ಸ್ನಾನವನ್ನು ತಲೆಯ ಮೇಲಿನಿಂದ ಏಕೆ ಮಾಡಬೇಕು ?

ಅ. ಶಾಸ್ತ್ರ

ತಲೆಯ ಮೇಲಿನಿಂದ ಸ್ನಾನ ಮಾಡುವುದರಿಂದ ಜೀವದ ದೇಹದ ಮೇಲೆ ಬಂದಿರುವ ಆವರಣವು ಮೂಲಬಿಂದುವಿನಿಂದ ವಿಘಟನೆಯಾಗುತ್ತದೆ : ಸಹಸ್ರಾರಚಕ್ರ ಅಥವಾ ಬ್ರಹ್ಮರಂಧ್ರವು ಜೀವದ ದೇಹದ ಮೇಲೆ ಬಂದಿರುವ ಆವರಣದ ಮೂಲಬಿಂದುವಾಗಿರುತ್ತದೆ. ತಲೆಯ ಮೇಲಿನಿಂದ ಸ್ನಾನವನ್ನು ಮಾಡುವುದರಿಂದ ಜೀವದ ದೇಹದ ಮೇಲೆ ಬಂದಿರುವ ಆವರಣವು ಮೂಲಬಿಂದುವಿನಿಂದಲೇ ವಿಘಟನೆಯಾಗುತ್ತದೆ ಇದರಿಂದ ಜೀವದ ಮೇಲೆ ಬಂದಿರುವ ಆವರಣವು ಬೇಗನೇ ವಿಘಟನೆಯಾಗುತ್ತದೆ.

– ಓರ್ವ ಜ್ಞಾನಿ (ಶ್ರೀ. ನಿಷಾದ ದೇಶಮುಖ ಇವರು ಓರ್ವ ಜ್ಞಾನಿ ಈ ಅಂಕಿತನಾಮದಿಂದ ಬರೆಯುತ್ತಾರೆ, ೧೯.೬.೨೦೦೭, ಮಧ್ಯಾಹ್ನ ೩.೫೧)

ಆ. ಅನುಭೂತಿ

ದೇವರು ಹೇಳಿದಂತೆ ತಲೆಯ ಮೇಲಿನಿಂದ ಸ್ನಾನವನ್ನು ಮಾಡಿದ್ದರಿಂದ ಕಿವಿಯ ಮೇಲೆ ಬಂದಿದ್ದ ತ್ರಾಸದಾಯಕ ಆವರಣವು ದುರ್ಗಂಧದ ಮಾಧ್ಯಮದಿಂದ ದೂರವಾಗುವುದು : ೨೦.೧೦.೨೦೦೭ ರಂದು ಬೆಳಗ್ಗೆ ಎದ್ದಾಗಿನಿಂದ ನನ್ನ ಎರಡೂ ಕಿವಿಗಳು ಭಾರವಾದಂತೆ ಆಗಿದ್ದವು. ಕಿವಿಗಳ ಮೇಲೆ ಆವರಣವು ಬಂದಂತೆ ಅನಿಸುತ್ತಿತ್ತು. ನನಗೆ ತಲೆಯ ಮೇಲಿನಿಂದ ಸ್ನಾನ ಮಾಡುವ ವಿಚಾರ ಬಂದಿತು. ಆಮೇಲೆ ಹಾಗೆ ಮಾಡುವುದು ಬೇಡ ಎಂದು ಅನಿಸಿತು. ಆದರೆ ದೇವರು ಹೇಳುತ್ತಿದ್ದಾರೆ ಎಂದು ನಾನು ತಲೆಯ ಮೇಲಿನಿಂದ ಸ್ನಾನವನ್ನು ಮಾಡಿದೆ, ಸ್ನಾನವನ್ನು ಮಾಡುವಾಗ ನನ್ನ ಕೂದಲುಗಳಿಗೆ ಬಹಳ ದುರ್ಗಂಧ ಬರುತ್ತಿತ್ತು. ಸ್ನಾನವಾದ ನಂತರ ಕಿವಿಯ ಮೇಲೆ ಬಂದಿದ್ದ ತ್ರಾಸ ದಾಯಕ ಆವರಣವು ದೂರವಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿತು. ಆಗ ದೇವರು ಪರಿಹಾರೋಪಾಯ ಹೇಳಿದ ಬಗ್ಗೆ ನನಗೆ ಅವನಲ್ಲಿ ಬಹಳ ಕೃತಜ್ಞತೆ ಮೂಡಿತು. – ಓರ್ವ ಸಾಧಕಿ, ಸನಾತನ ಆಶ್ರಮ, ದೇವದ, ಪನವೇಲ.

ಇ. ಶ್ಲೋಕವನ್ನು ಹೇಳುತ್ತಾ ಹಿತ್ತಾಳೆಯ ರಜೋಗುಣಿ ತಂಬಿಗೆಯಿಂದ ನೀರನ್ನು ತಲೆಯ ಮೇಲೆ ಹಾಕಿಕೊಳ್ಳಬೇಕು

ಇ ೧. ಶಾಸ್ತ್ರ

ಬ್ರಹ್ಮರಂಧ್ರಕ್ಕೆ ಜಾಗೃತಿಯು ಬಂದು ಕಡಿಮೆ ಕಾಲಾವಧಿಯಲ್ಲಿ ಸಂಪೂರ್ಣ ದೇಹದಲ್ಲಿ ಚೈತನ್ಯವು ಸಂಕ್ರಮಣವಾಗಲು ಸಹಾಯವಾಗುವುದು : ಹಿತ್ತಾಳೆಯ ರಜೋಗುಣೀ ತಂಬಿಗೆಯ ಸಹಾಯದಿಂದ ಗಂಗಾಳ (ಸ್ನಾನಕ್ಕೆ ನೀರು ತುಂಬಿಸುವ ತಾಮ್ರದ ಪಾತ್ರೆ)ದಿಂದ ನೀರನ್ನು ತೆಗೆದುಕೊಂಡು ವಿವಿಧ ಶ್ಲೋಕಗಳನ್ನು ಹೇಳುತ್ತಾ, ನೀರಿನಲ್ಲಿನ ಸಾತ್ತ್ವಿಕತೆಯನ್ನು ಹೆಚ್ಚಿಸುತ್ತಾ ತಲೆಯ ಮೇಲೆ ಹಾಕಿಕೊಳ್ಳಬೇಕು. ಇದರಿಂದ ಬ್ರಹ್ಮರಂಧ್ರಕ್ಕೆ ಜಾಗೃತಿಯು ಬಂದು ಕಡಿಮೆ ಕಾಲಾವಧಿಯಲ್ಲಿ ಸಂಪೂರ್ಣ ದೇಹದಲ್ಲಿ ಚೈತನ್ಯವು ಸಂಕ್ರಮಣವಾಗಲು ಸಹಾಯವಾಗುತ್ತದೆ.

ಇ ೨. ತಾಮ್ರ ಮತ್ತು ಹಿತ್ತಾಳೆಯ ವೈಶಿಷ್ಟಗಳು : ನೀರನ್ನು ಸಂಗ್ರಹಿಸಿಡಲು ಸತ್ತ್ವಗುಣಿ ತಾಮ್ರದ ಮತ್ತು ನೀರನ್ನು ತೆಗೆಯಲು ಮತ್ತು ಕ್ರಿಯೆಗೆ ವೇಗವನ್ನು ಕೊಡಲು ರಜೋಗುಣೀ ಹಿತ್ತಾಳೆಯ ತಂಬಿಗೆಯನ್ನು ಉಪಯೋಗಿಸಲಾಗುತ್ತದೆ, ಅಂದರೆ ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಿಷಯವನ್ನು ಅದರ ಕಾರ್ಯಕಾರಿ ತತ್ತ್ವರೂಪಿ ಗುಣಧರ್ಮಕ್ಕನುಸಾರವಾಗಿ ಆಯಾಯ ಸ್ಥಳಗಳಲ್ಲಿ ಹೇಗೆ ವೈಶಿಷ್ಟ್ಯಪೂರ್ಣ ರೀತಿಯಲ್ಲಿ ಚಾತುರ್ಯದಿಂದ ಉಪಯೋಗಿಸಲಾಗುತ್ತದೆ ಎಂಬುದು ಗಮನಕ್ಕೆ ಬರುತ್ತದೆ.

– ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರವರು ಓರ್ವ ವಿದ್ವಾಂಸ ಈ ಅಂಕಿತ ನಾಮದಿಂದ ಬರೆಯುತ್ತಾರೆ, ೨೯.೧೦.೨೦೦೭, ಬೆಳಗ್ಗೆ ೯.೪೬)

ನವದ್ವಾರಗಳನ್ನು ಸ್ವಚ್ಚಗೊಳಿಸುವುದು

೨ ಕಿವಿಗಳು, ೨ ಕಣ್ಣುಗಳು, ೨ ಮೂಗಿನ ಹೊಳ್ಳೆಗಳು, ೧ ಬಾಯಿ, ೧ ಗುದ ಮತ್ತು ೧ ಉಪಸ್ಥ (ಜನನೇಂದ್ರಿಯ) ಹೀಗೆ ೯ ದ್ವಾರಗಳಿವೆ. ಪ್ರತಿದಿನ ಬೆಳಗ್ಗೆ ಸ್ನಾನದ ಸಮಯದಲ್ಲಿ ಅವುಗಳನ್ನು ಸ್ವಚ್ಛಗೊಳಿಸಬೇಕು. – ದಕ್ಷಸ್ಮೃತಿ

ಶಾಸ್ತ್ರ

ನವದ್ವಾರಗಳಿಂದ ಹೊರಬೀಳುವ ರಜ-ತಮಾತ್ಮಕ ಲಹರಿಗಳು ನೀರಿನಲ್ಲಿ ಕೂಡಿಕೊಂಡು, ಆಯಾ ದ್ವಾರಗಳಿಂದ ಸಾತ್ತ್ವಿಕ ಲಹರಿಗಳನ್ನು ಒಳಗೆ ತೆಗೆದುಕೊಳ್ಳಲು ದೇಹವು ಸಮರ್ಥವಾಗುವುದು : ದೇಹದಿಂದ ವಾಯುಮಂಡಲದಲ್ಲಿ ಹೊರಹೋಗುವ ರಜ-ತಮಾತ್ಮಕ ಲಹರಿಗಳ ವಾಯುಪ್ರಕ್ಷೇಪಣೆಯ ಕ್ರಿಯೆಗೆ ಈ ಒಂಬತ್ತು ಸ್ಥಾನಗಳು ಸಂಬಂಧಿಸಿರುವುದರಿಂದ, ಈ ಸ್ಥಾನಗಳನ್ನು (ದ್ವಾರಗಳನ್ನು) ನೀರಿನಿಂದ ಸ್ವಚ್ಛಗೊಳಿಸಿದರೆ ಈ ದ್ವಾರದಿಂದ ಹೊರಬೀಳುವ ರಜ-ತಮಾತ್ಮಕ ಲಹರಿಗಳು ನೀರಿನಲ್ಲಿ ವಿಲೀನವಾಗುತ್ತವೆ. ಇದರಿಂದಾಗಿ ದೇಹವು ನಿಜವಾದ ಅರ್ಥದಲ್ಲಿ ಶುದ್ಧವಾಗುತ್ತದೆ ಮತ್ತು ಸಾತ್ತ್ವಿಕ ಲಹರಿಗಳನ್ನು ಆಯಾ ದ್ವಾರಗಳಿಂದ ಒಳಗೆ ತೆಗೆದುಕೊಳ್ಳಲು ಸಮರ್ಥವಾಗುತ್ತದೆ. ಆದುದರಿಂದ ಪ್ರತಿದಿನ ಬೆಳಗ್ಗೆ ಸ್ನಾನವನ್ನು ಮಾಡುವಾಗ ಸುತ್ತಲೂ ಇರುವ ಸಾತ್ತ್ವಿಕ ವಾಯುಮಂಡಲದ ಸಾಮರ್ಥ್ಯದಿಂದ ನೀರಿನ ಸರ್ವಸಮಾವೇಶಕ ಸ್ಪರ್ಶದಿಂದ ಈ ಎಲ್ಲ ಸ್ಥಾನಗಳನ್ನು ಶುದ್ಧ ಅಂದರೆ ಸ್ವಚ್ಛಗೊಳಿಸಬೇಕು ಎಂದು ಹೇಳಲಾಗಿದೆ.

– ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರವರು ಓರ್ವ ವಿದ್ವಾಂಸ ಈ ಅಂಕಿತ ನಾಮದಿಂದ ಬರೆಯುತ್ತಾರೆ, ೨೫.೧೨.೨೦೦೭, ರಾತ್ರಿ ೮.೨೮)

(ಆಧಾರ : ಸನಾತನದ ಗ್ರಂಥ ಸ್ನಾನದಿಂದ ಮುಸ್ಸಂಜೆಯ ವರೆಗಿನ ಆಚಾರಗಳ ಹಿಂದಿನ ಶಾಸ್ತ್ರ)

Leave a Comment