ಆಧ್ಯಾತ್ಮಿಕ ಮಟ್ಟ ಶೇ. ೬೧ ಆಗುವುದರ ಮಹತ್ವ
ಈಶ್ವರನ ಆಧ್ಯಾತ್ಮಿಕ ಮಟ್ಟವನ್ನು ಶೇ. ೧೦೦ ಮತ್ತು ನಿರ್ಜೀವ ವಸ್ತುಗಳ ಮಟ್ಟವನ್ನು ೦ ಎಂದು ಪರಿಗಣಿಸಿದರೆ, ಸಾಮಾನ್ಯ ಮನುಷ್ಯನ ಆಧ್ಯಾತ್ಮಿಕ ಮಟ್ಟವು ಶೇ. ೨೦ ರಷ್ಟು ಇರುತ್ತದೆ. ಈ ಮಟ್ಟದ ವ್ಯಕ್ತಿಯು ಕೇವಲ ತನ್ನ ಸುಖ-ದುಃಖಗಳ ಬಗ್ಗೆ ವಿಚಾರ ಮಾಡುತ್ತಾನೆ. ಸಮಾಜದ ಬಗ್ಗೆ ಅವನಿಗೆ ಯಾವುದೇ ಹಂಗಿರುವುದಿಲ್ಲ. ಅವನು ‘ಎಲ್ಲವನ್ನೂ ನಾನೇ ಮಾಡುತ್ತೇನೆ’ ಎಂಬ ವಿಚಾರ ಮಾಡುತ್ತಾನೆ. ಆಧ್ಯಾತ್ಮಿಕ ಮಟ್ಟವು ಶೇ. ೩೦ ರಷ್ಟು ಆದಾಗ, ಅವನು ಈಶ್ವರನ ಅಸ್ತಿತ್ವವನ್ನು ಸ್ವಲ್ಪ ಪ್ರಮಾಣದಲ್ಲಿ ಒಪ್ಪಿಕೊಳ್ಳುತ್ತಾನೆ ಹಾಗೂ ಸಾಧನೆ ಮತ್ತು ಸೇವೆಯನ್ನು ಮಾಡಲು ಪ್ರಾರಂಭಿಸುತ್ತಾನೆ. ಮಾಯೆ ಮತ್ತು ಈಶ್ವರಪ್ರಾಪ್ತಿಯ ಹಂಬಲವು ಸಮನಾದಾಗ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಶೇ. ೫೦ ಆಗುತ್ತದೆ. ಆಧ್ಯಾತ್ಮಿಕ ಮಟ್ಟವು ಯಾವಾಗ ಶೇ. ೬೧ ಆಗುತ್ತದೆಯೋ, ಆಗ ಆ ವ್ಯಕ್ತಿಯು ಮಾಯೆಯಿಂದ ಅಲಿಪ್ತನಾಗಲು ಆರಂಭಿಸುತ್ತಾನೆ. ಅವನ ಮನೋಲಯಕ್ಕೆ ಆರಂಭವಾಗುತ್ತದೆ ಮತ್ತು ವಿಶ್ವಮನಸ್ಸಿನಲ್ಲಿನ ವಿಚಾರಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಮೃತ್ಯುವಿನ ನಂತರ ಆ ವ್ಯಕ್ತಿಯು ಜನ್ಮ-ಮೃತ್ಯುವಿನ ಸುಳಿಯಿಂದ ಮುಕ್ತನಾಗಿ ಅವನಿಗೆ ಮಹರ್ಲೋಕದಲ್ಲಿ ಸ್ಥಾನ ಪ್ರಾಪ್ತವಾಗುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ
Contents
- ಆಧ್ಯಾತ್ಮಿಕ ಮಟ್ಟ ಶೇ. ೬೧ ಆಗುವುದರ ಮಹತ್ವ
- ೧. ಶೇ. ೬೧ ಮಟ್ಟವನ್ನು ತಲುಪುವುದು ಹೇಗೆ?
- ೨. ಸಾಧಕರ ಮಟ್ಟವನ್ನು ಗುರುತಿಸುವುದು
- ೩. ಶೇ. ೬೧ ಮತ್ತು ೬೫ ಶೇಕಡಾ ಮಟ್ಟವನ್ನು ತಲುಪುವಲ್ಲಿನ ಮಹತ್ವ
- ೪. ಶೇ. ೬೧ ಕ್ಕಿಂತ ಹೆಚ್ಚು ಮಟ್ಟದ ಸಾಧಕರಿಂದ ಕುಟುಂಬದವರಿಗೆ ಆಗುವ ಪರೋಕ್ಷ ಲಾಭ
- ೫. ಸಾಧಕರೇ, ಶೇ. ೬೧ ಮಟ್ಟವನ್ನು ತಲುಪಬೇಕಿದ್ದರೆ ಇದನ್ನು ಗಮನಿಸಿ!
- ೬. ಸಾಧಕರೇ, ಸಾಧಕರ ಪ್ರಗತಿಯ ವಾರ್ತೆಯಿಂದ ನಿರಾಶೆಗೊಳಗಾಗಬೇಡಿ
- ೭. ಸಾಧಕ ಶೇ. ೬೧ ಮಟ್ಟ ತಲುಪಿದಾಗ ಎಲ್ಲರಿಗೂ ‘ಆನಂದದ’ ಅನುಭೂತಿ ಬರುವುದು
- ೮. ಗುರುಕೃಪೆಯಿಂದ ಲಭಿಸಿದ ಆಧ್ಯಾತ್ಮಿಕ ಮಟ್ಟವು ಕುಸಿಯದಂತೆ ಗಂಭೀರವಾಗಿ ಪ್ರಯತ್ನಿಸಿ
೧. ಶೇ. ೬೧ ಮಟ್ಟವನ್ನು ತಲುಪುವುದು ಹೇಗೆ?
ಅ. ಅಧ್ಯಯನ ಮಾಡಿದರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಖಚಿತ. ಅದೇ ರೀತಿ ಸಾಧನೆಯನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಶೇ. ೬೧ ಮಟ್ಟವನ್ನು ತಲುಪಲು ಸಾಧ್ಯವಾಗುತ್ತದೆ.
ಆ. ವ್ಯಾವಹಾರಿಕ ಜೇವನದ ಪರೀಕ್ಷೆ ಮತ್ತು ಸಾಧನೆಯ ಪರೀಕ್ಷೆ : ಸಾಧನೆಯನ್ನು ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಲ್ಲಿ ವಾರ್ಷಿಕ ಪರೀಕ್ಷೆಗಳಿರುತ್ತವೆ. ಪರೀಕ್ಷೆಗೆ ಕೇವಲ ೨-೩ ತಿಂಗಳ ಮೊದಲು ಅಧ್ಯಯನ ಮಾಡಿದರೂ ಬಹುತೇಕರು ಉತ್ತೀರ್ಣರಾಗುತ್ತಾರೆ. ಆದರೆ ಸಾಧನೆಯಲ್ಲಿ ಪ್ರತಿ ದಿನವೂ, ಪ್ರತಿ ಕ್ಷಣವೂ ಪರೀಕ್ಷೆ ಇರುತ್ತದೆ. ಅದರಲ್ಲಿ ಉತ್ತೀರ್ಣರಾಗಬೇಕಾಗುತ್ತದೆ, ಆಗ ಮಾತ್ರ ಶೇ. ೬೧ ಮತ್ತು ಮುಂದಿನ ಮಟ್ಟವನ್ನು ತಲುಪಲು ಸಾಧ್ಯವಾಗುತ್ತದೆ.
ಇ. ಸಾಧಕರು ಆಶ್ರಮದಲ್ಲಿ ಅಥವಾ ಪ್ರಸಾರದಲ್ಲಿ ಅದೇ ಸೇವೆಯನ್ನು ಮಾಡುತ್ತಿರುವುದು ಬಾಹ್ಯವಾಗಿ ಕಂಡರೂ, ಆ ಸೇವೆಯು ಹೆಚ್ಚು ಹೆಚ್ಚು ಪರಿಪೂರ್ಣ, ಭಾವಪೂರ್ಣ ಮತ್ತು ಅಹಂರಹಿತವಾಗುತ್ತಾ ಹೋದಂತೆ ಅವರ ಪ್ರಗತಿಯಾಗುತ್ತದೆ.
೨. ಸಾಧಕರ ಮಟ್ಟವನ್ನು ಗುರುತಿಸುವುದು
ಸಾಧಕರ ಮಟ್ಟವು ೬೧ ರಿಂದ ೭೦ ಶೇಕಡಾ ಆಗಿರುವುದನ್ನು ಕೆಲವು ಸಾಧಕರಿಗೆ ಗುರುತಿಸಲು ಸಾಧ್ಯವಾಗುತ್ತದೆ. ಕೆಲವರಿಗೆ ಗುರುತಿಸಲು ಸಾಧ್ಯವಾದರೂ ಅದರ ಬಗ್ಗೆ ನಿಶ್ಚಿತತೆ ಇರುವುದಿಲ್ಲ ಮತ್ತು ಉಳಿದ ಸಾಧಕರಿಗೆ ಅದನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.
ಅ. ಮಟ್ಟವನ್ನು ಗುರುತಿಸಲು ಸಾಧ್ಯವಾಗದಿರಲು ಕಾರಣಗಳು
೧. ಎಷ್ಟು ವ್ಯಕ್ತಿಗಳು, ಅಷ್ಟು ಪ್ರಕೃತಿಗಳಿವೆ ಎಂಬಂತೆ ಪ್ರತಿಯೊಬ್ಬರ ನಡೆ-ನುಡಿ ಮತ್ತು ವರ್ತನೆಯು ವಿಭಿನ್ನವಾಗಿರುತ್ತದೆ. ಆದ್ದರಿಂದ ಈ ಅಂಶಗಳಿಂದ ಮಟ್ಟವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.
೨. ಪ್ರತಿಯೊಬ್ಬರ ವ್ಯಷ್ಟಿ ಸಾಧನೆಯಲ್ಲಿನ ಸ್ವಭಾವದೋಷ-ನಿರ್ಮೂಲನೆ, ಅಹಂ-ನಿರ್ಮೂಲನೆ, ನಾಮ, ಸತ್ಸಂಗ, ಸತ್ಸೆವೆ, ತ್ಯಾಗ, ಪ್ರೀತಿ ಮತ್ತು ಭಾವಜಾಗೃತಿಯಂತಹ ಅಂಶಗಳು ಬೇರೆ ಬೇರೆ ಪ್ರಮಾಣದಲ್ಲಿರುತ್ತವೆ. ಹಾಗೆಯೇ ಸಮಷ್ಟಿ ಸಾಧನೆಯ ಕ್ಷೇತ್ರವೂ ಬೇರೆ ಬೇರೆಯಾಗಿರುತ್ತದೆ. ಇದರಿಂದಲೂ ಮಟ್ಟವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.
ಆ. ಮಟ್ಟವನ್ನು ಗುರುತಿಸಲು ಉಪಯುಕ್ತ ಅಂಶಗಳು
೧. ಸಾಧಕನ ಮುಖವು ಸಾತ್ತ್ವಿಕ ಅಥವಾ ಆನಂದಿತವಾಗಿ ಕಾಣುವುದು.
೨. ಸಾಧಕನ ಸೇವೆಯು ಭಾವಪೂರ್ಣ ಮತ್ತು ಪರಿಪೂರ್ಣವಾಗುವುದು.
೩. ಸಾಧಕನ ಮಾತನ್ನು ಕೇಳುವಾಗ, ಅವರ ಸಹವಾಸದಲ್ಲಿರುವಾಗ ಅಥವಾ ಅವರ ಛಾಯಾಚಿತ್ರವನ್ನು ನೋಡಿದಾಗ ಒಳ್ಳೆಯದೆನಿಸುವುದು.
೪. ಸಾಧಕನಲ್ಲಿ ಅಂತರ್ಮುಖತೆ ಕಾಣಿಸುವುದು.
ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇತರ ಸಾಧಕರ ಅಧ್ಯಯನ ಮಾಡಬೇಕು. ಇದರಿಂದ ಯಾರ ಮಟ್ಟ ಎಷ್ಟು ಇದೆ ಎಂಬುದು ಹಾಗೆಯೇ ಮಟ್ಟವು ಹೆಚ್ಚಾಗಲು ಯಾರು ಏನೆಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂಬುದು ತಿಳಿಯುತ್ತದೆ ಮತ್ತು ಇತರರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಉತ್ತಮ ಮಟ್ಟವಿರುವ ಸಾಧಕರಲ್ಲಿರುವ ಗುಣಗಳೂ ಗಮನಕ್ಕೆ ಬರುತ್ತವೆ ಮತ್ತು ಅವುಗಳನ್ನು ಅಂಗೀಕರಿಸುವ ದೃಷ್ಟಿಯಿಂದ ಪ್ರಯತ್ನ ಮಾಡಲು ಸಾಧ್ಯವಾಗುತ್ತದೆ.
– (ಪರಾತ್ಪರ ಗುರು) ಡಾ. ಆಠವಲೆ (೨೦೧೨)
೩. ಶೇ. ೬೧ ಮತ್ತು ೬೫ ಶೇಕಡಾ ಮಟ್ಟವನ್ನು ತಲುಪುವಲ್ಲಿನ ಮಹತ್ವ
ಅ. ಶೇ. ೬೧ ಮಟ್ಟದ ಸಾಧಕರು
೧. ಅನಿಷ್ಟ ಶಕ್ತಿಗಳ ತೊಂದರೆ ಇರುವ ಸಾಧಕರ ಮೇಲೆ ಉಪಾಯ ಮಾಡುವ ಕ್ಷಮತೆ: ೪ ನೇ ಪಾತಾಳದ ಅನಿಷ್ಟ ಶಕ್ತಿಗಳೊಂದಿಗೆ ಅಂದಾಜು ೪ ತಿಂಗಳು ಹೋರಾಡಲು ಸಾಧ್ಯವಾಗುತ್ತದೆ.
೨. ಮುಂದಿನ ಉನ್ನತಿ: ಈ ಸಾಧಕರು ಸಾಧನೆಯಲ್ಲಿ ಸಾತತ್ಯವನ್ನು ಕಾಯ್ದುಕೊಂಡು ಅಹಂ ಹೆಚ್ಚಾಗದಂತೆ ನೋಡಿಕೊಂಡರೆ, ಅವರು ೪ ರಿಂದ ೫ ವರ್ಷಗಳಲ್ಲಿ ಸಂತರಾಗಬಹುದು. (ಶೇ. ೭೦ ಮಟ್ಟಕ್ಕೆ ಸಾಧಕರು ಸಂತರಾಗುತ್ತಾರೆ).
ಆ. ಶೇ. ೬೫ ಮಟ್ಟದ ಸಾಧಕರು
೧. ಅನಿಷ್ಟ ಶಕ್ತಿಗಳ ತೊಂದರೆ ಇರುವ ಸಾಧಕರ ಮೇಲೆ ಉಪಾಯ ಮಾಡುವ ಕ್ಷಮತೆ: ಶೇ. ೬೫ ರ ಮಟ್ಟವಿರುವ ಓರ್ವ ಸಾಧಕ ಎಂದರೆ ಶೇ. ೬೧ ಮಟ್ಟವಿರುವ ೩೦ ಸಾಧಕರಿಗೆ ಸಮಾನ. ಈ ಸಾಧಕರು ೪ ನೇ ಪಾತಾಳದ ಬಲಿಷ್ಠ ಅನಿಷ್ಟ ಶಕ್ತಿಗಳೊಂದಿಗೆ ಅಂದಾಜು ೭ ತಿಂಗಳು ಮತ್ತು ೫ ನೇ ಪಾತಾಳದ ಬಲಿಷ್ಠ ಅನಿಷ್ಟ ಶಕ್ತಿಗಳೊಂದಿಗೆ ಅಂದಾಜು ೨ ತಿಂಗಳು ಹೋರಾಡಲು ಸಾಧ್ಯವಿದೆ. ಈ ದೃಷ್ಟಿಯಿಂದ ಅನಿಷ್ಟ ಶಕ್ತಿಗಳೊಂದಿಗೆ ಸೂಕ್ಷ್ಮದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಹಂತಹಂತವಾಗಿ ಬಲ ದೊರೆಯುತ್ತಿದೆ.
೨. ಮುಂದಿನ ಉನ್ನತಿ: ಈ ಸಾಧಕರು ಸಾಧನೆಯಲ್ಲಿ ಸಾತತ್ಯವನ್ನು ಕಾಯ್ದುಕೊಂಡು ಅಹಂ ಹೆಚ್ಚಾಗದಂತೆ ನೋಡಿಕೊಂಡರೆ, ಅವರು ೨ ರಿಂದ ೩ ವರ್ಷಗಳಲ್ಲಿ ಶೇ. ೭೦ ಮಟ್ಟವನ್ನು ತಲುಪಲು ಅಂದರೆ ಸಂತರಾಗಲು ಸಾಧ್ಯವಿದೆ.
ಇ. ಶೇ. ೬೧ ಮಟ್ಟ ಪಡೆದ ನಂತರ ಸಾಧಕರಿಗೆ ಸ್ವರ್ಗಪ್ರಾಪ್ತಿಯ ಇಚ್ಛೆ ಉಳಿಯದೇ ಅವರು ಮಹರ್ಲೋಕದಿಂದ ಮೋಕ್ಷದ ತನಕ ಹೋಗುವ ಕಾರಣಗಳು
೧. ಶೇ. ೬೧ ಮಟ್ಟದವರೆಗೆ ಸಾಧಕರ ಚಿತ್ತದ ಮೇಲೆ ತ್ಯಾಗ ಮಾಡುವ ಸಂಸ್ಕಾರವಾಗಿರುತ್ತದೆ. ಆ ಸಂಸ್ಕಾರವು ಮುಂದೆ ಮಾಯೆಯಲ್ಲಿ ಸಿಲುಕಲು ಬಿಡುವುದಿಲ್ಲ.
೨. ಶೇ. ೬೧ ಮಟ್ಟದ ನಂತರ ಆನಂದದ ಅನುಭೂತಿಯು ಬರಲು ಆರಂಭವಾಗುವುದರಿಂದ, ಅವರು ಮಾಯೆಯಲ್ಲಿನ ಪೃಥ್ವಿಯ ಸುಖದ ಬಗ್ಗೆ ಇರಲಿ, ಸ್ವರ್ಗಸುಖದ ಬಗ್ಗೆಯೂ ವಿಚಾರ ಮಾಡಲು ಸಾಧ್ಯವಾಗುವುದಿಲ್ಲ.
೩. ಅವರ ಮನಸ್ಸಿನಲ್ಲಿ ಈಶ್ವರಪ್ರಾಪ್ತಿಯ ತೀವ್ರ ಇಚ್ಛೆ ನಿರ್ಮಾಣವಾಗುವುದರಿಂದ ಅವರ ಮುಂದಿನ ಪಯಣವು ಮುಂದುವರಿಯುತ್ತಲೇ ಇರುತ್ತದೆ.
೪. ಕೆಲವರ ವೃತ್ತಿಯು ವೇಗವಾಗಿ ಉನ್ನತಿ ಸಾಧಿಸುವುದಾಗಿರುತ್ತದೆ. ಪೃಥ್ವಿಯ ಮೇಲಿನ ೧೦೦ ವರ್ಷಗಳ ಸಾಧನೆ ಎಂದರೆ ಮಹರ್ಲೋಕದಲ್ಲಿ ೧೦,೦೦೦ (ಹತ್ತು ಸಾವಿರ) ವರ್ಷಗಳ ಸಾಧನೆ ಎಂಬ ಲೆಕ್ಕಾಚಾರವಿರುವುದರಿಂದ, ಪೃಥ್ವಿಯ ಮೇಲೆ ಜನ್ಮ ತಾಳಿ ಹೆಚ್ಚು ಹೆಚ್ಚು ಸಾಧನೆ ಮಾಡಿ ಶೀಘ್ರವಾಗಿ ಮೋಕ್ಷದವರೆಗೆ ಹೋಗುವ ಆಯ್ಕೆಯನ್ನು ಅವರು ಮಾಡಿಕೊಳ್ಳುತ್ತಾರೆ; ಆದ್ದರಿಂದ ಮಹರ್ಲೋಕಕ್ಕೆ ಹೋದ ಕೆಲವು ಜೀವಿಗಳು ಪೃಥ್ವಿಯ ಮೇಲೆ ಮರಳಿ ಜನ್ಮ ತಾಳುತ್ತಾರೆ. ಇದರಿಂದ ಸಾಧಕನು ಇಹಲೋಕದಲ್ಲಿರಲಿ ಅಥವಾ ದೇಹ ತ್ಯಜಿಸಿರಲಿ, ಅವನ ಮೋಕ್ಷದವರೆಗಿನ ಪಯಣವು ಸಾಗುತ್ತಲೇ ಇರುತ್ತದೆ.
ಈ. ಶೇ. ೬೧ ಮಟ್ಟದ ಸಾಧಕರು ಮತ್ತು ಶೇ. ೭೦ ಮಟ್ಟದ ಸಂತರ ವೈಶಿಷ್ಟ್ಯಗಳು
ಶೇ. ೬೧ ಮಟ್ಟ ತಲುಪಿದ ಸನಾತನದ ಸಾಧಕರ ವೈಶಿಷ್ಟ್ಯಗಳು
೧. ಮಾಯೆಯಿಂದ ಅಲಿಪ್ತರಾಗಲು ಸಾಧ್ಯವಾಗುತ್ತದೆ.
೨. ಮೈಗೆ ಮತ್ತು ಬಳಸುವ ಕೆಲವು ವಸ್ತುಗಳಿಗೆ ಸುಗಂಧ ಬರುತ್ತದೆ.
೩. ಮನೋಲಯದ ಆರಂಭವಾಗುತ್ತದೆ. ವಿಶ್ವಮನಸ್ಸಿನ ವಿಚಾರಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ.
೪. ೪ನೇ ಪಾತಾಳದವರೆಗಿನ ಅನಿಷ್ಟ ಶಕ್ತಿಗಳ ತೊಂದರೆ ಇರುವ ಸಾಧಕರ ಮೇಲೆ ಆಧ್ಯಾತ್ಮಿಕ ಉಪಾಯಗಳನ್ನು ಮಾಡಲು ಸಾಧ್ಯವಾಗುತ್ತದೆ.
೫. ಮೃತ್ಯುವಿನ ನಂತರ ಜನ್ಮ-ಮೃತ್ಯುವಿನ ಸುಳಿಯಿಂದ ಮುಕ್ತರಾಗಿ ಮಹರ್ಲೋಕದಲ್ಲಿ ಸ್ಥಾನ ಸಿಗುತ್ತದೆ.
– (ಪರಾತ್ಪರ ಗುರು) ಡಾ. ಆಠವಲೆ (೨೦೧೨)
೪. ಶೇ. ೬೧ ಕ್ಕಿಂತ ಹೆಚ್ಚು ಮಟ್ಟದ ಸಾಧಕರಿಂದ ಕುಟುಂಬದವರಿಗೆ ಆಗುವ ಪರೋಕ್ಷ ಲಾಭ
ಇತ್ತೀಚೆಗೆ ಹೆಚ್ಚಿನವರು ಶ್ರಾದ್ಧ ಮಾಡದ ಕಾರಣ ಅವರ ಪೂರ್ವಜರು ಕುಟುಂಬಕ್ಕೆ ತೊಂದರೆ ನೀಡುತ್ತಾರೆ. ಯಾರಾದರೂ ಶ್ರಾದ್ಧ ಮಾಡಲು ನಿರ್ಧರಿಸಿದರೂ ಅವರಿಗೆ ಸಾತ್ತ್ವಿಕ ಪುರೋಹಿತರು ಸಿಗುವುದಿಲ್ಲ. ಇದರಿಂದ ವಿಧಿಗಳನ್ನು ಮಾಡಿದರೂ ಮಾಡದಂತೆಯೇ ಆಗುತ್ತದೆ. ಶೇ. ೬೧ ಕ್ಕಿಂತ ಹೆಚ್ಚು ಮಟ್ಟದ ಸಾಧಕರು ಮೃತ್ಯುವಿನ ನಂತರ ಮಹರ್ಲೋಕಕ್ಕೆ ಹೋಗುತ್ತಾರೆ. ಆದ್ದರಿಂದ ಅವರು ತಮ್ಮ ಮಕ್ಕಳ ಮೇಲೆ ಶ್ರಾದ್ಧ-ಪಕ್ಷಗಳನ್ನು ಮಾಡುವ ಭಾರವನ್ನೂ ಹಾಕುವುದಿಲ್ಲ! – (ಪರಾತ್ಪರ ಗುರು) ಡಾ. ಆಠವಲೆ (೨೦೧೧)
೫. ಸಾಧಕರೇ, ಶೇ. ೬೧ ಮಟ್ಟವನ್ನು ತಲುಪಬೇಕಿದ್ದರೆ ಇದನ್ನು ಗಮನಿಸಿ!
ಎಲ್ಲಿಯವರೆಗೆ ‘ನಾನು ಸೇವೆ ಚೆನ್ನಾಗಿ ಮಾಡಿದೆ’, ‘ನನ್ನ ಪ್ರಗತಿ’, ‘ನನ್ನ ಮಟ್ಟ’ ಎಂಬ ವಿಚಾರಗಳಿರುತ್ತವೆಯೋ, ಅಲ್ಲಿಯವರೆಗೆ ಶೇ. ೬೧ ಮಟ್ಟವನ್ನು ತಲುಪಲು ಸಾಧ್ಯವಾಗುವುದಿಲ್ಲ. ಆ ವಿಚಾರಗಳು ಮುಗಿದು ಸೇವೆಯಲ್ಲಿನ ಅಥವಾ ನಾಮಜಪದಲ್ಲಿನ ಆನಂದವನ್ನು ಅನುಭವಿಸಲು ಸಾಧ್ಯವಾಯಿತು ಎಂದರೆ ಮಟ್ಟವು ಶೇ. ೬೧ ಆಗುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ (೨೦೧೨)
೬. ಸಾಧಕರೇ, ಸಾಧಕರ ಪ್ರಗತಿಯ ವಾರ್ತೆಯಿಂದ ನಿರಾಶೆಗೊಳಗಾಗಬೇಡಿ
ಯಾರಾದರೂ ಶೇ. ೬೧ ಮಟ್ಟವನ್ನು ತಲುಪಿದಾಗ ‘ನಾವು ತಲುಪಲಿಲ್ಲ’ ಎಂದು ಕೆಲವು ಸಾಧಕರಿಗೆ ನಿರಾಶೆ ಬರುತ್ತದೆ. ಅವರು ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಅ. ಶೇ. ೬೧ ಮಟ್ಟವನ್ನು ತಲುಪಿದ ಸಾಧಕನಲ್ಲಿ ಯಾವ ಗುಣಗಳಿವೆ?
ಆ. ನಾವು ಎಲ್ಲಿ ಕಡಿಮೆ ಬೀಳುತ್ತಿದ್ದೇವೆ?
ಇ. ಇಬ್ಬರ ಸಾಧನೆಯೂ ಒಂದೇ ಆಗಿದ್ದರೂ ಒಬ್ಬರ ಪ್ರಗತಿ ವೇಗವಾಗಿ ಆಗುತ್ತದೆ, ಇನ್ನೊಬ್ಬರದ್ದಲ್ಲ. ಇದರ ಕಾರಣ ಮೊದಲನೆಯ ಸಾಧಕನಲ್ಲಿ ಪ್ರಾರಬ್ಧದ ತೀವ್ರತೆ ಕಡಿಮೆ ಇರುತ್ತದೆ, ಆದರೆ ಎರಡನೆಯವನಲ್ಲಿ ಪ್ರಾರಬ್ಧದ ತೀವ್ರತೆ ಹೆಚ್ಚಿರುತ್ತದೆ.
ಈ. ನಿರಾಶೆ ಬದಲು ‘ಆ ಸಾಧಕನು ಶೇ. ೬೧ ಮಟ್ಟ ತಲುಪಿದರೆ ನಾನು ಕೂಡ ತಲುಪಬಲ್ಲೆ’ ಎಂಬ ವಿಚಾರ ಮಾಡಬೇಕು ಅಥವಾ ಅದಕ್ಕೆ ಸಂಬಂಧಿಸಿದಂತೆ ಸ್ವಯಂಸೂಚನೆಗಳನ್ನು ನೀಡಬೇಕು.
ಉ. ಉತ್ತಮ ಸಾಧಕತ್ವವಿದ್ದರೆ ನಿರಾಶೆಯಾಗುವುದಿಲ್ಲ, ಪ್ರಗತಿಯನ್ನು ಸಾಧಿಸಿದ ಸಾಧಕನನ್ನು ಕೊಂಡಾಡಲಾಗುತ್ತದೆ.’ – (ಪರಾತ್ಪರ ಗುರು) ಡಾ. ಆಠವಲೆ
೭. ಸಾಧಕ ಶೇ. ೬೧ ಮಟ್ಟ ತಲುಪಿದಾಗ ಎಲ್ಲರಿಗೂ ‘ಆನಂದದ’ ಅನುಭೂತಿ ಬರುವುದು
ಓರ್ವ ಸಾಧಕನ ಮಟ್ಟವು ಶೇ. ೬೧ ಆಯಿತು ಎಂದರೆ ಎಲ್ಲರಿಗೂ ಆನಂದವಾಗುತ್ತದೆ ಮತ್ತು ಅವರ ಆನಂದವನ್ನು ನೋಡಿ ಪ್ರಗತಿ ಹೊಂದಿರುವ ಸಾಧಕನಿಗೂ ಆನಂದವಾಗುತ್ತದೆ. ಒಟ್ಟಿನಲ್ಲಿ ಎಲ್ಲರಿಗೂ ಎಲ್ಲೆಡೆ ಆನಂದದ ಅನುಭೂತಿಯೇ ಬರುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ (೨೦೧೨)
೮. ಗುರುಕೃಪೆಯಿಂದ ಲಭಿಸಿದ ಆಧ್ಯಾತ್ಮಿಕ ಮಟ್ಟವು ಕುಸಿಯದಂತೆ ಗಂಭೀರವಾಗಿ ಪ್ರಯತ್ನಿಸಿ
ಸಾಧನೆಯಲ್ಲಿ ಶೇ. ೬೧ ಮಟ್ಟವನ್ನು ತಲುಪುವುದು ಗುರುಕೃಪೆಯಿಂದ ಲಭಿಸಿದ ವರವೇ ಆಗಿದೆ; ಏಕೆಂದರೆ ಈ ಮಟ್ಟದ ಮುಂದಿನ ಪಯಣದಲ್ಲಿ ಈಶ್ವರನ ಸಹಾಯವು ಸಹಜವಾಗಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ದೊರೆಯಲು ಆರಂಭವಾಗುತ್ತದೆ. ಆದ್ದರಿಂದ ಕೃತಜ್ಞತಾಭಾವವನ್ನಿಟ್ಟುಕೊಂಡು ಮುಂದೆ ಮನಃಪೂರ್ವಕವಾಗಿ ಸಾಧನೆಯ ಪ್ರಯತ್ನಗಳನ್ನು ಮಾಡುವುದು ನಮ್ಮ ಕರ್ತವ್ಯವಾಗಿದೆ. ಆದರೆ ಶೇ. ೬೧ ಮಟ್ಟ ತಲುಪಿದ ಕೆಲವು ಸಾಧಕರಲ್ಲಿರುವ ತಪ್ಪುಗಳು, ದೋಷಗಳು ಮತ್ತು ಗಾಂಭೀರ್ಯದ ಕೊರತೆಯಿಂದಾಗಿ ಮಟ್ಟವು ಕುಸಿಯುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾದರೆ ಮುಂದಿನ ಆಪತ್ಕಾಲದಲ್ಲಿ ಅಂತಹ ಸಾಧಕರು ಉಳಿಯುವುದು ಕಷ್ಟಕರವಾಗಿದೆ. ಸಾಧಕರು ತಮ್ಮ ದೋಷಗಳನ್ನು ಹೋಗಲಾಡಿಸಿ ಸಾಧನೆಯ ವೃದ್ಧಿಗಾಗಿ ಗಂಭೀರವಾಗಿ ಪ್ರಯತ್ನಿಸಬೇಕು. ಅಂತಹ ಸಾಧಕರಿಂದ ಸಾಧನೆ ವೃದ್ಧಿಯ ಪ್ರಯತ್ನಗಳಾಗದಿದ್ದರೂ ಕನಿಷ್ಠ ಪಕ್ಷ ತಪ್ಪುಗಳಾದರೂ ಆಗದಂತೆ ನೋಡಿಕೊಳ್ಳಬೇಕು, ಅಂದರೆ ಸಾಧಕರ ಮಟ್ಟವು ಹೆಚ್ಚಾಗದಿದ್ದರೂ ಕುಸಿಯುವುದಾದರೂ ಇಲ್ಲ.
ದಂಗೆಯಂತಹ ಭೀಷಣ ಪರಿಸ್ಥಿತಿಯನ್ನು ಎದುರಿಸಲು ಸ್ವಯಂಸೂಚನೆ ನೀಡಿ ಮನೋಬಲ ಹೆಚ್ಚಿಸಿಕೊಳ್ಳಿ!
ಪೂರ್ವಗ್ರಹ ಎಂಬ ಸ್ವಭಾವದೋಷದ ಬಗ್ಗೆ…
ವಿಷಯಾಸಕ್ತ ಮನಸ್ಸನ್ನು ಭಗವಂತನ ನಾಮದಿಂದ ಶುದ್ಧಗೊಳಿಸಿ ಆನಂದ ಮತ್ತು ಶಾಂತಿಯನ್ನು ಅನುಭವಿಸಿ
ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯ ಬಗ್ಗೆ ಉಪಯುಕ್ತ ಅಂಶಗಳು
ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಪ್ರಯತ್ನಿಸುವಾಗ ಪ್ರತಿದಿನ ಪ್ರಗತಿಯ ಸ್ವಯಂಸೂಚನೆಯನ್ನೂ ತೆಗೆದುಕೊಳ್ಳಿ
ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಅಂದರೆ ಗುರುಗಳು ಸಾಧಕರಿಗೆ ನೀಡಿದ ಪ್ರಸಾದರೂಪಿ ವರದಾನ !