ಪರಾತ್ಪರ ಗುರು ಡಾ. ಆಠವಲೆಯವರ ರಾಷ್ಟ್ರ ಮತ್ತು ಧರ್ಮಕಾರ್ಯದಿಂದ ಪ್ರೇರಣೆ ಪಡೆದು ಪ್ರಾರಂಭವಾದ ಕಾರ್ಯಗಳು

ಪರಾತ್ಪರ ಗುರು ಡಾ. ಆಠವಲೆಯವರ ವಿಚಾರಗಳಿಂದ ಪ್ರೇರಣೆ ಪಡೆದು ಪ್ರಾರಂಭವಾದ ಕಾರ್ಯ ಮತ್ತು ಅದರ ಪರಿಣಾಮಗಳ ಮಾಹಿತಿಯನ್ನು ಮುಂದೆ ಕೊಡಲಾಗಿದೆ.

ಅ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ಹಿಂದೂ ಜನಜಾಗೃತಿ ಸಮಿತಿ’ : ಪರಾತ್ಪರ ಗುರು ಡಾ. ಆಠವಲೆಯವರ ಹಿಂದೂ ರಾಷ್ಟ್ರದ ಸ್ಥಾಪನೆಯ ವಿಚಾರದಿಂದ ಪ್ರೇರಣೆ ಪಡೆದು ೭ ಅಕ್ಟೋಬರ್ ೨೦೦೨ ರಂದು ‘ಹಿಂದೂ ಜನಜಾಗೃತಿ ಸಮಿತಿ’ ಸ್ಥಾಪನೆಯಾಯಿತು. ಧರ್ಮಶಿಕ್ಷಣ, ಧರ್ಮಜಾಗೃತಿ, ಧರ್ಮರಕ್ಷಣೆ, ರಾಷ್ಟ್ರರಕ್ಷಣೆ, ಹಿಂದೂಸಂಘಟನೆ ಇತ್ಯಾದಿಗಳ ಮೂಲಕ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಮಾಡುವುದು ಸಮಿತಿಯ ಧ್ಯೇಯವಾಗಿದೆ. ಸಮಿತಿಯು ಮಾಡುತ್ತಿರುವ ಕಾರ್ಯದಿಂದ ಮುಂದೆ ಕೊಟ್ಟಿರುವ ಪರಿಣಾಮಗಳು ಸಾಧ್ಯವಾಗಿವೆ.

೧. ಎಲ್ಲ ಸಂಪ್ರದಾಯ ಸಭೆಗಳು ಮತ್ತು ನಾಮಮೆರವಣಿಗೆಗಳ ಮೂಲಕ ಸಾಂಪ್ರದಾಯಿಕ ಐಕ್ಯತೆ ಸಾಧ್ಯವಾಯಿತು.

೨. ಹಿಂದೂ ಧರ್ಮಜಾಗೃತಿ ಸಭೆಗಳು ಮತ್ತು ಹಿಂದೂ ಸಂಘಟನಾ ಮೇಳಗಳ ಮೂಲಕ ಲಕ್ಷಗಟ್ಟಲೆ ಹಿಂದೂಗಳಲ್ಲಿ ಧರ್ಮಜಾಗೃತಿ ಆಯಿತು.

೩. ಸ್ವರಕ್ಷಣೆ ಮತ್ತು ಪ್ರಥಮಚಿಕಿತ್ಸೆ ತರಬೇತಿವರ್ಗಗಳು ಹಾಗೂ ಆಪತ್ಕಾಲದಲ್ಲಿನ ಸಹಾಯ ಅಭಿಯಾನಗಳ ಮೂಲಕ ಸಮಾಜಸಹಾಯವಾಯಿತು.

೪. ಸ್ವಭಾಷೆ, ರಾಷ್ಟ್ರ-ಧರ್ಮದ ಹಿತಕ್ಕಾಗಿ ನೂರಾರು ಚಳುವಳಿಗಳು ಯಶಸ್ವಿಯಾದವು.

೫. Hindujagruti.org ಈ ಜಾಲತಾಣದ ಮೂಲಕ ಪ್ರತೀ ತಿಂಗಳು ೮ ಲಕ್ಷಕ್ಕಿಂತಲೂ ಹೆಚ್ಚು ವಾಚಕರಲ್ಲಿ ರಾಷ್ಟ್ರ ಮತ್ತು ಧರ್ಮದ ಜಾಗೃತಿಯಾಗುತ್ತಿದೆ.

೬. ಪ್ರಾಂತೀಯ, ರಾಜ್ಯಮಟ್ಟದ ಹಾಗೂ ಅಖಿಲ ಭಾರತೀಯ ಹಿಂದೂ ಅಧಿವೇಶನಗಳ ಮೂಲಕ ೨೫೦ ಕ್ಕೂ ಹೆಚ್ಚು ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ಸಂಘಟನೆಗಳು ಸಂಘಟಿತವಾದವು.

೭. ಧರ್ಮಪ್ರೇಮಿ ಮಹಿಳೆಯರ ಸಂಘಟನೆಗಾಗಿ ‘ಹಿಂದೂ ಜನಜಾಗೃತಿ ಸಮಿತಿ’ಯ ‘ರಣರಾಗಿಣಿ’ ಶಾಖೆ ಕಾರ್ಯನಿರತವಾಯಿತು. (ಸ್ಥಾಪನೆ : ಸೆಪ್ಟೆಂಬರ್ ೨೦೦೯)

ಆ. ಸಾತ್ತ್ವಿಕ ಮತ್ತು ಧರ್ಮಶಿಕ್ಷಣ ನೀಡುವ ಸಾಧಕ-ಪುರೋಹಿತರನ್ನು ನಿರ್ಮಿಸುವ ‘ಸನಾತನ ಪುರೋಹಿತ ಪಾಠಶಾಲೆ’ (ಸ್ಥಾಪನೆ : ೩೦ ಏಪ್ರಿಲ್ ೨೦೦೮)

ಇ. ಹಿಂದೂ ಸಮಾಜ, ರಾಷ್ಟ್ರ ಮತ್ತು ಧರ್ಮಹಿತಕ್ಕಾಗಿ ಹೋರಾಡುವ ರಾಷ್ಟ್ರ ಮತ್ತು ಧರ್ಮಪ್ರೇಮಿ ನ್ಯಾಯವಾದಿಗಳ ಸಂಘಟನೆ ‘ಹಿಂದೂ ವಿಧಿಜ್ಞ ಪರಿಷತ್ತು’ (ಸ್ಥಾಪನೆ : ೧೪ ಜೂನ್ ೨೦೧೨)

ಈ. ಹಿಂದೂಯೇತರರ ಐಚ್ಛಿಕ ಹಿಂದೂಕರಣ ಮತ್ತು ಮತಾಂತರಿತರ ಐಚ್ಛಿಕ ಶುದ್ಧೀಕರಣಕ್ಕಾಗಿ ಕಾರ್ಯನಿರತ ‘ಸನಾತನ ಹಿಂದೂ ಧರ್ಮದೀಕ್ಷಾ ಕೇಂದ್ರ’ (ಸ್ಥಾಪನೆ : ೫ ಮಾರ್ಚ್ ೨೦೧೪)

ಉ. Balsanskar.com (ಸ್ಥಾಪನೆ : ೧೬.೩.೨೦೧೦) : ಈ ಜಾಲತಾಣವು ಪರಾತ್ಪರ ಗುರು ಡಾ. ಆಠವಲೆಯವರು ಸಂಕಲನ ಮಾಡಿದ ಬಾಲಸಂಸ್ಕಾರ ಗ್ರಂಥಮಾಲಿಕೆಯಲ್ಲಿನ ಜ್ಞಾನವನ್ನು ಆಧರಿಸಿದೆ. ಮಕ್ಕಳಲ್ಲಿ ಸುಸಂಸ್ಕಾರಗಳನ್ನು ಮೂಡಿಸುವ ಈ ಜಾಲತಾಣವು ಪಾಲಕರಿಗೆ ಮತ್ತು ಶಿಕ್ಷಕರಿಗೆ ಉಪಯುಕ್ತವಾಗಿದೆ.

ಊ. ಹಿಂದೂ ಸಂಘಟನೆಗಳ ವಕ್ತಾರರ ಮತ್ತು ಪ್ರವಕ್ತಾರರ ವೈಚಾರಿಕ ಸಹಾಯಕ್ಕಾಗಿ ‘ಸನಾತನ ಅಧ್ಯಯನ ಕೇಂದ್ರ’ (ಸ್ಥಾಪನೆ : ೧ ಡಿಸೆಂಬರ್ ೨೦೧೫) : ವಿವಿಧ ವಿಚಾರಗೋಷ್ಠಿಗಳು, ಕಾರ್ಯಕ್ರಮಗಳು ಮತ್ತು ದೂರದರ್ಶನವಾಹಿನಿಗಳಲ್ಲಿನ ಚರ್ಚಾಕೂಟಗಳಲ್ಲಿ ಹಿಂದೂ ಧರ್ಮದ ಪರವಾಗಿ ಮಾತನಾಡಲು ಹಿಂದುತ್ವನಿಷ್ಠ ಸಂಘಟನೆಗಳ ವಕ್ತಾರರಿಗೆ (ಭಾಷಣಕಾರರಿಗೆ) ಮತ್ತು ಪ್ರವಕ್ತಾರರಿಗೆ ವೈಚಾರಿಕ ಸಹಾಯ ನೀಡುವ ಕಾರ್ಯವನ್ನು ‘ಸನಾತನ ಅಧ್ಯಯನ ಕೇಂದ್ರ’ದ ಮೂಲಕ ಮಾಡಲಾಗುತ್ತ್ತಿದೆ.

Leave a Comment