ಮುಸಲ್ಮಾನರಿಗೇ ಹಿಂದೂ ರಾಷ್ಟ್ರ ಬೇಕಾಗಿದೆ !

೧. ಕಾಂಗ್ರೆಸ್ ನಾಯಕರ ಹುರುಳಿಲ್ಲದ ಬಡ್ ಬಡ್ !

ಕಾಂಗ್ರೆಸ್ ಪಕ್ಷದಲ್ಲಿ ದಿಗ್ವಿಜಯ ಸಿಂಹ ಇವರನ್ನು ಎಲ್ಲಿಯೊ ಸ್ವಲ್ಪ ನಿಯಂತ್ರಿಸಿದಾಗ, ಮಣಿಶಂಕರ ಐಯ್ಯರ್ ಬಾಯಿ ಬಿಡುತ್ತಾರೆ. ಅವರನ್ನು ಪಕ್ಷದಿಂದ ಬದಿಗೆ ಸರಿಸಿದಾಗ ಶಶಿ ಥರೂರ್ ಮಾತನಾಡುತ್ತಾರೆ. ಒಟ್ಟಾರೆ ಈ ನಾಯಕರು ಕಾಂಗ್ರೆಸ್ಸನ್ನು ಸಂಪೂರ್ಣ ಮುಳುಗಿಸಲು ಎಂತಹ ಸಂಕಲ್ಪ ಮಾಡಿದ್ದಾರೆಂದರೆ, ದೇವರು ಅವತರಿಸಿದರೂ ಕಾಂಗ್ರೆಸ್ಸನ್ನು ಅದರ ದುರ್ದೆಸೆಯಿಂದ ರಕ್ಷಿಸಲು ಸಾಧ್ಯವಿಲ್ಲ. ಇಂದು ಕಾಂಗ್ರೆಸ್ಸನ್ನು ತನ್ನ ದುರ್ದೆಸೆಯಿಂದ ರಕ್ಷಿಸುವ ಹಾಗೂ ಆ ಪಕ್ಷವನ್ನು ಪುನಃ ಎತ್ತಿ ಹಿಡಿಯುವಂತಹ ಒಬ್ಬ ನೇತಾರನೂ ಆ ಪಕ್ಷದಲ್ಲಿ ಬಾಕಿ ಇಲ್ಲ. ನಿಸರ್ಗದಲ್ಲಿ ಮರದ ಮೇಲೆ ಸಾಕಲ್ಪಡುವ ಪರೋಪಜೀವಿಗಳು ಹೇಗೆ ಅದೇ ಮರದ ಜೀವನರಸವನ್ನು ಶೋಷಣೆ ಮಾಡಿ ಅದನ್ನು ಕೊಲ್ಲುತ್ತವೆಯೊ, ಅಂತಹ ವಿವಿಧ ನಮೂನೆಯ ನೇತಾರರು ಪಕ್ಷದಲ್ಲಿ ದೊಡ್ಡ ಪ್ರಮಾಣದಲ್ಲಿದ್ದಾರೆ.
ಶಶಿ ಥರೂರ್ ಅವರಲ್ಲಿ ಒಬ್ಬರು. ಸದ್ಯ ಅವರು ತಮ್ಮ ಪತ್ನಿಯ ಮರಣದ ಖಟ್ಲೆಯಿಂದಾಗಿ ಎಷ್ಟು ಗೊಂದಲ ಕ್ಕೀಡಾಗಿದ್ದಾರೆಂದರೆ, ಅದರ ಚರ್ಚೆಯಾಗಬಾರದೆಂದು ಅವರು ನಿರಂತರ ಒಂದಲ್ಲ ಒಂದು ವ್ಯರ್ಥ ವಿವಾದಗಳಲ್ಲಿ ಮಗ್ನರಾಗಬೇಕಾಗುತ್ತಿದೆ. ಇಲ್ಲದಿದ್ದರೆ, ಅವರು ಅಷ್ಟು ಹರಟೆ ಹೊಡೆಯುವ ವ್ಯಕ್ತಿಯಲ್ಲ; ಆದರೆ ಮಾಧ್ಯಮಗಳಿಂದ ‘ಸುನಂದಾ ಪುಷ್ಕರ ಮರಣದ ಪ್ರಕರಣದಲ್ಲಿ ಜಾಮೀನು ಸಿಕ್ಕಿದ ಆರೋಪಿ ಎಂದು ಚರ್ಚೆಯಾಗಬಾರದು; ಅದಕ್ಕಾಗಿ ಥರೂರ್ ಯಾವಾಗಲೂ ಬೇರೆಯೆ ಹುಚ್ಚುತನದ ಹೇಳಿಕೆಗಳ ಆಸರೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇಲ್ಲದಿದ್ದರೆ ಅವರು ಕೆಲವು ದಿನಗಳ ಹಿಂದೆ ‘ಭಾರತವು ಹಿಂದೂ ಪಾಕಿಸ್ತಾನವಾಗಬಹುದು, ಎಂಬ ಹುರುಳಿಲ್ಲದ ಭಾಷೆ ಉಪಯೋಗಿಸುತ್ತಿರಲಿಲ್ಲ. ‘ಪುನಃ ಅಂದರೆ ೨೦೧೯ ರಲ್ಲಿ ಭಾಜಪಕ್ಕೆ ಬಹುಮತ ಮತ್ತು ಅಧಿಕಾರ ಸಿಕ್ಕಿದರೆ, ಭಾರತ ಹಿಂದೂ ಪಾಕಿಸ್ತಾನ ಆಗುವುದು, ಎಂದು ಅವರು ಹೇಳಿದ್ದಾರೆ. ಅವರಿಗಾದರೂ ಅದರ ಅರ್ಥ ತಿಳಿದಿದೆಯೆ ? ಅವರ ಮಾತನ್ನು ಅವರು ಹೇಳಿದಂತೆಯೆ ಅರ್ಥ ಮಾಡಿಕೊಂಡರೆ, ಇಂದಿನ ವರೆಗಿನ ಭಾರತ ‘ಕಾಂಗ್ರೆಸ್ಸಿನ ಪಾಕಿಸ್ತಾನ ಆಗಿತ್ತೊ ಅಥವಾ ‘ಪುರೋಗಾಮಿ ಹಿಂದೂಸ್ತಾನ ಆಗಿತ್ತೊ, ಎಂಬ ಪ್ರಶ್ನೆ ನಿರ್ಮಾಣವಾಗುತ್ತದೆ. ಹಾಗಾದರೆ ಆ ಕಾಂಗ್ರೆಸ್ಸಿನ ಪಾಕಿಸ್ತಾನದ ಆಶಯವನ್ನು ತಿಳಿದುಕೊಳ್ಳಬೇಕಾಗಿದೆ.

೨. ಜಾತ್ಯತೀತ ರಾಜ್ಯಕ್ಕಿಂತ ಹಿಂದೂ ರಾಷ್ಟ್ರ ಸುರಕ್ಷಿತ !

ಹಿಂದೂ ಪಾಕಿಸ್ತಾನವೆಂದರೆ, ‘ಹಿಂದೂ ಧರ್ಮದವರ ವರ್ಚಸ್ವದ ಅಥವಾ ಹಿಂದೂ ಧರ್ಮಾಂಧತೆಯ ರಾಜ್ಯವಿರುವ ಪಾಕಿಸ್ತಾನ ಎಂದೆ ಥರೂರ್ ಇವರಿಗೆ ಹೇಳಲಿಕ್ಕಿದೆ; ಆದರೆ ಅವರು ಹೀಗೆ ಹೇಳುವ ಮೊದಲು ಹಿಂದೂಗಳ ಮತಾಂಧತೆಯ ರಾಜ್ಯ ಜಗತ್ತಿನಲ್ಲಿ ಎಲ್ಲಿ ಹಾಗೂ ಯಾವಾಗ ಇತ್ತು, ಎಂಬುದರ ಪುರಾವೆಯನ್ನು ಕೊಡುವುದು ಬೇಡವೆ ? ಉದಾಹರಣೆಗಾಗಿ, ಇತ್ತೀಚೆಗೆ ‘ಹಿಂದೂ ರಾಷ್ಟ್ರವೆಂದು ಜಗತ್ತಿನಲ್ಲಿ ಉಲ್ಲೇಖವಾಗುತ್ತಿದ್ದ ಏಕೈಕ ದೇಶ ನೇಪಾಳ ಇತ್ತು. ಈಗ ಅಲ್ಲಿಯ ಸಂವಿಧಾನವೂ ಬದಲಾಗಿದೆ ಹಾಗೂ ಅಲ್ಲಿ ರಾಜಮನೆತನ ಹೋಗಿ ಪ್ರಜಾಪ್ರಭುತ್ವವು ಜಾತ್ಯತೀತ ಸಂವಿಧಾನವನ್ನು ತಂದಿದೆ; ಆದರೆ ಆ ಜಾತ್ಯತೀತ ಸಂವಿಧಾನಕ್ಕೆ ಹೆದರಿದ ಮೊದಲಿನ ಸಮಾಜ ಘಟಕ ಯಾವುದು, ಎಂಬುದರ ಮಾಹಿತಿಯಾದರೂ ಥರೂರ್ ಅಥವಾ ತತ್ಸಮ ದೀವಟಿಗೆ ಹಿಡಿಯುವ ಜಾತ್ಯತೀತವಾದಿಗಳಿಗೆ ಇದೆಯೆ ? ಈ ಹಿಂದೆ ನೇಪಾಳದಲ್ಲಿ ಹೊಸತಾಗಿ ಸಂವಿಧಾನ ತಯಾರಿಸುವ ಪ್ರಯೋಗ ನಡೆಯಿತು ಹಾಗೂ ಅದರ ವಿರುದ್ಧ ಮತ್ತು ಪರವಾಗಿ ಬಹಳಷ್ಟು ಧ್ವನಿ ಎದ್ದಿತ್ತು.
ಅದರಲ್ಲಿ ಹಿಂದೂ ಧರ್ಮಕ್ಕೆ ಪ್ರಾಧಾನ್ಯತೆ ನೀಡುವ ಸಂವಿಧಾನವೆ ಇರಬೇಕು, ಎಂದು ಕೆಲವು ಗುಂಪಿನವರು ಒತ್ತಾಯಿಸಿದರು ಹಾಗೂ ಅದರಲ್ಲಿ ಹಿಂದೂಗಳೆ ಇದ್ದರು, ಎಂಬುದರಲ್ಲಿ ಸಂಶಯವಿಲ್ಲ; ಆದರೆ ನೇಪಾಳವನ್ನು ಜಾತ್ಯತೀತೆಯಿಂದ ದೂರಗೊಳಿಸಿ ಪುನಃ ‘ಹಿಂದೂ ರಾಷ್ಟ್ರ ಮಾಡಬೇಕೆಂದು ವಿನಂತಿಸುವ ಬೇರೆಯೆ ಒಂದು ಧರ್ಮದ ಸಮಾಜಘಟಕ ಇತ್ತು. ಆ ಘಟಕದ ಹೆಸರು ಮುಸಲ್ಮಾನ ಎಂದಿದೆ. ನೇಪಾಳದಲ್ಲಿ ಜಾತ್ಯತೀತ ಸಂವಿಧಾನ ಬೇಡ, ಏಕೆಂದರೆ ಅದರಿಂದ ಇಸ್ಲಾಮ್‌ಗೆ ಅಪಾಯವಿದೆ ಎಂದು ಹೇಳುತ್ತಾ ಈ ಮುಸಲ್ಮಾನರ ಗುಂಪು ಮತ್ತು ಅವರ ಸಂಘಟನೆಗಳು ರಸ್ತೆಗಿಳಿದಿತ್ತು; ಆದರೆ ಅಲ್ಲಿ ಇಸ್ಲಾಮಿ ಧರ್ಮದ ರಾಜ್ಯವಾಗಬೇಕೆಂದು ಕೂಡ ಅವರ ಬೇಡಿಕೆ ಇರಲಿಲ್ಲ. ಆದರೆ ಮುಸಲ್ಮಾನರಿಗೆ ತಮ್ಮ ಧರ್ಮವನ್ನು ಯೋಗ್ಯ ರೀತಿಯಲ್ಲಿ ಪಾಲನೆ ಮಾಡಲು ಸಾಧ್ಯವಾಗಬೇಕೆಂದು ಪುನಃ ಹಿಂದೂ ರಾಷ್ಟ್ರವಾಗಬೇಕು, ಎಂದು ಕೆಲವು ಚಮತ್ಕಾರಿಕ ಬೇಡಿಕೆ ಇತ್ತು; ಆದರೆ ಇಂತಹ ಚಿಕ್ಕಪುಟ್ಟ ವಿಷಯಗಳನ್ನು ಗಮನಿಸಲು ಥರೂರ್ ಅಥವಾ ಇತರ ಜಾತ್ಯತೀತವಾದಿಗಳಿಗೆ ಸಮಯ ಎಲ್ಲಿದೆ ? ಅವರಿಗೆ ತಮ್ಮ ಪಾಂಡಿತ್ಯವನ್ನು ಪ್ರದರ್ಶನ ಮಾಡುವುದರಲ್ಲಿ ಸಮಯ ಎಲ್ಲಿ ಸಿಗುತ್ತದೆ ? ಆದ್ದರಿಂದ ಇಂತಹ ನುಡಿಮುತ್ತುಗಳನ್ನು ಉಗುಳುವುದರಲ್ಲಿಯೆ ಅವರ ಜೀವನ ಮುಗಿದು ಹೋಗುತ್ತದೆ ಹಾಗೂ ಅದಕ್ಕೆ ಕಾಂಗ್ರೆಸ್ ಪಕ್ಷವು ಬಲಿಯಾಗುತ್ತದೆ.

೩. ಇಬ್ಬಗೆಯ ಪ್ರಸಾರಮಾಧ್ಯಮಗಳು ಮತ್ತು ಕಾಂಗ್ರೆಸ್ಸಿನ ಪಾಕಿಸ್ತಾನ !

ಈ ನೇಪಾಳಿ ಮುಸಲ್ಮಾನರಿಗೆ ಜಾತ್ಯತೀತ ಸಂವಿಧಾನ ಅಥವಾ ಅದಕ್ಕಿಂತಲೂ ‘ಹಿಂದೂ ರಾಷ್ಟ್ರ ಸುರಕ್ಷಿತವೆಂದು ಏಕೆ ಅನಿಸುತ್ತಿತ್ತು ?’ ಎಂಬುದರ ವಿವರಣೆಯನ್ನು ಕೂಡ ಓರ್ವ ಮುಸಲ್ಮಾನ ನಾಯಕಿ ಅನಾರ್ಕಲಿಮಿಯಾ ಇವರು ನೀಡಿದ್ದರು. ಅದು ಹೇಗಿದೆಯೆಂದರೆ, ‘ಜಾತ್ಯತೀತ ಸಂವಿಧಾನವೆಂದರೆ ಅದರಲ್ಲಿ ಕ್ರೈಸ್ತ ಮಿಶನರಿಗಳಿಗೆ ಬಹಿರಂಗವಾಗಿ ಮತಾಂತರಕ್ಕೆ ಆಮಂತ್ರಣ ಇದೆ ಹಾಗೂ ಅದರಿಂದ ಅಲ್ಪಸಂಖ್ಯಾತ ಮುಸಲ್ಮಾನ ಸಮಾಜಕ್ಕೆ ಅಪಾಯವಿದೆ. ಆದ್ದರಿಂದ ಹಿಂದೂ ರಾಷ್ಟ್ರ ಉತ್ತಮ, ಏಕೆಂದರೆ ಹಿಂದೂಗಳು ಮತಾಂತರದ ಅಟ್ಟಹಾಸ ಮಾಡಿ ಮುಸಲ್ಮಾನರನ್ನು ಗೋಳಾಡಿಸುವುದಿಲ್ಲ. ಇಂತಹ ವಾರ್ತೆಗಳನ್ನು ನಮ್ಮ ಭಾರತೀಯ ಮಾಧ್ಯಮಗಳಲ್ಲಿ ಹುಡುಕಬೇಕಾಗುತ್ತದೆ. ಇದು ಕಳವಳಕಾರಿಯಾಗಿದೆ; ಆದರೆ ಅವುಗಳನ್ನು ಮುದ್ರಿಸುವುದಿಲ್ಲ. ಏಕೆಂದರೆ ಅವುಗಳು ಹಿಂದೂ ಧರ್ಮದವರ ಧರ್ಮನಿರಪೇಕ್ಷತೆಯ ಪುರಾವೆಗಳಾಗಿರುತ್ತವೆ ಹಾಗೂ ‘ಹಿಂದೂ ರಾಷ್ಟ್ರ ಹೆಸರಿನ ಸಂಕಲ್ಪನೆಗೆ ಬಲ ನೀಡುವುದಾಗಿರುತ್ತವೆ. ಆದ್ದರಿಂದ ಅವುಗಳನ್ನು ಅಡಗಿಸುವುದನ್ನು ವಿಚಾರಸ್ವಾತಂತ್ರ್ಯವೆಂದು ಪರಿಗಣಿಸಲಾಗುತ್ತದೆ ಹಾಗೂ ಅವಿಷ್ಕಾರ ಸ್ವಾತಂತ್ರ್ಯದ ಜಯಘೋಷ ಮಾಡಲಾಗುತ್ತದೆ.
ಈ ಘಟನೆಯು ೩ ವರ್ಷ ಹಳೆಯದು; ಆದರೆ ಇದು ಎಷ್ಟು ಕನ್ನಡ, ಹಿಂದಿ, ಅಥವಾ ಆಂಗ್ಲ ವರ್ತಮಾನಪತ್ರಕೆಗಳು ಅಥವಾ ವಾಹಿನಿಗಳಲ್ಲಿ ಪ್ರಸಾರವಾಗಿದೆ ? ಅವು ಹುಡುಕಿದರೂ ಸಿಗಲಿಕ್ಕಿಲ್ಲ; ಆದರೆ ಅದೇ ಸಮಯದಲ್ಲಿ ‘ಹಿಂದೂ ರಾಷ್ಟ್ರವು ಹೇಗೆ ಧರ್ಮಾಂಧತೆ ಆಗಿದೆ, ಎಂಬುದರ ಪುರಾವೆಗಳನ್ನು ನೀಡಲು ಗೋಳವಲಕರ್ ಅಥವಾ ಸಾವರ್ಕರ್ ಇವರ ಹಳೆಯ ಲೇಖನಗಳ ಪುಸ್ತಕಗಳನ್ನು ಭೂತಕನ್ನಡಿ ಇಟ್ಟು ಪರಿಶೀಲಿಸಲಾಗುತ್ತದೆ. ಹಳಸಿದ ಸಾರನ್ನು ಉಕ್ಕೇರಿಸಿದಂತಾಗುತ್ತದೆ; ಆದರೆ ನೇಪಾಳದಲ್ಲಿನ ತಾಜಾ ಘಟನೆಗಳನ್ನು ಅಡಗಿಸಲಾಗುತ್ತದೆ. ಇದು ಇಂದಿನ ಪತ್ರಿಕಾರಂಗ ಅಥವಾ ಬುದ್ಧಿವಾದವಾಗಿದೆ. ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ ಬುಖಾರಿ ಇವರು ಕೂಡ ಕೆಲವು ವರ್ಷಗಳ ಹಿಂದೆ ಹಿಂದೂಗಳ ಧಾರ್ಮಿಕ ಸೌಹಾರ್ದತೆಯ ಸಾಕ್ಷಿ ಕೊಡುವಾಗ ಹೀಗೆಂದಿದ್ದರು, ‘ಭಾರತ ಜಾತ್ಯತೀತ ದೇಶವಾಗಿ ಉಳಿಯಲು ಇದರ ಹಿಂದೆ ಯಾವ ಪ್ರಗತಿಪರ ಪಕ್ಷ ಅಥವಾ ನೇತಾರರ ಪಾಲು ಸ್ವಲ್ಪವೂ ಇಲ್ಲ. ಅದು ಬಹಸಂಖ್ಯಾತ ಹಿಂದೂ ಸಮಾಜದ ಮಾನಸಿಕತೆಯ ಪರಿಣಾಮವಾಗಿದೆ. ಆದರೂ ಥರೂರ್ ಅಥವಾ ತತ್ಸಮ ದೀವಟಿಗೆ ಹಿಡಿಯುವವರಿಗೆ ಇಂತಹ ವಿಷಯಗಳು ತಿಳಿಯಲು ಸಾಧ್ಯವಿಲ್ಲ ಅಥವಾ ತಿಳಿಯುವುದೂ ಇಲ್ಲ. ಪುಸ್ತಕಗಳ ಗಿಳಿಪಾಠ ಮಾಡುವವರಿಗೆ ವಾಸ್ತವಿಕತೆಯ ಸಂಬಂಧವೆಲ್ಲಿರುತ್ತದೆ ? ಆದ್ದರಿಂದ ಇಂತಹ ಜನರು ಯಾವಾಗಲೂ ಕಾಂಗ್ರೆಸ್ಸಿ-ಪಾಕಿಸ್ತಾನದಲ್ಲಿ ರಮಿಸುತ್ತಾ ಇರುತ್ತಾರೆ.

೪. ಕಾಶ್ಮೀರ ಪಾಕಿಸ್ತಾನವಾಗುವುದರ ಹಿಂದೆ ಕಾಂಗ್ರೆಸ್ಸಿನ ‘ಸೆಕ್ಯುಲರ್ ನಿಲುವು !

ಹಿಂದೂ ಉಗ್ರವಾದವೆಂಬ ಹೆಸರಿನ ಪಾಖಂಡವು ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮಣ್ಣು ಮುಕ್ಕಿಸಿದೆ. ಈಗ ಉಳಿದಿರುವ ಅಲ್ಪಸ್ವಲ್ಪ ಶಕ್ತಿಯನ್ನು ಮುಗಿಸಲು ಥರೂರ್ ಇವರಂತಹ ಯೋಧರು ಕಾರ್ಯನಿರತರಾಗಿದ್ದಾರೆ. ಇದರಿಂದ ಬಹುಸಂಖ್ಯಾತ ಹಿಂದೂ ಮತದಾರರಲ್ಲಿ ಇನ್ನೂ ಯಾರಾದರೂ ಸಹಾನುಭೂತಿ ತೋರಿಸುವವರು ಬಾಕಿ ಇದ್ದರೆ, ಅವರನ್ನು ಕಾಂಗ್ರೆಸ್ಸಿನಿಂದ ಓಡಿಸಲು ಹೊಸ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಅದಕ್ಕೆ ‘ಹಿಂದೂ ಪಾಕಿಸ್ತಾನ ಎಂದು ಅವರು ಹೆಸರನ್ನು ನೀಡಿದ್ದಾರೆ. ಅದರಿಂದ ಅವರು ಒಂದು ವಿಷಯವನ್ನು ಒಪ್ಪಿಕೊಳ್ಳುತ್ತಾರೆ, ಅದೇನೆಂದರೆ, ‘ಪಾಕಿಸ್ತಾನ ಮತಾಂಧ ದೇಶವಾಗಿದೆ ಹಾಗೂ ‘ಭಾರತಕ್ಕೆ ಇಂತಹ ಮನಸ್ಥಿತಿಯಿಂದ ಅಪಾಯವಿದೆ; ಆದರೆ ಆ ಮಾನಸಿಕತೆ ಸ್ವಾತಂತ್ರ್ಯಪೂರ್ವ ಕಾಲ ದಿಂದಲೂ ಇತ್ತು ಹಾಗೂ ಅದರಿಂದಲೆ ದೇಶದ ವಿಭಜನೆಯಾಯಿತು. ಉಳಿದ ಭಾರತದಲ್ಲಿನ ಬಹುಸಂಖ್ಯಾತ ಹಿಂದೂಗಳು ಮುಸಲ್ಮಾನರೊಂದಿಗೆ ಪರಕೀಯರಂತೆ ವರ್ತಿಸಲಿಲ್ಲ ಅಥವಾ ಭೇದಭಾವ ತೋರಿಸಲಿಲ್ಲ. ಬಹುಸಂಖ್ಯಾತ ಹಿಂದೂ ಇರುವಲ್ಲಿಯೆ ಸೆಕ್ಯುಲರ್ ವಿಚಾರ ತಳವೂರಲು ಸಾಧ್ಯ ಹಾಗೂ ಆ ಪ್ರಮಾಣ ಏರುಪೇರಾದರೆ ಕಾಶ್ಮೀರವೂ ಪಾಕಿಸ್ತಾನ ಆಗಬಹುದು.
ಯಾವ ಕಾಂಗ್ರೆಸ್ಸಿನ ಧೋರಣೆಗಳ ಮನೋವೃತ್ತಿಯನ್ನು ಥರೂರ್ ಗುಣಗಾನ ಮಾಡುತ್ತಿದ್ದಾರೆಯೊ, ಆ ಧೋರಣೆಗಳಿಂದ ಕಾಶ್ಮೀರ ಭಾರತದಲ್ಲಿದ್ದರೂ ಅದನ್ನು ಪಾಕಿಸ್ತಾನ ಮಾಡಿ ಬಿಟ್ಟಿದ್ದಾರೆ. ಅದಕ್ಕೆ ವಿಕೃತ ಸೆಕ್ಯುಲರ್ ರಾಜಕಾರಣವೆ ಹೊಣೆಯಾಗಿದೆ. ಒಂದು ವೇಳೆ ವಿಭಜನೆಯನಂತರ ಉಳಿದ ಭಾರತ ‘ಹಿಂದೂಸ್ಥಾನ ಆಗುತ್ತಿದ್ದರೆ, ಕಾಶ್ಮೀರವೂ ಕಾಂಗ್ರೆಸ್ಸಿನ ಪಾಕಿಸ್ತಾನ ಆಗುತ್ತಿರಲಿಲ್ಲ ಅಥವಾ ಅಂತಹ ವೃತ್ತಿ ಪುನಃ ಭಾರತದಲ್ಲಿ ತಲೆಯೆತ್ತಲು ಸಾಧ್ಯವಿರಲಿಲ್ಲ. ಮೂಲತಃ ಕಾಂಗ್ರೆಸ್ಸಿನ ಪಾಕಿಸ್ತಾನವನ್ನು ಅನುಭವಿಸಿರುವ ಹಿಂದೂ-ಮುಸಲ್ಮಾನರು ಭಾರತವನ್ನು ‘ಸೆಕ್ಯುಲರ್ ಆಗಿಡಲು ಭಾಜಪವನ್ನು ಬಹುಮತದಿಂದ ಆರಿಸಿದ್ದಾರೆ ಹಾಗೂ ಅದನ್ನು ನಿಜವಾಗಿಯೂ ಪಾಕಿಸ್ತಾನ ಆಗದಂತೆ ತಡೆದಿದ್ದಾರೆ. ಪುನಃ ಇಲ್ಲಿ ಕಾಂಗ್ರೆಸ್ ಅಥವಾ ಅದರ ನೇತೃತ್ವದಲ್ಲಿ ಸೆಕ್ಯುಲರ್ ವಿಚಾರದ ಆಡಳಿತ ಬಂದರೆ ಭಾರತವೆ ಮತಾಂಧ ಜಿಹಾದಿ ಪಾಕಿಸ್ತಾನವಾಗಬಹುದು, ಎಂದು ಜನರಿಗೆ ಭಯವಾಗುತ್ತದೆ. ಆದ್ದರಿಂದ ಭಾರತೀಯರಿಗೆ ನೇಪಾಳಿ ಮುಸಲ್ಮಾನರಂತೆ ಭಾರತ ‘ಹಿಂದೂ ರಾಷ್ಟ್ರವಾಗಬೇಕು ಎಂದು ಅನಿಸುತ್ತದೆ. ಇಂದು ಅದು ಮೋದಿ-ಭಾಜಪದ ಜನಪ್ರಿಯತೆ ಆಗಿರದೆ ಥರೂರ್-ರಾಹುಲ್ ದೇಶವನ್ನು ಪಾಕಿಸ್ತಾನ ಮಾಡಿ ಬಿಡುವರು, ಎಂದು ಮೋದಿ ಸಮೂಹ ಭಯ ನಿರ್ಮಾಣ ಮಾಡುತ್ತಿದೆ. – ಶ್ರೀ. ಭಾವೂ ತೋರ್ಸೆಕರ್, ಹಿರಿಯ ಪತ್ರಕರ್ತ, ಮುಂಬಯಿ. (ಆಧಾರ: JagataPahara.Blogspot.com)

Leave a Comment