ಋಷಿಪಂಚಮಿ ವಿಶೇಷ – ವಿವಿಧ ಮಾರ್ಗಗಳಿಂದ ಸಾಧನೆ ಮಾಡುತ್ತಿರುವ ಋಷಿಗಳ ಆಧ್ಯಾತ್ಮಿಕ ಮಹತ್ವ!

Article also available in :

ಮಾನವರ ಸರ್ವಾಂಗೀಣ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುವ ಋಷಿಗಳ ಚರಣಗಳಲ್ಲಿ ಋಷಿಪಂಚಮಿ ನಿಮಿತ್ತ ಕೋಟಿ ಕೋಟಿ ಪ್ರಣಾಮಗಳು!

ಋಷಿ ಅಥವಾ ಮುನಿ ಎಂದೊಡನೆ, ನಮ್ಮ ಕೈಗಳು ತಾವಾಗಿಯೇ ಜೋಡಿಕೊಳ್ಳುತ್ತವೆ ಮತ್ತು ತಲೆ ಆದರದಿಂದ ಬಾಗುತ್ತದೆ. ಈ ಭರತಖಂಡದಲ್ಲಿ, ಅನೇಕ ಋಷಿಗಳು ವಿವಿಧ ಯೋಗಮಾರ್ಗಗಳ ಮೂಲಕ ಸಾಧನೆಯನ್ನು ಮಾಡಿ ಭಾರತವನ್ನು ತಪೋಭೂಮಿಯಾಗಿ ಮಾಡಿದ್ದಾರೆ. ಅವರು ಧರ್ಮ ಮತ್ತು ಆಧ್ಯಾತ್ಮದ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ ಮತ್ತು ಸಮಾಜದಲ್ಲಿ ಧರ್ಮಾಚರಣೆ ಮತ್ತು ಸಾಧನೆಯ ಪ್ರಸಾರ ಮಾಡುವ ಮೂಲಕ ಸಮಾಜವನ್ನು ಸುಸಂಸ್ಕೃತವನ್ನಾಗಿ ಮಾಡಿದ್ದಾರೆ. ಇಂದಿನ ಮಾನವನು ಪ್ರಾಚೀನ ಕಾಲದ ವಿವಿಧ ಋಷಿಗಳ ವಂಶಸ್ಥನೇ; ಆದರೆ ಇದನ್ನು ಮರೆತಿರುವುದರಿಂದ, ಅವನಿಗೆ ಋಷಿಗಳ ಆಧ್ಯಾತ್ಮಿಕ ಮಹತ್ವ ತಿಳಿದಿಲ್ಲ. ಸಾಧನೆಯನ್ನು ಮಾಡುವುದರಿಂದ ಮಾತ್ರ ಋಷಿಗಳ ಮಹತ್ವ ಮತ್ತು ಶಕ್ತಿಯನ್ನು ಅರ್ಥಮಾಡಿಕೊಳ್ಳಬಹುದು. ಋಷಿಪಂಚಮಿ ನಿಮಿತ್ತ ಋಷಿಗಳ ಅಸಾಧಾರಣ ಸಾಧನೆ ಮತ್ತು ಮಹತ್ತ್ವದ ಬಗ್ಗೆ ತಿಳಿದುಕೊಳ್ಳೋಣ…

೧. ‘ಋಷಿ’ ಪದದ ಅರ್ಥ

ಈಶ್ವರಪ್ರಾಪ್ತಿಗಾಗಿ ದೀರ್ಘಾವಧಿಯ ಸಾಧನೆಯನ್ನು ಮಾಡುವವರನ್ನು ‘ಋಷಿಗಳು’ ಎಂದು ಕರೆಯಲಾಗುತ್ತದೆ.

೨. ಋಷಿಪಂಚಮಿಯ ತಿಥಿ

ಭಾದ್ರಪದ ಮಾಸದ ಶುಕ್ಲ ಪಕ್ಷದ ಪಂಚಮಿಯನ್ನು ‘ಋಷಿಪಂಚಮಿ’ ಎಂದು ಕರೆಯಲಾಗುತ್ತದೆ. ಈ ದಿನ ಋಷಿಗಳನ್ನು ಪೂಜಿಸುವ ವ್ರತವನ್ನು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ.

೩. ವ್ರತದ ಉದ್ದೇಶ

ಮಾಸಿಕ ಋತು, ಅಶೌಚ ಮತ್ತು ಸ್ಪರ್ಶಾಸ್ಪರ್ಶದಿಂದ ಸ್ತ್ರೀಯರ ಮೇಲಾಗುವ ಪರಿಣಾಮಗಳು ಋಷಿಪಂಚಮಿ ವ್ರತವನ್ನು ಆಚರಿಸುವುದರಿಂದ ಕಡಿಮೆಯಾಗುತ್ತವೆ.

೪. ಋಷಿಪಂಚಮಿಯ ದಿನ ವ್ರತವನ್ನಾಚರಿಸುವುದರಿಂದ ಮಾಸಿಕ ಋತುವಿನಿಂದ ಉಂಟಾಗುವ ದೋಷಗಳ ನಿವಾರಣೆಯಾಗುವುದು

ಈ ದಿನ, ಮಹಿಳೆಯರು ಉಪವಾಸ ಮಾಡುತ್ತಾರೆ ಮತ್ತು ಅರುಂಧತಿ ಸಹಿತ ಸಪ್ತರ್ಷಿಗಳ ಪೂಜೆಯನ್ನು ಮಾಡುತ್ತಾರೆ. ಇದು ಮಾಸಿಕ ಋತು, ಅಶೌಚ ಮತ್ತು ಸ್ಪರ್ಶಾಸ್ಪರ್ಶದಿಂದ ಉಂಟಾಗುವ ದೋಷಗಳನ್ನು ನಷ್ಟ ಮಾಡುತ್ತದೆ.

ಇದರಿಂದ ನಮಗೆ ಋಷಿಗಳ ಸಾಮರ್ಥ್ಯ ತಿಳಿದುಬರುತ್ತದೆ. ಋಷಿಗಳಲ್ಲಿ ಜ್ಞಾನದ ಶಕ್ತಿ, ಯೋಗದ ಶಕ್ತಿ, ತಪಸ್ಸಿನ ಶಕ್ತಿ ಮತ್ತು ಆತ್ಮ ಶಕ್ತಿಯಿರುವುದರಿಂದ, ಅವರ ಸಾಮರ್ಥ್ಯದಿಂದ ಕರ್ಮ ದೋಷಗಳು ನಾಶವಾಗುತ್ತವೆ ಮತ್ತು ಪಾಪ ಕ್ಷಾಲನೆಯಾಗುತ್ತದೆ.

೫. ವಿವಿಧ ರೀತಿಯ ಬಲ, ಅವುಗಳಲ್ಲಿ ಕಾರ್ಯ ಮಾಡುವ ಶಕ್ತಿ, ಸೂಕ್ಷ್ಮ ದೇಹಗಳ ಮೇಲಾಗುವ ಪರಿಣಾಮಗಳು ಮತ್ತು ಪಾಪ ನಷ್ಟವಾಗುವ ಪ್ರಕ್ರಿಯೆ, ಪ್ರಾರಬ್ಧ ಮತ್ತು ಪಾಪ ನಷ್ಟವಾಗುವ ಪ್ರಮಾಣ

 

ಕಾರ್ಯ ಮಾಡುವ ಶಕ್ತಿ ಯಾವ ದೇಹದ ಮೇಲೆ ಪರಿಣಾಮ ಬೀರುತ್ತದೆ ಪಾಪ ನಷ್ಟವಾಗುವ ಪ್ರಕ್ರಿಯೆ ಪ್ರಾರಬ್ಧ ನಷ್ಟವಾಗುವ ಪ್ರಮಾಣ (ಶೇ.) ಪಾಪ ನಷ್ಟವಾಗುವ ಪ್ರಮಾಣ (ಶೇ.)
೧. ಬಾಹುಬಲ ಶಾರೀರಿಕ ಶಕ್ತಿ ಸ್ಥೂಲ ದೇಹ (ಶರೀರ) ಶಾರೀರಿಕ ಕೃತಿಗಳಿಂದ ಉದಾ. ಗೋಸೇವೆ ಮಾಡಿ ೨೦ ೨೦
೨. ಬುದ್ಧಿಬಲ ಬೌದ್ಧಿಕ  ಶಕ್ತಿ ಕಾರಣದೇಹ (ಸ್ಥೂಲ ಬುದ್ಧಿ) ಬುದ್ಧಿಯು ಸಾತ್ತ್ವಿಕ ಆಗುವುದರಿಂದ ಮನುಷ್ಯನಿಂದ ಸತ್ಕರ್ಮಗಳಾಗುತ್ತವೆ ೨೦ ೨೫
೩. ಯೋಗಬಲ ಯೋಗಶಕ್ತಿ ಮನೋದೇಹ ಮತ್ತು ಕಾರಣದೇಹ ಯೋಗಸಾಮರ್ಥ್ಯದಿಂದ, ಉದಾ. ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸಿ ಸಪ್ತಚಕ್ರ ಮತ್ತು ನಾಡಿಗಳ ಶುದ್ಧಿಯಾಗುವುದು ೩೦ ೪೦
೪. ಜ್ಞಾನಬಲ ಜ್ಞಾನಶಕ್ತಿ ಕಾರಣದೇಹ (ಸೂಕ್ಷ್ಮ ಬುದ್ಧಿ) ಜ್ಞಾನಶಕ್ತಿಯ ಸಾಮರ್ಥ್ಯದಿಂದ ಪ್ರಾರಬ್ಧ ಮತ್ತು ಪಾಪ ನಷ್ಟವಾಗುತ್ತದೆ ೪೦ ೫೦
೫. ದೇವಬಲ ದೈವೀಶಕ್ತಿ ಚಿತ್ತ ದೈವೀಶಕ್ತಿಯ ಸಹಾಯದಿಂದ ಉದಾ. ಉಚ್ಚ ದೇವತೆಗಳು ದೃಷ್ಟಾಂತ ನೀಡಿ ಕೃಪೆ ಮಾಡುವುದು ೫೦ ೬೦
೬. ತಪೋಬಲ ತಪಸ್ಸಿನ ಶಕ್ತಿ ಮಹಾಕಾರಣದೇಹ ತಪೋಬಲದಿಂದ ಶಕ್ತಿಪಾತ ಮಾಡುವುದು ೬೦ ೭೦
೭. ಆತ್ಮಬಲ ಆತ್ಮಶಕ್ತಿ ಜೀವಾತ್ಮಾ ಗುರುಕೃಪೆಯಿಂದ ಆತ್ಮಜ್ಞಾನ ಪ್ರಾಪ್ತವಾಗುವುದರಿಂದ ಆತ್ಮ ಶಕ್ತಿ ಪ್ರಕಟವಾಗಿ ಸುಷುಮ್ನಾನಾಡಿಯ ಮೂಲಕ ಕಾರ್ಯರತವಾಗುವುದು ೭೦ ೯೦
೮. ಗುರುಬಲ ಪರಮಶಕ್ತಿ ಪರಮಾತ್ಮಾ ಶ್ರೀಗುರುಗಳ ಕೃಪೆಯಿಂದ ಗ್ರಹದೋಷ, ನಕ್ಷತ್ರದೋಷ, ಕರ್ಮದೋಷ, ಸ್ವಭಾವದೋಷ ಮುಂತಾದ ಎಲ್ಲ ರೀತಿಯ ದೋಷಗಳು ನಷ್ಟವಾಗುತ್ತವೆ ೧೦೦ ೧೦೦

೬. ಗುರುಬಲದ ಅಸಾಧಾರಣ ಮಹತ್ವ

ಮೇಲಿನ ಎಲ್ಲ ವಿಧದ ‘ಬಲ’ಗಳಲ್ಲಿ ಗುರುಬಲವು ಅತ್ಯಂತ ಸಾಮರ್ಥ್ಯಶಾಲಿಯಾಗಿರುವುದರಿಂದ, ಶ್ರೀಗುರುಗಳ ಅನುಗ್ರಹವನ್ನು ಗಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದರೆ ಸಾಧಕನಿಗೆ ಅತ್ಯುನ್ನತ ಮಟ್ಟದಲ್ಲಿ ಆಧ್ಯಾತ್ಮಿಕ ಲಾಭವಾಗಿ ವೇಗವಾಗಿ ಆಧ್ಯಾತ್ಮಿಕ ಉನ್ನತಿಯಾಗುವ ಮೂಲಕ ಮೋಕ್ಷಕ್ಕೂ ತಲುಪಬಹುದು. ಆದ್ದರಿಂದ ಗುರುಗಳ ಅನುಗ್ರಹ ಪಡೆದವರು ಯಾವುದೇ ವಿಷಯದ ಬಗ್ಗೆ ಚಿಂತಿಸಬೇಕಾಗಿಲ್ಲ. ಗುರುಗಳಿಗೆ ಸಂಪೂರ್ಣವಾಗಿ ಶರಣಾದ ಶಿಷ್ಯನ ಹೊರೆಯನ್ನು ಗುರುಗಳೇ ಹೊರುತ್ತಾರೆ. ಇದರಿಂದ ಗುರುವಿನ ಅನುಗ್ರಹವನ್ನು ಪಡೆಯಲು ಗುರುಕೃಪಾಯೋಗಾನುಸಾರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಮಾಡುವ ಮಹತ್ವ ತಿಳಿಯುತ್ತದೆ.

(ಗುರುಕೃಪಾಯೋಗಾನುಸಾರ ಸಾಧನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ)

೭. ವಿವಿಧ ದೇವತೆಗಳನ್ನು ಪೂಜಿಸುವ ಋಷಿಗಳು

ಯೋಗಸಾಧನೆ ಮತ್ತು ತಪಸ್ಸಿನಿಂದಾಗಿ ಋಷಿಗಳು ಕ್ರಮವಾಗಿ ಯೋಗಬಲ ಮತ್ತು ತಪೋಬಲವನ್ನು ಪಡೆಯುತ್ತಿದ್ದರು. ಪ್ರಾಚೀನ ಕಾಲದಿಂದಲೂ ಋಷಿಗಳು ವಿವಿಧ ದೇವತೆಗಳನ್ನು ಪೂಜಿಸುತ್ತಿದ್ದರು. ಆದ್ದರಿಂದ, ಅವರಿಗೆ ದೇವತೆಗಳ ಅನುಗ್ರಹ ಪ್ರಾಪ್ತವಾಗಿ ದೇವಬಲವನ್ನು ಸಹ ಪಡೆಯುತ್ತಿದ್ದರು.

 

ಉಪಾಸ್ಯ ದೇವತೆ ದೇವತೆಗಳ ಭಕ್ತರಾಗಿರುವ ಋಷಿಗಳು
೧. ಶ್ರೀ ಗಣೇಶ ಭೃಶುಂಡೀಋಷಿ, ಗಣಕಋಷಿ, ವಾಮದೇವಋಷಿ, ಪರಾಶರಋಷಿ ಮತ್ತು ಮಹರ್ಷಿ ವ್ಯಾಸ
೨. ಶ್ರೀವಿಷ್ಣು ಮತ್ತು ವಿಷ್ಣುವಿನ ವಿವಿಧ ರೂಪಗಳು ವಸಿಷ್ಠಋಷಿ, ಭೃಗುಋಷಿ, ವಾಲ್ಮೀಕಿಋಷಿ, ಉತ್ತಂಗಋಷಿ, ಶಾಂಡಿಲ್ಯಋಷಿ, ಗರ್ಗಮುನಿ, ಕಂಡುಮುನಿ ಮತ್ತು ನಾರದಮುನಿ
೩. ಶಿವ ಪಿಪಲಾದಋಷಿ, ಔರ್ವಋಷಿ, ಚ್ಯವನಋಷಿ, ಧೌಮ್ಯಋಷಿ, ಶಿಲಾದಋಷಿ, ದಧೀಚಋಷಿ, ಗೌತಮಋಷಿ, ಶೌನಕಋಷಿ, ದುರ್ವಾಸಋಷಿ, ಜಮದಗ್ನಿಋಷಿ, ಸಾಂದೀಪನಿಋಷಿ, ಕಶ್ಯಪಋಷಿ, ಅಗಸ್ತಿಋಷಿ ಮತ್ತು ಶುಕ್ರಾಚಾರ್ಯ
೪. ದತ್ತ ಅತ್ರಿಋಷಿ ಮತ್ತು ಪರಶುರಾಮಋಷಿ
೫. ದೇವಿ ತ್ವಷ್ಟಾಋಷಿ ಮತ್ತು ಮಾರ್ಕಂಡೇಯಋಷಿ (ಟಿಪ್ಪಣಿ)
೬. ಸೂರ್ಯ ಯಾಜ್ಞವಲ್ಕ್ಯಋಷಿ

ಟಿಪ್ಪಣಿ : ಮಾರ್ಕಂಡೇಯ ಋಷಿ ಮಹಾಮೃತ್ಯುಂಜಯವನ್ನು ಪಠಿಸುವ ಮೂಲಕ ಶಿವನ ಆರಾಧನೆಯನ್ನು ಮಾಡಿದರು ಮತ್ತು ದೇವಿಯನ್ನು ಪೂಜಿಸುವ ಮೂಲಕ ‘ದುರ್ಗಾಸಪ್ತಶತಿ’ಯನ್ನು ರಚಿಸಿದರು.

೮. ಸತ್ಯ, ತ್ರೇತಾ ಮತ್ತು ದ್ವಾಪರ ಯುಗಗಳ ಋಷಿಗಳು ಅನುಸರಿಸಿದ ಯೋಗಮಾರ್ಗ, ಯೋಗಮಾರ್ಗದ ಸೂಕ್ಷ್ಮ ಬಣ್ಣ, ಯೋಗಮಾರ್ಗದ ಪ್ರಕಾರ ಸಾಧನೆ ಮಾಡಿದ ಋಷಿಗಳ ಉದಾಹರಣೆಗಳು, ಆಯಾ ಯೋಗಮಾರ್ಗದ ಪ್ರಕಾರ ಸಾಧನೆ ಮಾಡಿದ ಋಷಿಗಳ ಪ್ರಮಾಣ

 

ಯೋಗಮಾರ್ಗ ಯೋಗಮಾರ್ಗದ ಸೂಕ್ಷ್ಮ ಬಣ್ಣ ಯೋಗಮಾರ್ಗದ ಪ್ರಕಾರ ಸಾಧನೆ ಮಾಡಿದ ಋಷಿಗಳು ಯೋಗಮಾರ್ಗದ ಪ್ರಕಾರ ಸಾಧನೆ ಮಾಡಿದ ಋಷಿಗಳ ಪ್ರಮಾಣ (ಶೇ.)
೧. ಕರ್ಮಯೋಗ ಬೂದು ವಿಶ್ವಾಮಿತ್ರಋಷಿ, ಕಶ್ಯಪಋಷಿ, ಗೌತಮಋಷಿ ೨೦
೨. ಧ್ಯಾನಯೋಗ ಕೇಸರಿ ದಧೀಚಋಷಿ, ಚ್ಯವನಋಷಿ ಮತ್ತು ಅತ್ರಿಋಷಿ ೩೦
೩. ಜ್ಞಾನಯೋಗ ಹಳದಿ ಮಹರ್ಷಿ ವ್ಯಾಸ, ಐತರೇಯಋಷಿ, ಶೌನಕಋಷಿ ಮತ್ತು ಭಾರದ್ವಾಜಮುನಿ ೪೦
೪. ಭಕ್ತಿಯೋಗ ನೀಲಿ ವಾಲ್ಮೀಕಿಋಷಿ ಮತ್ತು ನಾರದಮುನಿ ೪೦
೫. ಶಕ್ತಿಪಾತಯೋಗ ನುಸುಗೆಂಪು ತ್ವಷ್ಟಾಋಷಿ ೨೦

೯. ಋಷಿಮುನಿಗಳ ಮತ್ತು ಸಂತರ ನಡುವಿನ ವ್ಯತ್ಯಾಸ

ಋಷಿಮುನಿ ಸಂತರು
೧. ಸಾಧನಾಮಾರ್ಗ ಧ್ಯಾನ, ಜ್ಞಾನ ಅಥವಾ ಕರ್ಮ ಯೋಗ ಹೆಚ್ಚಾಗಿ ಭಕ್ತಿಯೋಗ
೨. ಸೂಕ್ಷ್ಮ ದೇಹದ ಬಣ್ಣ ಹಳದಿ ಮಿಶ್ರಿತ ಬಿಳಿ ನೀಲಿ ಮಿಶ್ರಿತ ಬಿಳಿ
೩. ಸಗುಣ/ನಿರ್ಗುಣ ತತ್ತ್ವದ ಉಪಾಸನೆ ನಿರ್ಗುಣ-ಸಗುಣ ಸಗುಣ-ನಿರ್ಗುಣ
೪. ಸಾಮರ್ಥ್ಯ
೪ಅ. ಸಾಧನೆಯಿಂದ ಪ್ರಾಪ್ತಿಯಾಗುವ ಬಲದ ಪ್ರಕಾರ ಯೋಗಸಾಧನೆಯಿಂದ ಯೋಗಬಲ ಮತ್ತು ತಪಶ್ಚರ್ಯೆಯಿಂದ ತಪೋಬಲ ಭಕ್ತಿಯಿಂದ ಆತ್ಮಬಲ ಹಾಗೂ ಗುಕೃಪೆಯಿಂದ ಗುರುಬಲ
೪ಆ. ವ್ಯಕ್ತ / ಅವ್ಯಕ್ತ ಸಾಮರ್ಥ್ಯ ವ್ಯಕ್ತ ಅವ್ಯಕ್ತ
೪ಇ. ಸಾಮರ್ಥ್ಯದ ಸ್ವರೂಪ – ಆಶೀರ್ವಾದ/ಶಾಪ ಒಳ್ಳೆಯ ಕರ್ಮ ಮಾಡುವವರನ್ನು ಆಶೀರ್ವದಿಸುವುದು ಅಥವಾ ಕೆಟ್ಟ ಕರ್ಮಗಳನ್ನು ಮಾಡುವವರನ್ನು ಶಪಿಸುವುದು ವ್ಯಕ್ತಿಯ ಪ್ರಾರಬ್ಧ ಕಡಿಮೆ ಮಾಡುವುದು ಮತ್ತು ಅವರಲ್ಲಿ ಈಶ್ವರನ ಭಕ್ತಿ ಮಾಡುವ ಪ್ರೇರಣೆ ಜಾಗೃತಗೊಳಿಸುವುದು
೪ಈ. ಸಾಧಕರು ಮತ್ತು ಶಿಷ್ಯರ ಅವಲಂಬನೆ/ಸ್ವಾವಲಂಬನೆ ಋಷಿಗಳು ಶಾಪ ಅಥವಾ ಆಶೀರ್ವಾದ ನೀಡುವುದರಿಂದ ಸಾಧಕರು ಮತ್ತು ಶೀಷ್ಯರು ಹೆಚ್ಚಾಗಿ ಅವರ ಮೇಲೆ ಅವಲಂಬಿತರಾಗಿರುತ್ತಾರೆ. ಸಾಧಕರು ಮತ್ತು ಶಿಷ್ಯರು ಬೇಗನೇ ಸ್ವಾವಲಂಬಿಗಳಾಗುತ್ತಾರೆ.
೫. ಸಂಬಂಧಿಸಿದ ಯುಗ ಸತ್ಯ, ತ್ರೇತಾ, ದ್ವಾಪರ ಕಲಿ
೬. ಸಂಬಂಧಿಸಿದ ಲೋಕ ಋಷಿಲೋಕ (ತಿಪ್ಪಣಿ) ಜನಲೋಕ
೭. ಅವರ ವಿಷಯದಲ್ಲಿ ಬರುವ ಅನುಭೂತಿಗಳು ಒಳ್ಳೆಯ ಶಕ್ತಿಯ ಅನುಭವ ಭಾವದ ಅರಿವಾಗಿ ಆನಂದದ ಅನುಭೂತಿ ಬರುವುದು

ತಿಪ್ಪಣಿ : ಋಷಿಲೋಕವು ಜನ ಮತ್ತು ತಪ ಲೋಕದ ಮಧ್ಯದಲ್ಲಿದೆ.

೧೦. ಕಲಿಯುಗದಲ್ಲಿ ಸಂತರ ರೂಪದಲ್ಲಿ ಜನ್ಮತಾಳಿ ಮುಂದಿನ ಸಾಧನೆಯನ್ನು ಮಾಡುವ ಋಷಿಮುನಿಗಳು

ವಿವಿಧ ಯೋಗ ಮಾರ್ಗಗಳಿಂದ ಸಾಧನೆಯನ್ನು ಮಾಡಿದ ನಂತರವೂ ಅನೇಕ ಋಷಿಗಳಲ್ಲಿ ದೇವರ ಬಗ್ಗೆ ಭಾವ ನಿರ್ಮಾಣವಾಗಿರಲಿಲ್ಲ ಆದ್ದರಿಂದ ಅವರಿಗೆ ಸಮಾಧಾನವಿರಲಿಲ್ಲ. ಹಾಗಾಗಿ, ಕೆಲವು ಋಷಿಗಳು ದ್ವಾಪರಯುಗದಲ್ಲಿ ಗೋಪಿಗಳಾಗಿ ಜನಿಸಿದರು ಮತ್ತು ದೇವರ ಮೂರ್ತಿಮಂತ ರೂಪವಾಗಿರು ಶ್ರೀಕೃಷ್ಣನ ಸಗುಣ ರೂಪಕ್ಕೆ ಆಧ್ಯಾತ್ಮಿಕ ಪ್ರೀತಿಯನ್ನು ಅರ್ಪಿಸಿದರು. ಅಂತೆಯೇ, ಅನೇಕ ಋಷಿಗಳು ಕಲಿಯುಗದಲ್ಲಿ ಸಂತರಾಗಿ ಜನಿಸಿದ್ದಾರೆ ಮತ್ತು ಭಕ್ತಿ ಯೋಗದಲ್ಲಿ ಸಾಧನೆಯನ್ನು ಮಾಡುವ ಮೂಲಕ ಪರಿಪೂರ್ಣತೆಗೆ ಹೋಗಿದ್ದಾರೆ. ಆದ್ದರಿಂದ ಯೋಗಬಲ, ತಪೋಬಲ, ಜ್ಞಾನಬಲ ಮತ್ತು ದೇವಬಲದ ಜೊತೆಗೆ ಭಕ್ತಿ ಮಾಡುವ ಮೂಲಕ, ಋಷಿಗಳಿಗೆ ಆತ್ಮಬಲ, ಮತ್ತು ಗುರುಕೃಪೆಯಿಂದಾಗಿ ಗುರುಬಲವೂ ಪ್ರಾಪ್ತವಾಗುತ್ತದೆ ಮತ್ತು ಅವರ ಮೋಕ್ಷಸಾಧನೆಯು ಪರಿಪೂರ್ಣತೆಯನ್ನು ಪಡೆಯುತ್ತದೆ.

ಸಂತರ ಸಹವಾಸ ಮತ್ತು ಅವರ ಮಾರ್ಗದರ್ಶನದಿಂದ ಕಲಿಯುಗದ ಅನೇಕ ಜೀವಗಳ ಉದ್ಧಾರವಾಗುತ್ತದೆ. ಕಲಿಯುಗದಲ್ಲಿ ನಿಜವಾದ ಸಂತರನ್ನು ಕಾಣುವುದು ಬಹಳ ಅಪರೂಪವಾದರೂ, ಸನಾತನ ಸಂಸ್ಥೆಯಲ್ಲಿ 100 ಕ್ಕೂ ಹೆಚ್ಚು ಸಂತರಿದ್ದಾರೆ. ಎಷ್ಟು ಗುರುಕೃಪೆ! ಈ ಭೀಕರ ಕಲಿಯುಗದಲ್ಲಿಯೂ, ಸಾಧಕರಿಗೆ ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡುತ್ತಿರುವ ವಿವಿಧ ಸಂತರ ರೂಪದಲ್ಲಿ ವಿವಿಧ ಸೂಕ್ಷ್ಮ ಲೋಕಗಳ ಮತ್ತು ಯುಗಗಳ ಋಷಿಮುನಿಗಳ ದರ್ಶನವಾಗುತ್ತಿದೆ. ಇದಕ್ಕಾಗಿ ಋಷಿತುಲ್ಯರಾಗಿರುವ ಎಲ್ಲ ಸಂತರ ಚರಣಗಳಲ್ಲಿ ಸಾಧಕರಾದ ನಾವು ಕೃತಜ್ಞರಾಗಿದ್ದೇವೆ.

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಪಡೆದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. 

2 thoughts on “ಋಷಿಪಂಚಮಿ ವಿಶೇಷ – ವಿವಿಧ ಮಾರ್ಗಗಳಿಂದ ಸಾಧನೆ ಮಾಡುತ್ತಿರುವ ಋಷಿಗಳ ಆಧ್ಯಾತ್ಮಿಕ ಮಹತ್ವ!”

  1. ತುಂಬಾ ಉತ್ತಮವಾದ ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದೀರಿ, ಆಧ್ಯಾತ್ಮ ಸಾಧನೆಗೆ ಮಾರ್ಗದರ್ಶಿ ಯಾಗಿದೆ 🙏🙏🙏

    Reply

Leave a Comment