ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ !

‘ಶ್ರೀ ಮಹಾಧನ್ವಂತರಿ ಯಾಗ’ವನ್ನು ನೆರವೇರಿಸುತ್ತಿರುವ ಪುರೋಹಿತರು
ಫೊಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರಿ) – ಪ್ರಸ್ತುತ ಸಮಯವು ಸಮಸ್ತ ಮಾನವ ಕುಲಕ್ಕೆ ಅತ್ಯಂತ ಕಷ್ಟಕರವಾದ ಸಮಯ, ಅಂದರೆ ಆಪತ್ಕಾಲವಾಗಿದೆ. ಯುದ್ಧದ ಬಿಕ್ಕಟ್ಟು ಸಮೀಪಿಸುತ್ತಿದೆ. ಈ ಕಠಿಣ ಸಮಯದಲ್ಲಿ, ಶತ್ರುಗಳು ಕೇವಲ ಆಯುಧಗಳಿಂದ ಮಾತ್ರವಲ್ಲದೆ, ಆಧುನಿಕ ತಂತ್ರಜ್ಞಾನದ ಮೂಲಕ ರೋಗಕಾರಕಗಳಾದ (ವೈರಸ್, ಬ್ಯಾಕ್ಟೀರಿಯಾ ಇತ್ಯಾದಿ) ಮೂಲಕವೂ ನಮ್ಮ ಮೇಲೆ ಆಕ್ರಮಣ ಮಾಡಬಹುದು. ಈ ಅಜ್ಞಾತ ಮತ್ತು ಹೊಸ ವಿಪತ್ತುಗಳನ್ನು ಎದುರಿಸಲು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬಲವು ಅತ್ಯಂತ ಅವಶ್ಯಕ. ‘ಎಲ್ಲರಿಗೂ ಒಳ್ಳೆಯದಾಗಲಿ’ ಎಂಬ ಉದ್ದೇಶದಿಂದ ‘ಶ್ರೀ ಮಹಾಧನ್ವಂತರಿ ಯಜ್ಞ’ವನ್ನು ಆಯೋಜಿಸಲಾಗಿತ್ತು. ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’ ಅಂದರೆ ‘ಎಲ್ಲಾ ಜನರು ಸಂತೋಷವಾಗಿರಲಿ’ ಎಂಬ ಭಾವದೊಂದಿಗೆ ಸನಾತನ ಸಂಸ್ಥೆಯು ಆಯೋಜಿಸಿದ ಐತಿಹಾಸಿಕ ಮತ್ತು ಭವ್ಯ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಈ ಯಜ್ಞವು ನೆರವೇರಿತು. ಈ ಸಂದರ್ಭದಲ್ಲಿ ಭಾರತ ಮತ್ತು ವಿದೇಶಗಳಿಂದ ಆಗಮಿಸಿದ 20,000 ಕ್ಕೂ ಹೆಚ್ಚು ಸಾಧಕರು ಮತ್ತು ಹಿಂದೂ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.

‘ಶ್ರೀ ಮಹಾಧನ್ವಂತರಿ ಯಾಗ’ದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ್ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರ ವಂದನೀಯ ಉಪಸ್ಥಿತಿ
ಈ ಮಹಾಯಜ್ಞದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ, ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ, ಗೋವಾದ ಆರೋಗ್ಯ ಸಚಿವ ಶ್ರೀ ವಿಶ್ವಜಿತ್ ರಾಣೆ ಹಾಗೂ ಅವರ ಪತ್ನಿ ಶಾಸಕಿ ಸೌ. ದಿವ್ಯಾ ರಾಣೆ, ಅನೇಕ ಸಂತರು-ಮಹಂತರು ಮತ್ತು ಪ್ರತಿಷ್ಠಿತ ವ್ಯಕ್ತಿಗಳು ವಿಶೇಷವಾಗಿ ಉಪಸ್ಥಿತರಿದ್ದರು. ವೈದಿಕ ಮಂತ್ರಗಳ ಉಚ್ಚಾರಣೆಯಿಂದ ವಾತಾವರಣವು ಭಕ್ತಿಮಯ ಮತ್ತು ಚೈತನ್ಯಮಯವಾಗಿತ್ತು.
🔴 #LIVE : Mahā-Dhanvantari Yagya for Universal Welfare
📍 GEC Ground, Farmagudi, Goa | 📅 17–19 May 2025Experience the divine vibrations of the Mahā-Dhanvantari Yagya, a sacred Vedic ritual dedicated to Dhanvantari Deity – the celestial healer and… pic.twitter.com/P2xQRouzWL
— Sanatan Sanstha (@SanatanSanstha) May 19, 2025
🔥‘Shri Mahadhanvantari Yadnya’ concludes in a spiritually enriching atmosphere for welfare of humanity
Ponda, Goa (Sachchidananda Parabrahman Dr. Athavale Nagari) : At the times when entire world is facing grave uncertainty and widespread crises, the Sanatan Rashtra Shankhnad… pic.twitter.com/rvKaFdUpQP
— Sanatan Sanstha (@SanatanSanstha) May 19, 2025
ಈ ಕುರಿತು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ ಅಭಯ ವರ್ತಕ ಅವರು ಮಾತನಾಡಿ, “ಶಿವಾಗಮ ವಿದ್ಯಾ ವಿಭೂಷಿತ ಆಗಮಾಚಾರ್ಯ ಶ್ರೀ ಅರುಣಕುಮಾರ್ ಗುರುಮೂರ್ತಿ ಮತ್ತು ಗುರುಮೂರ್ತಿ ಶಿವಾಚಾರ್ಯ ಅವರ ಮಾರ್ಗದರ್ಶನದಲ್ಲಿ ಈ ಯಜ್ಞದಲ್ಲಿ 61 ಯಜಮಾನ ದಂಪತಿಗಳು ಭಾಗವಹಿಸಿದ್ದರು. ದೇವರ ಸಾವಿರಾರು ಭಕ್ತರು ಮತ್ತು ವೇದಜ್ಞ ಬ್ರಾಹ್ಮಣರು ಒಟ್ಟಾಗಿ ಯಜ್ಞ ಮಾಡಿದಾಗ, ಆ ಯಜ್ಞವು ‘ಮಹಾಯಜ್ಞ’ವಾಗುತ್ತದೆ. ಈ ರೀತಿಯಾಗಿ ಸಾವಿರಾರು ಭಕ್ತರು ಈ ಮಹೋತ್ಸವದಲ್ಲಿ ಒಟ್ಟುಗೂಡಿ ನೆರವೇರಿಸಿದ ಯಜ್ಞವು ‘ಧನ್ವಂತರಿ ಯಜ್ಞ’ದಿಂದ ಈಗ ‘ಶ್ರೀ ಮಹಾಧನ್ವಂತರಿ ಯಜ್ಞ’ವಾಗಿದೆ. ಈ ಯಜ್ಞದ ಸಂಕಲ್ಪವು ಕೇವಲ ವೈಯಕ್ತಿಕ ಅಥವಾ ಕೌಟುಂಬಿಕವಾದುದಲ್ಲ, ಬದಲಾಗಿ ಜಾಗತಿಕವಾಗಿದೆ” ಎಂದರು.
ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿ ಮತ್ತು ನೇರ ಪ್ರಸಾರವನ್ನು ವೀಕ್ಷಿಸಲು ಭೇಟಿ ನೀಡಿ – SanatanRashtraShankhnad.in

‘ಶ್ರೀ ಮಹಾಧನ್ವಂತರಿ ಯಾಗ’ದಲ್ಲಿ ಉಪಸ್ಥಿತರಿರುವ ಸಾವಿರಾರು ಸಾಧಕರು ಮತ್ತು ಧರ್ಮಪ್ರೇಮಿಗಳು
‘ತಾರೀಖಿನ ಮೇಲೆ ತಾರೀಖು’ ಇನ್ನೆಷ್ಟು ದಿನ ? ನಾಮದೇವ್ ಜಾಧವ್ಗೆ ನ್ಯಾಯ ಯಾವಾಗ ? – ಶ್ರೀ. ಅಭಯ್ ವರ್ತಕ್,...
ನಿರಪರಾಧಿ ಹಿಂದುತ್ವವಾದಿಗಳ ಒಂಬತ್ತುವರೆ ವರ್ಷಗಳ ನಷ್ಟವನ್ನು ಯಾರು ಭರಿಸುತ್ತಾರೆ ? – ಸನಾತನ ಸಂಸ್ಥೆಯ ಪ್ರಶ್ನೆ
ಸನಾತನ ಸಂಸ್ಥೆಯಿಂದ ‘ಹಿಂದೂ ರಾಷ್ಟ್ರರತ್ನ’ ಮತ್ತು ‘ಸನಾತನ ಧರ್ಮಶ್ರೀ’ ಪುರಸ್ಕಾರ !
ನಿಜವಾದ ಅರ್ಥದಲ್ಲಿ ‘ಸನಾತನ ರಾಷ್ಟ್ರ’ದ ಶಂಖನಾದವಾಗಿದೆ ! – ಸನಾತನ ಸಂಸ್ಥೆ
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಸಮಾರೋಪ: ಭಾರತ ಸೇರಿದಂತೆ 23 ದೇಶಗಳ 30 ಸಾವಿರ ಹಿಂದೂಗಳ ಸಹಭಾಗ
ಶಿವಾಜಿ ಕಾಲದ ಅಪರೂಪದ ಶಸ್ತ್ರಾಸ್ತ್ರಗಳ ಪ್ರದರ್ಶನದ ಮೂಲಕ ಛತ್ರಪತಿಯ ಪರಾಕ್ರಮದ ಜೀವಂತ ದರ್ಶನ !