ಹಿಂದೂ ರಾಷ್ಟ್ರವೆಂದರೆ (ಸನಾತನ ಧರ್ಮ ರಾಜ್ಯ) ವಿಶ್ವಕಲ್ಯಾಣಕ್ಕಾಗಿ ಕಾರ್ಯನಿರತ ಸತ್ತ್ವಗುಣಿ ಜನರ ರಾಷ್ಟ್ರ !

‘ಮೇರುತಂತ್ರ ಧರ್ಮಗ್ರಂಥದಲ್ಲಿ ‘ಹೀನಂ ದೂಷಯತಿ ಇತಿ ಹಿಂದುಃ | ಅಂದರೆ ‘ಹೀನ ಅಥವಾ ಕನಿಷ್ಠ ರಜ-ತಮ ಗುಣಗಳನ್ನು ‘ದೂಷಯತಿ, ಅಂದರೆ ನಾಶಪಡಿಸುವವನೇ ಹಿಂದೂ ಎಂದು ‘ಹಿಂದೂ ಶಬ್ದದ ವ್ಯುತ್ಪತ್ತಿಯನ್ನು ಕೊಡಲಾಗಿದೆ. ಯಾರು ರಜ-ತಮಾತ್ಮಕ ಹೀನಗುಣಗಳನ್ನು ಮತ್ತು ಅದರಿಂದಾಗಿ ಘಟಿಸುವ ಕಾಯಾ, ವಾಚಾ ಮತ್ತು ಮಾನಸಿಕ ಸ್ತರದಲ್ಲಿನ ಹೀನ ಕರ್ಮಗಳನ್ನು ತಿರಸ್ಕರಿಸುತ್ತಾನೆಯೋ; ಅಂದರೆ ಸಾತ್ತ್ವಿಕ ಆಚರಣೆಯನ್ನು ಮಾಡುತ್ತಾನೆಯೋ ಅವನೇ ‘ಹಿಂದೂ. ಇಂತಹ ಸತ್ತ್ವಗುಣಿ ವ್ಯಕ್ತಿಯು ‘ನಾನು ಮತ್ತು ನನ್ನ ಎಂಬಂತಹ ಸಂಕುಚಿತ ವಿಚಾರಗಳನ್ನು ತ್ಯಜಿಸಿ ವಿಶ್ವಕಲ್ಯಾಣದ ಬಗ್ಗೆ ವಿಚಾರ ಮಾಡುತ್ತಾನೆ. ‘ಸನಾತನ ಧರ್ಮವೇ ನೀತಿಶಾಸ್ತ್ರ ಮತ್ತು ಸತ್ತ್ವಗುಣದ ಮೂಲಾಧಾರವಾಗಿದೆ. ಆದ್ದರಿಂದ ರಾಷ್ಟ್ರೀಯ ಜೀವನದಲ್ಲಿ ಸತ್ತ್ವಗುಣಿ ನೈತಿಕತೆಯ (ಸತ್ಯ, ಸದಾಚಾರ, ಪರೋಪಕಾರ, ಇಂದ್ರಿಯನಿಗ್ರಹ ಇತ್ಯಾದಿ) ಸಂವರ್ಧನೆಯನ್ನು ಮಾಡಲು ಸಂವಿಧಾನದಲ್ಲಿ ‘ಸನಾತನ (ಹಿಂದೂ) ಧರ್ಮಾಧಿಷ್ಠಿತ ರಾಜ್ಯ ವ್ಯವಸ್ಥೆ ಎಂದು ಸಂಬೋಧಿಸಲ್ಪ ಡುವುದುಮತ್ತು ಅದಕ್ಕನುಸಾರ ರಾಷ್ಟ್ರ ರಚನೆಯಿರುವುದು ಅಪೇಕ್ಷಿತವಾಗಿದೆ.

ಹಿಂದೂ ರಾಷ್ಟ್ರದ (ಸನಾತನ ಧರ್ಮ ರಾಜ್ಯದ) ಸ್ಥಾಪನೆ ಎಂದರೆ ರಾಮರಾಜ್ಯದ ಸ್ಥಾಪನೆ !

‘ಸಕ್ಕರೆ ಮತ್ತು ಅದರ ಸಿಹಿಗೆ ಕ್ರಮವಾಗಿ ‘ಧರ್ಮಿ ಮತ್ತು ಧರ್ಮ ಎಂದು ಹೇಳುತ್ತಾರೆ. ಇವೆರಡರಲ್ಲಿ ಅದ್ವೈತವಿರುತ್ತದೆ. ಅದೇರೀತಿ ಈಶ್ವರ (ಧರ್ಮೀ) ಮತ್ತು ಅವನ (ಸನಾತನ) ಧರ್ಮ ಇವೆರಡರಲ್ಲಿ ಅದ್ವೈತವಿರುತ್ತದೆ; ಆದುದರಿಂದ ಹಿಂದೂ ರಾಷ್ಟ್ರವೆಂದರೆ ಧರ್ಮಸಂಸ್ಥಾಪನೆ, ಅಂದರೆ ಈಶ್ವರನ ಸಂಸ್ಥಾಪನೆ, ಅಂದರೆ ಈಶ್ವರೀ ರಾಜ್ಯದ ಸಂಸ್ಥಾಪನೆ, ಅಂದರೆ ರಾಮರಾಜ್ಯದ ಸ್ಥಾಪನೆ !

Leave a Comment