದಿಗಳೇ, ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಅನುಕೂಲ ಕಾಲ ಬರುವವರೆಗೆ ತಾಳ್ಮೆಯಿರಲಿ !

ರಾಮನು ಶ್ರೀವಿಷ್ಣುವಿನ ಅವತಾರನಾಗಿದ್ದನು. ಹೀಗಿದ್ದರೂ ಅವನಿಗೆ ರಾಜ್ಯವನ್ನು ಬಿಟ್ಟು ವನವಾಸಕ್ಕೆ ಹೋಗಬೇಕಾಯಿತು. ಪಾಂಡವರ ಮಿತ್ರನಾದ ಶ್ರೀಕೃಷ್ಣನು ಪೂರ್ಣಾವತಾರಿಯಾಗಿದ್ದನು, ಹೀಗಿದ್ದರೂ ಪಾಂಡವರಿಗೆ ೧೨ ವರ್ಷಗಳ ಕಾಲ ವನವಾಸ ಮತ್ತು ೧ ವರ್ಷ ಅಜ್ಞಾತವಾಸವನ್ನು ಭೋಗಿಸಬೇಕಾಯಿತು. ಹೀಗಿರುವಾಗ ಹಿಂದುತ್ವವಾದಿಗಳು ಕಳೆದ ೧೦ ವರ್ಷಗಳಿಂದ ತೊಂದರೆಗಳನ್ನು ಭೋಗಿಸುತ್ತಿರುವುದರಲ್ಲಿ ಆಶ್ಚರ್ಯವೇನಿದೆ ? ರಾಮ ಮತ್ತು ಪಾಂಡವರು ಮುಂದೆ ರಾಜ್ಯ ನಡೆಸಿದರು, ಹಾಗೆಯೇ ಮುಂದೆ ಹಿಂದುತ್ವವಾದಿಗಳೂ ರಾಜ್ಯ ನಡೆಸುವರು ! (೨೯.೧೧.೨೦೧೪)

ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಸಂಧಿಕಾಲದಲ್ಲಿ ಮಾಡುವುದರ ಮಹತ್ವ !

ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ನಮಗೆ ಕ್ರಿ.ಶ. ೨೦೨೩ ರ ವರೆಗೆ ಪೂರ್ಣಗೊಳಿಸಬೇಕಾಗಿದೆ. ಮುಂದಿನ ೧೦ ವರ್ಷಗಳ ಕಾಲಾವಧಿಯು ಸಂಧಿಕಾಲವಾಗಿರುವುದು. ಈ ಕಾಲದಲ್ಲಿ ಧರ್ಮಸಂಸ್ಥಾಪನೆಯ, ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಮಾಡುವುದು ಅಪೇಕ್ಷಿತವಾಗಿದೆ. ಸೂರ್ಯೋದಯ, ಸೂರ್ಯಾಸ್ತ, ಗ್ರಹಣಕಾಲ ಮುಂತಾದ ಸಂಧಿಕಾಲಗಳಲ್ಲಿ ಸಾಧನೆ ಮಾಡಿದರೆ ಹೇಗೆ ಲಾಭವಾಗುತ್ತದೆಯೋ, ಅದೇ ರೀತಿ ಈ ೧೦ ವರ್ಷಗಳ ಸಂಧಿಕಾಲದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಮಾಡುವವರಿಗೆ ಲಾಭವಾಗುತ್ತದೆ. (೨೫.೪.೨೦೧೪)

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆವಶ್ಯಕ ಧರ್ಮಕ್ರಾಂತಿಯಾಗಲು ಇದನ್ನು ಮಾಡಿ !

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಜನತೆಯು ಕೇಂದ್ರಬಿಂದು ಮತ್ತು ಜನಜಾಗೃತಿಯೇ ಮಾಧ್ಯಮ ! : ನಿಜವಾಗಿ ನೋಡಿದರೆ ಪ್ರತಿ ೫ ವರ್ಷಕ್ಕೊಂದುಸಲ ಚುನಾವಣೆ ಬಂದಾಗ ರಾಜಕೀಯ ಪಕ್ಷಗಳು ಹೇಗೆ ಜಾಗೃತವಾಗಿ ಕಾರ್ಯನಿರತವಾಗುತ್ತವೆಯೋ, ಹಾಗೆ ನಮ್ಮ ಹಿಂದುತ್ವವಾದಿ ಸಂಘಟನೆಗಳ ಕಾರ್ಯವಾಗಬಾರದು. ನಾವು ಸತತವಾಗಿ ಸಮಾಜದಲ್ಲಿ ಪ್ರತ್ಯಕ್ಷವಾಗಿ ಹೋಗಿ ಕಾರ್ಯನಿರತರಾಗಿದ್ದರೆ ಮಾತ್ರ ಜನತೆಯು ಜಾಗೃತವಾಗಿರುತ್ತದೆ ಮತ್ತು ಜಾಗೃತ ಜನತೆಯೇ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಮಾಡಬಲ್ಲದು. ಹಿಂದೂ ಜನಜಾಗೃತಿ ಸಮಿತಿಯ ಕಾರ್ಯವೂ ಇಷ್ಟು ಕಡಿಮೆ ಕಾಲಾವಧಿಯಲ್ಲಿ ಹೆಚ್ಚಾಗಿರುವುದರ ಹಿಂದಿನ ಕಾರಣವೇನೆಂದರೆ, ಸಮಿತಿಯ ಯಾವುದೇ ಕಾರ್ಯಕರ್ತನು ದಿನದಲ್ಲಿ ಕನಿಷ್ಠ ೧ ಗಂಟೆಯಾದರೂ ಪ್ರತ್ಯಕ್ಷ ಸಮಾಜದಲ್ಲಿ ಹೋಗಿ ಸಂಪರ್ಕ ಮಾಡುತ್ತಾನೆ. ಒಂದು ವೇಳೆ ಇದೇ ಕೃತಿಯನ್ನು ದೇಶದೆಲ್ಲೆಡೆಯ ಎಲ್ಲ ಹಿಂದುತ್ವವಾದಿ ಸಂಘಟನೆಗಳು ಮಾಡಿದರೆ, ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷದ ಬಳಿ ಭಿಕ್ಷೆ ಬೇಡುವ ಆವಶ್ಯಕತೆಯೇ ಉಳಿಯುವುದಿಲ್ಲ.

(ಆಧಾರ : ಸನಾತನ ನಿರ್ಮಿತ ಗ್ರಂಥ ಹಿಂದೂ ರಾಷ್ಟ್ರ ಸ್ಥಾಪನೆಯ ದಿಶೆ)

Leave a Comment