ಸ್ನಾನದ ನಂತರ ಮಾಡಬೇಕಾದ ಕೃತಿಗಳು

೧. ಸ್ನಾನದ ನಂತರ ತಮ್ಮ ಸುತ್ತಲೂ ಮಂಡಲವನ್ನು ಹಾಕಿಕೊಳ್ಳಬೇಕು.

೧ ಅ. ಶಾಸ್ತ್ರ

ತಮ್ಮ ಸುತ್ತಲೂ ಮಂಡಲವನ್ನು ಹಾಕಿಕೊಳ್ಳುವುದರಿಂದ ಸ್ನಾನದಿಂದ ಮಾಡಿದ ದೇಹದ ಶುದ್ಧೀಕರಣದಲ್ಲಿ ಕೆಟ್ಟ ಶಕ್ತಿಗಳ ಹಸ್ತಕ್ಷೇಪವಾಗುವುದನ್ನು ತಡೆಗಟ್ಟಬಹುದು : ನಾಮಜಪ ಮಾಡುತ್ತಾ ಉಪ್ಪಿನ ನೀರಿನಿಂದ ಸ್ನಾನ ಮಾಡಿದ ನಂತರ ನೀರಿನ ಸಹಾಯದಿಂದ ಅದನ್ನೇ ತೀರ್ಥವೆಂದು ತಿಳಿದುಕೊಂಡು ನಮ್ಮ ಸುತ್ತಲೂ ನೀರಿನ ಧಾರೆಯನ್ನು ಗೋಲಾಕಾರವಾಗಿ ತಿರುಗಿಸಿ ಮಂಡಲವನ್ನು ಹಾಕಿಕೊಳ್ಳಬೇಕು. ಇದರಿಂದ ಸ್ನಾನದಿಂದಾದ ದೇಹದ ಶುದ್ಧೀಕರಣದಲ್ಲಿ ಕೆಟ್ಟ ಶಕ್ತಿಗಳ ಹಸ್ತಕ್ಷೇಪವನ್ನು ತಡೆಗಟ್ಟಬಹುದು.

೨. ಕೃತಜ್ಞತೆಯನ್ನು ವ್ಯಕ್ತಪಡಿಸುವುದು : ಸ್ನಾನವಾದ ನಂತರ ಜಲದೇವತೆಯ ಕೃಪೆಯಿಂದ ನಮಗೆ ಶುಚಿರ್ಭೂತರಾಗಲು ಅವಕಾಶ ಸಿಕ್ಕಿದ ಬಗ್ಗೆ ಅವಳ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

೩. ಆಚಮನ ಮಾಡುವುದು : ಸ್ನಾನದ ನಂತರ ಆಚಮನ ಮಾಡಬೇಕು. ಆಚಮನದಿಂದ ಅಂತರ್ಶುದ್ಧಿಯಾಗುತ್ತದೆ.

– ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಈ ಅಂಕಿತನಾಮದಿಂದ ಬರೆಯುತ್ತಾರೆ, ೨೯.೧೦.೨೦೦೭, ಬೆಳಗ್ಗೆ ೯.೪೬)

ಸ್ನಾನವನ್ನು ಯಾರು ಮಾಡಬಾರದು ?

ಅತ್ಯಂತ ವೃದ್ಧರಾಗಿರುವ ವ್ಯಕ್ತಿಗಳು, ಜ್ವರ, ಅಜೀರ್ಣ, ಅತಿಸಾರ (ಬೇಧಿ), ಕಣ್ಣು ಮತ್ತು ಕಿವಿನೋವು, ನರವ್ಯೂಹದ ಕಾಯಿಲೆಯಿಂದ ಪೀಡಿತರಾಗಿರುವವರು, ದೃಷ್ಟಿ ಮತ್ತು ಮುಖಕ್ಕೆ ರೋಗ ತಗಲಿರುವವರು, ಅತ್ಯಂತ ಹಸಿವೆಯಾಗಿರುವವರು ಹಾಗೂ ಊಟವಾದ ನಂತರ ಸ್ನಾನವನ್ನು ಮಾಡಬಾರದು.

ನಿಜವಾದ ಸ್ನಾನ

೧. ತನ್ನ ಶಾರೀರಿಕ ಆರೋಗ್ಯ ಉತ್ತಮವಾಗಿರಬೇಕೆಂದು ಮಾನವನು ಎಷ್ಟು ಪರಿಶ್ರಮ ಪಡುತ್ತಾನೆಯೋ ಅದಕ್ಕಿಂತ ಹೆಚ್ಚು ಪ್ರಯತ್ನವನ್ನು ಅವನು ತನ್ನ ಮನಸ್ಸು ಮತ್ತು ಬುದ್ಧಿಯನ್ನು ಸ್ವಚ್ಛ ಮತ್ತು ನಿರ್ಮಲಗೊಳಿಸಲು ಪ್ರಯತ್ನಿಸಬೇಕು. ಇದನ್ನೇ ನಿಜವಾದ ಅರ್ಥದಲ್ಲಿ ‘ಸ್ನಾನ ಮಾಡುವುದು ಎಂದು ಹೇಳಬಹುದು.

೨. ಜೀವದ ದೇಹ ಮತ್ತು ಅಂತಃಕರಣ

ಈ ಘಟಕಗಳಲ್ಲಿರುವ ಕಲ್ಮಶರೂಪಿ ವಿಕಾರಗಳನ್ನು ದೂರಗೊಳಿಸುವ ಕ್ರಿಯೆಗೆ ‘ಸ್ನಾನ’ ಎಂದು ಹೇಳುತ್ತಾರೆ. ಆದುದರಿಂದ ‘ಸತತವಾಗಿ ಸಾಧನೆಯನ್ನು ಮಾಡುವುದೇ’ ನಿಜವಾದ ಸ್ನಾನವಾಗಿದೆ.

– ಓರ್ವ ಜ್ಞಾನಿ (ಶ್ರೀ. ನಿಷಾದ ದೇಶಮುಖ ಇವರು ಓರ್ವ ಜ್ಞಾನಿ ಈ ಅಂಕಿತನಾಮದಿಂದ ಬರೆಯುತ್ತಾರೆ ೧೬.೪.೨೦೦೭, ಸಾಯಂ. ೬.೧೩)

೩. ನೋದಕಕ್ಲಿನ್ನಗಾತ್ರಸ್ತು ಸ್ನಾತ ಇತ್ಯಭಿಧೀಯತೇ
– ಮಹಾಭಾರತ, ಪರ್ವ ೧೩, ಅಧ್ಯಾಯ ೧೧೧, ಶ್ಲೋಕ ೯

ಅರ್ಥ : ಶರೀರದ ಅವಯವಗಳು ನೀರಿನಿಂದ ಒದ್ದೆಯಾದರೆ ಅದಕ್ಕೆ ‘ಸ್ನಾನವನ್ನು ಮಾಡಿದವನು’ ಎಂದು ಹೇಳುವುದಿಲ್ಲ. ಇಂದ್ರಿಯನಿಗ್ರಹರೂಪೀ ಜಲದಿಂದ ಯಾವನು ಸ್ನಾನ ಮಾಡುತ್ತಾನೆಯೋ ಅವನು ಅಂತರ್ಬಾಹ್ಯವಾಗಿ ಶುದ್ಧನಾಗುತ್ತಾನೆ.

೪. ನಾಹಿ ನಿರ್ಮಳ ಮನ ಕಾಯ ಕರೀಲ ಸಾಬಣ – ಸಂತ ತುಕಾರಾಮ

ಅರ್ಥ : ಮನಸ್ಸು ನಿರ್ಮಲವಿಲ್ಲದಿದ್ದರೆ, ಸಾಬೂನು ಏನು ಮಾಡುವುದು ? – ಸಂತ ತುಕಾರಾಮ ಮಹಾರಾಜರು

ಉಷ್ಣೋದಕ (ಬಿಸಿನೀರಿನ) ಸ್ನಾನಕ್ಕಾಗಿ ನಿಷಿದ್ಧವಿರುವ ಘಟನೆಗಳು, ವಾರಗಳು ಮತ್ತು ತಿಥಿಗಳು

೧. ಜನ್ಮ ಅಥವಾ ಮರಣದ ನಿಮಿತ್ತ ಮಾಡಬೇಕಾದ ಸ್ನಾನ, ಸಂಕ್ರಾಂತಿಯ ದಿನದ ಸ್ನಾನ ಮತ್ತು ಶ್ರಾದ್ಧದಿವಿಧಿಗಳ ದಿನದ ಸ್ನಾನ

೨. ಆರೋಗ್ಯೇಚ್ಛು, ಪುತ್ರೇಚ್ಛು ಮತ್ತು ಮಿತ್ರೇಚ್ಛು (ಆರೋಗ್ಯ, ಪುತ್ರ ಮತ್ತು ಮಿತ್ರರನ್ನು ಬಯಸುವ) ವ್ಯಕ್ತಿಯು ರವಿವಾರ, ಸಪ್ತಮಿ ಮತ್ತು ಗ್ರಹಣಕಾಲದಲ್ಲಿ ಉಷ್ಣೋದಕದಿಂದ ಸ್ನಾನವನ್ನು ಮಾಡಬಾರದು.

೩. ಹುಣ್ಣಿಮೆ ಅಥವಾ ಅಮಾವಾಸ್ಯೆಯಂದು ಉಷ್ಣೋದಕದಿಂದ ಸ್ನಾನ ಮಾಡಿದರೆ ಗೋಹತ್ಯೆಯ ಪಾಪ ತಗಲುತ್ತದೆ.

(ಆಧಾರ : ಸನಾತನದ ಗ್ರಂಥ ಸ್ನಾನದಿಂದ ಮುಸ್ಸಂಜೆ ಯವರೆಗಿನ ಆಚಾರಗಳ ಹಿಂದಿನ ಶಾಸ್ತ್ರ)

Leave a Comment