ಸನಾತನ ನಿರ್ಮಿತ ದತ್ತ ಗುರುಗಳ ಸಾತ್ತ್ವಿಕ ನಾಮಪಟ್ಟಿ

ಅಕ್ಷರ ಸಾತ್ತ್ವಿಕವಾಗಿದ್ದರೆ ಅದರಲ್ಲಿ ಚೈತನ್ಯವಿರುತ್ತದೆ. ಸಾತ್ತ್ವಿಕ ಅಕ್ಷರಗಳು ಮತ್ತು ಅವುಗಳ ಸುತ್ತಲೂ ದೇವತೆಗಳ ತತ್ತ್ವಕ್ಕೆ ಅನುರೂಪವಾಗಿರುವ ಅಂಚುಗಳಿರುವ ಆಯಾ ದೇವತೆಗಳ ನಾಮಪಟ್ಟಿಗಳನ್ನು ಸನಾತನವು ತಯಾರಿಸುತ್ತದೆ. ಈ ನಾಮಪಟ್ಟಿಗಳಲ್ಲಿ ಆಯಾ ದೇವತೆಯ ತತ್ತ್ವವು ಸರಾಸರಿ ಶೇ. ೧೦ ರಷ್ಟು ಬಂದಿದೆ. ಈ ನಾಮಪಟ್ಟಿಗಳು ಆಯಾ ದೇವತೆಯ ತತ್ತ್ವವನ್ನು ಅಧಿಕ ಪ್ರಮಾಣದಲ್ಲಿ ಆಕರ್ಷಿಸಿ, ಪ್ರಕ್ಷೇಪಿಸುವಂತೆ ತಯಾರಿಸಲು ಪ್ರಯತ್ನಿಸಲಾಗುತ್ತದೆ. ಇಂದಿನವರೆಗೆ ಸನಾತನವು ದತ್ತನ ನಾಮಪಟ್ಟಿಯೊಂದಿಗೆ ವಿವಿಧ ದೇವತೆಗಳ ಸುಮಾರು ೮೦ಕ್ಕಿಂತಲೂ ಹೆಚ್ಚು ನಾಮಪಟ್ಟಿಗಳನ್ನು ತಯಾರಿಸಿದೆ.

೧. ಸನಾತನ ನಿರ್ಮಿತ ದತ್ತನ ನಾಮಪಟ್ಟಿಯಲ್ಲಿನ ಅಕ್ಷರಗಳನ್ನು ಸಂತರ ಮಾರ್ಗದರ್ಶನದಲ್ಲಿ ತಯಾರಿಸಿರುವುದರಿಂದ ಅದರಲ್ಲಿ ಅಧಿಕ ಪ್ರಮಾಣದಲ್ಲಿ ಚೈತನ್ಯ ಆಕರ್ಷಿಸುತ್ತಿರುವುದರ ಅರಿವಾಯಿತು.

೨. ಸಗುಣ-ನಿರ್ಗುಣ ಸ್ತರದಲ್ಲಿ ಲಾಭವಾಗುವುದು : ಸನಾತನ-ನಿರ್ಮಿತ ದತ್ತನ ನಾಮಜಪ-ಪಟ್ಟಿಯಲ್ಲಿ ದೇವತೆಯ ರೂಪ ಮತ್ತು ನಾಮ ಇವೆರಡನ್ನೂ ತೋರಿಸಿರುವುದರಿಂದ ಅದರಿಂದ ಸಗುಣ-ನಿರ್ಗುಣ ಸ್ತರದಲ್ಲಿ ಲಾಭವಾಗುತ್ತದೆ.

೩. ನಾಮಪಟ್ಟಿಯಲ್ಲಿ ದೇವತೆಯ ತಾರಕ ಮತ್ತು ಮಾರಕ ಈ ಎರಡೂ ಶಕ್ತಿಗಳ ತತ್ತ್ವಗಳಿರುತ್ತವೆ. ಆದುದರಿಂದ ಈ ನಾಮಪಟ್ಟಿಯಿಂದ ಪ್ರತಿಯೊಬ್ಬರಿಗೂ ಆವಶ್ಯಕ ತತ್ತ್ವದ ಲಾಭವಾಗುತ್ತದೆ.

೪. ದತ್ತನ ಈ ನಾಮಪಟ್ಟಿಯಿಂದ ಏಕಕಾಲದಲ್ಲಿ ಅವರ ರೂಪ ಕಾಣುವುದು ಮತ್ತು ನಾಮಜಪದ ನಾದವು ಕೇಳುವುದು : ದೇವತೆಗಳ ನಾಮಪಟ್ಟಿಗಳ ಸೂಕ್ಷ ಜ್ಞಾನದ ಚಿತ್ರಗಳನ್ನು ಬಿಡಿಸುವಾಗ ಕೆಲವೊಮ್ಮೆ ಮೊದಲು ನಾಮಜಪದ ನಾದ ಕೇಳಿಸುತ್ತದೆ ಮತ್ತು ನಂತರ ದೇವತೆಯ ರೂಪ ಕಾಣಿಸುತ್ತದೆ, ಮತ್ತೆ ಕೆಲವೊಮ್ಮೆ ಮೊದಲು ದೇವತೆಯ ರೂಪ ಕಾಣಿಸುತ್ತದೆ ಮತ್ತು ನಂತರ ನಾಮಜಪ ಕೇಳಿಸುತ್ತದೆ; ಆದರೆ ದತ್ತನ ಈ ನಾಮಪಟ್ಟಿಯಲ್ಲಿ ಒಂದೇ ಸಮಯದಲ್ಲಿ ರೂಪವೂ ಕಾಣಿಸಿತು ಮತ್ತು ನಾಮಜಪದ ನಾದವೂ ಕೇಳಿಸಿತು.

೫. ದತ್ತನಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ ಈ ಮೂರೂ ದೇವತೆಗಳು ಮತ್ತು ಅವರ ಶಕ್ತಿಯು ಇರುತ್ತದೆ. ಆದುದರಿಂದ ಪ್ರತಿಯೊಬ್ಬ ವ್ಯಕ್ತಿಯ ಕುಟುಂಬದ ಗೋತ್ರ, ಕುಲ, ಕುಲದೇವತೆ, ಮಹಾಪುರುಷ ಇವರ ತತ್ತ್ವಗಳು ಒಟ್ಟಿಗೆ ಈ ದೇವತೆಯಲ್ಲಿ ಇರುವುದರಿಂದ ಕೂಡಲೇ ಪೂರ್ವಜರ ತೊಂದರೆಗಳ ನಿವಾರಣೆಯಾಗಿ ಕುಟುಂಬಕ್ಕೆ ಲಾಭವಾಗುತ್ತದೆ.

– ಕು. ಪ್ರಿಯಾಂಕಾ ಲೋಟಲೀಕರ, ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೦.೫.೨೦೧೨)

Leave a Comment