ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 3

೪. ಬ್ರಾಹ್ಮತೇಜದ ಮಹತ್ವ

ಅ. ಬ್ರಾಹ್ಮತೇಜದಲ್ಲಿ ಕ್ಷಾತ್ರತೇಜ ಇದ್ದೇ ಇರುತ್ತದೆ; ಆದುದರಿಂದ ಋಷಿಗಳು ರಾಜನಿಗೆ ಶಾಪವನ್ನು ಕೊಡುತ್ತಿದ್ದರು. (೯.೧೨.೨೦೧೨)

ಆ. ಸಂತರಲ್ಲಿ ಬ್ರಾಹ್ಮತೇಜವಿರುವುದರಿಂದ ಅವರ ಕಾರ್ಯಕ್ರಮಕ್ಕೆ ಲಕ್ಷಗಟ್ಟಲೆ ಜನರು ಸ್ವೇಚ್ಛೆಯಿಂದ ಮತ್ತು ಶ್ರದ್ಧೆಯಿಂದ ಬರುತ್ತಾರೆ. ರಾಜಕೀಯ ಸಭೆಗಳಂತೆ ಹಣ ಕೊಟ್ಟು ಅಥವಾ ವಾಹನ ಸೌಲಭ್ಯ ಕಲ್ಪಿಸಿ ಅವರನ್ನು ಕರೆದುಕೊಂಡು ಬರಬೇಕಾಗುವುದಿಲ್ಲ.

ಇ. ಯಾವುದೇ ರಾಜಕೀಯ ಪಕ್ಷಗಳ ಪ್ರಚಾರ ವಿದೇಶಗಳಲ್ಲಿ ಆಗುವುದಿಲ್ಲ; ಆದರೆ ಆಧ್ಯಾತ್ಮಿಕ ಸಂಸ್ಥೆಗಳ ಪ್ರಚಾರವಾಗುತ್ತದೆ; ಏಕೆಂದರೆ ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ಧರ್ಮದ ವ್ಯಾಪಕತೆ ಮತ್ತು ಆಧ್ಯಾತ್ಮಿಕ ತೇಜ, ಅಂದರೆ ಬ್ರಾಹ್ಮತೇಜವಿರುತ್ತದೆ. (೨೩.೪.೨೦೧೨)

೫. ಕ್ಷಾತ್ರತೇಜದೊಂದಿಗೆ ಬ್ರಾಹ್ಮತೇಜವಿರುವುದರ ಮಹತ್ವವನ್ನು ಹೇಳುವ ಉದಾಹರಣೆಗಳು

೫ ಅ. ಭಗವಾನ್ ಪರಶುರಾಮ : ಇವರ ವರ್ಣನೆಯನ್ನು ಹೀಗೆ ಮಾಡಲಾಗಿದೆ –

ಅಗ್ರತಃ ಚತುರೋ ವೇದಾಃ ಪೃಷ್ಠತಃ ಸಶರಂ ಧನುಃ |
ಇದಂ ಬ್ರಾಹ್ಮಮ್ ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ ||

ಅರ್ಥ : ನಾಲಗೆಯಲ್ಲಿ ನಾಲ್ಕು ವೇದಗಳಿವೆ, ಅಂದರೆ ಸಂಪೂರ್ಣ ಜ್ಞಾನವಿದೆ ಮತ್ತು ಬೆನ್ನಿನ ಮೇಲೆ ಬಾಣಗಳೊಂದಿಗೆ ಧನುಸ್ಸಿದೆ, ಅಂದರೆ ಶೌರ್ಯವಿದೆ; ಅಂದರೆ ಇಲ್ಲಿ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜ ಇವೆರಡೂ ಇವೆ. ವಿರೋಧಿಸುವವರಿಗೆ ಪರಶುರಾಮನು ಶಾಪ ಕೊಟ್ಟು ಅಥವಾ ಬಾಣದಿಂದ ಸೋಲಿಸುವನು.

ಪರಶುರಾಮನು ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದ ಬಲದಲ್ಲಿ ೨೧ ಬಾರಿ ಪೃಥ್ವಿಯನ್ನು ನಿಃಕ್ಷತ್ರಿಯಗೊಳಿಸಿದನು ಇದನ್ನು ವಾಲ್ಮೀಕಿ ಋಷಿಗಳು ರಾಜವಿಮರ್ದನ ಎಂದು ಉಲ್ಲೇಖಿಸಿದ್ದಾರೆ. ಅದರರ್ಥ, ‘ದುರ್ಜನ ರಾಜ್ಯಕರ್ತರ ನಾಶ’. ಇಲ್ಲಿ ಗಮನದಲ್ಲಿ ತೆಗೆದುಕೊಳ್ಳಬೇಕಾದ ಮಹತ್ವದ ಅಂಶವೆಂದರೆ ಭಗವಾನ್ ಪರಶುರಾಮನು ಕೇವಲ ಶಸ್ತ್ರದಿಂದ ಮಾತ್ರವಲ್ಲ, ಶಾಪ ಕೊಟ್ಟು ಅಂದರೆ ಬ್ರಾಹ್ಮತೇಜವನ್ನು ಬಳಸಿ ದುರ್ಜನ ರಾಜ್ಯಕರ್ತರನ್ನು ನಾಶಪಡಿಸಿದನು.

೫ ಆ. ಛತ್ರಪತಿ ಶಿವಾಜಿ ಮಹಾರಾಜರು : ಇವರು ತಮ್ಮ ಕುಲದೇವಿ ಶ್ರೀ ಭವಾನೀದೇವಿಯ ನಿಸ್ಸೀಮ ಭಕ್ತರಾಗಿದ್ದರು. ಅವರ ಬಾಯಲ್ಲಿ ಯಾವಾಗಲೂ ಜಗದಂಬಾ… ಜಗದಂಬಾ ಎಂಬ ನಾಮಜಪವಿರುತ್ತಿತ್ತು. ಅವರ ಸೈನಿಕರು ಹೋರಾಡುವಾಗ ಹರ ಹರ ಮಹಾದೇವ ಎಂದು ಜಯಘೋಷ ಮಾಡುತ್ತಿದ್ದರು. ಆದ್ದರಿಂದ ಮಾನವಬಲ ಮತ್ತು ಯುದ್ಧ ಸಾಮಗ್ರಿಗಳು ಕಡಿಮೆಯಿದ್ದರೂ ಐದು ಜನ ಬಲಾಢ್ಯ ಬಾದಶಹರನ್ನು ಸೋಲಿಸಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಅವರ ಸಾಧನೆಯಿಂದಲೇ ಅವರಿಗೆ ಸಂತ ತುಕಾರಾಮ ಮಹಾರಾಜರ ಮತ್ತು ಸಮರ್ಥ ರಾಮದಾಸಸ್ವಾಮಿಗಳ ಆಶೀರ್ವಾದ ಲಭಿಸಿತು ಮತ್ತು ದೊಡ್ಡ ದೊಡ್ಡ ಸಂಕಟಗಳಿಂದ ಅವರ ರಕ್ಷಣೆ ಯಾಯಿತು. ದೇವತೆಗಳ ಭಕ್ತಿ ಮಾಡುವುದರಿಂದ ದೈವೀ ಶಕ್ತಿಯ ಸಹಾಯ ಸಿಗುತ್ತದೆ ಮತ್ತು ನಾವು ಅಂಗೀಕರಿಸಿದ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ, ಎಂಬುದಕ್ಕೆ ಇದೊಂದು ಉದಾಹರಣೆ.(೨೩.೪.೨೦೧೨)

೬. ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಮಾಡಲು ಆವಶ್ಯಕವಿರುವ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದ ಬಲ !

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಬ್ರಾಹ್ಮತೇಜ ಸಿಗಬೇಕೆಂಬ ಉದ್ದೇಶದಿಂದ ಸಮಷ್ಟಿ ಕಾರ್ಯವನ್ನು ಮಾಡುವ ೧೦೦ ಸಂತರು, ಹಾಗೆಯೇ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಿರತರಾದ ೫ ಲಕ್ಷ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳ ಆವಶ್ಯಕತೆಯಿದೆ. ಮುಂಬರುವ ೪ ವರ್ಷಗಳಲ್ಲಿ ಸನಾತನ ಸಂಸ್ಥೆಯ ೧೦೦ ಸಾಧಕರು ಸಂತರಾಗುವರು. ಅದರಿಂದ ವಾತಾವರಣದಲ್ಲಿನ ರಜ-ತಮದ ಪ್ರಮಾಣ ಕಡಿಮೆಯಾಗುವುದು, ಹಾಗೆಯೇ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳ ಸುತ್ತಲೂ ರಕ್ಷಾಕವಚ ನಿರ್ಮಾಣವಾಗಿ ಅವರಿಗೆ ಬಲ ಸಿಗುವುದು.

(ಟಿಪ್ಪಣಿ ೧) ಆದ್ದರಿಂದ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಸಾಧ್ಯವಾಗುವುದು. (೯.೪.೨೦೧೩)

(ಟಿಪ್ಪಣಿ ೧ – ಕತ್ತಲೆಯಲ್ಲಿ ದೀಪದ ಪ್ರಕಾಶ ಉಪಯೋಗವಾಗುತ್ತದೆ; ಆದರೆ ದಟ್ಟವಾದ ಇಬ್ಬನಿಯ ಆವರಣದಲ್ಲಿ ದೀಪದ ಪ್ರಕಾಶವೂ ಉಪಯೋಗವಾಗುವುದಿಲ್ಲ ಅದೇರೀತಿ ಸದ್ಯದ ರಜ-ತಮಾತ್ಮಕ ಗುಣಗಳ ಆವರಣದಲ್ಲಿ ನಮ್ಮ ಸಾಧನೆಯ ಕ್ಷಮತೆಯನ್ನು ಕಾರ್ಯಕ್ಕಾಗಿ ಸಾಕಷ್ಟು ಉಪಯೋಗಿಸಲು ಆಗುವುದಿಲ್ಲ. ಸಂತರ ಪ್ರಭಾವದಿಂದ ಈ ಆವರಣ ಕಡಿಮೆಯಾದರೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳ ಕಾರ್ಯಕ್ಷಮತೆಯು ಹೆಚ್ಚು ಉತ್ತಮ ರೀತಿಯಲ್ಲಿ ಬಳಕೆಯಾಗುವುದು.)

(ಆಧಾರ : ಸನಾತನದ ಗ್ರಂಥ ‘ಹಿಂದೂ ರಾಷ್ಟ್ರದ ಸ್ಥಾಪನೆಯ ದಿಶೆ’)

Leave a Comment