ಶ್ರೀರಾಮನ ಕುರಿತು ಭಾವಾರ್ಚನೆ

ಭಾವಜಾಗೃತಿಗಾಗಿ ಪ್ರಯತ್ನ ಎಂದರೇನು ಎಂದು ತಿಳಿದುಕೊಳ್ಳಲು ಕ್ಲಿಕ್ ಮಾಡಿ.

ಇಲ್ಲಿ ನೀಡಿರುವ ಭಾವಾರ್ಚನೆಯನ್ನು ಓದಿ ಕಣ್ಣುಗಳನ್ನು ಮುಚ್ಚಿ ಅದನ್ನು ಮನಸ್ಸಿನೊಳಗೆ ಅನುಭವಿಸಲು ಪ್ರಯತ್ನ ಮಾಡಬೇಕು.

ನಾವು ಈಗ ಶ್ರೀರಾಮನ ದರ್ಶನವನ್ನು ಪಡೆಯೋಣ.

ನಮಗೆ ಸಾಕ್ಷಾತ್ ಅಯೋಧ್ಯಾನಗರಿಯ ದೃಶ್ಯವು ಕಣ್ಮುಂದೆ ಕಾಣಿಸುತ್ತಿದೆ. ಅಯೋಧ್ಯೆಯ ನಿವಾಸಿಗಳು ಆನಂದದ ಸಾಗರದಲ್ಲಿ ಮುಳುಗಿದ್ದಾರೆ. ಕೇವಲ ಅಯೋಧ್ಯೆ ಮಾತ್ರವಲ್ಲ, ಸಂಪೂರ್ಣ ಪೃಥ್ವಿ, ಆಕಾಶ, ವೃಕ್ಷಗಳು, ಬಳ್ಳಿಗಳು, ಪಶುಪಕ್ಷಿಗಳು, ಪ್ರತಿಯೊಂದು ಜೀವಿ, ಕಣಕಣಗಳು ಸಹ ಆನಂದದಲ್ಲಿವೆ. ಭಗವಂತನು ಅವತಿರಿಸಿರುವುದರಿಂದ ಸಜೀವ-ನಿರ್ಜೀವ ಎಲ್ಲವೂ ಆನಂದದಲ್ಲಿ ಓಲಾಡುತ್ತಿವೆ.

ಈಗ ಪ್ರಭು ಶ್ರೀರಾಮನ ದರ್ಶನವನ್ನು ಪಡೆಯೋಣ. ರಾವಣನಂತಹ ಅನೇಕ ಅಸುರರನ್ನು ನಾಶ ಮಾಡಿದ ಶ್ರೀರಾಮನ ಶಿಶು ರೂಪದ ದರ್ಶನ ಪಡೆಯುವ ಸೌಭಾಗ್ಯವು ಇಂದು ನಮಗೆ ದೊರಕಿದೆ. ಅವರ ರೂಪವು ಅತ್ಯಂತ ಮನಮೋಹಕವಾಗಿದೆ. ಅವರಿಂದ ಕಣ್ಣುಗಳನ್ನು ಕೀಳಲು ನಮ್ಮಿಂದಾಗುತ್ತಿಲ್ಲ. ಎಷ್ಟು ಸುಂದರ ಆ ರೂಪ! ತೇಜಸ್ವಿಯಾದ ಅವರ ಕಾಂತಿಯೇ ಅವರ ಆಭರಣವಾಗಿದೆ. ಕಮಲದ ಎಸಳಿನಂತಹ ಅವರ ಸುಂದರವಾದ ಕಣ್ಣುಗಳು ಎಲ್ಲೆಡೆ ಆನಂದದಿಂದ ನೋಡುತ್ತಿವೆ. ಗುಲಾಬಿ ಬಣ್ಣದ ತುಟಿಯ ಮೇಲಿನ ಮಂದಹಾಸವು ನಮಗೆ ಧರ್ಮಸ್ಥಾಪನೆಯ ಆಶ್ವಾಸನೆಯನ್ನು ನೀಡುತ್ತಿದೆ.

ಶ್ರೀರಾಮನ ದರ್ಶನದಿಂದ ನಮಗೆ ಅತ್ಯಂತ ಆನಂದವಾಗುತ್ತಿದೆ. ನಾವು ಅವರ ಕೋಮಲವಾದ ಚರಣಗಳನ್ನು ಸ್ಪರ್ಶಿಸಿ ಚೈತನ್ಯದ ಅನುಭೂತಿಯನ್ನು ಪಡೆಯೋಣ. ಅವರ ಚರಣಗಳನ್ನು ಮಸ್ತಕಕ್ಕೆ ತಗುಲಿಸಿ ನಾವು ಪಾವನರಾಗೋಣ.

ಸ್ವತಃ ಆನಂದದಲ್ಲಿದ್ದು ಇತರರನ್ನೂ ಆನಂದದಲ್ಲಿಡುವ ಶ್ರೀರಾಮನ ದರ್ಶನದಿಂದ ನಾವೆಲ್ಲರೂ ಕೃತಾರ್ಥರಾಗಿದ್ದೇವೆ.

ಪ್ರಭು ಶ್ರೀರಾಮನಲ್ಲಿ ನಾವೆಲ್ಲರೂ ಕೃತಜ್ಞತೆಯನ್ನು ವ್ಯಕ್ತಪಡಿಸೋಣ.

‘ಹೇ ಪ್ರಭು! ನೀವು ಧರ್ಮಸಂಸ್ಥಾಪನೆಗಾಗಿ ಮತ್ತು ತಮ್ಮ ಭಕ್ತರ ಉದ್ಧಾರಕ್ಕಾಗಿ ಪೃಥ್ವಿಯಲ್ಲಿ ಜನ್ಮ ತಾಳಿದ್ದೀರಿ. ತಮ್ಮ ಪಾವನ ದರ್ಶನದಿಂದ ನಾವೆಲ್ಲರೂ ಧನ್ಯರಾದೆವು, ನಮ್ಮ ಜನ್ಮವು ಸಾರ್ಥಕವಾಯಿತು. ಅದಕ್ಕಾಗಿ ನಾವೆಲ್ಲರೂ ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತಿದ್ದೇವೆ’.

ಅಯೋಧ್ಯಾಪತಿ ಶ್ರೀರಾಮನ ದರ್ಶನವನ್ನು ಮಗುವಿನ ರೂಪದಲ್ಲಿ ಪಡೆಯುವ ಅವಕಾಶವು ನಮಗೆ ಇಂದು ದೊರಕಿತು, ಇದು ನಮ್ಮೆಲ್ಲರ ಮಹಾಭಾಗ್ಯವಾಗಿದೆ.

ಈ ಕಲಿಯುಗದಲ್ಲಿ ಸಹ ತ್ರೇತಾಯುಗದ ದಿವ್ಯ ವಾತಾವರಣವನ್ನು ನಾವು ಅನುಭವಿಸಿದೆವು, ಇದು ಕೇವಲ ಮತ್ತು ಕೇವಲ ಭಗವಂತನ ಕೃಪೆಯಿಂದಲೇ ಸಾಧ್ಯವಾಯಿತು. ಮಗುವಿನ ರೂಪದಲ್ಲಿದ್ದ ಭಗವಂತನನ್ನು ಮತ್ತೊಮ್ಮೆ ಸ್ಮರಿಸಿ ಅವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸೋಣ.

Leave a Comment