ಸಾಧಕರನ್ನು ಭಾವವಿಶ್ವದಲ್ಲಿ ಕರೆದೊಯ್ಯಬಲ್ಲ ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವ

‘ಶ್ರೀರಾಮ ಮತ್ತು ಶ್ರೀಕೃಷ್ಣನ ಜನ್ಮ-ಮಹೋತ್ಸವದ ಸಮಯದಲ್ಲಿ ಏನೇನು ಘಟಿಸಿತು ?’, ಎಂಬುದನ್ನು ನಾವು ಈ ಲೇಖನದಲ್ಲಿ ತಿಳಿದುಕೊಂಡೆವು. ‘ಪರಾತ್ಪರ ಗುರು ಡಾ. ಆಠವಲೆಯವರ ಪ್ರತ್ಯಕ್ಷ ಜನ್ಮದ ಸಮಯದಲ್ಲಿ ಏನೇನು ಘಟಿಸಿತು ?’, ಎಂಬುದನ್ನು ನಮಗೆ ಮುಂದೆ ಯಾರದ್ದಾದರೂ ಮಾಧ್ಯಮದಿಂದ ಭಗವಂತನು ಖಂಡಿತವಾಗಿಯೂ ಹೇಳುವನು; ಆದರೆ ಅಲ್ಲಿಯವರೆಗೆ ‘ನಾವು (ಗುರುದೇವರ) ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ಸಮಯದಲ್ಲಿ ಭಾವವನ್ನು ಹೇಗೆ ಇಡಬೇಕು’, ಎಂಬುದನ್ನು ನೋಡೋಣ.

೧. ಈಶ್ವರನು ಜಗತ್ತಿನ ಕಲ್ಯಾಣಕ್ಕಾಗಿ ದೇಹಧಾರಣೆ ಮಾಡಿ ಪೃಥ್ವಿಯ ಮೇಲೆ ಮನುಷ್ಯನ ರೂಪದಲ್ಲಿ ಬರುವುದು

ನಿಜ ಹೇಳಬೇಕಾದರೆ ಈಶ್ವರನಿಗೆ ಜನ್ಮವೇ ಇರುವುದಿಲ್ಲ. ಅವನು ಅನಾದಿ ಮತ್ತು ಅನಂತನಾಗಿದ್ದಾನೆ. ಅವನ ಜನ್ಮವೆಂದರೆ ಪೃಥ್ವಿಯ ಮೇಲಿನ ಅವನ ಸಗುಣ ರೂಪದಲ್ಲಿನ ಆಗಮನದ ಕ್ಷಣ. ಅವನು ಜಗತ್ತಿನ ಕಲ್ಯಾಣಕ್ಕಾಗಿ ಪೃಥ್ವಿಯ ಮೇಲೆ ದೇಹಧಾರಣೆ ಮಾಡಿ ಮನುಷ್ಯನ ರೂಪದಲ್ಲಿ ಬರುತ್ತಾನೆ. ಪರಾತ್ಪರ ಗುರು ಡಾ. ಆಠವಲೆ ಇವರ ೮೦ ನೇ ಜನ್ಮೋತ್ಸವವನ್ನು ಆಚರಿಸುವುದೆಂದರೆ ಈಶ್ವರನ ಸಗುಣ ರೂಪದಲ್ಲಿನ ಅವತರಣದ ಉತ್ಸವವನ್ನು ಆಚರಿಸುವುದು.

೨. ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವವು ಈಶ್ವರನ ಸಗುಣ ರೂಪದ ಆನಂದ ಪಡೆಯುವ ಕ್ಷಣ

ನಿರ್ಗುಣ ಈಶ್ವರನು ಭಕ್ತರಿಗೆ ಆನಂದವನ್ನು ನೀಡಲು ಸಗುಣ ರೂಪದಲ್ಲಿ ಬರುತ್ತಾನೆ. ಆನಂದಮಯ ಅವತಾರೀ ಲೀಲೆಯನ್ನು ಮಾಡುತ್ತಾನೆ ಮತ್ತು ಪುನಃ ನಿರ್ಗುಣದಲ್ಲಿ ವಿಲೀನನಾಗುತ್ತಾನೆ. ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವವೂ ನಮ್ಮೆಲ್ಲರಿಗಾಗಿ ನಿರ್ಗುಣ ಈಶ್ವರನ ಸಗುಣ ರೂಪದ ಆನಂದವನ್ನು ಪಡೆಯುವ ಕ್ಷಣವಾಗಿದೆ.

೩. ಅವತಾರಗಳ ಜನ್ಮೋತ್ಸವದ ಆನಂದವನ್ನು ಪರಾತ್ಪರ ಗುರು ಡಾ. ಆಠವಲೆಯವರು ಅವರ ಜನ್ಮೋತ್ಸವದ ಸಮಯದಲ್ಲಿ ನೀಡಲಿದ್ದಾರೆ

ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ ಸಪ್ತರ್ಷಿಗಳು ಅನೇಕ ಬಾರಿ, ‘ಪರಾತ್ಪರ ಗುರು ಡಾ. ಆಠವಲೆ ಇವರಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣ ಈ ಇಬ್ಬರೂ ಅವತಾರಗಳ ತತ್ತ್ವಗಳಿವೆ’ ಎಂದು ಹೇಳಿದ್ದಾರೆ. ಗುರುದೇವರು ಕೆಲವೊಮ್ಮೆ ಶ್ರೀರಾಮನಂತೆ ಮತ್ತು ಕೆಲವೊಮ್ಮೆ ಶ್ರೀಕೃಷ್ಣನಂತೆ ಇರುತ್ತಾರೆ. ಯಾವ ವೈಕುಂಠಪತಿ, ಶ್ರೀಹರಿ ನಾರಾಯಣನು ಶ್ರೀರಾಮ ಮತ್ತು ಶ್ರೀಕೃಷ್ಣನ ರೂಪದಲ್ಲಿ ಬಂದಿದ್ದನೋ, ಅವನೇ ಈಗ ನಮ್ಮೆಲ್ಲ ಸಾಧಕರಿಗಾಗಿ ಪರಾತ್ಪರ ಗುರು ಡಾ. ಆಠವಲೆಯವರ ರೂಪದಲ್ಲಿ ಬಂದಿದ್ದಾನೆ.

೪. ಭಗವಾನ ಶ್ರೀವಿಷ್ಣುವಿನ ಚೈತನ್ಯವನ್ನು ಅನುಭವಿಸಲು ಸಾಧಕರಿಗೆ ಜನ್ಮೋತ್ಸವವನ್ನು ಆಚರಿಸುವ ಅವಕಾಶ ಸಿಗುವುದು

ಪರಾತ್ಪರ ಗುರು ಡಾ. ಆಠವಲೆ (ಗುರುದೇವರ) ಇವರು ಜನ್ಮ ತಾಳುವ ಸಮಯದಲ್ಲಿ ಭಗವಾನ ಶ್ರೀವಿಷ್ಣುವಿನ ಯಾವ ಚೈತನ್ಯವು ಪೃಥ್ವಿಯ ಮೇಲೆ ಬಂದಿರುವುದೋ, ಅದರ ಅನುಭೂತಿಯು  ಸಾಧಕರಿಗೂ ಸಿಗಬೇಕೆಂದು ಗುರುದೇವರು ನಮ್ಮೆಲ್ಲ ಸಾಧಕರಿಗೆ ಈಗ ಜನ್ಮೋತ್ಸವವನ್ನು ಆಚರಿಸುವ ಅವಕಾಶವನ್ನು ನೀಡುತ್ತಿದ್ದಾರೆ. ಅದಕ್ಕಾಗಿ ಗುರುದೇವರ ಚರಣಗಳಲ್ಲಿ ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ ಅವು ಕಡಿಮೆಯೇ ಆಗುವವು.

೫. ಪರಾತ್ಪರ ಗುರು ಡಾ. ಆಠವಲೆರವರ ಜನ್ಮೋತ್ಸವವೆಂದರೆ ಸಾಕ್ಷಾತ್ ಶ್ರೀವಿಷ್ಣುವಿನ ಜನ್ಮೋತ್ಸವ !

ಪೃಥ್ವಿಯ ಮೇಲೆ ಪರಾತ್ಪರ ಗುರು ಡಾ. ಆಠವಲೆಯವರ ಅಸ್ತಿತ್ವವೆಂದರೆ, ಸಾಕ್ಷಾತ್ ಶ್ರೀವಿಷ್ಣುವಿನ ಅಸ್ತಿತ್ವ. ಶ್ರೀ ಗುರುಗಳ ಜನ್ಮೋತ್ಸವಕ್ಕೆ ನಾವು ಎಲ್ಲ ಸಾಧಕರು ‘ಸಾಕ್ಷಾತ್ ಶ್ರೀವಿಷ್ಣುವಿನ, ಅಂದರೆ ಸಾಕ್ಷಾತ್ ಶ್ರೀರಾಮ ಮತ್ತು ಶ್ರೀಕೃಷ್ಣ ಇವರ ಜನ್ಮೋತ್ಸವವನ್ನು ಆಚರಿಸುತ್ತಿದ್ದೇವೆ,’ ಎಂಬ ಭಾವವನ್ನು ಇಟ್ಟುಕೊಳ್ಳೋಣ. ಶ್ರೀರಾಮ ಮತ್ತು ಶ್ರೀಕೃಷ್ಣನ ಜನ್ಮದ ಸಮಯದಲ್ಲಿ ಅಯೋಧ್ಯೆವಾಸಿಗಳು ಮತ್ತು ಗೋಕುಲವಾಸಿಗಳು ಯಾವ ಭಾವಸಮಾಧಿಯನ್ನು ಅನುಭವಿಸಿದ್ದರೋ, ಆ ಸ್ಥಿತಿಯನ್ನು ಅನುಭವಿಸಲು ನಾವು ಭಾವಾವಸ್ಥೆಯಲ್ಲಿರಲು ಪ್ರಯತ್ನಿಸೋಣ.

‘ದೇವರೇ, ಗುರುದೇವರ ಜನ್ಮೋತ್ಸವದ ಮಾಧ್ಯಮದಿಂದ ನಮ್ಮೆಲ್ಲ ಸಾಧಕರಿಗೆ ನಿಮ್ಮ ಚೈತನ್ಯ ಮತ್ತು ಆಶೀರ್ವಾದ ಲಭಿಸುವುದಿದೆ. ನಮ್ಮೆಲ್ಲ ಸಾಧಕರಿಗೆ ಈ ಜನ್ಮೋತ್ಸವದ ಚೈತನ್ಯದ ಸ್ತರದಲ್ಲಿ ಲಾಭವನ್ನು ಪಡೆಯಲು ಬರಲಿ.’ ಎಂದು ಶ್ರೀಮನ್ನಾರಾಯಣನ ಚರಣಗಳಲ್ಲಿ ನಾವೆಲ್ಲರೂ ಭಾವಪೂರ್ಣವಾಗಿ ಪ್ರಾರ್ಥಿಸೋಣ.

ನಾವೆಲ್ಲ ಸಾಧಕರು ಈ ಜನ್ಮೋತ್ಸವದ ನಿಮಿತ್ತದಿಂದ ಶ್ರೀವಿಷ್ಣು ಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೃತಜ್ಞತಾ ಭಾವದಲ್ಲಿದ್ದು ನಾಮಸ್ಮರಣೆಸಹಿತ ಸೇವೆಯಲ್ಲಿ ನಿರತರಾಗೋಣ.

ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ ಇವರಿಗೆ ಜಯವಾಗಲಿ !’

– ಶ್ರೀ. ವಿನಾಯಕ ಶಾನಭಾಗ, ಚೆನ್ನೈ, ತಮಿಳುನಾಡು. (೧೧.೫.೨೦೨೨)

Leave a Comment