ಊಟಕ್ಕೆ ಕುಳಿತುಕೊಳ್ಳುವಾಗ ದಕ್ಷಿಣ ದಿಕ್ಕಿಗೆ ಏಕೆ ಮುಖ ಮಾಡಬಾರದು?

ಅ. ಯಾರು ದಕ್ಷಿಣ ದಿಕ್ಕಿಗೆ ಮುಖ ಮಾಡಿ, ತಲೆಯ ಮೇಲೆ ಪೇಟಾ ಅಥವಾ ಟೊಪ್ಪಿಯನ್ನು ಹಾಕಿಕೊಂಡು ಅಥವಾ ಕಾಲುಗಳಲ್ಲಿ ಚಪ್ಪಲಿಗಳನ್ನು ಹಾಕಿಕೊಂಡು ಊಟವನ್ನು ಮಾಡುತ್ತಾನೆಯೋ, ಅವನ ಊಟವು ಅಸುರೀ ಊಟವಾಗಿದೆ ಎಂದು ತಿಳಿದುಕೊಳ್ಳಬೇಕು. (ಮಹಾಭಾರತ, ಅನುಶಾಸನಪರ್ವ, ಅಧ್ಯಾಯ ೯೦, ಶ್ಲೋಕ ೧೯)

ಆ. ಅತೃಪ್ತ ಆತ್ಮಗಳಿಂದ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ದಕ್ಷಿಣಕ್ಕೆ ಮುಖ ಮಾಡಿ ಊಟಕ್ಕೆ ಕುಳಿತುಕೊಳ್ಳಬಾರದು : ದಕ್ಷಿಣ ದಿಕ್ಕಿನಲ್ಲಿ ಯಮಲಹರಿಗಳ ಪ್ರಭಾವವು ಹೆಚ್ಚಿಗಿರುವುದರಿಂದ, ಈ ರಜ-ತಮಾತ್ಮಕ ಲಹರಿಗಳ ಅಶುದ್ಧ ಕಕ್ಷೆಯಲ್ಲಿ ಕುಳಿತುಕೊಂಡು ಅನ್ನವನ್ನು ದೂಷಿತಗೊಳಿಸಬಾರದು ಎಂದು ಹೇಳಲಾಗಿದೆ. ಯಮಲಹರಿಗಳ ಪ್ರಭಾವದಿಂದ ಕೂಡಿದ ಅನ್ನವನ್ನು ಸೇವಿಸುವುದರಿಂದ ಅನೇಕ ಅತೃಪ್ತ ಆತ್ಮಗಳಿಂದ ತೊಂದರೆಯಾಗುವ ಸಾಧ್ಯತೆ ಇರುವುದರಿಂದ, ಅಶುಭ ದಕ್ಷಿಣ ದಿಕ್ಕಿನ ಕಡೆಗೆ ಮುಖ ಮಾಡಿ ಊಟಕ್ಕೆ ಕುಳಿತುಕೊಳ್ಳಬಾರದು ಎಂಬ ನಿಯಮವಿದೆ.
– ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೬.೩.೨೦೦೮ ಬೆಳಗ್ಗೆ ೧೦.೫೧)

ಪೂರ್ವಕ್ಕೆ ಮುಖ ಮಾಡಿ ಊಟ ಮಾಡಬೇಕು

ಪ್ರಾಂಗ್ಮುಖೋನ್ನಾನಿ ಬುಂಜೀತ್ತೋಚ್ಚರೇದ್‌ದಕ್ಷಿಣಾಮುಖಃ |
ಉದಂಗ್ಮುಖೋ ಮೂತ್ರಂ ಕುರ್ಯಾತ್ಪ್ರತ್ಯಕ್ಪಾದಾವನೇಜನಮಿತಿ ||
– ಆಪಸ್ತಂಬಧರ್ಮಸೂತ್ರ, ಪ್ರಶ್ನೆ ೧, ಪಟಲ ೧೧, ಕಾಂಡಿಕಾ ೩೧, ಸೂತ್ರ ೧

ಅರ್ಥ : ಪೂರ್ವಕ್ಕೆ ಮುಖ ಮಾಡಿ ಊಟವನ್ನು ಮಾಡಬೇಕು, ದಕ್ಷಿಣಕ್ಕೆ ಮುಖ ಮಾಡಿ ಮಲ ವಿಸರ್ಜನೆ ಮಾಡಬೇಕು, ಉತ್ತರಕ್ಕೆ ಮುಖ ಮಾಡಿ ಮೂತ್ರ ವಿಸರ್ಜನೆ ಮಾಡಬೇಕು ಮತ್ತು ಪಶ್ಚಿಮಕ್ಕೆ ಮುಖ ಮಾಡಿ ಕಾಲುಗಳನ್ನು ತೊಳೆದುಕೊಳ್ಳಬೇಕು.

ಅ. ಊಟವನ್ನು ಮಾಡುವಾಗ ಪೂರ್ವಕ್ಕೆ ಮುಖ ಮಾಡಿ ಏಕೆ ಕುಳಿತುಕೊಳ್ಳಬೇಕು? : ಧರ್ಮಾಚಾರದ ಪ್ರಕಾರ ಆಯಾ ದಿಕ್ಕಿಗೆ ಆಯಾ ವಾಯುಮಂಡಲದಲ್ಲಿ ಆಯಾ ಕೃತಿಗಳನ್ನು ಮಾಡುವುದರಿಂದ, ವಾಯುಮಂಡಲದ ಸ್ವಾಸ್ಥ್ಯವು ಕೆಡದೇ ಬ್ರಹ್ಮಾಂಡದಲ್ಲಿನ ಆಯಾ ಶಕ್ತಿರೂಪಿ ವೇಗಲಹರಿಗಳಲ್ಲಿ ಯೋಗ್ಯ ಸಮತೋಲನವನ್ನು ಕಾಯ್ದುಕೊಳ್ಳಬಹುದು.

ಪೂರ್ವ ದಿಕ್ಕು ತೇಜಕ್ಕೆ ಪೂರಕವಾಗಿದೆ. ಅನ್ನವನ್ನು ಸೇವಿಸುವುದು ಒಂದು ಯಜ್ಞಕರ್ಮವಾಗಿದೆ. ಈ ಯಜ್ಞಕರ್ಮವನ್ನು ಪೂರ್ವ ದಿಕ್ಕಿನಲ್ಲಿನ ತೇಜಸ್ಸಿನ ಶಕ್ತಿಯಿಂದ ಪಿಂಡದಲ್ಲಿ ಸಂಕ್ರಮಿತಗೊಳಿಸಿದರೆ ಊಟವನ್ನು ಮಾಡುವ ಕೃತಿಗೆ ವೇಗವನ್ನು ಕೊಡಲು ಸಾಧ್ಯವಾಗುತ್ತದೆ.

ಆಯಾ ದಿಕ್ಕಿಗೆ ಮುಖ ಮಾಡಿ ಆಯಾ ಲಹರಿಗಳ ಸ್ಪರ್ಶದ ಸ್ತರದಲ್ಲಿ ಆಯಾ ಕರ್ಮಗಳನ್ನು ಮಾಡುವುದರಿಂದ ಪಾಪವು ಪರಿಹಾರವಾಗಿ ಪುಣ್ಯ ಸಂಚಯವಾಗಲು ಸಹಾಯವಾಗುತ್ತದೆ.
– ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨.೬.೨೦೦೭, ಮಧ್ಯಾಹ್ನ ೧.೫೯)

(ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನದ ಗ್ರಂಥ ‘ಭೋಜನಕ್ಕೆ ಸಂಬಂಧಿಸಿದ ಆಚಾರಗಳು’)

2 thoughts on “ಊಟಕ್ಕೆ ಕುಳಿತುಕೊಳ್ಳುವಾಗ ದಕ್ಷಿಣ ದಿಕ್ಕಿಗೆ ಏಕೆ ಮುಖ ಮಾಡಬಾರದು?”

Leave a Comment