ಶಾಸ್ತ್ರದಲ್ಲಿ ಹೇಳಿದ ಸಾಯಂಕಾಲದ (ಸಂಧಿಕಾಲದ) ನಿಷಿದ್ಧ ಕರ್ಮಗಳು

ಆರೋಹಣಂ ಗವಾಂ ಪೃಷ್ಠೇ ಪ್ರೇತಧೂಮಂ ಸರಿತ್ತಟಮ್|
ಬಾಲಾತಪಂ ದಿವಾಸ್ವಾಪಂ ತ್ಯಜೇದೀರ್ಘಂ ಜಿಜೀವಿಷುಃ|

– ಸ್ಕಂದಪುರಾಣ, ಬ್ರಹ್ಮಖಂಡ, ಧರ್ಮಾರಣ್ಯ ಮಾಹಾತ್ಮ್ಯ, ಅಧ್ಯಾಯ ೬, ಶ್ಲೋಕ ೬೬,೬೭

ಅರ್ಥ: ಯಾವನು ದೀರ್ಘಕಾಲ ಜೀವಂತವಿರಲು ಇಚ್ಛಿಸುತ್ತಾನೆಯೋ, ಅವನು ಆಕಳು-ಎತ್ತು ಇವುಗಳ ಬೆನ್ನೇರಬಾರದು. ಚಿತೆಯ ಹೊಗೆಯನ್ನು ತನ್ನ ಶರೀರಕ್ಕೆ ಸ್ಪರ್ಶವಾಗಲು ಬಿಡಬಾರದು, (ಗಂಗೆಯನ್ನು ಹೊರತುಪಡಿಸಿ) ನದಿಗಳ ದಡದಲ್ಲಿ ಕುಳಿತುಕೊಳ್ಳಬಾರದು, ಉದಯಕಾಲದ ಸೂರ್ಯನ ಕಿರಣಗಳನ್ನು ಶರೀರಕ್ಕೆ ಸ್ಪರ್ಶವಾಗಲು ಬಿಡಬಾರದು ಮತ್ತು ದಿನದಲ್ಲಿ ಮಲಗುವುದನ್ನು ಬಿಡಬೇಕು.

ಸಂಧಿಕಾಲದಲ್ಲಿ ಕೆಟ್ಟ ಶಕ್ತಿಗಳ ಪ್ರಾಬಲ್ಯವಿರುವುದರಿಂದ ಈ ಕಾಲದಲ್ಲಿ ಮುಂದಿನ ವಿಷಯಗಳನ್ನು ನಿಷಿದ್ಧವೆಂದು ಹೇಳಲಾಗಿದೆ.

೧. ಮಲಗುವುದು, ತಿನ್ನುವುದು-ಕುಡಿಯುವುದು ಮತ್ತು ಭೋಜನ ಮಾಡುವುದು

೨. ಶುಭಕಾರ್ಯಗಳನ್ನು ಆರಂಭಿಸುವುದು

೩. ವೇದಮಂತ್ರಗಳ ಪಠಣ ಮಾಡುವುದು

೪. ಇತರರಿಗೆ ಬಿಳಿ ವಸ್ತುಗಳನ್ನು ಕೊಡುವುದು

೫. ಹಣದ ಕೊಡುಕೊಳ್ಳುವಿಕೆ

೬. ಅಶ್ರುಮೋಚನ (ಅಳುವುದು)

೭. ಪ್ರವಾಸಕ್ಕೆ ಹೊರಡುವುದು

೮. ಶಪಥ ಮಾಡುವುದು; ಬೈಯ್ಯುವುದು; ಜಗಳವಾಡುವುದು; ದಂಗೆ ಮಾಡುವುದು ಮತ್ತು ಅಶುಭ ಹಾಗೂ ಅಸತ್ಯವನ್ನು ಮಾತನಾಡುವುದು

೯. ಅಗ್ನಿಹೋತ್ರಿಗಳಿಗಾಗಿ: ಅಗ್ನಿಹೋತ್ರಿಗಳು ಸಂಧಿಕಾಲದ ಮೊದಲೇ ಅಗ್ನಿಯನ್ನು ಪ್ರಜ್ವಲಿಸುತ್ತಾರೆ. ಆದರೆ ಸಂಧಿಕಾಲವು ಕಳೆದುಹೋದ ನಂತರ ಹೋಮ ಮಾಡುತ್ತಾರೆ.

೧೦. ಮುಸ್ಸಂಜೆಯ ಸಮಯದಲ್ಲಿ ಗಂಗೆಯನ್ನು ಹೊರತುಪಡಿಸಿ ಇತರ ನದಿಗಳ ದಡದಲ್ಲಿ ಕುಳಿತುಕೊಳ್ಳಬಾರದು.

ಗರ್ಭವತಿ ಸ್ತ್ರೀಯರು ಮಾಡಬಾರದಂತಹ ವಿಷಯಗಳು

ಅ. ಬಾಗಿಲಿನಲ್ಲಿ ನಿಂತುಕೊಳ್ಳಬಾರದು, ಇದರಿಂದ ಗರ್ಭಕ್ಕೆ ಅಪಾಯವಾಗುತ್ತದೆ.
ಆ. ಸಾಯಂಕಾಲ ಮನೆಗೆ ಹಿಂತಿರುಗುವ ದನಕರುಗಳನ್ನು ನೋಡಬಾರದು : ಭೂತಪ್ರೇತಗಳು ದನಕರುಗಳ ಕಾಲುಗಳಲ್ಲಿ ಪ್ರವೇಶಿಸಿ ಮನೆಯೊಳಗೆ ನುಗ್ಗಲು ಪ್ರಯತ್ನಿಸುತ್ತಿರುತ್ತವೆ. ಆದುದರಿಂದ ಸಾಯಂಕಾಲ ಮನೆಗೆ ಹಿಂತಿರುಗುತ್ತಿರುವ ದನಕರುಗಳನ್ನು ನೋಡಬಾರದು.

ಮುಸ್ಸಂಜೆಯ ಸಮಯದಲ್ಲಿ ಗಂಗೆಯನ್ನು ಹೊರತುಪಡಿಸಿ ಇತರ ನದಿಗಳ ದಡದಲ್ಲಿ ಕುಳಿತುಕೊಳ್ಳಬಾರದು ಇದರ ಹಿಂದಿನ ಶಾಸ್ತ್ರ

ಗಂಗಾ ನದಿಗೆ ‘ಗಂಗೋತ್ರಿ (ಸಾತ್ತ್ವಿಕ ಲಹರಿಗಳ ಶಿವರೂಪೀ ಸ್ರೋತವನ್ನು ಪೂರೈಸುವವಳು) ಎಂದೂ ಹೇಳುತ್ತಾರೆ.

ಗಂಗೆಯ ನೀರಿನಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಲಹರಿಗಳಿಂದಾಗಿ ಗಂಗೆಯ ದಡದಲ್ಲಿನ ವಾಯು ಮಂಡಲವು ಶುದ್ಧ ಮತ್ತು ಚೈತನ್ಯಮಯವಾಗಿರುವುದರಿಂದ, ಈ ವಾತಾವರಣದಲ್ಲಿ ಕೆಟ್ಟ ಶಕ್ತಿ ಗಳಿಂದ ತೊಂದರೆ ಯಾಗುವ ಸಾಧ್ಯತೆಯು ಬಹಳ ಕಡಿಮೆಯಿರುತ್ತದೆ. ಇದಕ್ಕೆ ವಿರುದ್ಧವಾಗಿ ಇತರ ನದಿಗಳ ದಡದಲ್ಲಿ ಗಂಗಾನದಿಯ ತುಲನೆಯಲ್ಲಿ ಸಾತ್ತ್ವಿಕತೆಯು ಬಹಳ ಕಡಿಮೆಯಿರುವುದರಿಂದ ಕೆಟ್ಟ ಶಕ್ತಿಗಳ ಸಂಚಾರದಿಂದಾಗಿ ನದಿಯ ದಡದಲ್ಲಿ ಕುಳಿತಿರುವ ಜೀವಕ್ಕೆ ತೊಂದರೆಯಾಗುವ ಸಾಧ್ಯತೆಯ ಪ್ರಮಾಣವೂ ಬಹಳ ಹೆಚ್ಚಿರುತ್ತದೆ. ನದಿಯ ದಡದಲ್ಲಿ ವಾಸಮಾಡುವ ಕನಿಷ್ಟ ಕೆಟ್ಟ ಶಕ್ತಿಗಳು ಪೃಥ್ವಿ ಮತ್ತು ಆಪತತ್ತ್ವಗಳಿಂದ ನಿರ್ಮಾಣವಾದ ಮಾನವೀ ದೇಹದೊಂದಿಗೆ ಕಡಿಮೆ ಕಾಲಾವಧಿಯಲ್ಲಿ ಏಕರೂಪವಾಗಬಹುದು. ಆದುದರಿಂದ ಆದಷ್ಟು ಮುಸ್ಸಂಜೆಯ ಸಮಯದಲ್ಲಿ ನದಿಯ ದಡದಲ್ಲಿ ಕುಳಿತುಕೊಳ್ಳಬಾರದು ಮತ್ತು ನದಿಯ ದಡಕ್ಕೆ ವಿಹಾರಕ್ಕೆ ಹೋಗಬಾರದು.
– ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಈ ನಾಮದಿಂದ ಬರೆಯುತ್ತಾರೆ, ೨೧.೩.೨೦೦೫, ಮಧ್ಯಾಹ್ನ ೧.೪೭)

(ಆಧಾರ : ಸನಾತನದ ಗ್ರಂಥ ‘ಸ್ನಾನದಿಂದ ಮುಸ್ಸಂಜೆಯವರೆಗಿನ ಆಚಾರಗಳ ಹಿಂದಿನ ಶಾಸ್ತ್ರ)

ಸಂಧಿಕಾಲ ಮತ್ತು ಸಂಧಿಕಾಲದಲ್ಲಿ ಆಚಾರಪಾಲನೆಯ ಮಹತ್ವವನ್ನು ತಿಳಿದುಕೊಳ್ಳಲು ಕ್ಲಿಕ್ ಮಾಡಿ!

Leave a Comment