ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಸ್ಥಳದಲ್ಲಿ ಭಾರತದ ವಿಜಯಕ್ಕಾಗಿ ‘ಶತಚಂಡಿ ಯಜ್ಞ’ ಆರಂಭ !

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಸ್ಥಳದಲ್ಲಿ ಭಾರತದ ವಿಜಯಕ್ಕಾಗಿ ‘ಶತಚಂಡಿ’ ಯಜ್ಞ ಆರಂಭ !

ಫೋಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರ) – ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನಂತರ ಕದನ ವಿರಾಮದ ಔಪಚಾರಿಕ ಘೋಷಣೆಯಾಗಿದ್ದರೂ, ಪಾಕಿಸ್ತಾನದಿಂದ ಗುಪ್ತ ಸ್ವರೂಪದ ಕುತಂತ್ರಗಳು ಮತ್ತು ಚಟುವಟಿಕೆಗಳು ಇನ್ನೂ ಮುಂದುವರಿದಿವೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ವಿಜಯಕ್ಕಾಗಿ ಮತ್ತು ಭೂಮಿಯ ಮೇಲಿನ ಏಕೈಕ ಸನಾತನ ರಾಷ್ಟ್ರವಾದ ಭಾರತದ ರಕ್ಷಣೆಗಾಗಿ, ಸನಾತನ ಸಂಸ್ಥೆಯ ವತಿಯಿಂದ ಫರ್ಮಾಗುಡಿ, ಫೋಂಡಾ, ಗೋವಾದಲ್ಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಪವಿತ್ರ ಭೂಮಿಯಲ್ಲಿ ಮೇ 20 ರಿಂದ 22, 2025 ರವರೆಗೆ ಮೂರು ದಿನ ‘ಶತಚಂಡಿ ಯಜ್ಞ’ವನ್ನು ಆಯೋಜಿಸಲಾಗಿದೆ. ಈ ಯಜ್ಞವನ್ನು ವಿಧಿಪೂರ್ವಕವಾಗಿ ಪ್ರಾರಂಭಿಸಲಾಗಿದೆ.

ಎಡದಿಂದ ಸನಾತನ ಸಂಸ್ಥೆಯ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸದ್ಗುರು ನೀಲೇಶ ಸಿಂಗಬಾಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀ. ಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಹಾಗೂ ಸದ್ಗುರು ಮುಕುಲ ಗಾಡಗೀಳ

ಈ ಯಜ್ಞದಲ್ಲಿ ಯಜಮಾನರಾಗಿ ದಂಪತಿಗಳಾದ ಸದ್ಗುರು ನೀಲೇಶ ಸಿಂಗಬಾಳ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಹಾಗೂ ಸದ್ಗುರು ಡಾ. ಮುಕುಲ ಗಾಡಗೀಳ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ವಹಿಸಿಕೊಂಡಿದ್ದಾರೆ.

ಯಜ್ಞದ ಪ್ರಾರಂಭದಲ್ಲಿ ಶ್ರೀಗಣೇಶ ಪೂಜೆ, ಪುಣ್ಯಾಹವಾಚನ, ಮಾತೃಕಾ ಪೂಜೆ, ನಾಂದೀಶ್ರಾದ್ಧದ ಜೊತೆಗೆ ವಾಸ್ತುಮಂಡಲ ದೇವತೆಗಳ ಆವಾಹನೆ, ಪೂಜೆ ಮತ್ತು ಇತರ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು. ನಂತರ ಪ್ರಧಾನ ದೇವತೆಗಳ ಆವಾಹನೆ ಮತ್ತು ಪೂಜೆಯಾದ ನಂತರ ಪಂಚಾಕ್ಷರಿ ಹೋಮದ ದಿವ್ಯ ಪ್ರಕ್ರಿಯೆ ಸಂಪನ್ನವಾಯಿತು. ಈ ಶತಚಂಡಿ ಯಜ್ಞವು ಶಿವ ಆಗಮ ವಿದ್ಯಾ ನಿಧಿ ಆಗಮಾಚಾರ್ಯ ಶ್ರೀ. ಅರುಣಕುಮಾರ ಗುರುಮೂರ್ತಿ ಮತ್ತು ಗುರುಮೂರ್ತಿ ಶಿವಾಚಾರ್ಯರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ಯಜ್ಞ ವಿಧಿಗಳನ್ನು ನೆರವೇರಿಸುವಾಗ ಪುರೋಹಿತರು ಯಜ್ಞದ ಮಹತ್ವವನ್ನು ವಿವರಿಸುತ್ತಾ, ಎಲ್ಲಾ ದೇವತೆಗಳ ತೇಜಸ್ಸು, ಶಕ್ತಿ ಮತ್ತು ಕೃಪೆಯು ಚಂಡಿ ರೂಪದಲ್ಲಿ ಒಟ್ಟಾಗಿ ಪ್ರಕಟವಾಗುತ್ತದೆ ಎಂದು ತಿಳಿಸಿದರು. ಅದಕ್ಕಾಗಿಯೇ ಶ್ರೀಚಂಡಿದೇವಿಯನ್ನು ‘ಮಹಿಷಾಸುರಮರ್ದಿನಿ’ ಎಂದು ಕರೆಯಲಾಗುತ್ತದೆ. ಅಷ್ಟಾದಶಭುಜ ಮಹಾಲಕ್ಷ್ಮಿ ಕೂಡಾ ಆಕೆಯ ಒಂದು ರೂಪವಾಗಿದ್ದು, ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂಬ ತ್ರಿಮೂರ್ತಿಗಳ ಶಕ್ತಿಯ ಸಾಕ್ಷಾತ್ ಮೂರ್ತ ಸ್ವರೂಪವೇ ಶ್ರೀ ಚಂಡಿದೇವಿ. ಆದ್ದರಿಂದ ಚಂಡಿ ಹೋಮದಲ್ಲಿ ಸಮಸ್ತ ಪೂಜೆಗಳ ಪರಿಪೂರ್ಣತೆ ಅಡಗಿದೆ ಎಂದರು.

Leave a Comment