ಹೊಸ್ತಿಲಿನ ಮೇಲೆ ಕುಳಿತುಕೊಂಡು ಏಕೆ ಸೀನಬಾರದು ?

ಹೊಸ್ತಿಲಿನ ಮೇಲೆ ಕುಳಿತುಕೊಂಡು ಏಕೆ ಸೀನಬಾರದು ?

ಹೊಸ್ತಿಲಿನ ಮೇಲೆ ಕುಳಿತುಕೊಂಡು ಸೀನುವುದರಿಂದ ಉತ್ಪನ್ನವಾಗುವ ನಾದಶಕ್ತಿಯಿಂದ ಹೊಸ್ತಿಲಿನಲ್ಲಿನ ರಜ-ತಮಾತ್ಮಕ ಲಹರಿಗಳು ಕಾರ್ಯನಿರತವಾಗುತ್ತವೆ, ಹಾಗೆಯೇ ಸೀನುವುದರಿಂದ ಪ್ರಕ್ಷೇಪಿತವಾಗುವ ವಾಯುತತ್ತ್ವದ ಲಹರಿಗಳಿಂದ ಹೊಸ್ತಿಲಿನಲ್ಲಿನ ರಜ-ತಮಾತ್ಮಕ ಲಹರಿಗಳು ಕೆಳಗಿನ ದಿಕ್ಕಿನಲ್ಲಿ (ಭೂಮಿಯ ಕಡೆಗೆ) ಪ್ರಕ್ಷೇಪಿತವಾಗದೆ ಮೇಲಿನ ದಿಕ್ಕಿನಲ್ಲಿ (ಆಕಾಶದೆಡೆಗೆ) ಪ್ರಕ್ಷೇಪಿತವಾಗುತ್ತವೆ. ಇದರಿಂದ ವಾಸ್ತುವಿನಲ್ಲಿ ತೊಂದರೆದಾಯಕ ಲಹರಿಗಳ ಸಂಚಾರವು ಹೆಚ್ಚಾಗುತ್ತದೆ; ಆದುದರಿಂದ ಹೊಸ್ತಿಲಿನ ಮೇಲೆ ಕುಳಿತುಕೊಂಡು ಸೀನಬಾರದು.

ಒಂದು ವೇಳೆ ಹೊಸ್ತಿಲಿನ ಮೇಲೆ ಕುಳಿತುಕೊಂಡು ಸೀನಿದರೆ ಹೊಸ್ತಿಲಿನ ಮೇಲೆ ನೀರನ್ನು ಹಾಕಬೇಕೆಂದು ಹೇಳುತ್ತಾರೆ, ಇದರ ಕಾರಣವೇನು?

ಹೊಸ್ತಿಲಿನ ಮೇಲೆ ನೀರನ್ನು ಹಾಕುವುದೆಂದರೆ ಒಂದು ರೀತಿಯಲ್ಲಿ ಮೇಲಿನ ದಿಕ್ಕಿನಲ್ಲಿ ಪ್ರಕ್ಷೇಪಿತವಾಗುವ ರಜ-ತಮಾತ್ಮಕ ಲಹರಿಗಳನ್ನು ಶಾಂತ ಮಾಡುವುದಾಗಿದೆ. ನೀರಿನಲ್ಲಿನ ಪೃಥ್ವಿ ಮತ್ತು ಆಪತತ್ತ್ವಗಳ ಲಹರಿಗಳಿಂದ, ವಾಯುತತ್ತ್ವದ ಆಧಾರದಿಂದ ಮೇಲಿನ ದಿಕ್ಕಿನಲ್ಲಿ ಚಲಿಸುತ್ತಿರುವ ಲಹರಿಗಳಿಗೆ ಜಡತ್ವವು ಪ್ರಾಪ್ತವಾಗುತ್ತದೆ. ಇದರಿಂದ ಆ ಲಹರಿಗಳು ಮತ್ತೆ ಭೂಮಿಯ ಕಡೆಗೆ ಚಲಿಸತೊಡಗುತ್ತವೆ. ಆದುದರಿಂದ ಒಂದು ವೇಳೆ ಹೊಸ್ತಿಲಿನ ಮೇಲೆ ಕುಳಿತುಕೊಂಡು ಸೀನಿದರೆ ಕೂಡಲೇ ಅದರ ಮೇಲೆ ನೀರು ಹಾಕಿ ರಜ-ತಮಾತ್ಮಕ ಲಹರಿಗಳ ಶಮನ ಮಾಡಬೇಕು.

1 thought on “ಹೊಸ್ತಿಲಿನ ಮೇಲೆ ಕುಳಿತುಕೊಂಡು ಏಕೆ ಸೀನಬಾರದು ?”

Leave a Comment