ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಾಡುವುದು, ಹಿಂದೂಗಳ ಸಾಂವಿಧಾನಿಕ ಅಧಿಕಾರವಾಗಿದೆ !

‘ಹಿಂದೂ ರಾಷ್ಟ್ರ’ ಎಂಬ ಶಬ್ದವನ್ನು ಉಚ್ಚರಿಸಿದರೆ ಸಾಕು, ಪುರೋಗಾಮಿಗಳು, ಜಾತ್ಯತೀತವಾದಿಗಳು, ಇತರ ಪಂಥೀಯರು ಮತ್ತು ಪ್ರಸಾರಮಾಧ್ಯಮಗಳು ‘ಹಿಂದೂ ರಾಷ್ಟ್ರದ ಬೇಡಿಕೆಯು ಸಂವಿಧಾನಕ್ಕನುಗುಣವಾಗಿಲ್ಲ ಎಂದು ಹಾರಾಡುತ್ತಾರೆ. ಸಂವಿಧಾನವನ್ನು ಅರ್ಧಂಬರ್ಧ ಅಧ್ಯಯನ ಮಾಡುವವರು ‘ಹಿಂದೂ ರಾಷ್ಟ್ರ’ದ ಬೇಡಿಕೆಯು ಸಾಂವಿಧಾನಿಕವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು.

ಅ. ದೇಶದ ಮೂಲ ಸಂವಿಧಾನದಲ್ಲಿ ‘ಸೆಕ್ಯುಲರ್‘ ಎಂಬ ಉಲ್ಲೇಖವಿರಲಿಲ್ಲ. ಇಂದಿರಾ ಗಾಂಧಿಯವರು ೧೯೭೬ ರಲ್ಲಿ ೪೨ ನೇ ಸಂವಿಧಾನ ತಿದ್ದುಪಡಿ ಮಾಡಿ ಸಂವಿಧಾನದಲ್ಲಿ ‘ಧರ್ಮನಿರಪೇಕ್ಷ‘ ಮತ್ತು ‘ಸಮಾಜವಾದ‘ ಎಂಬ ಶಬ್ದಗಳನ್ನು ಸೇರಿಸಿದರು.

ಆ. ೧ ಆಗಸ್ಟ್ ೨೦೧೫ ರ ತನಕ ದೇಶದ ಸಂವಿಧಾನದಲ್ಲಿ ೧೦೦ ಬಾರಿ ತಿದ್ದುಪಡಿಗಳನ್ನು ಮಾಡಲಾಗಿದೆ. ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಭಾರತವನ್ನು ‘ಧರ್ಮ ನಿರಪೇಕ್ಷ ರಾಷ್ಟ್ರವನ್ನಾಗಿಸಬಹುದಾದರೆ, ಇಂತಹ ಸಂವಿಧಾನದ ತಿದ್ದುಪಡಿಯಿಂದ ಭಾರತವನ್ನು ‘ಹಿಂದೂ ರಾಷ್ಟ್ರ’ವನ್ನಾಗಿಸಲು ಏಕೆ ಸಾಧ್ಯವಿಲ್ಲ ?

ಇ. ಸಂವಿಧಾನವು ಹಿಂದೂಗಳಿಗೆ ಅಭಿಪ್ರಾಯಗಳ ಮತ್ತು ಅವುಗಳನ್ನು ಪ್ರಸಾರ ಮಾಡುವ ಅಧಿಕಾರವನ್ನು ನೀಡುತ್ತದೆ. ಆದ್ದರಿಂದ ‘ಹಿಂದೂ ರಾಷ್ಟ್ರ’ದ ಸಂಕಲ್ಪನೆಯ ಪ್ರಸಾರವನ್ನು ಮಾಡುವುದು ಹಿಂದೂಗಳ ಸಂವಿಧಾನದತ್ತ ಅಧಿಕಾರವಾಗಿದೆ.

ಈ. ‘ಹಿಂದೂ ರಾಷ್ಟ್ರ’ ಈ ಶಬ್ದವು ‘ಸಾಂವಿಧಾನಿಕವೇ ಅಥವಾ ಅಸಾಂವಿಧಾನಿಕವೇ’ ಎಂಬ ಪ್ರಶ್ನೆ ನಿರ್ಮಾಣವಾಗುವುದೇ ಇಲ್ಲ. ಅದು ಸಂಪೂರ್ಣವಾಗಿ ಸಮಾಜ ಮತ್ತು ರಾಷ್ಟ್ರದ ಪುನರುತ್ಥಾನದ ಪ್ರಕ್ರಿಯೆಯಾಗಿದೆ. ಸಂವಿಧಾನದ ಚೌಕಟ್ಟಿನಲ್ಲಿದ್ದುಕೊಂಡು ಸಮಾಜ ಮತ್ತು ರಾಷ್ಟ್ರದ ಹಿತದ ಸಂಕಲ್ಪನೆಯನ್ನು ಮಂಡಿಸುವುದು ಸಂಪೂರ್ಣವಾಗಿ ಸಾಂವಿಧಾನಿಕವಾಗಿದೆ ಕಾನೂನಿನ ಚೌಕಟ್ಟಿನಲ್ಲಿದ್ದು ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹೀಗೆ ಯಾವುದೇ ಪರಿವರ್ತನೆಗೆ ಸಂವಿಧಾನವು ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಇಂತಹ ಪರಿವರ್ತನೆಯು ಹಿಂದೂ ರಾಷ್ಟ್ರವನ್ನು ಸ್ಥಾಪಿಸುವಲ್ಲಿ ಆಗುತ್ತಿದ್ದರೆ ಅದರಲ್ಲಿ ಅನುಚಿತವೆನಿಸುವಂಥದ್ದೇನೂ ಇಲ್ಲ. ಎಲ್ಲಿಯವರೆಗೆ ಹಿಂದೂ ರಾಷ್ಟ್ರದ ಸ್ಥಾಪನೆಯ ವಿಚಾರವನ್ನು ಮಂಡಿಸುವ ವ್ಯಕ್ತಿಗಳು ಅಸಾಂವಿಧಾನಿಕ ಕೃತ್ಯಗಳನ್ನು ಮಾಡುವುದಿಲ್ಲವೋ, ಅಲ್ಲಿಯವರೆಗೆ ಅವರನ್ನು ಅಸಾಂವಿಧಾನಿಕರೆನ್ನುವುದು ಅನ್ಯಾಯವಾಗಿದೆ.

ಉ. ಸಂವಿಧಾನದ ೩೬೮ ನೇ ಅಧಿನಿಯಮದ ಮೊದಲ ಉಪ ಬಂಧದಲ್ಲಿ ಮುಂದಿನಂತೆ ಸ್ಪಷ್ಟವಾಗಿ ಹೇಳಲಾಗಿದೆ – ‘ಈ ಅಧಿನಿಯಮದಲ್ಲಿ ಹಾಕಿಕೊಟ್ಟಿರುವ ಕಾರ್ಯಪದ್ಧತಿಗನುಸಾರ ದೇಶದ ಸಂವಿಧಾನದಲ್ಲಿ ಏನೇ ಇದ್ದರೂ, ಸಂಸತ್ತಿಗೆ ತನ್ನ ಸಂವಿಧಾನಾಧಿಕಾರವನ್ನು ಚಲಾಯಿಸಿ ಈ ಸಂವಿಧಾನದ ಯಾವುದೇ ಉಪಬಂಧದಲ್ಲಿ ಇನ್ನಷ್ಟು ಸೇರಿಸಿ ಅಥವಾ ಬದಲಾವಣೆ ಮಾಡಿ ಅಥವಾ ಅದನ್ನು ರದ್ದುಪಡಿಸಿ ಸುಧಾರಣೆಯನ್ನು ಮಾಡಬಹುದು. ತಾತ್ಪರ್ಯವೇನೆಂದರೆ, ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಾಡುವುದು ಹಿಂದೂಗಳ ಸಾಂವಿಧಾನಿಕ ಅಧಿಕಾರವಾಗಿದೆ.

Leave a Comment