ಸ್ನಾನದ ಪೂರ್ವತಯಾರಿ

ಸ್ವಂತದ ತಯಾರಿ

ಅ. ಮೊದಲು ಮಣೆಯ ಮೇಲೆ ಕುಳಿತು ಕೊಂಡು ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳಬೇಕು ಮತ್ತು ಆಮೇಲೆ ಸ್ನಾನ ಮಾಡಬೇಕು.

ಅ ೧. ಶಾಸ್ತ್ರ : ಮಣೆಯಲ್ಲಿ ಪ್ರಜ್ವಲಿತ ಅವಸ್ಥೆಯಲ್ಲಿರುವ ಸೂಕ್ಷ ಅಗ್ನಿಯಿಂದಾಗಿ ದೇಹದ ಸುತ್ತಲೂ ತೇಜದ ಸೂಕ್ಷ ವಾಯುಮಂಡಲವು ತಯಾರಾಗಲು ಸಹಾಯವಾಗುತ್ತದೆ ಮತ್ತು ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ದೇಹದಲ್ಲಿನ ಅಣುರೇಣುಗಳಲ್ಲಿ ಚೇತನವು ಕಾರ್ಯನಿರತವಾಗುತ್ತದೆ : ಸ್ನಾನವನ್ನು ಮಾಡುವುದಕ್ಕಿಂತ ಮೊದಲು ಮಣೆಯ ಮೇಲೆ ಕುಳಿತುಕೊಂಡು ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ಮಣೆಯಲ್ಲಿ ಪ್ರಜ್ವಲಿತ ಅವಸ್ಥೆಯಲ್ಲಿರುವ ಸೂಕ್ಷ್ಮ ಅಗ್ನಿಯಿಂದಾಗಿ ದೇಹದ ಸುತ್ತಲೂ ಆ ಆಗ್ನಿರೂಪಿ ತೇಜದ ಸೂಕ್ಷ್ಮ ವಾಯುಮಂಡಲವು ತಯಾರಾಗುತ್ತದೆ. ಮಣೆಯ ಕೆಳಗೆ ನಿರ್ಮಾಣವಾದ ನಿರ್ಗುಣ ಟೊಳ್ಳು ದೇಹವನ್ನು ಪಾತಾಳದಿಂದ ಹರಡುವ ತೊಂದರೆದಾಯಕ ಸ್ಪಂದನಗಳಿಂದ ರಕ್ಷಿಸುತ್ತದೆ. ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ದೇಹದಲ್ಲಿನ ಅಣುರೇಣುಗಳಲ್ಲಿ ಚೇತನವು ಕಾರ್ಯನಿರತವಾಗುತ್ತದೆ. ಇದರಿಂದ ದೇಹದಲ್ಲಿರುವ ಅಣುರೇಣುಗಳು ಸ್ನಾನದಿಂದ ಸಿಗುವ ಚೈತನ್ಯಮಯ ಲಹರಿಗಳನ್ನು ಗ್ರಹಿಸಿಕೊಳ್ಳಲು ಯೋಗ್ಯರೀತಿಯಲ್ಲಿ ಮತ್ತು ಯೋಗ್ಯ ಪ್ರಮಾಣದಲ್ಲಿ ಸಿದ್ಧವಾಗುತ್ತವೆ.

– ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರವರು ‘ಓರ್ವ ವಿದ್ವಾಂಸ ಈ ಅಂಕಿತನಾಮದಿಂದ ಬರೆಯುತ್ತಾರೆ, ೨೯.೧೦.೨೦೦೭, ಬೆಳಗ್ಗೆ ೯.೪೬)

ಆ. ಶರೀರಕ್ಕೆ ಸುವಾಸನೆ ಎಣ್ಣೆ ಅಥವಾ ಉಟಣೆ ಹಚ್ಚಿಕೊಂಡು ಸ್ನಾನ ಮಾಡಬೇಕು.

ಆ ೧. ಶಾಸ್ತ್ರ – ಸುವಾಸನೆ ಎಣ್ಣೆ ಮತ್ತು ಉಟಣೆ ಇವು ಸಾತ್ತ್ವಿಕವಾಗಿರುವುದರಿಂದ ಸ್ಥೂಲ ಮತ್ತು ಸೂಕ್ಷ್ಮದೇಹದ ಸುತ್ತಲೂ ಇರುವ ತ್ರಾಸದಾಯಕ ಆವರಣವು ನಾಶವಾಗಿ ಶರೀರವು ಶುದ್ಧ ಮತ್ತು ಸಾತ್ತ್ವಿಕ ವಾಗಲು ಸಹಾಯ ವಾಗುತ್ತದೆ : ಸುವಾಸನೆ ಎಣ್ಣೆ ಮತ್ತು ಉಟಣೆಗಳನ್ನು ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗಿರುತ್ತದೆ ಮತ್ತು ಅವು ಸಾತ್ತ್ವಿಕವಾಗಿರುತ್ತವೆ. ಅವುಗಳ ಸುವಾಸನೆಯೂ ಸಾತ್ತ್ವಿಕವಾಗಿರುತ್ತದೆ ಅವುಗಳಲ್ಲಿ ವಾಯುಮಂಡಲದಲ್ಲಿನ ಸಾತ್ತ್ವಿಕತೆಯನ್ನು ಮತ್ತು ದೇವತೆಗಳ ಲಹರಿಗಳನ್ನು ಗ್ರಹಿಸಿಕೊಳ್ಳುವ ಕ್ಷಮತೆಯಿರುತ್ತದೆ. ಸುವಾಸನೆ ಎಣ್ಣೆ ಅಥವಾ ಉಟಣೆಯನ್ನು ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಶರೀರದಲ್ಲಿನ ರಜ-ತಮ ಲಹರಿಗಳು ಕಡಿಮೆಯಾಗುತ್ತವೆ. ಹಾಗೆಯೇ ಸ್ಥೂಲ ಮತ್ತು ಸೂಕ್ಷ್ಮದೇಹದ ಸುತ್ತಲೂ ಇರುವ ತ್ರಾಸದಾಯಕ ಶಕ್ತಿಯ ಆವರಣವು ನಾಶವಾಗಿ ಶರೀರವು ಶುದ್ಧ ಹಾಗೂ ಸಾತ್ತ್ವಿಕ ವಾಗಲು ಸಹಾಯವಾಗುತ್ತದೆ.

ಆ ೧ ಅ. ಸಾಬೂನಿನಿಂದ ಸ್ನಾನ ಮಾಡುವುದರಿಂದ ಸೂಕ್ಷ್ಮದಲ್ಲಿ ಆಗುವ ದುಷ್ಪರಿಣಾಮಗಳು : ರಾಸಾಯನಿಕ ಮತ್ತು ಕೃತಕ ವಸ್ತುಗಳಿಂದ ತಯಾರಿಸಿದ ಸಾಬೂನಿನ ವಾಸನೆಯೂ ಕೃತಕವಾಗಿರುತ್ತದೆ. ಇಂತಹ ಸಾಬೂನುಗಳು ರಜತಮಯುಕ್ತವಾಗಿರುತ್ತವೆ. ಇಂತಹ ಸಾಬೂನುಗಳನ್ನು ಉಪಯೋಗಿಸುವುದರಿಂದ ಸ್ಥೂಲದಲ್ಲಿ ದೇಹವು ಶುದ್ಧವಾಗುತ್ತದೆ, ಆದರೆ ಸೂಕ್ಷ್ಮದಲ್ಲಿ ಸ್ಥೂಲ ಮತ್ತು ಸೂಕ್ಷ್ಮ ದೇಹಗಳ ಸುತ್ತಲೂ ರಜ-ತಮಯುಕ್ತ ಆವರಣವು ತಯಾರಾಗುತ್ತದೆ.

– ಈಶ್ವರ (ಕು. ಮಧುರಾ ಭೋಸಲೆಯವರು ‘ಈಶ್ವರ ಈ ಅಂಕಿತನಾಮದಿಂದ ಬರೆಯುತ್ತಾರೆ, ೧೫.೧೧.೨೦೦೭, ರಾತ್ರಿ ೮.೨೫)

(ಆಧಾರ : ಸನಾತನದ ಗ್ರಂಥ ‘ಸ್ನಾನದಿಂದ ಮುಸ್ಸಂಜೆಯವರೆಗಿನ ಆಚಾರಗಳ ಹಿಂದಿನ ಶಾಸ್ತ್ರ’)

Leave a Comment