ಸ್ನಾನ ಮಾಡುವ ಪದ್ಧತಿ

ಸ್ತ್ರೀಯರು ಮೊದಲು ಜಡೆ ಹಾಕಿಕೊಂಡು ನಂತರವೇ ಸ್ನಾನ ಮಾಡುವುದು ಯೋಗ್ಯವಾಗಿದೆ

ಅ. ಶಾಸ್ತ್ರ

ಜಡೆ ಹಾಕಿಕೊಳ್ಳುವ ಪ್ರಕ್ರಿಯೆಯಿಂದ ದೇಹದಲ್ಲಾಗಿರುವ ರಜ-ತಮಾತ್ಮಕ ಲಹರಿಗಳ ಸಂಕ್ರಮಣವು ಸ್ನಾನದಿಂದಾಗುವ ದೇಹದ ಶುದ್ಧಿಯಿಂದ ನಾಶವಾಗುತ್ತದೆ : ಎಷ್ಟೋ ಸ್ತ್ರೀಯರು, ಕೂದಲು ಅಸ್ತವ್ಯಸ್ತವಾಗುತ್ತವೆ ಎಂದು ಸ್ನಾನವಾದ ನಂತರ ಜಡೆ ಹಾಕಿಕೊಳ್ಳುತ್ತಾರೆ. ಆದರೆ ಮೊದಲು ಜಡೆ ಹಾಕಿಕೊಂಡು ನಂತರ ಸ್ನಾನ ಮಾಡುವ ಪದ್ಧತಿಯಿದೆ. ಜಡೆ ಹಾಕಿಕೊಳ್ಳುವ ಪ್ರಕ್ರಿಯೆಯಿಂದ ದೇಹದಲ್ಲಿ ನಿರ್ಮಾಣವಾಗಿರುವ ರಜ-ತಮದ ಸಂಕ್ರಮಣವು ಸ್ನಾನದಿಂದಾದ ದೇಹಶುದ್ಧಿಯಿಂದ ನಾಶವಾಗುತ್ತದೆ. ಬದಲಾಗಿ ಸ್ನಾನದ ನಂತರ ಜಡೆ ಹಾಕಿಕೊಳ್ಳುವುದರಿಂದ ದೇಹವು ಮತ್ತೆ ಅಶುದ್ಧವಾಗುತ್ತದೆ. ಇದರಿಂದ ಗಮನಕ್ಕೆ ಬರುವುದೇನೆಂದರೆ ಕಲಿಯುಗದಲ್ಲಿನ ಮನುಷ್ಯನು ಕೇವಲ ಬಾಹ್ಯ ಸ್ವಚ್ಛತೆಯ ಕಡೆಗೆ ಅಂದರೆ ದೇಹದ ಬಾಹ್ಯ ಸೌಂದರ್ಯದ ಕಡೆಗೆ ಹೆಚ್ಚು ಗಮನ ಕೊಡುವವನಾಗಿದ್ದು ಅವನು ಜೀವನದ ಅಧ್ಯಾತ್ಮೀಕರಣ ಮಾಡುವ ಸಿದ್ಧಾಂತದಿಂದ, ಅಂದರೆ ನಿಜವಾದ ಆಚಾರಗಳಿಂದ ದೂರ ಹೋಗಿದ್ದಾನೆ.

– ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರವರು ಓರ್ವ ವಿದ್ವಾಂಸ ಈ ಅಂಕಿತನಾಮದಿಂದ ಬರೆಯುತ್ತಾರೆ, ೨೯.೧೦.೨೦೦೭, ಬೆಳಗ್ಗೆ ೯.೪೬)

ಆ. ಅನುಭೂತಿ

ಸ್ನಾನದ ನಂತರ ಜಡೆ ಹಾಕಿಕೊಳ್ಳುವುದರಿಂದ ಮುಖದ ಮೇಲೆ ತ್ರಾಸದಾಯಕ ಶಕ್ತಿಯ ಆವರಣ ಬರುವುದರ ಪ್ರಮಾಣವು ಹೆಚ್ಚಾಗುವುದು ಮತ್ತು ಸ್ನಾನದ ಮೊದಲು ಜಡೆ ಹಾಕಿಕೊಳ್ಳುವುದರಿಂದ ಮುಖದ ಮೇಲೆ ಆವರಣ ಬರುವುದು ಮತ್ತು ತಲೆಯ ಮೇಲೆ ಒತ್ತಡವಾಗುವುದರ ಪ್ರಮಾಣವು ಕಡಿಮೆಯಾಗಿ ಉತ್ಸಾಹವು ಹೆಚ್ಚು ಹೊತ್ತು ಉಳಿದುಕೊಳ್ಳುವುದು : ಚಿಕ್ಕಂದಿನಿಂದಲೂ ನನಗೆ ಸ್ನಾನ ಮಾಡುವ ಮೊದಲು ಜಡೆ ಹಾಕಿಕೊಳ್ಳುವ ಅಭ್ಯಾಸವಿತ್ತು. ೧೯೯೧ ರಲ್ಲಿ ನಾನು ಮಹಾವಿದ್ಯಾಲಯಕ್ಕೆ ಹೋಗಲು ಪ್ರಾರಂಭಿಸಿದ ನಂತರ ಆ ಅಭ್ಯಾಸವು ಬಿಟ್ಟುಹೋಯಿತು. ಆಗ ನಾನು ಸ್ನಾನದ ನಂತರ ಜಡೆ ಹಾಕಿಕೊಳ್ಳಲು ಪ್ರಾರಂಭಿಸಿದುದರಿಂದ ನನ್ನ ಮುಖದ ಮೇಲೆ ತ್ರಾಸದಾಯಕ ಶಕ್ತಿಯ ಆವರಣ ಬರುವುದರ ಪ್ರಮಾಣವು ಹೆಚ್ಚಾಯಿತು. ಇದರ ತುಲನೆಯಲ್ಲಿ ಸ್ನಾನ ಮಾಡುವ ಮೊದಲು ಜಡೆ ಹಾಕಿಕೊಂಡರೆ ಮುಖದ ಮೇಲೆ ಆವರಣ ಬರುವುದರ ಮತ್ತು ತಲೆಯ ಮೇಲೆ ಒತ್ತಡ ಬರುವುದರ ಪ್ರಮಾಣವು ಕಡಿಮೆಯಾಗಿ ನನ್ನ ಉತ್ಸಾಹವು ಹೆಚ್ಚು ಹೊತ್ತು ಉಳಿದುಕೊಂಡಿರುತ್ತದೆ ಎಂದು ನನಗೆ ಅರಿವಾಯಿತು. ಆದುದರಿಂದ ಕಳೆದ ಕೆಲವು ತಿಂಗಳುಗಳಿಂದ ನಾನು ಮತ್ತೆ ಸ್ನಾನದ ಮೊದಲು ಜಡೆ ಹಾಕಿಕೊಳ್ಳುವುದನ್ನು ಪ್ರಾರಂಭಿಸಿದ್ದೇನೆ. – ಕು. ಸ್ವಪ್ನಾ ಜೋಶಿ, ಸೋಲಾಪುರ. (೧೨.೧೨.೨೦೦೭)

ನಗ್ನರಾಗಿ ಸ್ನಾನ ಮಾಡಬಾರದು

ನಗ್ನತೆಯು ದೇಹದಲ್ಲಿನ ರಂಧ್ರಗಳಿಂದ ಸೂಕ್ಷ್ಮ ರಜ-ತಮಾತ್ಮಕ ವಾಯುವನ್ನು ಹೊರಗೆ ಹಾಕುವುದಕ್ಕೆ ಪೂರಕವಾಗಿರುವ ಸ್ಥಿತಿಯಾಗಿರುತ್ತದೆ. ಈ ಸ್ಥಿತಿಯು ವಾತಾವರಣದಲ್ಲಿ ತನ್ನ ಒಂದು ರಜ – ತಮಾತ್ಮಕ ವಾಯುಭರಿತ ಮಂಡಲವನ್ನು ತಯಾರಿಸುತ್ತದೆ. ಯೋನಿ ಮಾರ್ಗದಿಂದ ಅಥವಾ ಗುದದ್ವಾರದ ಮಾರ್ಗದಿಂದಾಗುವ ನಿರುಪಯುಕ್ತ ವಾಯುವಿಗೆ ಬಾಹ್ಯ ವಾಯುಮಂಡಲದಲ್ಲಿನ ರಜ-ತಮಾತ್ಮಕ ಲಹರಿಗಳ ಸ್ಪರ್ಶವಾಗುವುದರಿಂದ ಈ ಮಾರ್ಗಗಳ ಕಡೆಗೆ ಪಾತಾಳದಿಂದ ಪ್ರಕ್ಷೇಪಿತವಾಗುವ ತೊಂದರೆದಾಯಕ ಸ್ಪಂದನಗಳು ಆಕರ್ಷಿತವಾಗಿ ಸಂಪೂರ್ಣ ದೇಹವು ರಜ-ತಮದಿಂದ ತುಂಬುತ್ತದೆ. ಇಂತಹ ಸ್ಥಿತಿಯಲ್ಲಿ ಸ್ನಾನ ಮಾಡಿದರೆ ಸ್ನಾನದಿಂದ ವಿಶೇಷ ಲಾಭವಾಗುವುದಿಲ್ಲ. ಇದಕ್ಕೆ ವಿರುದ್ಧವಾಗಿ ಅಂತರ್ವಸ್ತ್ರದಿಂದ ಸೊಂಟದಲ್ಲಿ ನಿರ್ಮಾಣವಾಗುವ ಒತ್ತಡದಿಂದಾಗಿ ಮಣಿಪುರಚಕ್ರವು ಜಾಗೃತಸ್ಥಿತಿಯಲ್ಲಿ ಉಳಿದುಕೊಂಡು ನಿರುಪಯುಕ್ತ ವಾಯುವನ್ನು ಒಳಗಿಂದೊಳಗೆ ಟೊಳ್ಳಿನಲ್ಲಿಯೇ ವಿಘಟನೆ ಮಾಡುತ್ತದೆ. ಮಣಿಪುರಚಕ್ರವು ಜಾಗೃತ ಸ್ಥಿತಿಗೆ ಬರುವುದರಿಂದ ಸ್ನಾನದಿಂದ ಸಿಗುವ ಸಾತ್ತ್ವಿಕ ಲಹರಿಗಳನ್ನು ಗ್ರಹಿಸಿಕೊಳ್ಳಲು ದೇಹವು ಸಂವೇದನಾಶೀಲ ವಾಗುತ್ತದೆ. ಇದರಿಂದ ಜೀವಕ್ಕೆ ಲಾಭವು ದೊರಕಿ ಸ್ನಾನದ ಆಚಾರವು ಮಂಗಲಕರವಾಗುತ್ತದೆ.

– ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಈ ಅಂಕಿತನಾಮದಿಂದ ಬರೆಯುತ್ತಾರೆ, ೨೫.೧೨.೨೦೦೭, ರಾತ್ರಿ ೮)

ಸ್ನಾನವನ್ನು ಮಾಡುವಾಗ ಕಾಲುಗಳನ್ನು ಮಡಚಿಕೊಂಡು ಏಕೆ ಕುಳಿತುಕೊಳ್ಳಬೇಕು ?

ಅ. ಶಾಸ್ತ್ರ

ನಿಂತು ಸ್ನಾನವನ್ನು ಮಾಡುವುದರಿಂದ ನಮ್ಮ ಶರೀರದ ಮೇಲಿನ ಮಾಲಿನ್ಯದೊಂದಿಗೆ ನೆಲದ ಮೇಲೆ ಬೀಳುವ ನೀರು ಭೂಮಿಯಲ್ಲಿನ ತ್ರಾಸದಾಯಕ ಶಕ್ತಿಯ ಸ್ಥಾನಗಳನ್ನು ಜಾಗೃತ ಗೊಳಿಸುತ್ತದೆ. ಇದರಿಂದ ಭೂಮಿಯಿಂದ ತ್ರಾಸದಾಯಕ ಶಕ್ತಿಯು ಕಾರಂಜಿಯಂತೆ ಹೊರಗೆ ಚಿಮ್ಮಿ ಮತ್ತೊಮ್ಮೆ ನಮ್ಮ ದೇಹವನ್ನು ರಜ-ತಮಯುಕ್ತಗೊಳಿಸುತ್ತದೆ. ಆದುದರಿಂದ ಸ್ನಾನವನ್ನು ಮಾಡುವಾಗ ಕಾಲುಗಳನ್ನು ಮಡಚಿಕೊಂಡು ಕುಳಿತುಕೊಳ್ಳಬೇಕು.

– ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರವರು ಓರ್ವ ವಿದ್ವಾಂಸ ಈ ಅಂಕಿತ ನಾಮದಿಂದ ಬರೆಯುತ್ತಾರೆ, ೨೯.೧೦.೨೦೦೭ ಬೆಳಗ್ಗೆ ೯.೪೬)

ಆ. ಲಾಭಗಳು

೧. ಕಾಲುಗಳನ್ನು ಮಡಚಿಕೊಂಡು (ಚಕ್ಕಳಮಕ್ಕಳ) ಕುಳಿತಾಗ ದೇಹವು ತ್ರಿಕೋನಾಕಾರವಾಗುತ್ತದೆ; ಇದರಿಂದ ಸ್ನಾನದಿಂದ ಸುಲಭವಾಗಿ ಸಂರಕ್ಷಣಾಕವಚ ನಿರ್ಮಾಣವಾಗುತ್ತದೆ.

೨. ಕಾಲುಗಳನ್ನು ಮಡಚಿ ಕುಳಿತುಕೊಂಡು ಸ್ನಾನವನ್ನು ಮಾಡುವುದರಿಂದ ದೇಹದ ಮೇಲಿನ ಆವರಣವು ಬ್ರಹ್ಮಾಂಡ ತ್ರಿಶಂಕುವಿನ (ಟಿಪ್ಪಣಿ ೧) ಬಾಹ್ಯ ಆವರಣದೊಂದಿಗೆ ಸಂಲಗ್ನವಾಗುತ್ತದೆ. ಇದರಿಂದ ಜೀವಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಚೈತನ್ಯ ಸಿಗುತ್ತದೆ ಮತ್ತು ಅದರ ದೇಹದ ಮೇಲಿನ ಕಪ್ಪು ಆವರಣ ವಿಘಟನೆಯಾಗುತ್ತದೆ.

೩. ಕಾಲುಗಳನ್ನು ಮಡಚಿ ಕುಳಿತುಕೊಳ್ಳುವುದರಿಂದ ಸ್ವಲ್ಪ ಪ್ರಮಾಣದಲ್ಲಿ ಸುಷುಮ್ನಾ ನಾಡಿಯೂ ಜಾಗೃತವಾಗುತ್ತದೆ. ಇದರಿಂದ ಸ್ನಾನದಿಂದ ಪ್ರಾಪ್ತವಾಗುವ ಚೈತನ್ಯವು ಶರೀರದಲ್ಲಿ ಹೆಚ್ಚು ಕಾಲ ಉಳಿಯುತ್ತದೆ.

– ಓರ್ವ ಜ್ಞಾನಿ (ಶ್ರೀ. ನಿಷಾದ ದೇಶಮುಖ ಇವರು ಓರ್ವ ಜ್ಞಾನಿ ಈ ಅಂಕಿತನಾಮದಿಂದ ಬರೆಯುತ್ತಾರೆ, ೬.೫.೨೦೦೮, ಸಾಯಂಕಾಲ ೭.೪೭)

ಟಿಪ್ಪಣಿ ೧ – ಈಶ್ವರನಿಂದ ಬರುವ ಲಹರಿಗಳು ತ್ರಿಶಂಕುವಿನ (ತ್ರಿಕೋನೀ) ಸ್ವರೂಪದಲ್ಲಿ ಬರುತ್ತವೆ. ಕಾಲುಗಳನ್ನು ಮಡಚಿ ಕುಳಿತುಕೊಳ್ಳುವುದರಿಂದ ಈ ಲಹರಿಗಳೊಂದಿಗೆ ಜೀವದ ಸಂಲಗ್ನತೆಯಾಗಿ ಅದಕ್ಕೆ ಈ ಲಹರಿಗಳನ್ನು ಹೆಚ್ಚು ಪ್ರಮಾಣದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ.

(ಆಧಾರ : ಸನಾತನದ ಗ್ರಂಥ ಸ್ನಾನದಿಂದ ಮುಸ್ಸಂಜೆಯವರೆಗಿನ ಆಚಾರಗಳ ಹಿಂದಿನ ಶಾಸ್ತ್ರ)

Leave a Comment