ರಾಷ್ಟ್ರೀಯ ಸಮಸ್ಯೆಗಳ ದೃಷ್ಟಿಕೋನದಿಂದ ‘ಹಿಂದೂ ರಾಷ್ಟ್ರ’ ಏಕೆ ಬೇಕು?

ಸಾಮಾಜಿಕ ಐಕ್ಯತೆಗಾಗಿ ಈಗಿನ ರಾಜಕಾರಣದಿಂದಾಗಿ ಭಾರತೀಯ ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಜಾತಿವಾದ ಹಬ್ಬಿದೆ. ಹಿಂದುಳಿದ ದೇಶವು ವಿಕಾಸದೆಡೆಗೆ ಹೋಗುವುದೆಂದರೆ ರಾಷ್ಟ್ರದ ಪ್ರಗತಿ. ಹೀಗಿರುವಾಗ ಸ್ವಾತಂತ್ರ್ಯದ ೬-೭ ದಶಕಗಳ ನಂತರವೂ ‘ನಮ್ಮನ್ನು ಹಿಂದುಳಿದವರೆಂದು ಘೋಷಿಸಿರಿ’ ಎಂದು ಕೇಳಲಾಗುತ್ತದೆ. ಮೀಸಲಾತಿಯಿಂದಾಗಿ ಗುಣಮಟ್ಟವನ್ನು ಕುಗ್ಗಿಸಲಾಗುತ್ತದೆ.

ನಾಗರಿಕರ ಉತ್ತಮ ಆರೋಗ್ಯಕ್ಕಾಗಿ

ಸರಕಾರಿ ಆಸ್ಪತ್ರೆಗಳಲ್ಲಿ ಕಡಿಮೆ ಸೌಲಭ್ಯಗಳು, ಔಷಧಿಗಳ ಕೊರತೆ ಇತ್ಯಾದಿಗಳಿಂದಾಗಿ ರೋಗಿಗಳಿಗೆ ಅಲ್ಲಿ ಹೋಗುವುದು ಬೇಡವೆನಿಸುತ್ತದೆ ಮತ್ತು ಖಾಸಗಿ ವೈದ್ಯಕೀಯ ಉಪಚಾರವು ಬಹಳ ದುಬಾರಿಯಾಗಿರುತ್ತದೆ. ಅದರೊಂದಿಗೆ ಮಾರುಕಟ್ಟೆಯಲ್ಲಿನ ಔಷಧಿಗಳ ಬೆಲೆಯೂ ಸಾಮಾನ್ಯರ ಕೈಗೆ ಎಟುಕದಿರುವುದರಿಂದ ಹೆಚ್ಚಿನ ರೋಗಿಗಳಿಗೆ ರೋಗವೆಂದರೆ ದೊಡ್ಡ ಆರ್ಥಿಕ ಸಂಕಟವೆನಿಸುತ್ತದೆ.

ಉತ್ತಮ ಶಿಕ್ಷಣಕ್ಕಾಗಿ

ಸದ್ಯ ಶಿಕ್ಷಣಕ್ಕಾಗಿ ಹೆಚ್ಚಿನ ಕಡೆಗಳಲ್ಲಿ ದೇಣಿಗೆ ಎಂದು ಕಪ್ಪ (ಕಪ್ಪಕಾಣಿಕೆ) ವನ್ನು ಕೊಡಬೇಕಾಗುತ್ತದೆ. ರಾಷ್ಟ್ರದ್ರೋಹಿ ಮತ್ತು ಸುಳ್ಳು ಇತಿಹಾಸವನ್ನು ಕಲಿಸುವುದು – ಇದು ವಿದ್ಯಾರ್ಥಿಗಳನ್ನು ಸ್ವಾಭಿಮಾನ ಶೂನ್ಯರನ್ನಾಗಿಸುವ ಷಡ್ಯಂತ್ರವಾಗಿದೆ. ಉತ್ತಮ ವಿದ್ಯಾಪೀಠಗಳ ಕೊರತೆಯಿದೆಯಲ್ಲದೇ ಶೇ. ೨೬ ರಷ್ಟು ಭಾರತೀಯ ಜನತೆಯು ಅನಕ್ಷರಸ್ಥರಾಗಿದ್ದಾರೆ.

ಸ್ವಭಾಷೆಗಳ ರಕ್ಷಣೆಯ ದೃಷ್ಟಿಯಿಂದ

ಸದ್ಯದ ಪ್ರಜಾಪ್ರಭುತ್ವದಲ್ಲಿ ಸ್ವಭಾಷೆಗಳ ಸ್ಥಿತಿಯು ದಯನೀಯವಾಗಿದೆ ಮತ್ತು ಪರಭಾಷೆ ಆಂಗ್ಲದ ಮಹತ್ವವು ಅತಿ ಹೆಚ್ಚಾಗಿದೆ. ಹಿಂದಿ ಭಾಷೆಗೆ ಇಂದಿನವರೆಗೆ ನಿಜವಾದ ಅರ್ಥದಲ್ಲಿ ‘ರಾಷ್ಟ್ರಭಾಷೆಯ ಸ್ಥಾನ ಸಿಕ್ಕಿಲ್ಲ. ಅಲ್ಲದೇ ರಾಜಕಾರಣದ ಅನುಕೂಲಕ್ಕಾಗಿ ಭಾಷಾವಾದ ನಿರ್ಮಿಸಲಾಗಿದ್ದು ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಹಿಂದಿ ರಾಷ್ಟ್ರಭಾಷೆಯನ್ನೂ ದ್ವೇಷಿಸಲಾಗುತ್ತದೆ.

ರೈತರ ಹಿತ ಮತ್ತು ಆಹಾರಧಾನ್ಯಗಳ ಸಮೃದ್ಧಿಗಾಗಿ

ಭಾರತದಲ್ಲಿ ಅನೇಕ ಪಂಚವಾರ್ಷಿಕ ಯೋಜನೆಗಳನ್ನು ನಡೆಸಿಯೂ ಕೃಷಿಕ್ಷೇತ್ರವು ವಿಶೇಷ ಪ್ರಗತಿಯನ್ನು ಸಾಧಿಸಿಲ್ಲ. ಕೃಷಿಕ್ಷೇತ್ರದ ಪ್ರಮುಖ ಘಟಕವಾಗಿರುವ ರೈತರು ಸಾಲದಲ್ಲಿ ಸಿಲುಕಿಕೊಂಡಿದ್ದು ಅವರ ಸ್ಥಿತಿಯು ಬಹಳ ಕೆಳಮಟ್ಟಕ್ಕೆ ಇಳಿದಿದೆ. ರೈತರಿಗೆ ಹೊಲದಲ್ಲಿ ನೇಗಿಲು ಹಿಡಿಯುವುದನ್ನು ಬಿಟ್ಟು ರಸ್ತೆಗಿಳಿದು ಆಂದೋಲನಗಳನ್ನು ಮಾಡಬೇಕಾಗುತ್ತಿದೆ. ಅಲ್ಲದೇ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಶೇ. ೩೦ ರಷ್ಟು ಜನತೆಯು ಅರೆಹೊಟ್ಟೆಯಲ್ಲಿರುವಾಗ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿಗಳ ಆಹಾರಧಾನ್ಯಗಳ ಅಪವ್ಯಯವನ್ನು ರಾಜಕಾರಣಿಗಳು ತಡೆಯದಿರುವುದು ಸಂತಾಪಜನಕವಾಗಿದೆ !

ಭ್ರಷ್ಟಾಚಾರದ ನಿರ್ಮೂಲನೆಗಾಗಿ

ಪ್ರಸ್ತುತ ನಾಗರಿಕರು ಆಚಾರಭ್ರಷ್ಟ (ಭ್ರಷ್ಟಾಚಾರಿ) ರಾಗಿ ಇಡೀ ದೇಶವು ದುಃಖಿಯಾಗಿದೆ. ದೈನಂದಿನ ಜೀವನದಲ್ಲಿ ಭ್ರಷ್ಟವ್ಯವಸ್ಥೆಯ ಬಗ್ಗೆ ಅನೇಕ ಅನುಭವಗಳು ಬರುತ್ತಿವೆ. ಭಾರತೀಯ ಪ್ರಜಾಪ್ರಭುತ್ವವೆಂದರೆ ಭ್ರಷ್ಟಾಸುರರ ಪ್ರಭುತ್ವ ಎಂದಾಗಿದೆ ! ಕೇಂದ್ರದ ಆರ್ಥಿಕ sಸಚಿವಾಲಯದ ವರದಿಗನುಸಾರ ೨೦೧೧-೨೦೧೨ ರಲ್ಲಿ ಪ್ರತಿಯೊಬ್ಬ ನಾಗರಿಕನ ತಲೆ ಮೇಲೆ ೩೨,೮೧೨ ರೂಪಾಯಿಗಳ ವಿದೇಶಿ ಸಾಲವಿದೆ. ಮುಂದೆ ಇದರಲ್ಲಿ ಶೇ. ೨೩ ರ ವರೆಗೆ ಹೆಚ್ಚಳಾಗುವ ಸಾಧ್ಯತೆಯಿದೆ. ಭಾರತವು ಎಲ್ಲ ಜಾಗತಿಕ ಅರ್ಥಸಂಸ್ಥೆಗಳ ಸಾಲಗಾರವಾಗಿದೆ. ಈ ಸಾಲದ ಒಟ್ಟು ಬಡ್ಡಿಗಾಗಿ ರಾಷ್ಟ್ರೀಯ ಉತ್ಪನ್ನದ ಶೇ. ೨೫ ರಷ್ಟು ಭಾಗವನ್ನು ವ್ಯಯಿಸಬೇಕಾಗುತ್ತದೆ. ಪರದ್ರವ್ಯ ಮಣ್ಣಿಗೆ ಸಮಾನವೆಂದು ತಿಳಿಯುವ ಸುಸಂಸ್ಕಾರಿತ ಭಾರತಕ್ಕೆ ಕಳಂಕ ತರುವ ಆಧುನಿಕ ಭ್ರಷ್ಟಾಚಾರಿ ಪವೃತ್ತಿಗೆ ಕಡಿವಾಣ ಹಾಕಲು ಧರ್ಮನಿಷ್ಠ ‘ಹಿಂದೂ ರಾಷ್ಟ್ರ’ವೇ ಬೇಕು !

Leave a Comment