ಶಂಖನಾದ ಮಹೋತ್ಸವ: ‘ಸನಾತನ ರಾಷ್ಟ್ರದ ಸುರಕ್ಷೆ’ ಸ್ಪೂರ್ತಿದಾಯಕ ಅಧಿವೇಶನ !

ರಾಷ್ಟ್ರವನ್ನು ಶಸ್ತ್ರದಿಂದಲೇ ರಕ್ಷಿಸಬೇಕು ! – ಮೇಜರ್ ಗೌರವ ಆರ್ಯ, ಚಾಣಕ್ಯ ಫೋರಂ

ಮೇಜರ್ ಗೌರವ ಆರ್ಯ, ಚಾಣಕ್ಯ ಫೋರಂ

ಫೋಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರಿ) – ರಾಷ್ಟ್ರವನ್ನು ಶಸ್ತ್ರದಿಂದಲೇ ರಕ್ಷಿಸಬೇಕು. ಸಾಧುಸಂತರ ರಕ್ಷಣೆಗಾಗಿ ಶ್ರೀರಾಮ ಹುಟ್ಟಿದನು. ಮೊಘಲರ ಆಕ್ರಮಣ ಹೆಚ್ಚಿದಾಗ ಹಿಂದೂಗಳ ರಕ್ಷಣೆಗಾಗಿ ಛತ್ರಪತಿ ಶಿವಾಜಿ ಮಹಾರಾಜರು , ಗುರುಗೋಬಿಂದ ಸಿಂಗರು ಹುಟ್ಟಿದರು. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಹಿಂದೂಗಳ ರಕ್ಷಣೆಗಾಗಿ ಪ್ರಭು ಶ್ರೀರಾಮನು ಮತ್ತೆ ಅವತರಿಸಿದಂತೆ ಸಾಕ್ಷಾತ್ಕಾರವಾಗುತ್ತಿದೆ ಎಂದು ‘ಚಾಣಕ್ಯ ಫೋರಂ’ನ ಮುಖ್ಯ ಸಂಪಾದಕ ಹಾಗೂ ನಿವೃತ್ತ ಮೇಜರ್ ಗೌರವ ಆರ್ಯ ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಸ್ವಾತಂತ್ರ್ಯವೀರ ಸಾವರ್ಕರ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷರಾದ ಶ್ರೀ ರಣಜೀತ್ ಸಾವರ್ಕರ, ಪಂಜಾಬ್ ಗೋ ರಕ್ಷಕ ದಳದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸತೀಶ ಪ್ರಧಾನ, ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರು ನಂದಕುಮಾರ ಜಾಧವ ಉಪಸ್ಥಿತರಿದ್ದರು.

ಸ್ವಾತಂತ್ರ್ಯವೀರ ಸಾವರ್ಕರ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷರಾದ ಶ್ರೀ. ರಣಜಿತ ಸಾವರ್ಕರ

ಹಿಂದೂಗಳು ಬಲಿಷ್ಠರಾಗುವುದನ್ನು ನಿರ್ಲಕ್ಷಿಸಿದ್ದರಿಂದಲೇ ದೇಶದ ಅಪಮೌಲ್ಯೀಕರಣ! – ರಣಜಿತ ಸಾವರ್ಕರ

‘ಹಿಂದೂಗಳ ರಾಜನೀತಿಕರಣ ಮತ್ತು ರಾಜನೀತಿಯ ಸೈನಿಕೀಕರಣ ಆಗುವುದು ಅವಶ್ಯಕ. ಹಿಂದೂಗಳು ಬಲಿಷ್ಠರಾಗಬೇಕು. ಸ್ವಾತಂತ್ರ್ಯದ ನಂತರ ದೇಶದಲ್ಲಿ ಅಧಿಕಾರಕ್ಕೆ ಬಂದ ಸರಕಾರಗಳು ಇದರ ಬಗ್ಗೆ ಗಮನ ಹರಿಸಲಿಲ್ಲ. ಇದರಿಂದ ದೇಶದ ಅಪಮೌಲ್ಯೀಕರಣವಾಯಿತು. ಆ ಸಮಯದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ಹಿಂದೂಗಳ ಸಂಘಟನೆ ಪ್ರಾರಂಭಿಸಿದರು. ಹಿಂದೂಗಳನ್ನು ಬಲಶಾಲಿ ಮಾಡಲು ಕಾರ್ಯನಿರ್ವಹಿಸುತ್ತಿರುವವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಎಂದು ಸ್ವಾತಂತ್ರ್ಯವೀರ ಸಾವರ್ಕರ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷರಾದ ಶ್ರೀ ರಣಜಿತ ಸಾವರ್ಕರ ಈ ಸಂದರ್ಭದಲ್ಲಿ ಹೇಳಿದರು.

ಈ ಸಮಯದಲ್ಲಿ ಶ್ರೀ. ಸುನಿಲ ಘನವಟ ಅವರು, ‘‘ಹಿಂದೂಗಳಿಗೆ ಧರ್ಮಶಿಕ್ಷಣ ಸಿಗಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಧರ್ಮಶಿಕ್ಷಣ ತರಗತಿಗಳನ್ನು ಪ್ರಾರಂಭಿಸಿದೆ. ಪ್ರಸ್ತುತ ದೇಶದಲ್ಲಿ ಸಮಿತಿಯ ವತಿಯಿಂದ ೫೦೦ ಕಡೆಗಳಲ್ಲಿ ಧರ್ಮಶಿಕ್ಷಣ ತರಗತಿಗಳು ನಡೆಯುತ್ತಿವೆ. ಸಮಿತಿಯು ಸಮಾಜಕ್ಕೆ ದಿಕ್ಕು ನೀಡುವ ಕಾರ್ಯ ಮಾಡಿದೆ’’ ಎಂದು ಹೇಳಿದರು.

‘ಸವ್ಯಸಾಚಿ ಗುರುಕುಲಂ’ನ ಶೌರ್ಯ ಪ್ರದರ್ಶನದಿಂದ ಮಹೋತ್ಸವದಲ್ಲಿ ವೀರಾವೇಶ ಸಂಚಾರ !

ಛತ್ರಪತಿ ಶಿವಾಜಿ ಮಹಾರಾಜರ ಯುಗದ ಶೌರ್ಯ ಮತ್ತು ಯುದ್ಧಕಲೆ ಪರಂಪರೆಗಳನ್ನು ಪ್ರದರ್ಶಿಸುವ ಪ್ರಾತ್ಯಕ್ಷಿಕೆಗಳು

ಈ ಕಾರ್ಯಕ್ರಮದಲ್ಲಿ ಕೊಲ್ಹಾಪುರದ ‘ಸವ್ಯಸಾಚಿ ಗುರುಕುಲಂ’ ಸಂಸ್ಥೆಯು ಯುದ್ಧಕಲೆ, ಆತ್ಮರಕ್ಷಣೆ ಮತ್ತು ಶೌರ್ಯ ಪ್ರದರ್ಶನವನ್ನು ನೇರವಾಗಿ ಹಾಗೂ ರೋಮಾಂಚಕವಾಗಿ ಪ್ರಸ್ತುತಪಡಿಸಿತು.
ಈ ಪ್ರದರ್ಶನದಲ್ಲಿ ‘ಸಾಂಪ್ರದಾಯಿಕ ಹೊರಾಂಗಣ ಆಟಗಳು ಮತ್ತು ಯುದ್ಧಕಲೆಯ ತಂತ್ರಗಳು’, ‘ಶಿವಾಜಿ ಕಾಲದ ಶೌರ್ಯ ಪ್ರದರ್ಶನ ಮತ್ತು ದೈಹಿಕ ಸಾಮರ್ಥ್ಯ’, ‘ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳದ ಸಂದರ್ಭದಲ್ಲಿ ಆತ್ಮರಕ್ಷಣೆಯ ಯಥಾರ್ಥ ಚಿತ್ರಣ’, ಹಾಗೂ ‘ಒಂದು ಮಹಿಳೆಯ ಮೇಲೆ ಅನೇಕ ಜನರ ಆಕ್ರಮಣದ ಪರಿಸ್ಥಿತಿಯಲ್ಲಿ ಆಕೆಯ ಧೈರ್ಯಪೂರ್ವಕ ಪ್ರತಿರೋಧ’* ದಂತಹ ದೃಶ್ಯ ಪ್ರಸ್ತುತಿಗಳು ವೀಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದವು.

Leave a Comment