ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಕೂದಲನ್ನು ಏಕೆ ತೊಳೆಯಬಾರದು?

೧. ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ರಜ-ತಮಗಳಿಂದ ತುಂಬಿರುವ ವಾಯುಮಂಡಲದಲ್ಲಿ ಕೂದಲನ್ನು ತೊಳೆದರೆ ಕೂದಲುಗಳಿಂದ ತ್ರಾಸದಾಯಕ ಲಹರಿಗಳು ಗ್ರಹಿಸುತ್ತವೆ : ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಕೂದಲನ್ನು ಸ್ವಚ್ಛಗೊಳಿಸುವಾಗ ನೀರಿನ ಸಂಪರ್ಕದಿಂದಾಗಿ ಕೂದಲಿನಲ್ಲಿನ ಅಪತತ್ತ್ವದ ಪ್ರಮಾಣವು ಹೆಚ್ಚಾಗಿ ಕೇಶವಾಹಿನಿಗಳು ಹೆಚ್ಚು ಸಂವೇದನಶೀಲವಾಗುತ್ತವೆ ಮತ್ತು ಅವು ವಾಯುಮಂಡಲದಲ್ಲಿ ಸತತವಾಗಿ ಸುತ್ತುತ್ತಿರುವ ತ್ರಾಸದಾಯಕ ಲಹರಿಗಳಿಗೆ ಕೂಡಲೇ ಸ್ಪಂದಿಸುತ್ತವೆ. ಬಿಚ್ಚುಗೂದಲಿನ ಚಲನ ವಲನದಿಂದ ಕೂದಲಿನ ಟೊಳ್ಳಿನಲ್ಲಿ ಉಷ್ಣ ಘರ್ಷಣೆಯುಕ್ತ ಇಂಧನವು ನಿರ್ಮಾಣವಾಗುತ್ತದೆ, ಈ ಇಂಧನದಲ್ಲಿ ವಾಯುಮಂಡಲದಲ್ಲಿನ ತ್ರಾಸದಾಯಕ ಲಹರಿಗಳು ಘನೀಕರಣವಾಗಿ ತಲೆಯ ಟೊಳ್ಳಿನಲ್ಲಿ ಸಂಕ್ರಮಿತವಾಗುತ್ತವೆ. ಇದರಿಂದ ದೇಹಕ್ಕೆ ವಿದ್ಯುದಾಘಾತವಾದಂತೆ ಅನಿಸುವುದು, ಅಸ್ವಸ್ಥವೆನಿಸುವುದು, ಸಿಡಿಮಿಡಿಗೊಳ್ಳುವುದು ಅಥವಾ ಶರೀರ ಗಟ್ಟಿಯಾಗುವುದು ಮುಂತಾದ ತೊಂದರೆಗಳಾಗುತ್ತವೆ. ಆದುದರಿಂದ ಆದಷ್ಟು ಮಟ್ಟಿಗೆ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ರಜತಮಗಳಿಂದ ತುಂಬಿದ ವಾಯುಮಂಡಲದಲ್ಲಿ ಕೂದಲನ್ನು ತೊಳೆಯಬಾರದು.

೨. ವಾಯುಮಂಡಲದಲ್ಲಿನ ರಜ-ತಮಾತ್ಮಕ ಲಹರಿಗಳು ನಮ್ಮೆಡೆಗೆ ಆಕರ್ಷಿಸಬಾರದೆಂದು ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಸ್ತ್ರೀಯರಂತೆ ಪುರುಷರೂ ಕೂದಲುಗಳನ್ನು ತೊಳೆದುಕೊಳ್ಳಬಾರದು.

೨ ಅ. ಆಚಾರಗಳ ಮಹತ್ವ: ಹಿಂದೂ ಧರ್ಮದಲ್ಲಿ ಹೇಳಿದ ಆಚಾರಗಳು ಎಲ್ಲರನ್ನೂ ರಜ-ತಮದಿಂದ ಮುಕ್ತಗೊಳಿಸುತ್ತವೆ.

೨ ಆ. ಅಮಾವಾಸ್ಯೆಯ ವೈಶಿಷ್ಟ್ಯ: ಅಮಾವಾಸ್ಯೆಯಂದು ಕೆಟ್ಟ ಶಕ್ತಿಗಳ ರಜ-ತಮಾತ್ಮಕ ಪ್ರಕ್ಷೇಪಣೆಯು ಅಧಿಕವಾಗಿರುವುದರಿಂದ ವಾಯುಮಂಡಲವು ಕಲುಷಿತವಾಗಿರುತ್ತದೆ.

೨ ಇ. ಹುಣ್ಣಿಮೆಯ ವೈಶಿಷ್ಟ್ಯ: ಹುಣ್ಣಿಮೆಯಂದು ಕೆಟ್ಟ ಶಕ್ತಿಗಳು ಉಪಾಸನೆಯನ್ನು ಮಾಡುತ್ತವೆ, ಆದುದರಿಂದ ಅವರೆಡೆಗೆ ಬರುವ ರಜ-ತಮಾತ್ಮಕ ಲಹರಿಗಳ ಪ್ರವಾಹವು ಹೆಚ್ಚಿರುತ್ತದೆ.

ಅಂದರೆ ಒಟ್ಟಿನಲ್ಲಿ ಈ ಎರಡೂ ದಿನಗಳಲ್ಲಿ ವಾಯುಮಂಡಲದಲ್ಲಿನ ರಜ-ತಮಾತ್ಮಕ ಲಹರಿಗಳು ಕೆಟ್ಟ ಶಕ್ತಿಗಳ ಕಾರ್ಯದಿಂದ ಜಾಗೃತವಾಗಿರುತ್ತವೆ.

೨ ಈ. ಕೂದಲುಗಳನ್ನು ತೊಳೆಯುವುದರಿಂದ ನೀರಿನಲ್ಲಿನ ಆಪತತ್ತ್ವದ ಸಂಪರ್ಕದಿಂದಾಗಿ ಅವು ರಜ-ತಮಾತ್ಮಕ ಲಹರಿಗಳನ್ನು ಸೆಳೆದುಕೊಳ್ಳಲು ಹೆಚ್ಚು ಸಂವೇದನಾಶೀಲವಾಗುತ್ತವೆ: ಕೂದಲುಗಳು ಮೂಲತಃ ರಜ-ತಮ ಪ್ರಧಾನವಾಗಿರುವುದರಿಂದ, ಅವು ವಾಯುಮಂಡಲದಲ್ಲಿನ ರಜ-ತಮಾತ್ಮಕ ಲಹರಿಗಳನ್ನು ತಮ್ಮೆಡೆಗೆ ಆಕರ್ಷಿಸುವಲ್ಲಿ ಅಗ್ರೇಸರವಾಗಿರುತ್ತವೆ. ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಕೂದಲುಗಳನ್ನು ತೊಳೆದು ಅವುಗಳ ರಜ-ತಮಾತ್ಮಕ ಲಹರಿಗಳನ್ನು ಸೆಳೆದುಕೊಳ್ಳುವ ಸಂವೇದನಾಶೀಲತೆಯನ್ನು ಇನ್ನೂ ಹೆಚ್ಚಿಸಬಾರದು; ಏಕೆಂದರೆ ಕೂದಲುಗಳನ್ನು ತೊಳೆಯುವಾಗ ಅವು ನೀರಿನಲ್ಲಿನ ಆಪತತ್ತ್ವದ ಸಂಪರ್ಕದಿಂದ ರಜ-ತಮಾತ್ಮಕ ಲಹರಿಗಳನ್ನು ಸೆಳೆದುಕೊಳ್ಳುವಲ್ಲಿ ಹೆಚ್ಚು ಸಂವೇದನಾಶೀಲವಾಗುತ್ತವೆ. ಇದರಿಂದ ಆ ವ್ಯಕ್ತಿಗೆ ತೊಂದರೆಯಾಗುತ್ತದೆ.

(ಹೆಚ್ಚಿನ ಮಾಹಿತಿಗಾಗಿ ಓದಿ: ಸನಾತನ ನಿರ್ಮಿಸಿದ ಗ್ರಂಥ ‘ಕೂದಲುಗಳಿಗೆ ತೆಗೆದುಕೊಳ್ಳುವ ಕಾಳಜಿ’)

ಹುಣ್ಣಿಮೆ ಮತ್ತು ಅಮಾವಾಸ್ಯೆಯ ಚಂದ್ರನಿಂದ ನಮ್ಮ ಮೇಲಾಗುವ ಪ್ರಭಾವದಿಂದ ನಮ್ಮನ್ನು ನಾವು ಹೇಗೆ ರಕ್ಷಿಸಬಹುದು ಎಂದು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ!

Leave a Comment