ಹಿಂದೂ ರಾಷ್ಟ್ರದ (ಸನಾತನ ಧರ್ಮ ರಾಜ್ಯದ) ಸ್ಥಾಪನೆಯ ದೃಷ್ಟಿಯಿಂದ ಸಾಧನೆ ಮಾಡುವುದರ ಮಹತ್ವ !

೧. ಧರ್ಮಸಂಸ್ಥಾಪನೆಯ ಕಾರ್ಯ ಯಶಸ್ವಿಯಾಗಲು ಶಾರೀರಿಕ ಮತ್ತು ಮಾನಸಿಕ ಸಿದ್ಧತೆಯೊಂದಿಗೆ ಸಾಧನೆಯ ಬಲವಿರುವುದೂ ಆವಶ್ಯಕ !

‘ಸಾಧನೆಯ ಬಲ ಮತ್ತು ಸಮರ್ಥ ರಾಮದಾಸ ಸ್ವಾಮಿಗಳ ಮಾರ್ಗದರ್ಶನವಿದ್ದುದರಿಂದಲೇ ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯ ಸ್ಥಾಪಿಸುವಲ್ಲಿ ಯಶಸ್ವಿಯಾದರು. ಸ್ವಾತಂತ್ರ್ಯ ಸಿಗುವಮುನ್ನ ಹೆಚ್ಚಿನ ಕ್ರಾಂತಿಕಾರರಲ್ಲಿ ಪ್ರಖರ ರಾಷ್ಟ್ರಾಭಿಮಾನವಿದ್ದರೂ ಸಾಧನೆಯ ಬಲ ಇಲ್ಲದಿರು ವುದರಿಂದ ಅವರ ಕ್ರಾಂತಿ ಯಶಸ್ವಿಯಾಗದೇ ಅವರು ಅನಾವಶ್ಯಕವಾಗಿ ಪ್ರಾಣ ಕಳೆದುಕೊಳ್ಳಬೇಕಾಯಿತು.

ರಾಷ್ಟ್ರಗುರು ಸಮರ್ಥ ರಾಮದಾಸಸ್ವಾಮಿಗಳು ‘ದಾಸಬೋಧ ಗ್ರಂಥದಲ್ಲಿ ಮುಂದಿನಂತೆ ಬರೆದಿದ್ದಾರೆ,
ಚಳುವಳಿ ಮಾಡುವುದು ನಮ್ಮ ಕೈಯಲ್ಲಿದೆ |
ಆದರೆ ಕಾರ್ಯಕ್ಕೆ ತಕ್ಕ ನಿಯೋಜನೆಯಾಗಿ |
ಕಾರ್ಯ ಯಶಸ್ವಿಯಾಗಲು ಭಗವಂತನ |
ಅಧಿಷ್ಠಾನ ಮತ್ತು ಸಾಧನೆ ಆವಶ್ಯಕವಾಗಿದೆ ||

– ದಾಸಬೋಧ, ದಶಕ ೨೦, ಸಮಾಸ ೪, ದ್ವಿಪದಿ ೨೬

೨. ಈಶ್ವರ ಭಕ್ತನಿಗೆ ಸಹಾಯ ಮಾಡುತ್ತಾನೆ, ಆದ್ದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಾಧನೆಯನ್ನು ಮಾಡಿರಿ !

ದುಷ್ಟರಿಂದ ಭಕ್ತರಿಗೆ ತೊಂದರೆಯಾದರೆ ಮಾತ್ರ, ಈಶ್ವರ ಅವತಾರ ತಾಳುತ್ತಾನೆ. ಆದ್ದರಿಂದ ನಾವು ಸಾಧನೆ ಮಾಡಿ ಈಶ್ವರನ ಭಕ್ತರಾದರೆ ಮಾತ್ರ ನಮಗೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಈಶ್ವರನ ಬೆಂಬಲ ಸಿಗುವುದು.

೩. ‘ಸಾಧನೆಯನ್ನು ಮಾಡದೇ ಹಿಂದೂ ರಾಷ್ಟ್ರ ಬರುವುದು, ಎಂದು ತಿಳಿಯಬೇಡಿ !

ಪರಾಕ್ರಮಿಗಳಾದ ಪಾಂಡವರಿಗೂ ಕೌರವರ ವಿರುದ್ಧದ ಯುದ್ಧದಲ್ಲಿ ಶ್ರೀಕೃಷ್ಣನ ಸಹಾಯ ಪಡೆಯಬೇಕಾಯಿತು, ಹೀಗಿರುವಾಗ ಶ್ರೀಕೃಷ್ಣ ಮತ್ತು ಸಾಧನೆಯಿಲ್ಲದೇ ನಾವು ಹಿಂದೂ ರಾಷ್ಟ್ರವನ್ನು ಸ್ಥಾಪಿಸಬಲ್ಲೆವು ಎಂದು ಹೇಳುವುದು ಎಷ್ಟು ಹಾಸ್ಯಾಸ್ಪದ ವಾಗಿದೆ ಎಂಬುದು ಗಮನಕ್ಕೆ ಬರುತ್ತದೆ.

೪. ಹಿಂದೂಗಳೇ, ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪಾತ್ರರಾಗಿರಿ !

ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡುವುದರಿಂದ ಹಿಂದೂ ಧರ್ಮದ ಶ್ರೇಷ್ಠತೆಯ ಅನುಭೂತಿಗಳು ಬರುತ್ತವೆ ಮತ್ತು ಹಿಂದೂ ಧರ್ಮದ ಶ್ರೇಷ್ಠತೆ ತಿಳಿದ ನಂತರವೇ ನಿಜವಾದ ಧರ್ಮಾಭಿಮಾನ ನಿರ್ಮಾಣವಾಗಿ ಸಮಾಜ, ರಾಷ್ಟ್ರ ಮತ್ತು ಧರ್ಮದ ಹಿತಕ್ಕಾಗಿ ನಿಜವಾದ ಪ್ರಯತ್ನಗಳಾಗುತ್ತವೆ. ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡುವುದರಿಂದ ವ್ಯಕ್ತಿಯು ಧರ್ಮನಿಷ್ಠನಾಗುತ್ತಾನೆ. ಧರ್ಮನಿಷ್ಠನಾದ ವ್ಯಕ್ತಿಯು ಸ್ವತಃ ಹಿಂದೂ ಧರ್ಮದ ಹಾನಿಯನ್ನು ಮಾಡು ವುದಿಲ್ಲ ಮತ್ತು ಇತರರು ಧರ್ಮಹಾನಿ ಮಾಡಿದರೆ ಅದನ್ನು ವಿರೋಧಿಸುತ್ತಾನೆ; ಆದುದರಿಂದ ಧರ್ಮರಕ್ಷಣೆಯ ನಿಜವಾದ ಕಾರ್ಯವನ್ನು ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡುವ ವ್ಯಕ್ತಿಯೇ ಮಾಡಬಲ್ಲನು.

೫. ನಾಮಜಪದಿಂದ ದೈವೀ ಶಕ್ತಿಗಳ ಸಹಾಯ ಸಿಗುತ್ತದೆ.

ಅರ್ಜುನ ಉತ್ತಮ ಧನುರ್ಧಾರಿಯಾಗಿ ದ್ದನು; ಆದರೆ ಅದರ ಜೊತೆಗೆ ಅವನು ಶ್ರೀಕೃಷ್ಣನ ಭಕ್ತನೂ ಆಗಿದ್ದನು. ಬಾಣ ಬಿಡುವಾಗ ಅವನು ಯಾವಾಗಲೂ ಶ್ರೀಕೃಷ್ಣನ ನಾಮಜಪ ಮಾಡುತ್ತಿದ್ದನು. ಆದ್ದರಿಂದ ಅವನ ಬಾಣವು ತಾನಾಗಿಯೇ ಗುರಿ ತಲುಪುತ್ತಿತ್ತು. ಶ್ರೀಕೃಷ್ಣನ ನಾಮಜಪದಿಂದ ಅರ್ಜುನನ ಮನಸ್ಸಿನಲ್ಲಿ ಗುರಿಯಿಡುವ ಸಂಕಲ್ಪ ಸಿದ್ಧವಾಗುತ್ತಿತ್ತು. ನಾಮಜಪದಿಂದ ಪ್ರತಿಯೊಂದು ಕರ್ಮವೂ ಅಕರ್ಮವಾಗುತ್ತದೆ, ಅಂದರೆ ಆ ಕರ್ಮಕ್ಕೆ ಪಾಪ-ಪುಣ್ಯ ತಗಲುವುದಿಲ್ಲ. ಇದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಮಾಡುವಾಗ ನಾಮಜಪ ಮಾಡುವುದು ಎಷ್ಟು ಆವಶ್ಯಕವಾಗಿದೆ ಎಂಬುದು ಗಮನಕ್ಕೆ ಬರುತ್ತದೆ.

Leave a Comment