ಉಷ್ಣತೆಯ ರೋಗಗಳಿಗೆ ಮನೆಔಷಧಿ

ಉಷ್ಣತೆಯ ರೋಗಗಳ ಕೆಲವು ಲಕ್ಷಣಗಳು

ಗಂಟಲಿನಲ್ಲಿ, ಎದೆಯಲ್ಲಿ ಅಥವಾ ಹೊಟ್ಟೆಯಲ್ಲಿ ಉರಿಯಾಗುವುದು; ಮೂತ್ರವಿಸರ್ಜನೆಯ ಸಮಯದಲ್ಲಿ ಉರಿಯುವುದು; ಮೈಮೇಲೆ ಗುಳ್ಳೆಗಳಾಗುವುದು; ಕಣ್ಣು, ಕೈ ಅಥವಾ ಕಾಲುಗಳು ಬಿಸಿಯಾಗುವುದು; ಮಾಸಿಕ ಸರದಿಯ ಸಮಯದಲ್ಲಿ ಅಧಿಕ ರಕ್ತಸ್ತ್ರಾವವಾಗುವುದು; ಶೌಚದ ಮೂಲಕ ರಕ್ತ ಬೀಳುವುದು.

ಮನೆಯ ಔಷಧಿಗಳು

ಅ. ಚಹಾದ ೧ ಚಮಚದಷ್ಟು ಕಾಮಕಸ್ತೂರಿಯ ಬೀಜಗಳು (ಅಥವಾ ತುಳಸಿ) ಬೀಜಗಳು ಕಾಲು ಬಟ್ಟಲು ನೀರಿನಲ್ಲಿ ೮ ಗಂಟೆ ನೆನೆಸಿಡಬೇಕು. ಅನಂತರ ಅದನ್ನು ಒಂದು ಕಪ್ ಹಾಲಿನಲ್ಲಿ (ಟಿಪ್ಪಣಿ ೧) ಹಾಕಿ ಸಾಯಂಕಾಲ ಕುಡಿಯಬೇಕು.

ಟಿಪ್ಪಣಿ ೧. ಹಾಲು ಕುಡಿಯುವ ವಿಷಯದಲ್ಲಿ ಕೆಲವು ನಿಯಮಗಳು : ಔಷಧಿ ಹಾಕಿರುವ ಅಥವಾ ಹಾಕದಿರುವ ಹಾಲು ಕುಡಿಯುವ ಮೊದಲು ೩ ಗಂಟೆ ಮತ್ತು ಹಾಲು ಕುಡಿದ ಮೇಲೆ ಕನಿಷ್ಟಪಕ್ಷ ಒಂದೂವರೆ ಗಂಟೆವರೆ ಏನೂ ತಿನ್ನಬಾರದು.

ಆ. ಮಾರುಕಟ್ಟೆಯಲ್ಲಿ ಸಕ್ಕರೆಯ ಪಾಕದಲ್ಲಿ ತಯಾರಿಸಿರುವ ಗುಲಾಬಿ ಹೂವಿನ ಗಟ್ಟಿಯಾಗಿರುವ ಶರಬತ (ಸಿರಪ) ಸಿಗುತ್ತದೆ. ಅದನ್ನು ೧ ಚಮಚ ಗಟ್ಟಿ ಶರಬತ ೧ ಕಪ್ ಹಾಲಿನಲ್ಲಿ ಹಾಕಿ ಸಾಯಂಕಾಲ ಕುಡಿಯಬೇಕು. ಇದರಲ್ಲಿ ಮೇಲಿನ ಪ್ರಮಾಣದಂತೆ ೧ ಚಮಚದಷ್ಟು ನೆನೆಸಿರುವ ಕಾಮಕಸ್ತೂರಿ ಬೀಜಗಳು (ಅಥವಾ ತುಳಸಿ ಬೀಜಗಳು) ಹಾಕಬಹುದು.

ಇ. ದಿನಕ್ಕೆ ೧-೨ ಸಾರಿ ಆವಶ್ಯಕತೆಗನುಸಾರ ಗುಲಾಬಿಯ ಶರಬತ ಕುಡಿಯಬೇಕು ಅಥವಾ ೧-೨ ಚಮಚ ಗುಲಕಂದ ತಿನ್ನಬೇಕು.’ – ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ. ರಾಮನಾಥಿ, ಗೋವಾ. (೧೮.೨.೨೦೧೮)

ಹೃದಯ, ಹಾಗೆಯೇ ಎಲ್ಲ ಶರೀರಗಳ ರೋಗಗಳಿಗೆ ಆಯುರ್ವೇದ ಔಷಧಿ ತೆಗೆದುಕೊಳ್ಳುವ ಸಮಯ

ಮಧ್ಯಾಹ್ನ ಊಟದ ನಂತರ ತಕ್ಷಣ ಅಥವಾ ಮಧ್ಯಾಹ್ನ ಊಟವಾದ ಮೇಲೆ ಒಂದೂವರೆ ಗಂಟೆಯ ನಂತರ ತೆಗೆದುಕೊಂಡರೆ ಹೃದಯದ ಮೇಲೆ ಹಾಗೆಯೇ ಎಲ್ಲ ಶರೀರಕ್ಕೆ ಆ ಔಷಧಿಯ ಪರಿಣಾಮವಾಗುತ್ತದೆ; ಏಕೆಂದರೆ ಇದು ವ್ಯಾನ ವಾಯುವಿನ ಕಾಲವಾಗಿದೆ. ವ್ಯಾನ ವಾಯು ಇದು ಹೃದಯದ ಆಶ್ರಯದಲ್ಲಿದ್ದು ಇಡೀ ಶರೀರದಲ್ಲಿ ತಿರುಗುವ ವಾಯುವಾಗಿದೆ.

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೮.೨.೨೦೧೮)