ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 5

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯವನ್ನು ಮಾಡುವವರ ಮಟ್ಟ ಮತ್ತು ಅವರ ಕಾರ್ಯದ ಸ್ವರೂಪ

ಅ. ಶಾರೀರಿಕ : ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತ್ಯಕ್ಷ ದೇಹದಿಂದ ಕೃತಿ ಮಾಡುವುದು, ಉದಾ. ಆಂದೋಲನಗಳನ್ನು, ಉಪಕ್ರಮಗಳನ್ನು ನಡೆಸುವುದು ಇತ್ಯಾದಿ. ಈ ಕಾರ್ಯವನ್ನು ಹಿಂದುತ್ವನಿಷ್ಠ ಸಂಘಟನೆಗಳು ಮಾಡುವವು. ಇದಕ್ಕೆ ಕಾಲಾನುಸಾರ ಶೇ. ೧೦ ರಷ್ಟು ಮಹತ್ವವಿದೆ.

ಆ. ಮಾನಸಿಕ : ಭಾವನೆ ಜಾಗೃತವಾಗದ ಹೊರತು ಕೃತಿಯಾಗುವುದಿಲ್ಲ ಎಂಬ ತತ್ತ್ವಕ್ಕನುಸಾರ ಹಿಂದೂ ರಾಷ್ಟ್ರದ ಸ್ಥಾಪನೆಯ ಬಗ್ಗೆ ಹಿಂದೂಗಳಲ್ಲಿ ವೈಚಾರಿಕ ಪ್ರಬೋಧನೆ ಮಾಡಿ ಅವರನ್ನು ಕೃತಿ ಮಾಡಲು ಪ್ರವೃತ್ತಗೊಳಿಸುವುದು, ಉದಾ. ವಾರ್ತಾಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ವೈಚಾರಿಕ ಲೇಖನಗಳನ್ನು ಬರೆಯುವುದು, ವ್ಯಾಖ್ಯಾನಗಳನ್ನು ನೀಡುವುದು ಇತ್ಯಾದಿ. ಈ ಕಾರ್ಯವನ್ನು ಪ್ರಮುಖವಾಗಿ ಹಿಂದುತ್ವನಿಷ್ಠ ವ್ಯಾಖ್ಯಾನಕಾರರು, ಪತ್ರಕರ್ತರು ಮತ್ತು ಸಂಪಾದಕರು ಮಾಡುವರು. ಇದಕ್ಕೂ ಕಾಲಾನುಸಾರ ಶೇ. ೧೦ ರಷ್ಟು ಮಹತ್ವವಿದೆ.

ಇ. ಬೌದ್ಧಿಕ : ಹಿಂದೂ ಸಮಾಜಕ್ಕೆ ದಿಶೆ ನೀಡುವುದು, ಉದಾ. ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಅಧ್ಯಯನ ಪೂರ್ಣ ವಿಶ್ಲೇಷಣೆಯನ್ನು ಮಾಡುವುದು, ಸಂಘಟನೆಗಳಿಗೆ ವೈಚಾರಿಕ ಸಹಾಯ ನೀಡುವುದು ಇತ್ಯಾದಿ. ಈ ಕಾರ್ಯವನ್ನು ಹಿಂದುತ್ವನಿಷ್ಠ ವಿಚಾರವಂತರು ಮಾಡುವರು. ಇದಕ್ಕೂ ಕಾಲಾನುಸಾರ ಶೇ. ೧೦ ರಷ್ಟು ಮಹತ್ವವಿದೆ.

ಈ. ಆಧ್ಯಾತ್ಮಿಕ : ಹಿಂದೂ ರಾಷ್ಟ್ರದ ಸ್ಥಾಪನೆಗೆ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಕಾರ್ಯಕ್ಕೆ ಆಧ್ಯಾತ್ಮಿಕ ಬಲ ಸಿಗಬೇಕೆಂದು ದೇವತೆಗಳ ಉಪಾಸನೆ ಮಾಡುವುದು, ಉದಾ. ಯಾವುದಾದರೊಂದು ಕಾರ್ಯವನ್ನು ಸಿದ್ಧಪಡಿಸಲು ನಾಮಜಪ / ಯಜ್ಞಯಾಗಗಳನ್ನು ಮಾಡುವುದು. ಈ ಕಾರ್ಯವನ್ನು ಅಧಿಕಾಂಶ ಸಂತರು ಮತ್ತು ಸನಾತನ ಸಂಸ್ಥೆಯಂತಹ ಆಧ್ಯಾತ್ಮಿಕ ಸಂಘಟನೆಗಳು ಮಾಡುತ್ತಿವೆ. ಇದಕ್ಕೆ ಕಾಲಾನುಸಾರ ಶೇ. ೭೦ ರಷ್ಟು ಮಹತ್ವವಿದೆ. ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಮಾಡಬೇಕಾಗಿದ್ದರೆ, ಹಿಂದುತ್ವವಾದಿ ಸಂಘಟನೆಗಳು ‘ನಾವು ಅದನ್ನು ಕೇವಲ ಬಾಹುಬಲದಿಂದ ಮಾಡುವೆವು ಎಂಬಂತಹ ವಿಚಾರಗಳನ್ನು ಮಾಡಬಾರದು. ಕೇವಲ ವೈಚಾರಿಕ ಮಟ್ಟದಲ್ಲಿ ಪ್ರಬೋಧನೆಯನ್ನು ಮಾಡುವುದರಿಂದ ಹಿಂದೂ ರಾಷ್ಟ್ರ ಬರಲು ಸಾಧ್ಯವಿಲ್ಲ ಎಂಬುದು ವಿಚಾರವಂತರಿಗೂ ಖಂಡಿತ ಗೊತ್ತಿರುತ್ತದೆ. ಆದುದರಿಂದ ಎಲ್ಲರೂ ‘ಪರಸ್ಪರ ಪೂರಕವಾಗಿ ಹೇಗೆ ಕಾರ್ಯ ಮಾಡಬಹುದು ಎಂಬುದರ ಬಗ್ಗೆ ವಿಚಾರ ಮಾಡಬೇಕು. ನಮ್ಮ ಈ ಹೋರಾಟದಲ್ಲಿ ಆಧ್ಯಾತ್ಮಿಕ ಮಟ್ಟದಲ್ಲಿನ ಕಾರ್ಯವು ಕೆಲವು ಸಂತರ ಮಾಧ್ಯಮದಿಂದ ಮೊದಲೇ ಆರಂಭವಾಗಿದೆ. ನಮಗೆ ಈಗ ಕೇವಲ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿನ ಕಾರ್ಯವನ್ನು ಮಾಡಬೇಕಾಗಿದೆ. (೪.೫.೨೦೧೨)

ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿನ ಘಟಕಗಳು

ಧರ್ಮಶಿಕ್ಷಣ : ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡಿದರೆ ಅವರು ಧರ್ಮಾಚರಣಿಗಳಾಗುವರು. ಧರ್ಮಾಚರಣೆಯಿಂದ ಅವರಿಗೆ ಅನುಭೂತಿಗಳು ಬರುವವು. ಅನುಭೂತಿಗಳಿಂದ ಧರ್ಮಶ್ರದ್ಧೆ ವೃದ್ಧಿಯಾಗುವುದು. ಧರ್ಮಶ್ರದ್ಧೆಯಿಂದ ಧರ್ಮಾಭಿಮಾನ ವೃದ್ಧಿಯಾಗುವುದು. ಧರ್ಮಾಭಿಮಾನದಿಂದ ಹಿಂದೂ ಸಂಘಟನೆ ವೃದ್ಧಿಯಾಗುವುದು. ಸಂಘಟಿತ ಹಿಂದೂಗಳಿಂದ ಸಂರಕ್ಷಣೆ ನಿರ್ಮಾಣವಾಗುವುದು ಮತ್ತು ಇದರಿಂದಲೇ ಹಿಂದೂ ರಾಷ್ಟ್ರದ ನಿರ್ಮಾಣ ಮತ್ತು ಪೋಷಣೆಯಾಗುವುದು. ಕೇವಲ ಧರ್ಮಶಿಕ್ಷಣವೇ ಈ ಹಿಂದೂ ರಾಷ್ಟ್ರದ ಸ್ಥಾಪನೆಯ ಅಡಿಪಾಯವಾಗಿದೆ. (೨೪.೫.೨೦೧೨)

೧. ಹಿಂದೂ ಸಮಾಜಕ್ಕೆ ಧರ್ಮಶಿಕ್ಷಣ ನೀಡುವುದರ ಆವಶ್ಯಕತೆ : ‘ರಾಮರಾಜ್ಯದ ಪ್ರಜೆಗಳು ಧರ್ಮಾಚರಣೆ ಮಾಡುತ್ತಿದ್ದರು; ಆದುದರಿಂದಲೇ ಅವರಿಗೆ ಶ್ರೀರಾಮನಂತಹ ಸಾತ್ತ್ವಿಕ ರಾಜಕಾರಣಿಯು ಲಭಿಸಿದನು ಮತ್ತು ಆದರ್ಶ ರಾಮರಾಜ್ಯವನ್ನು ಅನುಭವಿಸಲು ಸಾಧ್ಯವಾಯಿತು. ಹಿಂದಿನಂತಹ ರಾಮರಾಜ್ಯ, ಅಂದರೆ ‘ಹಿಂದೂ ರಾಷ್ಟ್ರ ಈಗಲೂ ಅವತರಿಸಬಹುದು; ಇದಕ್ಕಾಗಿ ಹಿಂದೂ ಸಮಾಜವು ಧರ್ಮಾಚರಣಿ ಮತ್ತು ಈಶ್ವರನ ಭಕ್ತರಾಗಬೇಕು. ಹಿಂದಿನ ಕಾಲದಲ್ಲಿ ಹೆಚ್ಚಿನ ಜನರು ಸಾಧನೆಯನ್ನು ಮಾಡುವವರಾಗಿದ್ದರಿಂದ ಅವರು ಸಾತ್ತ್ವಿಕರಾಗಿದ್ದರು. ಕಲಿಯುಗದಲ್ಲಿ ಹೆಚ್ಚಿನ ಜನರು ಸಾಧನೆಯನ್ನು ಮಾಡದಿರುವುದರಿಂದ ರಜ-ತಮದ ಪ್ರಮಾಣವು ಬಹಳ ಹೆಚ್ಚಾಗಿದೆ. ಇದರ ಪರಿಣಾಮವೆಂದು ರಾಷ್ಟ್ರ ಮತ್ತು ಧರ್ಮದ ಸ್ಥಿತಿಯು ಅತ್ಯಂತ ಹೀನಾಯವಾಗಿದೆ. ಇದನ್ನು ಬದಲಾಯಿಸಲು ಪ್ರತಿಯೊಬ್ಬರೂ ಧರ್ಮಾಚರಣೆಯನ್ನು ಮಾಡುವುದು ಆವಶ್ಯಕವಾಗಿದೆ. ಹಿಂದೂ ಸಮಾಜಕ್ಕೆ ಧರ್ಮಾಚರಣೆಯನ್ನು ಕಲಿಸಲು ಮೊದಲು ಅವರಿಗೆ ಧರ್ಮಶಿಕ್ಷಣ ನೀಡುವುದು ಅತ್ಯಂತ ಆವಶ್ಯಕವಾಗಿದೆ.

ರಾಷ್ಟ್ರ ಮತ್ತು ಧರ್ಮದ ರಕ್ಷಣೆ : ‘ಜಾಗೃತವಾಗಿರುವ ಹಿಂದೂ ಸಮಾಜವು ರಾಷ್ಟ್ರ ಮತ್ತು ಧರ್ಮರಕ್ಷಣೆಯ ಕಾರ್ಯವನ್ನು ಸ್ವಯಂಸ್ಫೂರ್ತಿಯಿಂದ ಮಾಡುತ್ತದೆ. ದೇಶದಾದ್ಯಂತದ ಚಿಕ್ಕ – ದೊಡ್ಡ ಹಿಂದುತ್ವನಿಷ್ಠ ಸಂಘಟನೆಗಳು ಶಾರೀರಿಕ ಸ್ಥರದಲ್ಲಿ, ಮತ್ತು ವಿಚಾರವಂತರು ಹಾಗೂ ಹಿಂದುತ್ವವಾದಿ ನಿಯತಕಾಲಿಕೆಗಳು ವೈಚಾರಿಕ ಸ್ತರದಲ್ಲಿ ರಾಷ್ಟ್ರ ಮತ್ತು ಧರ್ಮರಕ್ಷಣೆಯ ಕಾರ್ಯವನ್ನು ಮಾಡುತ್ತಿವೆ. ಈ ಕಾರ್ಯವನ್ನು ಎಲ್ಲರೂ ಸಂಘಟಿತರಾಗಿ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ವಿವಿಧ ಹಿಂದುತ್ವವಾದಿ ಸಂಘಟನೆಗಳ ಪ್ರಾಧಾನ್ಯತೆಗಳು ವಿಭಿನ್ನವಾಗಿರಬಹುದು, ಉದಾ. ದೇವಸ್ಥಾನಗಳ ರಕ್ಷಣೆ, ಗಂಗಾ ನದಿಯ ಶುದ್ಧೀಕರಣ, ಗೋರಕ್ಷಣೆ ಇತ್ಯಾದಿ.

ಹಿಂದೂ ಧರ್ಮ ಮತ್ತು ರಾಷ್ಟ್ರದ ಹಾನಿಯ ಮೂಲ ಕಾರಣವೆಂದರೆ ಅಧರ್ಮೀ ರಾಜಕಾರಣಿಗಳು; ಆದುದರಿಂದ ರಾಷ್ಟ್ರ ಮತ್ತು ಧರ್ಮರಕ್ಷಣೆಯನ್ನು ಮಾಡಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದೇ ನಮ್ಮ ಅಂತಿಮ ಧ್ಯೇಯವಾಗಿರಬೇಕು. ಹೀಗಾದಲ್ಲಿ ಮಾತ್ರ ಒಂದೊಂದು ಎಲೆ, ಹೂವು ಮತ್ತು ಟೊಂಗೆಯ, ಅಂದರೆ ಹಿಂದೂ ಧರ್ಮದ ಸಂದರ್ಭದಲ್ಲಿನ ವಿವಿಧ ಸಮಸ್ಯೆಗಳ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುವುದಿಲ್ಲ.

 ಧರ್ಮರಕ್ಷಣೆಯ ತಾತ್ಕಾಲಿಕ ಕಾರ್ಯ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಪ್ರಸಾರದ ಮಾಧ್ಯಮದಿಂದ ಹಿಂದೂಗಳನ್ನು ಆಕರ್ಷಿಸುವ ಕ್ಷಮತೆ !

ಇದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಿಂದ ಹಿಂದೂ ಸಂಘಟನೆಯ ಕಾರ್ಯವು ಶೀಘ್ರಗತಿಯಲ್ಲಿ ಆಗಬಹುದು ಎಂಬುದು ಗಮನಕ್ಕೆ ಬರುತ್ತದೆ.

ಸಮಾಜಸಹಾಯ : ನಮಗೆ ಸಮಾಜದ ಸಂಘಟನೆಯನ್ನು ಮಾಡಬೇಕಾಗಿದ್ದರೆ, ಸಮಾಜದ ವಿಶ್ವಾಸವನ್ನು ಸಂಪಾದಿಸುವುದು ಮಹತ್ವದ್ದಾಗಿದೆ. ಅದಕ್ಕಾಗಿ ಸಮಾಜದ ಸುಖ-ದುಃಖ ಮತ್ತು ಸಮಸ್ಯೆಗಳೊಂದಿಗೆ ಸಮರಸವಾಗುವುದು ಮತ್ತು ಆ ದೃಷ್ಟಿಯಿಂದ ಜನರಿಗೆ ಸಹಾಯವನ್ನು ಮಾಡುವುದು ಆವಶ್ಯಕವಾಗಿದೆ. ಹಾಗೆಯೇ ಹಿಂದುತ್ವವಾದಿಗಳು ವ್ಯಕ್ತಿ ಅಥವಾ ಸಂಘಟನೆಯ ರೂಪದಲ್ಲಿ ಹಿಂದೂ ಸಮಾಜದ ಒಂದು ಘಟಕವಾಗಿರುತ್ತಾರೆ. ಆದುದರಿಂದ ಸಮಾಜಕ್ಕಾಗಿ ಏನಾದರೂ ಮಾಡುವುದು ಅವರ ಮಹತ್ವದ ಕರ್ತವ್ಯವೇ ಆಗಿದೆ. ಹಿಂದೂ ಸಮಾಜಸಹಾಯದ ದೃಷ್ಟಿಕೋನದಿಂದ ನಡೆಸಲಾಗುವ ಸಾಮಾಜಿಕ ಉಪಕ್ರಮಗಳಿಂದ ಹಿಂದೂಗಳಲ್ಲಿ ಧರ್ಮಜಾಗೃತಿ ಆಗುವುದು, ಹಿಂದೂ ಸಂಘಟನೆಯಾಗುವುದು ಇತ್ಯಾದಿಗಳ ದೃಷ್ಟಿಯಲ್ಲಿ ಪೂರಕವಾಗಿರಬೇಕು, ಉದಾಹರಣೆಗಾಗಿ ಪ್ರಥಮೋಪಚಾರ ತರಬೇತಿ, ದೇವಸ್ಥಾನಗಳ ಸ್ವಚ್ಛತೆ, ಗ್ರಾಮಸ್ವಚ್ಛತೆ ಇತ್ಯಾದಿಗಳು. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಉಪಯುಕ್ತ ಕಾಲವು ಆರಂಭವಾಗುವಾಗ ಈ ಸಮಾಜವು ನಮ್ಮೊಂದಿಗೆ ಹಿಂದೂಶಕ್ತಿಯಾಗಿ ಗಂಭೀರವಾಗಿ ನಿಲ್ಲುವಷ್ಟು ಮಹತ್ವದ ಸಮಾಜಸಹಾಯ ಉಪಕ್ರಮಗಳನ್ನು ನಡೆಸಬೇಕು.

(ಆಧಾರ : ಸನಾತನ ನಿರ್ಮಿತ ಗ್ರಂಥ ಹಿಂದೂ ರಾಷ್ಟ್ರ ಸ್ಥಾಪನೆಯ ದಿಶೆ)

Leave a Comment