ಧೋತಿ ತೊಡುವುದರಿಂದಾಗುವ ಲಾಭಗಳು

‘ಕಳೆದ ಎರಡು ವರ್ಷಗಳಿಂದ ನಾನು ಪ್ರತಿದಿನ ಧೋತಿ ತೊಡುತ್ತಿದ್ದೇನೆ. ಧೋತಿ ಧರಿಸಿದ ನಂತರ ನನಗೆ ನನ್ನಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳ ಅರಿವಾಯಿತು ಮತ್ತು ಇಂತಹ ಉಡುಪಿನಿಂದಾಗುವ ಲಾಭ ಗಮನಕ್ಕೆ ಬಂದಿತು. ಅದನ್ನು ಇಲ್ಲಿ ಕೊಡುತ್ತಿದ್ದೇನೆ.

೧. ಧೋತಿ ತೊಟ್ಟಿದ್ದರಿಂದ ಧೋತಿಯದ ನೆರಿಗೆಗಳಿಂದ ಪ್ರಕ್ಷೇಪಿತವಾಗುವ ಚೈತನ್ಯದಿಂದ ವಿವಿಧ ಸ್ತರಗಳಲ್ಲಿ ಅರಿವಾದ ಬದಲಾವಣೆಗಳು
೧ ಅ. ಶಾರೀರಿಕ
೧. ಧೋತಿಯನ್ನು ತೊಡಲು ಪ್ರಾರಂಭಿಸಿದಾಗಿನಿಂದ ಧೋತಿಯ ನೆರಿಗೆಗಳಿಂದ ಪ್ರಕ್ಷೇಪಿತವಾಗುವ ಚೈತನ್ಯದಿಂದಾಗಿ ನನ್ನ ಸೊಂಟನೋವು ತುಂಬಾ ಪ್ರಮಾಣದಲ್ಲಿ ಕಡಿಮೆಯಾಗಿದೆ.

೨. ಹಿಂದೆ ನನಗೆ ಎದ್ದು ನಿಲ್ಲಲು, ನಡೆಯಲು ಈ ಎರಡೂ ಕೃತಿಗಳನ್ನು ೫ ರಿಂದ ೧೦ ನಿಮಿಷಗಳವರೆಗೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ ೧೦ ನಿಮಿಷಗಳಿಗಿಂತ ಹೆಚ್ಚು ಸಮಯ ಕುಳಿತುಕೊಳ್ಳಲು ಆಗುತ್ತಿರಲಿಲ್ಲ. ಈಗ ಈ ಕೃತಿಯನ್ನು ನಾನು ಹೆಚ್ಚು ಸಮಯದವರೆಗೆ ಮಾಡಲು ಸಾಧ್ಯವಾಗುತ್ತಿದೆ.

೧. ಆ. ಮಾನಸಿಕ

೧. ಧೋತಿಯನ್ನು ತೊಟ್ಟಾಗ ನನಗೆ ಬಹಳ ಉತ್ಸಾಹವೆನಿಸುತ್ತದೆ.

೨. ಇತರ ವಸ್ತ್ರಗಳಂತೆ ಧೋತಿಯು ಶರೀರಕ್ಕೆ ಉಜ್ಜುವುದಿಲ್ಲ. ಅದರ ಸ್ಪರ್ಶ ಅಹ್ಲಾದದಾಯಕವಾಗಿರುತ್ತದೆ. ಪೈಜಾಮಾ ಅಥವಾ ಪ್ಯಾಂಟ್ ಧರಿಸಿದಾಗ ಹಾಗೆ ಅನಿಸುವುದಿಲ್ಲ.

೨. ಪ್ರಯೋಗವೆಂದು ನಾನು ೨ – ೩ ದಿನ ಧೋತಿಯ ಬದಲು ಪೈಜಾಮಾ ಹಾಕಿದಾಗ ಸೊಂಟ ನೋವು ಹೆಚ್ಚಾಗುವುದು ಗಮನಕ್ಕೆ ಬಂದಿತು.

೩. ಮೇಲಿನ ಅಂಶಗಳಿಂದ ನಮ್ಮ ಪೂರ್ವಜರು ಪ್ರತಿಯೊಂದು ವಿಷಯವನ್ನು ಎಷ್ಟು ಆಳವಾಗಿ ಅಭ್ಯಾಸ ಮಾಡಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ ಮತ್ತು ಭಾರತೀಯ ಪದ್ಧತಿಯಿಂದ ವಸ್ತ್ರಗಳನ್ನು ತೊಡುವುದರ ಮಹತ್ವವು ಅರಿವಾಗುತ್ತದೆ.

ಕೃತಜ್ಞತೆ

ಕೇಶರಚನೆ, ಉಡುಗೆತೊಡುಗೆ, ಆಹಾರ, ವಿಹಾರ ಇತ್ಯಾದಿ ದೈನಂದಿನ ಜೀವನದಲ್ಲಿ ಆಚರಣೆಯಲ್ಲಿ ತರುವ ಪ್ರತಿಯೊಂದು ಕೃತಿಯಿಂದ ನಾವು ‘ಸತತವಾಗಿ ಚೈತನ್ಯವನ್ನು ಹೇಗೆ ಗ್ರಹಣ ಮಾಡಬಹುದು ?’ ಎಂಬುದರ ಬಗ್ಗೆ ಅಮೂಲ್ಯ ಮಾರ್ಗದರ್ಶನ ಮಾಡುವ ಋಷಿಮುನಿಗಳ ಚರಣಗಳಲ್ಲಿ ಹಾಗೂ ಇಂದಿನ ಕಲಿಯುಗದಲ್ಲಿ ಇದರ ಬಗ್ಗೆ ವೈಜ್ಞಾನಿಕ ದೃಷ್ಟಿಕೋನದಿಂದ ವಿವಿಧ ಪ್ರಯೋಗ ಮಾಡಿ ಭಾರತೀಯ ಮತ್ತು ಪಾಶ್ಚಾತ್ಯ ಜೀವನಶೈಲಿಯಲ್ಲಿನ ತುಲನಾತ್ಮಕ ಲಾಭ ಮತ್ತು ಹಾನಿಯ ಬಗ್ಗೆ ಹೇಳಿ ಅದನ್ನು ಅತ್ಯಂತ ಸುಲಭ ಭಾಷೆಯಲ್ಲಿ ಸಮಾಜಕ್ಕೆ ತಿಳಿಸಿ ಮಾರ್ಗದರ್ಶನ ಮಾಡುವ ಪರಾತ್ಪರ ಗುರು ಡಾ. ಆಠವಲೆ ಇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’

– (ಸದ್ಗುರು) ಶ್ರೀ. ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೨೬.೧೧.೨೦೧೮)

Leave a Comment