ಶ್ರೀ ದುರ್ಗಾದೇವಿಯ ನಾಮಜಪ

ಕಲಿಯುಗದಲ್ಲಿ ‘ನಾಮಸಾಧನೆ’ ಅಂದರೆ ದೇವರ ನಾಮವನ್ನು ಜಪಿಸುವುದೇ ಉತ್ತಮ ರೀತಿಯ ಸಾಧನೆಯಾಗಿದೆ ಎಂದು ಅನೇಕ ಸಂತಶ್ರೇಷ್ಠರು ಹೇಳಿದ್ದಾರೆ. ಭಗವಂತನ ನಾಮದೊಂದಿಗೆ ಅವನ ರೂಪ, ರಸ, ಗಂಧ ಮತ್ತು ಅವನ ಶಕ್ತಿಯೂ ಇರುತ್ತದೆ. ಭಗವಂತನ ನಾಮವನ್ನು ಜಪಿಸುವಾಗ ಅಥವಾ ಕೇಳುವಾಗ ಈ ತತ್ತ್ವವನ್ನು ಗಮನದಲ್ಲಿ ಇಟ್ಟುಕೊಂಡರೆ ನಾಮಜಪದಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.

|| ಶ್ರೀ ದುರ್ಗಾದೇವ್ಯೈ ನಮಃ ||

श्री दुर्गादेवी Durga devi

‘ದುರ್ಗಾ’ ಶಬ್ದದ ಅರ್ಥ

‘|| ಶ್ರೀ ದುರ್ಗಾದೇವ್ಯೈ ನಮಃ ||’ ಈ ನಾಮಜಪದಲ್ಲಿ ‘ದುರ್ಗಾ’ ಶಬ್ದದ ‘ದ’ಕಾರವು ‘ದೈತ್ಯನಾಶ’ದ ಪ್ರತೀಕವಾಗಿದೆ. ‘ದುರ್ಗಾ’ದಲ್ಲಿನ ‘ದುರ್’ ಎಂದರೆ ‘ಕೆಟ್ಟದ್ದು’, ‘ಗ’ ಎಂದರೆ ಹೋಗಲಾಡಿಸುವ. ಕೆಟ್ಟದ್ದನ್ನು ನಾಶ ಮಾಡುವವಳು ಎಂದರೆ ‘ದುರ್ಗಾ’.

ನಾಮಜಪಿಸಿಸುವಾಗ ಅದರಲ್ಲಿ ತಾರಕ ಭಾವವು ನಿರ್ಮಾಣವಾಗಲು ಏನು ಮಾಡಬೇಕು?

‘ಶ್ರೀ ದುರ್ಗಾದೇವ್ಯೈ ನಮಃ’ ಈ ನಾಮಜಪವನ್ನು ತಾರಕ ಭಾವದಿಂದ ಮಾಡಲು ಪ್ರತಿಯೊಂದು ಶಬ್ದದ ಉಚ್ಚಾರವನ್ನು ದೀರ್ಘವಾಗಿ ಮಾಡಬೇಕು. ಯಾವುದೇ ಶಬ್ದದ ಮೇಲೆ ಒತ್ತನ್ನು ನೀಡದೆ, ಮೃದುವಾಗಿ ಉಚ್ಚರಿಸಬೇಕು. ಇದರಿಂದ ದೇವಿಯ ತಾರಕ ತತ್ತ್ವದ ಹೆಚ್ಚಿನ ಲಾಭವಾಗುತ್ತದೆ.

ಇಲ್ಲಿ ನೀಡಿರುವಂತೆ ನೀವು ಕೂಡ ಶಾಸ್ತ್ರಬದ್ಧವಾಗಿ ಶ್ರೀ ದುರ್ಗಾದೇವಿಯ ನಾಮಜಪವನ್ನು ಮಾಡಿ, ಅದರಿಂದ ನಿಮಗೂ ದೇವಿಯ ಅನುಭೂತಿ ಸಿಗುವಂತಾಗಲಿ ಎಂದು ಶ್ರೀ ದೇವಿಯ ಚರಣಗಳಲ್ಲಿ ಪ್ರಾರ್ಥನೆ.

ನವರಾತ್ರಿಯಲ್ಲಿ ದೇವಿತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದುಕೊಳ್ಳಲು ನವರಾತ್ರಿಯ ಕಾಲದಲ್ಲಿ || ಶ್ರೀ ದುರ್ಗಾದೇವ್ಯೈ ನಮಃ || ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.

Leave a Comment