ಹಿಂದೂಗಳೇ, ಹಿಂದೂ ರಾಷ್ಟ್ರ ಸ್ಥಾಪನೆಯ ಧರ್ಮಕಾರ್ಯಕ್ಕಾಗಿ ಹೀಗೆ ಯೋಗದಾನ ನೀಡಿರಿ !

1. ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಾರ್ಯನಿರತವಾಗಿರುವ ಸಂಸ್ಥೆ, ಸಂಘಟನೆ ಮತ್ತು ಸಂಪ್ರದಾಯಗಳ ಉಪಕ್ರಮಗಳಲ್ಲಿ ಸಹಭಾಗಿಯಾಗಿರಿ ! ಇದಕ್ಕಾಗಿ ಪ್ರತಿದಿನ ಕಡಿಮೆಪಕ್ಷ ಒಂದು ಗಂಟೆಯನ್ನಾದರೂ ನೀಡಿರಿ !

2. ಪ್ರಸಾರಮಾಧ್ಯಮಗಳು, ಜಾಲತಾಣಗಳು ಮುಂತಾದ ಮಾಧ್ಯಮಗಳಿಂದ ಹಿಂದೂ ರಾಷ್ಟ್ರದ ಸ್ಥಾಪನೆಯ ವಿಚಾರವನ್ನು ಪ್ರಸಾರ ಮಾಡಿರಿ !

3. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯ ನಿರತ ವ್ಯಕ್ತಿ ಮತ್ತು ಸಂಘಟನೆಗಳಿಗೆ ತಮ್ಮ ಕ್ಷಮತೆ ಗನುಸಾರ ಆರ್ಥಿಕ ಸಹಾಯ ಮಾಡಿರಿ !

4. ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡುವವರಿಗೆ ಸಹಾಯವಾಗುವಂತಹ ಕೃತಿಗಳನ್ನು ಮಾಡಿರಿ, ಉದಾ.
ಅ. ಶಿಕ್ಷಕರು ಶಾಲೆಗಳಲ್ಲಿ ಹಿಂದೂ ರಾಷ್ಟ್ರದ ಸಂಕಲ್ಪನೆಯ ಪ್ರಸಾರಕ್ಕಾಗಿ ಛತ್ರಪತಿ ಶಿವಾಜಿ ಮಹಾರಾಜರು, ಸ್ವಾತಂತ್ರ್ಯವೀರ ಸಾವರಕರರು ಮುಂತಾದ ರಾಷ್ಟ್ರಪುರುಷರ ಸ್ಮೃತಿದಿನಗಳನ್ನು ಆಚರಿಸುವುದು

ಆ. ನ್ಯಾಯವಾದಿಗಳು (ವಕೀಲರು) ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಮಾಡುವವರಿಗೆ ಕಾನೂನಿನ ಸಹಾಯವನ್ನು ಉಚಿತವಾಗಿ ನೀಡುವುದು

ಇ. ಪತ್ರಕರ್ತರು ವರ್ತಮಾನಪತ್ರಿಕೆಗಳಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯ ಮಹತ್ವವನ್ನು ಹೇಳುವ ಲೇಖನಗಳನ್ನು ಬರೆಯುವುದು

ಈ. ಸರಕಾರಿ ನೌಕರರು ಮತ್ತು ಅಧಿಕಾರಿಗಳು ಪ್ರಚಲಿತ ಆಡಳಿತ ವ್ಯವಸ್ಥೆಯಲ್ಲಿನ ಕುಂದುಕೊರತೆಗಳನ್ನು ಅಧ್ಯಯನ ಮಾಡಿ ಆ ಕೊರತೆಗಳು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದಲ್ಲಿರದಂತೆ ಪರಿಹಾರೋಪಾಯಗಳನ್ನು ಕಂಡುಹಿಡಿಯುವುದು

ಉ. ವ್ಯಾಪಾರಿಗಳು ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಿರತವಾಗಿರುವ ವ್ಯಕ್ತಿ ಮತ್ತು ಸಂಘಟನೆಗಳಿಗೆ ಪ್ರತಿ ತಿಂಗಳು ವಸ್ತುಗಳ ರೂಪದಲ್ಲಿ ಅಥವಾ ದ್ರವ್ಯದ ರೂಪದಲ್ಲಿ ಅರ್ಪಣೆ ನೀಡುವುದು

ಊ. ವಾಚನಾಲಯಗಳು ಹಿಂದೂ ರಾಷ್ಟ್ರದ ಸ್ಥಾಪನೆಯ ವಿಚಾರವನ್ನು ಪ್ರಸಾರ ಮಾಡುವ ಗ್ರಂಥಗಳನ್ನು ಉಪಲಬ್ಧ ಮಾಡಿಕೊಟ್ಟು ಜನ ಪ್ರಬೋಧನೆ ಮಾಡುವುದು

ಎ. ಹಿಂದೂ ಸಂಘಟನೆಗಳು ‘ಲವ್ ಜಿಹಾದ್ಗೆ ವಿರೋಧ, ಮತಾಂತರಿತರ ಶುದ್ಧೀಕರಣ, ಗೋರಕ್ಷಣೆ, ಗಂಗಾ ನದಿಯ ಶುದ್ಧೀಕರಣ ಇತ್ಯಾದಿ ಉಪಕ್ರಮಗಳೊಂದಿಗೆ ಧರ್ಮಾಧಿಷ್ಠಿತ ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಜಾಗೃತಿಯ ಉಪಕ್ರಮಗಳನ್ನು ನಡೆಸುವುದು

ಏ. ವೇದಪಾಠಶಾಲೆ ಮತ್ತು ಪುರೋಹಿತರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯವನ್ನು ಮಾಡುವವರಿಗೆ ಆಧ್ಯಾತ್ಮಿಕ ಬಲ ಸಿಗಲು ಯಜ್ಞಯಾಗಗಳನ್ನು ಮಾಡುವುದು

ಐ. ಸಂತರು ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತಿದಿನ ಸ್ವಲ್ಪ ಸಮಯ ಪ್ರಾರ್ಥನೆ, ನಾಮಜಪ ಮಾಡುವುದು

Leave a Comment