ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ಮತ್ತು ಅವರಿಗೆ ಸದ್ಗತಿಯನ್ನು ಪ್ರದಾನಿಸುವ ದೇವತೆ – ದತ್ತ

ಅತೃಪ್ತ ಪೂರ್ವಜರಿಂದ ತೊಂದರೆಯಾಗುವ ಸಾಧ್ಯತೆ ಇದೆ ಅಥವಾ ತೊಂದರೆ ಆಗುತ್ತಿದೆ, ಎಂಬುದನ್ನು ಅಧ್ಯಾತ್ಮದಲ್ಲಿನ ಉನ್ನತರೇ ಹೇಳಬಲ್ಲರು. ಹಾಗೆ ಹೇಳುವ ಉನ್ನತರು ಸಿಗದೇ ಇದ್ದಾಗ ಮತ್ತು ಮುಂದೆ ನೀಡಿದ ತೊಂದರೆಗಳು ಆಗುತ್ತಿದ್ದಲ್ಲಿ ಅವು ಅತೃಪ್ತ ಪೂರ್ವಜರಿಂದ ಆಗುತ್ತಿವೆ ಎಂದು ತಿಳಿದು ಸಾಧನೆಯನ್ನು ಮಾಡಬೇಕು

ಶ್ರಾದ್ಧವನ್ನು ಯಾವಾಗ ಮಾಡಬೇಕು?

ಸಾಮಾನ್ಯವಾಗಿ ಪ್ರತಿವರ್ಷ ಮರಣ ಹೊಂದಿದ ತಿಥಿಯ ದಿನ (ಆಂಗ್ಲ ದಿನದರ್ಶಿಕೆಯ ದಿನಾಂಕದಂದು ಮಾಡದೇ, ಹಿಂದೂ ಪಂಚಾಂಗದ ಪ್ರಕಾರ ಇರುವ ತಿಥಿಯಂದು) ಶ್ರಾದ್ಧವನ್ನು ಮಾಡಬೇಕು. ಮೃತ್ಯುವಿನ ತಿಥಿಯು ಗೊತ್ತಿಲ್ಲದೇ, ಕೇವಲ ತಿಂಗಳು ಮಾತ್ರ ಗೊತ್ತಿದ್ದರೆ ಆ ತಿಂಗಳ ಅಮಾವಾಸ್ಯೆಯಂದು ಶ್ರಾದ್ಧವನ್ನು ಮಾಡಬೇಕು.

ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡಲು ಸಾಧ್ಯವಾಗದಿದ್ದರೆ ಸೂರ್ಯನು ತುಲಾ ರಾಶಿಯಲ್ಲಿರುವವರೆಗೆ ಮಾಡಬಹುದು !

ಯಾರು ಪಿತೃಪಕ್ಷದ ಸಮಯದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡಲಿಲ್ಲವೋ ಅವರು ಈ ವರ್ಷದ ೧೫.೧೧.೨೦೧೬ ರ ವರೆಗೆ ಶಾಸ್ತ್ರೋಕ್ತವಾಗಿ ಮಹಾಲಯ ಶ್ರಾದ್ಧವನ್ನು ಆಚರಿಸಿ ಪೂರ್ವಜರ ತೊಂದರೆಯಿಂದ ತಮ್ಮನ್ನು ಮುಕ್ತಗೊಳಿಸಿಕೊಳ್ಳಿರಿ.

ತ್ರಿಪಿಂಡಿ ಶ್ರಾದ್ಧ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ !

ಪ್ರತಿಯೊಂದು ಕುಟುಂಬದಲ್ಲಿ ಈ ವಿಧಿಯನ್ನು ಪ್ರತಿ ೧೨ ವರ್ಷಗಳಿಗೊಮ್ಮೆ ಮಾಡಬೇಕು ಅಥವಾ ಪಿತೃಗಳಿಂದ ತೊಂದರೆಯಾಗುತ್ತಿರುವ ಕುಟುಂಬಗಳು ಈ ವಿಧಿಯನ್ನು ದೋಷ ನಿವಾರಣೆಗಾಗಿ ಮಾಡಬೇಕು.

ನಾರಾಯಣಬಲಿ ಮತ್ತು ನಾಗಬಲಿ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ

ನಾರಾಯಣಬಲಿ ೧. ಉದ್ದೇಶ : ದುರ್ಮರಣ ಹೊಂದಿದ ಅಥವಾ ಆತ್ಮಹತ್ಯೆ ಮಾಡಿದ ಜೀವದ ಕ್ರಿಯಾಕರ್ಮಗಳು ಆಗದೇ ಇರುವುದರಿಂದ ಪ್ರೇತತ್ವವು ಮುಗಿದು ಪಿತೃತ್ವವು ಸಿಗದೇ ಇದ್ದುದರಿಂದ ಅದರ ಲಿಂಗದೇಹವು ಹಾಗೆಯೇ ಅಲೆದಾಡುತ್ತಿರುತ್ತದೆ. ಇಂತಹ ಲಿಂಗದೇಹವು ಕುಲದಲ್ಲಿ ಸಂತತಿ ಆಗಬಾರದೆಂದು ತೊಂದರೆಗಳನ್ನು ಕೊಡುತ್ತದೆ. ಅದೇ ರೀತಿ ಯಾವುದಾದರೊಂದು ರೀತಿಯಲ್ಲಿ ವಂಶಜರಿಗೆ ತೊಂದರೆ ಕೊಡುತ್ತದೆ. ಇಂತಹ ಲಿಂಗದೇಹಕ್ಕೆ ಗತಿಯನ್ನು ನೀಡಲು ನಾರಾಯಣಬಲಿ ವಿಧಿಯನ್ನು ಮಾಡಬೇಕಾಗುತ್ತದೆ. ೨. ವಿಧಿ ಅ. ವಿಧಿಯನ್ನು ಮಾಡಲು ಯೋಗ್ಯ ಸಮಯ: ನಾರಾಯಣಬಲಿಯ ವಿಧಿಯನ್ನು ಮಾಡಲು ಯಾವುದೇ ತಿಂಗಳ … Read more

ನಾರಾಯಣಬಲಿ, ನಾಗಬಲಿ ಮತ್ತು ತ್ರಿಪಿಂಡಿ ಶ್ರಾದ್ಧವಿಧಿಗಳ ಬಗ್ಗೆ ಮಹತ್ವದ ಸೂಚನೆಗಳು !

ವಿಧಿಗಳನ್ನು ಮಾಡಲು ಪುರುಷರಿಗೆ ಧೋತರ, ಉಪವಸ್ತ್ರ, ಬನಿಯನ್ ಮತ್ತು ಮಹಿಳೆಯರಿಗೆ ಸೀರೆ, ರವಿಕೆ ಮತ್ತು ಲಂಗ ಮುಂತಾದ ಹೊಸ ಬಟ್ಟೆಗಳು (ಕಪ್ಪು ಮತ್ತು ಹಸಿರು ಬಣ್ಣ ಇರಬಾರದು) ಬೇಕಾಗುತ್ತವೆ.

ಶ್ರಾದ್ಧಕರ್ಮವನ್ನು ಮಾಡುವಾಗ ಕೇವಲ ಪಿತೃಗಳ ಹೆಸರು ಮತ್ತು ಅವರ ಗೋತ್ರವನ್ನು ಹೇಳುವುದರಿಂದ ಅವರಿಗೆ ಶ್ರಾದ್ಧದ ಹವ್ಯವು (ಆಹಾರ) ಹೇಗೆ ಸಿಗುತ್ತದೆ?

ಆಯಾ ಗೋತ್ರದ ಪಿತೃಗಳು ಆಯಾ ಸ್ಥಳಗಳಿಗೆ ಬಂದು ಶ್ರಾದ್ಧದಲ್ಲಿನ ಆಹಾರವನ್ನು ಸೇವಿಸಿ ತೃಪ್ತರಾಗುತ್ತಾರೆ. ‘ಶಬ್ದವಿದ್ದಲ್ಲಿ ಅದರ ಸ್ಪರ್ಶ, ರೂಪ, ರಸ, ಗಂಧ ಮತ್ತು ಅದರ ಶಕ್ತಿ ಒಟ್ಟಿಗೆ ಇರುತ್ತವೆ’ ಇದು ಅಧ್ಯಾತ್ಮದಲ್ಲಿನ ಮೂಲ ಸಿದ್ಧಾಂತವಾಗಿದೆ.

ಶ್ರಾದ್ಧದಲ್ಲಿ ಪಿತೃಗಳಿಗೆ ನೀಡಿದ ಅನ್ನವು ಅವರಿಗೆ ಹೇಗೆ ತಲುಪುತ್ತದೆ ?

‘ಹೋಮಾಗ್ನಿಯಲ್ಲಿ ಅರ್ಪಿಸಿದ ಅನ್ನವು ತೇಜತತ್ತ್ವದ ಸಹಾಯದಿಂದ ಸೂಕ್ಷ್ಮ-ವಾಯುವಿನ ರೂಪದಲ್ಲಿ ಪಿತೃಗಳ ಲಿಂಗದೇಹಗಳ ಬಾಹ್ಯಕೋಶವನ್ನು ಸ್ಪರ್ಶಿಸುತ್ತದೆ ಮತ್ತು ಅದರಲ್ಲಿನ ರಜ-ತಮಯುಕ್ತ ಕಣಗಳನ್ನು ವಿಘಟನೆ ಮಾಡುತ್ತದೆ.

ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು?

ಇದು ವೈಯಕ್ತಿಕ ಸ್ತರದಲ್ಲಿ ಋಣವನ್ನು ತೀರಿಸುವ ಒಂದು ವ್ಯಷ್ಟಿ ಉಪಾಸನೆಯೇ ಆಗಿದೆ ಮತ್ತು ಪಿತೃಪಕ್ಷದಲ್ಲಿ ಮಾಡುವ ಶ್ರಾದ್ಧವು ಸಮಷ್ಟಿ ಸ್ತರದಲ್ಲಿ ಪಿತೃಗಳ ಋಣವನ್ನು ತೀರಿಸುವ ಸಮಷ್ಟಿ ಉಪಾಸನೆಯಾಗಿದೆ.

ಶ್ರಾದ್ಧದಿಂದ ‘೧೦೧ ಕುಲಗಳಿಗೆ ಗತಿ ಸಿಗುತ್ತದೆ’ ಎಂದು ಹೇಳುತ್ತಾರೆ ಇದರ ಅರ್ಥವೇನು ?

‘ಕುಲ’ ಈ ಶಬ್ದವನ್ನು ‘ಆಯಾ ಜೀವಗಳ ಜೀವನದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಕೊಡುಕೊಳ್ಳುವಿಕೆಯ ರೂಪದಲ್ಲಿ ಸಂಪರ್ಕಕ್ಕೆ ಬಂದಿರುವ ಇತರ ಜೀವಿಗಳು’ ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆಯೇ ಹೊರತು ‘ಪೀಳಿಗೆ’ ಎಂಬರ್ಥದಲ್ಲಿ ಉಪಯೋಗಿಸಲಾಗಿಲ್ಲ.