ಸೆಕ್ಯುಲರಿಸಮ್ ಮತ್ತು ಹಿಂದೂ ರಾಷ್ಟ್ರ !

ಸೆಕ್ಯುಲರಿಸಮ್ನ ಸಂಕಲ್ಪನೆಯನ್ನು ಕಲಿಯುವ ಆವಶ್ಯಕತೆ !

“ಭಾರತದ ಸಂವಿಧಾನವು ಸೆಕ್ಯುಲರ್ ಆಗಿರುವುದರಿಂದ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯವಿಲ್ಲ, ಎಂದು ಕೆಲವು ಬುದ್ಧಿಜೀವಿಗಳು ಪ್ರಸಾರ ಮಾಡುತ್ತಿದ್ದಾರೆ. ಈ ಅಪಪ್ರಚಾರವನ್ನು ತಡೆಯಲು ಮೊಟ್ಟಮೊದಲು ನಾವು ಸೆಕ್ಯುಲರಿಸಮ್ ಶಬ್ದದ ಇತಿಹಾಸ ಮತ್ತು ಅದರ ವಾಸ್ತವವನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ.

ಭಾರತದ ಸಂವಿಧಾನದಲ್ಲಿ ಸೆಕ್ಯುಲರ್ವಾದದ ಬಗೆಗಿನ ತಪ್ಪು ತಿಳುವಳಿಕೆಗಳು ಮತ್ತು ವಾಸ್ತವಿಕತೆ : ಇಂದು ಸೆಕ್ಯುಲರ್ ಶಬ್ದದ ಅರ್ಥವನ್ನು ಜಾತ್ಯತೀತ ಎಂದು ಸಹಜವಾಗಿ ಹೇಳಲಾಗುತ್ತದೆ. ಸಂವಿಧಾನಕ್ಕನುಸಾರ ಭಾರತ ಜಾತ್ಯತೀತ (ಧರ್ಮನಿರಪೇಕ್ಷ) ರಾಷ್ಟ್ರವಾಗಿರುವುದರಿಂದ ಸಾರ್ವಜನಿಕ ಜೀವನದಲ್ಲಿ ಹಿಂದೂ ಧರ್ಮಕ್ಕೆ ಸ್ಥಾನ ಸಿಗುವುದು, ಸಂವಿಧಾನದ ವಿರುದ್ಧವಾಗಿದೆ ಎಂಬ ಅಪಪ್ರಚಾರವನ್ನು ನಿರಂತರವಾಗಿ ಮಾಡಲಾಗುತ್ತದೆ. ಪ್ರತ್ಯಕ್ಷದಲ್ಲಿ ಭಾರತ ಸರಕಾರವು ರಾಷ್ಟ್ರಪತಿಗಳ ಸಹಿಯೊಂದಿಗೆ ಪ್ರಕಾಶಿಸಿದ ಭಾರತದ ಸಂವಿಧಾನದ ಹಿಂದಿ ಆವೃತ್ತಿಯಲ್ಲಿ ಎಲ್ಲಿಯೂ ಜಾತ್ಯತೀತ ಎಂಬ ಶಬ್ದವನ್ನು ಉಪಯೋಗಿಸಿಲ್ಲ. ಸೆಕ್ಯುಲರ್ ಈ ಶಬ್ದದ ಅನುವಾದವನ್ನು ಪಂಥನಿರಪೇಕ್ಷ (ಜಾತ್ಯತೀತ) ಎಂದು ಮಾಡಲಾಗಿದೆ. ಇದರ ಅರ್ಥ ರಾಜ್ಯಾಳಿತವನ್ನು ನಡೆಸುವಾಗ ಯಾವುದೇ ಪಂಥದ ಆಧಾರ ತೆಗೆದುಕೊಳ್ಳದಿರುವುದು, ಅಂದರೆ ಪಂಥನಿರಪೇಕ್ಷತೆ ! ಇಂದು ಭಾರತದಲ್ಲಿನ ಎಲ್ಲ ರಾಜಕೀಯ ಪಕ್ಷಗಳು ಪಂಥದ ಆಧಾರದಲ್ಲಿ ಮತಗಳನ್ನು (ಓಟ್) ಕೇಳುತ್ತವೆ ಮತ್ತು ತಮ್ಮನ್ನು ಮಾತ್ರ ಸೆಕ್ಯುಲರ್ ಎಂದು ಹೇಳುತ್ತವೆ. ಇದೊಂದು ದೊಡ್ಡ ಪಾಖಂಡವಾಗಿದೆ.

ಕೇವಲ ಹಿಂದೂಗಳನ್ನಷ್ಟೇ ಜಾತೀವಾದಿಗಳೆಂದು ಹೇಳುವ ಭಾರತದಲ್ಲಿನ ಪಕ್ಷಪಾತಿ ಸೆಕ್ಯುಲರ್‌ವಾದ !

೧. ಉಪರಾಷ್ಟ್ರಪತಿ ಭವನದಲ್ಲಿ ಈದ್ ಆಚರಿಸುವ ಮಾಜಿ ಉಪರಾಷ್ಟ್ರಪತಿಹಮೀದ್ ಅನ್ಸಾರಿ ಸೆಕ್ಯುಲರ್‌ಅಂತೆ !
ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಇವರು ಉಪರಾಷ್ಟ್ರಪತಿ ಭವನದಲ್ಲಿ ವರ್ಷದಲ್ಲಿ ಕೇವಲ ಈದ್ ಔತಣಕೂಟವನ್ನು ಮಾತ್ರ ಏರ್ಪಡಿಸುತ್ತಿದ್ದರು. ಅವರು ಬಹುಸಂಖ್ಯಾತ ಹಿಂದೂಗಳಿರುವ ಭಾರತದ ಉಪರಾಷ್ಟ್ರಪತಿಗಳಾಗಿದ್ದರೂ ಅವರು ದೀಪಾವಳಿ, ಬಿಜು ಅಥವಾ ಪೊಂಗಲ್ ನಂತಹ ಹಬ್ಬಗಳನ್ನು ಆಚರಿಸುತ್ತಿರಲಿಲ್ಲ. ಕೇವಲ ಈದ್‌ನ ಔತಣ ಮಾತ್ರ ನೀಡುತ್ತಿದ್ದರು, ಆದರೂ ಅವರನ್ನು ಯಾವುದೇ ಪ್ರಸಾರ ಮಾಧ್ಯಮಗಳು ಎಲ್ಲಿಯೂ ಕೋಮುವಾದಿ ಎಂದು ಹೇಳಲಿಲ್ಲ. ಅವರು ಎಲ್ಲರಿಗಾಗಿ ಸೆಕ್ಯುಲರ್ ಆಗಿದ್ದರು; ತದ್ವಿರುದ್ಧ ಹಿಂದೂಗಳು ಧರ್ಮಪಾಲನೆ ಮಾಡಿದರೆ ಅಥವಾ ರಾಮಮಂದಿರದ ವಿಷಯದಲ್ಲಿ ಏನಾದರೂ ಹೇಳಿದರೆ ಅವರನ್ನು ತಕ್ಷಣ ಕೋಮುವಾದಿಗಳೆಂದು ಹೇಳಲಾಗುತ್ತದೆ. ಹಿಂದೂಗಳಿಂದ ಸಂವಿಧಾನದ ವಿರುದ್ಧ ಏನೋ ದೊಡ್ಡ ಅಪರಾಧವಾಗಿದೆ ಎಂಬಂತಹ ಚಿತ್ರಣವನ್ನು ನಿರ್ಮಿಸಲಾಗುತ್ತದೆ.

೨. ಯೋಗದಿನವನ್ನು ಪಾಲಿಸದಿರುವ ಕ್ರೈಸ್ತ ಮತ್ತು ಮುಸಲ್ಮಾನರು ಸೆಕ್ಯುಲರ್‌ಅಂತೆ !
೨೦೧೪ ರಿಂದ ಜೂನ್ ೨೧ ಅನ್ನು ಅಂತರರಾಷ್ಟ್ರೀಯ ಯೋಗದಿನವೆಂದು ಆಚರಿಸಲಾಗುತ್ತದೆ. ಇದನ್ನು ವಿರೋಧಿಸಿ ಭಾರತದ ಪಾದ್ರಿಗಳು ಮತ್ತು ಮೌಲ್ವಿಗಳು ರಸ್ತೆಗಿಳಿದರು. ಅವರು, ನಾವು ಯೇಸು ಮತ್ತು ಅಲ್ಲಾನನ್ನು ಬಿಟ್ಟು ಯಾರ ಮುಂದೆಯೂ ತಲೆಬಾಗುವುದಿಲ್ಲ. ಸೂರ್ಯ ನಮಸ್ಕಾರವೆಂದರೆ ಸೂರ್ಯನ ಪೂಜೆ ಆಗಿದೆ. ನಾವು ಯೋಗದಿನವನ್ನು ಒಪ್ಪುವುದಿಲ್ಲ ಎನ್ನುತ್ತಾರೆ. ಯೋಗವನ್ನು ಶಾರೀರಿಕ ಆರೋಗ್ಯಕ್ಕಾಗಿ ಮಾಡಲಾಗುತ್ತದೆ. ಅದರಲ್ಲಿ ಸೂರ್ಯನ ಪೂಜೆಎಲ್ಲಿದೆ ? ಆದರೂ ಭಾರತದ ಯಾವುದೇ ಮಾಧ್ಯಮಗಳು ಅವರನ್ನು ಕೋಮುವಾದಿಗಳೆಂದು ಹೇಳಲಿಲ್ಲ.

೩. ಸೆಕ್ಯುಲರ್ ಶಬ್ದದ ಅರ್ಥವನ್ನು ಜಾತ್ಯತೀತತೆ ಎಂದು ಮಾಡಿರುವುದರಿಂದ ಹಿಂದೂಗಳ ಮೇಲಾದ ಗಂಭೀರ ಪರಿಣಾಮ !
ಇಂದು ಭಾರತದಲ್ಲಿ ಸೆಕ್ಯುಲರ್ ಶಬ್ದದ ಅರ್ಥವನ್ನು ಜಾತ್ಯತೀತವೆಂದು ಮಾಡಿ ಹಿಂದೂಗಳನ್ನು ಅವಮಾನಿಸಲಾಗುತ್ತಿದೆ. ಅವರಿಗೆ ಪ್ರಸಾರ ಮಾಧ್ಯಮಗಳು ಮತ್ತು ಬುದ್ಧಿಜೀವಿಗಳು ಪುನಃ ಪುನಃ ನೀವು ಜಾತ್ಯತೀತರಾಗಿದ್ದೀರಿ ಎಂದು ಹೇಳುತ್ತಾರೆ. ಅದರ ಪರಿಣಾಮದಿಂದ ಹಿಂದೂಗಳು ಜಾತ್ಯತೀತರಾದರು ಹಾಗೂ ಕ್ರಮೇಣ ತಮ್ಮ ಧರ್ಮವನ್ನೇ ಮರೆಯತೊಡಗಿದರು. ಯಾವುದೇ ಮುಸಲ್ಮಾನನು ಸೆಕ್ಯುಲರಿಸಮ್ ಗೆ ಬಲಿಯಾಗಿ ಶುಕ್ರವಾರದ ನಮಾಜನ್ನು ಮರೆಯಲಿಲ್ಲ, ಯಾವುದೇ ಕ್ರೈಸ್ತನು ರವಿವಾರ ಚರ್ಚ್‌ಗೆ ಹೋಗುವುದನ್ನು ನಿಲ್ಲಿಸಲಿಲ್ಲ. ಹಿಂದೂಗಳು ಮಾತ್ರ ತಮ್ಮ ಸಂಸ್ಕೃತಿ, ತಮ್ಮ ಶಾಸ್ತ್ರ, ತಮ್ಮ ಪರಂಪರೆ ಮತ್ತು ಗೋಮಾತೆ ಇವೆಲ್ಲವನ್ನೂ ಮರೆತರು. ತಿಲಕವನ್ನು ಹಚ್ಚಿಕೊಳ್ಳಲು ಹಿಂಜರಿಯಲಾರಂಭಿಸಿದರು. ದೇವಸ್ಥಾನದಲ್ಲಿ ಆರತಿಗಾಗಿ ನಿಲ್ಲಲು ನಾಚಿಕೆ ಪಡಲಾರಂಭಿಸಿದರು. ಜಯ ಶ್ರೀರಾಮ ಘೋಷಣೆ ಕೂಗಲು ನಾಚಿಕೆಪಡತೊಡಗಿದರು. ಅಲ್ಪಸಂಖ್ಯಾತರು ತಮಗೆ ಬೇಕಾದಂತೆ ಧರ್ಮಪಾಲನೆ ಮಾಡಬೇಕು ಮತ್ತು ಬಹುಸಂಖ್ಯಾತರು ತಮ್ಮ ಧರ್ಮವನ್ನು ಪಾಲಿಸದೆ ಶಾಂತಕುಳಿತುಕೊಳ್ಳಬೇಕು, ಇದುವೇ ಜಾತ್ಯತೀತವಾಗಿದ್ದರೆ, ಸರಕಾರ ಮತ್ತು ಪ್ರಸಾರ ಮಾಧ್ಯಮಗಳು ಅದರ ಅಧಿಕೃತ ವ್ಯಾಖ್ಯೆ ನೀಡಬೇಕು.

ಭಾರತ ಸ್ವಯಂಭೂ ಹಿಂದೂ ರಾಷ್ಟ್ರ !

೧. ಭಾರತ ಅನಾದಿ ಕಾಲದಿಂದಲೂ ಹಿಂದೂ ರಾಷ್ಟ್ರ !
ಭಾರತ ಅನಾದಿ ಕಾಲದಿಂದಲೂ ಹಿಂದೂ ರಾಷ್ಟ್ರವೇ ಆಗಿದೆ. ತ್ರೇತಾಯುಗದಲ್ಲಿ ರಾಜ ಹರಿಶ್ಚಂದ್ರ ಮತ್ತು ಪ್ರಭು ಶ್ರೀರಾಮ, ದ್ವಾಪರ ಯುಗದ ಮಹಾರಾಜ ಯುಧಿಷ್ಠಿರ, ಕಲಿಯುಗದ ರಾಜ ಹರ್ಷವರ್ಧನ, ಅಫ್ಘಾನಿಸ್ತಾನದ ರಾಜ ದಹೀರ, ಮಗಧದ ರಾಜ ಸಾಮ್ರಾಟ ಚಂದ್ರಗುಪ್ತ, ಮಹಾರಾಣಾ ಪ್ರತಾಪ, ಛತ್ರಪತಿ ಶಿವಾಜಿ ಮಹಾರಾಜ ಮುಂತಾದವರ ರಾಜ್ಯಗಳು ಎಂದಿಗೂ ಸೆಕ್ಯುಲರ್ ಆಗಿರಲಿಲ್ಲ, ಎಲ್ಲವೂ ಹಿಂದೂ ರಾಷ್ಟ್ರಗಳೇ ಆಗಿದ್ದವು. ೧೯೪೭ ರಲ್ಲಿನ ೫೬೬ ರಾಜಸಂಸ್ಥಾನಗಳು ಸಹ ಹಿಂದೂ ರಾಜ್ಯಗಳೇ ಆಗಿದ್ದವು.

೨. ಹಿಂದೂ ರಾಜರಿಂದಾಗಿ ಭಾರತದಲ್ಲಿ ರಾಜ್ಯವನ್ನಾಳಿದ ಮೊಗಲರು !
ನಮಗೆ ಇತಿಹಾಸದಲ್ಲಿ ೮೦೦ ವರ್ಷ ಮುಸಲ್ಮಾನರುಮತ್ತು ೧೫೦ ವರ್ಷ ಆಂಗ್ಲರು ಭಾರತದಲ್ಲಿ ರಾಜ್ಯವಾಳಿದರು ಎಂದು ಕಲಿಸಲಾಗುತ್ತದೆ. ಇದರ ಅರ್ಥ ಎಲ್ಲ ಕಡೆಗಳಲ್ಲಿ ಮುಸಲ್ಮಾನರ ಮತ್ತು ಆಂಗ್ಲರ ರಾಜ್ಯವಿತ್ತು ಎಂದಾಗುವುದಿಲ್ಲ. ಉದಾಹರಣೆಗೆ ಮಹಾರಾಣಾ ಪ್ರತಾಪರ ವಿರುದ್ದ ಹೋರಾಡಲು ಅಕ್ಬರನ ವತಿಯಿಂದ ರಾಜ ಮಾನಸಿಂಹ ಹೋಗಿ ದ್ದನು. ಛತ್ರಪತಿ ಶಿವಾಜಿ ಮಹಾರಾಜರೊಂದಿಗೆ ಹೋರಾಡಲು ಔರಂಗಜೇಬನು ಮಿರ್ಝಾದ ರಾಜಜಯಸಿಂಹ ಈ ಹಿಂದೂ ರಾಜನನ್ನು ಕಳುಹಿಸಿದ್ದನು.ಆ ಕಾಲದಲ್ಲಿಯೂ ಎಲ್ಲ ಕಡೆಗಳಲ್ಲಿ ಮೊಗಲರ ಆಡಳಿತವಿರಲಿಲ್ಲ. ರಾಜಸ್ಥಾನದಲ್ಲಿ ಮೊಗಲರ ಆಕ್ರಮಣದ ಕಾಲದಲ್ಲಿ ಹಿಂದೂ ರಾಜರು ಮೊಗಲ ರಾಜರೊಂದಿಗೆ ಹೋರಾಡದೆ ಸುರಕ್ಷತೆಯ ಹೆಸರಿನಲ್ಲಿ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದರು.

೩. ಆಂಗ್ಲರ ಕಾಲದಲ್ಲಿಯೂ ಭಾರತದಲ್ಲಿ ೫೬೬ ಮಂದಿ ಹಿಂದೂ ರಾಜರಿದ್ದರು !
ಅನಂತರ ಆಂಗ್ಲರು ಆಕ್ರಮಣ ಮಾಡಿದರು; ಆದರೆ ಅವರು ಸಹ ಸಂಪೂರ್ಣ ಭಾರತದಲ್ಲಿ ರಾಜ್ಯವಾಳಲಿಲ್ಲ. ಭಾರತ ಭೂಮಿಯಲ್ಲಿ ಬ್ರಿಟೀಷ್ ಇಂಡಿಯಾ ಮತ್ತು ೫೬೬ ರಾಜಸಂಸ್ಥಾನಗಳು ಸ್ವತಂತ್ರವಾಗಿ ಕಾರ್ಯನಿರತವಾಗಿದ್ದವು. ಆದ್ದರಿಂದ ಬ್ರಿಟೀಷ್‌ರು ಹೋದನಂತರ ಸರದಾರ ವಲ್ಲಭಭಾಯಿ ಪಟೇಲರು ವಿವಿಧ ರಾಜಸಂಸ್ಥಾನಗಳನ್ನು ಭಾರತ ದೊಂದಿಗೆ ವಿಲೀನಗೊಳಿಸಿಕೊಂಡರು. ಕಾಶ್ಮೀರ, ಬರೋಡಾ, ತ್ರಾವಣಕೋರ, ಕಳಿಂಗ ಹೀಗೆ ೫೬೬ ಹಿಂದೂ ರಾಜ್ಯಗಳು ಮತ್ತು ೨ ಮುಸಲ್ಮಾನರ ರಾಜ್ಯಗಳು ಭಾರತದಲ್ಲಿ ವಿಲೀನವಾದವು. ಇದರ ಅರ್ಥ ಭಾರತದಲ್ಲಿ ಹಿಂದೂ ರಾಜರ ರಾಜ್ಯವೇ ಇತ್ತು; ಹಾಗಾದರೆ ಅನಿರೀಕ್ಷಿತವಾಗಿ ನಾವು ಸೆಕ್ಯುಲರ್ ಹೇಗಾದೆವು ? ಭಾರತವು ಯಾವಾಗಲೂ ಶರಣಾರ್ಥಿಗಳೆಂದು ಬಂದಿರುವ ಹಿಂದೂಗಳೇತರರಿಗೆ ಆಶ್ರಯ ನೀಡಿತ್ತು. ಯಾವಾಗ ಪರ್ಶಿಯಾದ ಮೇಲೆ ಮೊಗಲರು ಆಕ್ರಮಣ ಮಾಡಿದರೋ, ಆಗ ಇರಾನಿನ ಜನರಿಗೆ ಭಾರತ ಆಶ್ರಯ ನೀಡಿತ್ತು. ಜ್ಯೂಗಳಿಗೆ ಭಾರತ ಆಶ್ರಯ ನೀಡಿದೆ. ಇಂದು ಪಾರ್ಸಿಯಾದ ರತನ್ ಟಾಟಾ ಭಾರತದ ಅತೀ ದೊಡ್ಡ ಉದ್ಯಮಿಯಾಗಿದ್ದಾರೆ. ಭಾರತದಲ್ಲಿನ ಯಾವುದೇ ನಾಗರಿಕರು ನೀವು ಪರ್ಶಿಯಾದಿಂದ ಬಂದಿದ್ದೀರಿ, ನೀವು ಪಾರ್ಸಿ ಆಗಿದ್ದೀರಿ ! ಎಂದು ಹೇಳುವುದಿಲ್ಲ. ನಾವು ಭಾರತೀಯರಾಗಿದ್ದೇವೆ ಎಂದು ಹೇಳುತ್ತೇವೆ, ರತನ್ ಟಾಟಾ ಕೂಡ ಭಾರತೀಯರೇ ಆಗಿದ್ದಾರೆ. ತಮ್ಮೊಂದಿಗೆ ಎಲ್ಲರನ್ನೂ ಕರೆದುಕೊಂಡು ಹೋಗುವುದೇ ಭಾರತದ ಪರಂಪರೆಯಾಗಿದೆ. ಆದ್ದರಿಂದ ನಮಗೆ ಯಾರೂ ಸೆಕ್ಯುಲರಿಸಮ್ ಕಲಿಸುವ ಆವಶ್ಯಕತೆಯಿಲ್ಲ.

ಯುರೋಪಿನ ಕ್ರೈಸ್ತ ಸಂಕಲ್ಪನೆ ಇರುವ ಸೆಕ್ಯುಲರ್ ಶಬ್ದದ ಉಗಮ

೧. ಯುರೋಪ್‌ನಲ್ಲಿ ಕ್ರೈಸ್ತಪಂಥದಲ್ಲಿನ ಕೆಥೋಲಿಕ್, ಪ್ರೊಟೆಸ್ಟೆಂಟ್ ಇತ್ಯಾದಿ ಅನೇಕ ಉಪಪಂಥಗಳಲ್ಲಿ ನಡೆಯುವ ಭೀಕರ ರಕ್ತಪಾತವನ್ನು ತಡೆಯಲು ಸೆಕ್ಯುಲರಿಸಮ್ನ ಜನ್ಮವಾಯಿತು !

ಹಿಂದೆ ಸಂಪೂರ್ಣ ಯುರೋಪ್‌ವು ತಥಾಕಥಿತ ಪಾವನ ಕ್ರೈಸ್ತ ಸಾಮ್ರಾಜ್ಯವಾಗಿತ್ತು. ಆಗ ಯುರೋಪ್‌ನಲ್ಲಿ ಯೇಸುವನ್ನು ಈಶ್ವರನ ದೂತ ಬೈಬಲ್ ಧರ್ಮಪುಸ್ತಕ ಮತ್ತು ಪೋಪ್ ಅಂದರೆ ಈಶ್ವರನ ಪ್ರತ್ಯಕ್ಷ ಪ್ರತಿನಿಧಿ ಎಂದು ನಂಬುವುದು ಅನಿವಾರ್ಯವಾಗಿತ್ತು. ಇಲ್ಲದಿದ್ದರೆ ಮೃತ್ಯುದಂಡವನ್ನು ನೀಡಲಾಗುತಿತ್ತು. ಯುರೋಪ್‌ನಲ್ಲಿ ಕ್ರೈಸ್ತರು ಕೆಥೋಲಿಕ್ ಪ್ರೊಟೆಸ್ಟೆಂಟ್ ಪ್ರಿಸ್ಬೆರಿಯನ್ ಆರ್ಥೊಡಾಕ್ಸ್ ಇತ್ಯಾದಿ ಅನೇಕ ಉಪಪಂಥಗಳಲ್ಲಿ ವಿಭಜಿಸಲ್ಪಟ್ಟಿದ್ದಾರೆ. ಆಸಮಯದಲ್ಲಿ ಯುರೋಪ್‌ನಲ್ಲಿನ ವಿವಿಧ ದೇಶಗಳ ರಾಜರು ವಿವಿಧ ಕ್ರೈಸ್ತ ಉಪಪಂಥಗಳಿಗೆ ರಾಜ ಮನ್ನಣೆ ನೀಡುತ್ತಿದ್ದರು. ಇದರಿಂದ ರಾಜ ಯಾವ ಉಪಪಂಥವನ್ನು ಪುರಸ್ಕರಿಸುವನೋ, ಅವನು ಇತರ ಉಪಪಂಥಗಳ ವಿರುದ್ಧ ಷಡ್ಯಂತ್ರವನ್ನು ರಚಿಸಿ ಅವರನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದ್ದನು. ಕ್ರಿ.ಶ. ೧೩ ರಿಂದ ೧೭ ನೇ ಶತಮಾನದ ವರೆಗೆ ಕೋಟಿಗಟ್ಟಲೆ ಮಹಿಳೆಯರು, ಪುರುಷರು ಮತ್ತು ಮಕ್ಕಳು ಈ ಷಡ್ಯಂತ್ರದಿಂದ ಮೃತಪಟ್ಟರು. ಮಹಿಳೆಯರ ಬಲಾತ್ಕಾರ ವಾಯಿತು. ಅನೇಕರನ್ನು ಜೀವಂತವಾಗಿ ಸುಟ್ಟರು. ಈ ಪರಸ್ಪರ ಯುದ್ಧ ಕೊನೆಗಾಣದಿರುವಾಗ ೧೬೪೮ ರಲ್ಲಿ ಯುರೋಪ್‌ನಲ್ಲಿ ಎಲ್ಲರೂ ಪರಸ್ಪರರಲ್ಲಿ ಶಾಂತಿ ಒಪ್ಪಂದ ಮಾಡಿಕೊಂಡರು. ಈ ಒಪ್ಪಂದವನ್ನು ವೆಸ್ಟ್‌ಫೆಲಿಯಾದ ಶಾಂತಿ ಒಪ್ಪಂದ ಎಂದು ಗುರುತಿಸಲಾಗುತ್ತದೆ. ಇದರಿಂದಲೇ ಸೆಕ್ಯುಲರಿಸಮ್ ಪ್ರಾರಂಭವಾಯಿತು. ಈ ಒಪ್ಪಂದಕ್ಕನುಸಾರ ರಾಜತನ್ನ ರಾಜ್ಯದಲ್ಲಿನ ರಾಜಮನ್ನಣೆ ಇಲ್ಲದಿರುವ ಇತರ ಕ್ರೈಸ್ತ ಉಪಪಂಥದ ನಾಗರಿಕರ ಕೊಲೆ ಮಾಡಬಾರದು ಅಥವಾ ಪಂಥ ಪರಿವರ್ತನೆಗಾಗಿ ಅವರ ಮೇಲೆ ಒತ್ತಡ ಹೇರಬಾರದು ಎಂದು ನಿರ್ಧರಿಸಲಾಯಿತು. ಈ ಒಪ್ಪಂದದ ನಂತರವೂ ವಿಭಿನ್ನ ಪಂಥಗಳಲ್ಲಿ ಗೌರವ, ಸನ್ಮಾನದ ಭಾವ ಇಂದಿನವರೆಗೂ ಕಂಡುಬರುವುದಿಲ್ಲ.

ಈ ಒಪ್ಪಂದದ ನಂತರ ಕೇವಲ ರಾಜ ಮತ್ತು ಚರ್ಚ್‌ಗಳ ಧಾರ್ಮಿಕ ಅಧಿಕಾರ ಬೇರೆ ಬೇರೆಯಾದವು. ಚರ್ಚ್ ಕೇವಲ ದಿವ್ಯತ್ವಕ್ಕೆ ಸಂಬಂಧಿಸಿದ(ಪಾರಲೌಕಿಕ ವಿಷಯಗಳ) ನಿಯಮಗಳನ್ನು ಮಾಡುವುದು ಮತ್ತು ರಾಜನು ಜೀವನಕ್ಕೆ ಸಂಬಂಧಿಸಿದ ವಿವಾಹ, ಶಿಷ್ಟಾಚಾರ, ಅಪರಾಧ ಇತ್ಯಾದಿಗಳ ವಿಷಯದಲ್ಲಿ (ಲೌಕಿಕ ವಿಷಯಗಳ) ಕಾನೂನುಗಳನ್ನು ಮಾಡುವನು ಹೀಗೆ ವಿಭಜನೆಯಾಯಿತು. ಯುರೋಪ್ ದೇಶಗಳು ಧಾರ್ಮಿಕ ಜೀವನದಲ್ಲಿ ಕ್ರೈಸ್ತ ಉಪಪಂಥದಲ್ಲಿನ ಒಬ್ಬನನ್ನು ಅಧಿಕೃತ ಪಂಥವೆಂದು ಘೋಷಣೆ ಮಾಡಿತು; ಆದರೆ ರಾಜ್ಯವ್ಯವಸ್ಥೆಯ ಮೂಲಕ ಸಂಚಲಿತ ನಾಗರಿಕ ಜೀವನವನ್ನು ಪಂಥನಿರಪೇಕ್ಷ (ಸೆಕ್ಯುಲರ್) ಮಾಡಿ ಯಾವುದೇ ಕ್ರೈಸ್ತ ಉಪಪಂಥಕ್ಕೆ ಬೇರೆ ಮನ್ನಣೆಯನ್ನು ನೀಡಲಾಗುವುದಿಲ್ಲ ಎಂದು ನಿರ್ಧರಿಸಲಾಯಿತು.

೨. ೧೭೭೬ ರಲ್ಲಿ ಅಮೇರಿಕಾದಲ್ಲಿ ಪ್ರಥಮ ಪಂಥನಿರಪೇಕ್ಷ (ಜಾತ್ಯತೀತ) ರಾಜ್ಯ !
ಅನಂತರ ೧೭೭೬ ರಲ್ಲಿ ಸ್ವತಂತ್ರ ಅಮೇರಿಕಾದ ಘೋಷಣೆಯಾದ ನಂತರ ಅಲ್ಲಿನ ಧಾರ್ಮಿಕ ಮತ ಮತಾಂತರ (ಕ್ರೈಸ್ತ ಉಪಪಂಥದಲ್ಲಿನ ಮತಭಿನ್ನತೆ) ನೋಡಿ ಲಿಖಿತ ಸಂವಿಧಾನಸಹಿತ ಮೊದಲ ಪಂಥನಿರಪೇಕ್ಷ ರಾಜ್ಯ, ಸಂಯುಕ್ತ ಸಂಸ್ಥಾನ ಅಮೇರಿಕಾದ ಘೋಷಣೆಯನ್ನು ಮಾಡಲಾಯಿತು.

೩. ಯುರೋಪ್‌ನಲ್ಲಿ ಬಂದಿದ್ದ ಸಾಂಸ್ಕೃತಿಕ ಆಂದೋಲನದ ಪ್ರಭಾವದಿಂದ ಚರ್ಚ್‌ಗಳ ವಿರುದ್ಧ ಸೆಕ್ಯುಲರ್ ಶಬ್ದ ಉಗಮವಾಯಿತು.
೧೮೫೧ ರಲ್ಲಿ ಆಂಗ್ಲ ಲೇಖಕ ಜಾರ್ಜ್ ಜೈಕಬ್ ಹೊಲಿಒಕ್ ಇವನು ಸೆಕ್ಯುಲರಿಸಮನ್ನು ಚರ್ಚ್‌ನ ಉಪದೇಶ ಮತ್ತು ಅನುಶಾಸನದಿಂದ ಮುಕ್ತ ಜೀವನ ಎಂಬ ಅರ್ಥದಲ್ಲಿ ಉಲ್ಲೇಖಿಸಿದ್ದನು. ರೆನೆಸಾ ಅಂದರೆ ಮಧ್ಯಕಾಲೀನ ಯುರೋಪ್‌ನಲ್ಲಿ ಬಂದಿದ್ದ ಸಾಂಸ್ಕೃತಿಕ ಆಂದೋಲನದ ಪ್ರಭಾವದಿಂದ ಚರ್ಚ್‌ನ ವಿರುದ್ಧ ಈ ನಿಲುವಿನ ಉಗಮವಾಯಿತು. ಈ ನಿಲುವಿನ ವಿಸ್ತಾರ ಈ ಮುಂದಿನಂತಿದೆ.

ಅ. ಯುರೋಪ್‌ನಲ್ಲಿನ ಲೇಖಕರ ಅಭಿಪ್ರಾಯದಂತೆ, ಸೆಕ್ಯುಲರ್ ರಾಜ್ಯವೆಂದರೆ ಪಂಥದ ಯಾವುದೇ ಪ್ರಕರಣದಲ್ಲಿ ಸರಕಾರ ಆಸಕ್ತಿಯನ್ನು ತೋರಿಸಬಾರದು. ಈ ಪಂಥದ ಅನುಯಾಯಿಗಳಿಗೆ ಯಾವುದೇ ವಿಶೇಷರಕ್ಷಣೆ ನೀಡಬಾರದು, ಅವರನ್ನು ವಿರೋಧಿಸಬಾರದು ಮತ್ತು ಅವರನ್ನು ಪರಸ್ಪರ ವಿರೋಧಿಸಲು ಬಿಡಬಾರದು.

ಆ. ಸಮಾಜದ ಸಂಚಲನವನ್ನು ಚರ್ಚ್ ಅಥವಾ ಪಾದ್ರಿಯ ಆದೇಶದಿಂದ ನಡೆಸದೆ ಕೆಲವು ಸಾಮಾನ್ಯ ಹಾಗೂ ವ್ಯಾಪಕ ನಿಯಮಗಳ ಅಂತರ್ಗತ ರಾಜಕಾರಣಿಗಳಿಗೆ ಮಾಡಲು ಬರಬೇಕು. ರಾಜಕಾರಣಿಗಳು ಚರ್ಚ್‌ನ ಆದೇಶ ಮತ್ತು ಬಂಧನಗಳಿಂದ ಮುಕ್ತರಾಗಿರಬೇಕು. ರಾಜ್ಯಾಡಳಿತ ಬೇರೆ ಹಾಗೂ ಧರ್ಮಾಡಳಿತ ಬೇರೆ ಇರಬೇಕು. ಇಬ್ಬರೂ ಪರಸ್ಪರ ಕಚ್ಚಾಟ ಮಾಡಬಾರದು.

ಇ. ಸೆಕ್ಯುಲರ್ ಆಗಿರುವ ಯುರೋಪ್‌ನಲ್ಲಿ ಪ್ರತಿಯೊಂದು ರಾಜ್ಯವೂ ಒಂದಲ್ಲೊಂದು ಉಪಪಂಥಕ್ಕೆ ವಿಶೇಷ ರಕ್ಷಣೆಯನ್ನು ನೀಡಿದೆ. ಯಾವುದಾದರು ಕ್ರೈಸ್ತ ಉಪಪಂಥ ಯುರೋಪಿಯನ್ ನೇಶನ್ ಸ್ಟೇಟ್ನ ರಾಜಧರ್ಮವಾಗಿದೆ.

ತದ್ವಿರುದ್ಧ ಭಾರತ ಮಾತ್ರ ತನ್ನನ್ನು ಸೆಕ್ಯುಲರ್ ಎಂದು ಘೋಷಣೆ ಮಾಡುವಾಗ ಯಾವುದೇ ಧರ್ಮಕ್ಕೆ ರಾಜಮನ್ನಣೆಯನ್ನು ನೀಡಲಿಲ್ಲ; ಆದರೆ ದೇಶದಲ್ಲಿನ ಅಲ್ಪಸಂಖ್ಯಾತರಿಗೆ (ಕ್ರೈಸ್ತರು ಮತ್ತು ಮುಸಲ್ಮಾನರಿಗೆ) ಸಂವಿಧಾನಿಕ ರಕ್ಷಣೆ ನೀಡಿ ಬಹುಸಂಖ್ಯಾತ ಹಿಂದೂಗಳಿಗೆ ಅದನ್ನು ನಿರಾಕರಿಸಿ ಸೆಕ್ಯುಲರ್ ಮತ್ತು ಸಮಾನತೆ ಎಂಬ ತತ್ತ್ವಗಳ ಘೋರ ಉಲ್ಲಂಘನೆ ಮಾಡಿದೆ.

ಜಾತ್ಯತೀತತೆ ಹಿಂದೂಗಳ ರಕ್ತದಲ್ಲಿಯೇ ಇದೆ !

ಆನಾದಿ ಕಾಲದಿಂದಲೂ ಆಧ್ಯಾತ್ಮಿಕವಾಗಿರುವ ಭಾರತ ಭೂಮಿಯ ರಕ್ತದಲ್ಲಿ ಪಂಥ ನಿರಪೇಕ್ಷತೆ(ಜಾತ್ಯತೀತತೆ) ಇದೆ. ೫ ಸಾವಿರ ವರ್ಷಗಳ ಹಿಂದೆಯೆ ನಾವು ಶಾಂತಿಪಾಠದ ಮೂಲಕ ವಿಶ್ವದಲ್ಲಿನ ಎಲ್ಲ ಜನರೂ ಸುಖಿ ಮತ್ತು ರೋಗಮುಕ್ತರಾಗಬೇಕು, ಎಲ್ಲ ಜನರು ಮಂಗಲಮಯ ಘಟನೆಯ ಸಾಕ್ಷಿದಾರರಾಗಬೇಕು ಹಾಗೂ ಯಾವುದೇ ವ್ಯಕ್ತಿಯ ಭಾಗ್ಯದಲ್ಲಿದುಃಖ ಬರಬಾರದು ಎಂದು ಘೋಷಣೆ ಮಾಡಿದ್ದೇವೆ.

ಧರ್ಮಾಧಿಷ್ಠಿತ ಹಿಂದೂರಾಷ್ಟ್ರದ ಬೇಡಿಕೆ ಏಕೆ ?

೧೯೪೭ ರಲ್ಲಿ ಭಾರತ ಸ್ವತಂತ್ರವಾದ ನಂತರ ಇಲ್ಲಿ ಭಾರತೀಯ ಸಂವಿಧಾನ ಬಂದಿತು. ಸ್ವತಂತ್ರವೆಂದರೇನು ? ಸ್ವಂತದ ತಂತ್ರ, ಅಂದರೆ ವ್ಯವಸ್ಥೆ ! ನಿಜವಾಗಿಯೂ ಇಂದು ಭಾರತ ಸ್ವತಂತ್ರ ವಾಗಿದೆಯೆ ? ಹಿಂದೂ ಧರ್ಮಕ್ಕನುಸಾರ ಆದರ್ಶ ರಾಜ್ಯವ್ಯವಸ್ಥೆಯ ಅನೇಕ ಯಶಸ್ವಿ ಉದಾಹರಣೆಗಳಿರುವಾಗ ಇಂದು ನಾವು ವಿದೇಶಿ ಸಂಕಲ್ಪನೆಯನ್ನು ಆಧರಿಸಿದ ರಾಜ್ಯ ವ್ಯವಸ್ಥೆಯ ಮೂಲಕ ನಮ್ಮ ದೇಶವನ್ನು ನಡೆಸುತ್ತಿದ್ದೇವೆ. ಇದಕ್ಕೆ ಸ್ವತಂತ್ರ ಅಂದರೆ ಸ್ವ-ವ್ಯವಸ್ಥೆ ಎಂದು ಹೇಳಬೇಕೇ ? ಪ್ರಜಾಪ್ರಭುತ್ವದಲ್ಲಿನ ವಿವಿಧ ವ್ಯವಸ್ಥೆಗಳು ಮತ್ತು ಪ್ರಾಚೀನ ವ್ಯವಸ್ಥೆಯನ್ನು ಅಭ್ಯಾಸ ಮಾಡಿದರೆ ಹಿಂದೂ ರಾಷ್ಟ್ರದ ಅವಶ್ಯಕತೆಯು ಗಮನಕ್ಕೆ ಬರುತ್ತದೆ.

ಶಿಕ್ಷಣ ವ್ಯವಸ್ಥೆ

ಆಂಗ್ಲರು ಭಾರತಕ್ಕೆ ಬರುವ ಮೊದಲು ಗುರುಕುಲ ಪರಂಪರೆಯ ಮೂಲಕ ಶಿಕ್ಷಣವನ್ನು ನೀಡಲಾಗುತ್ತಿತ್ತು. ಆಂಗ್ಲರು ಕಾನೂನಿನ ಮೂಲಕ ಗುರುಕುಲಗಳನ್ನು ಮುಚ್ಚಿ ಅವರ ಮೆಕಾಲೆ ಶಿಕ್ಷಣ ಪದ್ಧತಿಯನ್ನು ಭಾರತ ದಲ್ಲಿ ಆರಂಭಿಸಿದರು. ದುರ್ಭಾಗ್ಯದಿಂದ ಸ್ವತಂತ್ರ ಭಾರತ ದಲ್ಲಿ ಇಂದಿಗೂ ಅದೇ ಶಿಕ್ಷಣ-ವ್ಯವಸ್ಥೆ ಮುಂದುವರಿದಿದೆ. ಈ ಶಿಕ್ಷಣಪದ್ಧತಿಯಲ್ಲಿ ಮೊದಲು ಡೊನೇಶನನಂತರ ಎಡ್ಮಿಶನ್ ಮತ್ತು ನಂತರ ಎಜ್ಯುಕೇಶನ್ ನೀಡಲಾಗುತ್ತದೆ. ಈ ಶಿಕ್ಷಣವ್ಯವಸ್ಥೆಯು ಭಾರತೀಯ ರನ್ನು ಬಿಲ್‌ಗೇಟ್ಸ್ ಮಾಡಲು ಕಲಿಸುವುದಿಲ್ಲ, ಅವನ ಸಿಇಒ ಅಂದರೆ ಕಾರ್ಯಕಾರಿ ಅಧಿಕಾರಿಗಳನ್ನಾಗಿ ಮಾಡಲು ಕಲಿಸುತ್ತದೆ. ನಮ್ಮ ಐಐಟಿಯಿಂದ ಹೊರಗೆಬರುವ ಎಲ್ಲ ಯುವಕರು ಕೆಲವು ವಿದೇಶಿ ಕಂಪನಿಗಳ ಪ್ಯಾಕೇಜ್ನ ಗುಲಾಮರಾಗುತ್ತಾರೆ.ತದ್ವಿರುದ್ಧಗುರುಕುಲದಲ್ಲಿ ೧೪ ವಿದ್ಯೆ ಹಾಗೂ ೬೪ ಕಲೆಗಳನ್ನು ಕಲಿಸಲಾಗುತ್ತಿತ್ತು. ಆದ್ದರಿಂದ ವಿದ್ಯಾರ್ಥಿಗಳು ಎಲ್ಲರೀತಿಯಿಂದ ಸಕ್ಷಮರಾಗುತ್ತಿದ್ದರು. ಈ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತಿತ್ತು ಹಾಗೂ ವಿದ್ಯಾರ್ಜನೆ ಆದನಂತರ ಗುರುದಕ್ಷಿಣೆಯೆಂದು ಗುರುಗಳು ವಿದ್ಯಾರ್ಥಿಗಳಿಂದ ಕೆಲವು ಮಹತ್ಕಾರ್ಯಗಳನ್ನು ಮಾಡುವ ಆಶ್ವಾಸನೆ ತೆಗೆದು ಕೊಳ್ಳುತಿದ್ದರು. ಈಗ ನಾವೇ ನಿರ್ಧರಿಸಬೇಕು, ಯಾವ ವ್ಯವಸ್ಥೆ ಚೆನ್ನಾಗಿದೆ, ಗುರುಕುಲದ್ದೋ ಅಥವಾ ಇಂದಿನ ವ್ಯವಸ್ಥೆಯೋ ?

ಕಾನೂನು ವ್ಯವಸ್ಥೆ

ಇಂದಿನ ಭಾರತದಲ್ಲಿ ಇಂಡಿಯನ್ ಪಿನಲ್ ಕೋಡ್ ೧೮೬೦ ಈ ಕಾನೂನು ಚಾಲ್ತಿಯಲ್ಲಿದೆ. ಈ ಕಾನೂನನ್ನು ಮೂಲತಃ ಆಂಗ್ಲರು ಭಾರತದಲ್ಲಿಪುನಃ ೧೮೫೭ ರಂತಹ ಪ್ರತಿಭಟನೆ ಆಗಬಾರದೆಂದು ಕ್ರಾಂತಿಕಾರಿಗಳ ಮೇಲೆ ಅಂಕುಶವನ್ನಿಡಲು ತಯಾರಿಸಿದ್ದರು. ಈ ಕಾನೂನಿನಿಂದ ಗಾಂಧಿ, ನೆಹರು, ನೇತಾಜಿ ಸುಭಾಷ್ಚಂದ್ರ ಬೋಸ್ ಮುಂತಾದವರೆಲ್ಲರನ್ನೂ ಅಪರಾಧಿಗಳೆಂದು ನಿರ್ಧರಿಸಲಾಗಿತ್ತು. ಇದೇ ಕಾನೂನು ಇಂದು ಕೂಡ ಚಾಲ್ತಿಯಲ್ಲಿರುವುದು ಆಶ್ಚರ್ಯಕರವಾಗಿದೆ. ಭಾರತದಲ್ಲಿ ಕಾನೂನು ತಯಾರಿಸುವ ಸಂಸತ್ತಿನಲ್ಲಿ ಅವಿದ್ಯಾವಂತರನ್ನು ಮತ್ತು ಅಪರಾಧಿಗಳನ್ನು ಆರಿಸುವುದರಿಂದ ಭಾರತದಲ್ಲಿನ ಹೊಸ ಕಾನೂನುಗಳು ಸಹ ದೋಷಯುಕ್ತವಾಗಿರುತ್ತವೆ. ಪ್ರಾಚೀನ ಕಾಲದಲ್ಲಿ ರಾಜ, ಪ್ರಧಾನಿ, ಸೇನಾಪತಿ ಮುಂತಾದವರು ತಕ್ಷಶಿಲೆ ಹಾಗೂ ನಾಲಂದಾದಲ್ಲಿನ ವಿಶ್ವವಿದ್ಯಾಲಯಗಳಿಂದ ಉನ್ನತಶಿಕ್ಷಣ ಪಡೆದು ನಂತರ ರಾಜ್ಯದ ಆಡಳಿತದಲ್ಲಿ ಭಾಗವಹಿಸುತ್ತಿದ್ದರು. ಇಂದು ಜನಪ್ರತಿನಿಧಿಗಳಾಗಲು ಯಾವುದೇ ಶೈಕ್ಷಣಿಕ ಅರ್ಹತೆ ಬೇಕಾಗುವುದಿಲ್ಲ, ಇದೊಂದು ಗಂಭೀರ ಸ್ಥಿತಿಯಾಗಿದೆ.

ರಾಜ್ಯವ್ಯವಸ್ಥೆ

ಸ್ವಾತಂತ್ರ್ಯದ ನಂತರ ದೇಶವನ್ನು ನಡೆಸಲು ಸಂವಿಧಾನವನ್ನು ನಿರ್ಮಿಸಲಾಯಿತು. ಮೊದಲ ವಿಶ್ವ ಯುದ್ಧದ ನಂತರ ಆಂಗ್ಲರು ಇಂಡಿಯಾ ಗವರ್ನನ್ಸ್ ಏಕ್ಟ್ ೧೯೩೫ಅನ್ನು ನಿರ್ಮಾಣ ಮಾಡಿದರು. ಇದನ್ನೆಮುಂದೆ ಇಂಡಿಯಾ ಇಂಡಿಪೆಂಡೆನ್ಸ್ ಏಕ್ಟ್ ಎಂದು ಭಾರತದ ಸಂವಿಧಾನದ ಸ್ವರೂಪದಲ್ಲಿ ಸ್ವೀಕರಿಸ ಲಾಯಿತು. ಆಂಗ್ಲರು ಭಾರತಕ್ಕೆ ದೇಶವನ್ನು ನಡೆಸಲುಸಂವಿಧಾನದ ಆವಶ್ಯಕತೆ ಇರುತ್ತದೆ ಎಂದು ಹೇಳಿ ಮೂರ್ಖರನ್ನಾಗಿ ಮಾಡಿದರು. ಪ್ರತ್ಯಕ್ಷದಲ್ಲಿ ಇಂದು ಸಹ ಇಂಗ್ಲೆಂಡ್‌ನಲ್ಲಿ ಅವರ ಲಿಖಿತ ಸಂವಿಧಾನವಿಲ್ಲ.

ಚುನಾವಣೆಯ ಪದ್ಧತಿ

ಪ್ರಸ್ತುತ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳನ್ನು ಆರಿಸುವ ಪದ್ಧತಿಯೂ ನಮ್ಮದಲ್ಲ. ಹಿಂದಿನ ಕಾಲದಲ್ಲಿ ಭಾರತದಲ್ಲಿ ಸಿಲೆಕ್ಟೆಡ್ ಅಂದರೆ ಅರ್ಹತೆಯಿರುವ ವ್ಯಕ್ತಿಯ ಕೈಗೆ ಅಧಿಕಾರ ಹೋಗುತಿತ್ತು. ಈಗ ಇಲೆಕ್ಟೆಡ್ ಅಂದರೆ ಬಹುಮತದ ಮೂಲಕ ಆರಿಸಲ್ಪಟ್ಟ ವ್ಯಕ್ತಿ ಅಧಿಕಾರಕ್ಕೆ ಬರುತ್ತಾನೆ. ಹಿಂದೆ ರಾಜಗುರು, ಧರ್ಮಾಚಾರ್ಯ ಹಾಗೂ ವಿದ್ವಾಂಸರು ರಾಜ್ಯ ನಡೆಸುವ ಅಧಿಕಾರ ಯಾರಿಗಿದೆ ಎಂಬುದನ್ನು ನಿರ್ಧರಿಸುತ್ತಿ ದ್ದರು. ಧೃತರಾಷ್ಟ್ರನು ದೊಡ್ಡವನಾಗಿದ್ದನು; ಆದರೆ ಜನ್ಮದಿಂದಲೆ ಕುರುಡನಾಗಿದ್ದರಿಂದ ಅವನಿಗೆ ರಾಜ್ಯ ವನ್ನು ಒಪ್ಪಿಸಲಿಲ್ಲ. ಮಗಧದ ರಾಜ ನಂದನು ಜನರಿಗೆ ಅನ್ಯಾಯ ಮಾಡಲು ಆರಂಭಿಸಿದಾಗ ಆರ್ಯಚಾಣಕ್ಯರು ವಿರೋಧಿಸಿ ಸಾಮ್ರಾಟ ಚಂದ್ರಗುಪ್ತನಿಗೆ ರಾಜ್ಯವನ್ನು ನಡೆಸಲು ಹೇಳಿದರು. ಹೀಗೆ ಮದವೇರಿದ ರಾಜನನ್ನು ಕೆಳಗಿಳಿಸುವ ವ್ಯವಸ್ಥೆಯೂ ಭಾರತದ ಪರಂಪರೆಯಲ್ಲಿತ್ತು. ಇಂದು ಭ್ರಷ್ಟ ಅಥವಾ ಕೊಲೆಗಾರ ನೇತಾರರನ್ನು ೫ ವರ್ಷಗಳು ಪೂರ್ಣವಾಗದೇ ನಮಗೆ ಹುದ್ದೆಯಿಂದ ಕೆಳಗಿಳಿಸಲು ಬರುವುದಿಲ್ಲ. ಜನರಿಗೆ ರೈಟ್‌ಟು ರಿಕಾಲ್ನ ಅಧಿಕಾರವಿಲ್ಲ. ಭಾರತದ ಸಂಸತ್ತಿನಲ್ಲಿ ಜನಹಿತಕ್ಕಾಗಿ ಕಾನೂನುಗಳನ್ನು ಮಾಡುವ ಸಂಸದರಲ್ಲಿ ಅಪರಾಧಿ ಹಿನ್ನೆಲೆಯ ಸಂಸದರ ಸಂಖ್ಯೆ ಶೇ. ೩೪.೫ ರಷ್ಟಿದೆ.

ಕಾನೂನು, ಶಿಕ್ಷಣಪದ್ಧತಿ, ಸಂವಿಧಾನ, ರಾಜ್ಯವ್ಯವಸ್ಥೆ ಯಾವುದೂ ನಮ್ಮದಲ್ಲ !, ಹೀಗಿದ್ದರೂ ನಾವು ಸ್ವತಂತ್ರರಾಗಿದ್ದೇವೆ ಎಂದು ಹೇಳುತ್ತೇವೆ !ಇವುಗಳಲ್ಲಿ ಯಾವುದೇ ಪದ್ಧತಿ ಅಥವಾ ವ್ಯವಸ್ಥೆಯು ಭಾರತದ್ದಲ್ಲ. ಆಂಗ್ಲರು ಕೊಟ್ಟರು ಮತ್ತು ನಾವು ಅದನ್ನು ಸ್ವೀಕರಿಸಿದೆವು. ಇದಕ್ಕೆ ನಾವು ಸ್ವತಂತ್ರವೆಂದು ಹೇಗೆ ಹೇಳಬಹುದು ? – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.

Leave a Comment