ಮಹಾಯುದ್ಧ, ಭೂಕಂಪ ಮುಂತಾದ ವಿಪತ್ತುಗಳನ್ನು ಹೇಗೆ ಎದುರಿಸುವುದು? (ಭಾಗ 7)

Article also available in :

ಸನಾತನವು ಹಲವು ವರ್ಷಗಳಿಂದ ಹೇಳುತ್ತಿರುವ ಆಪತ್ಕಾಲವು ಇಂದು ಜಗತ್ತಿನ ಹೊಸ್ತಿಲಿಗೆ ಬಂದು ನಿಂತಿದೆ. ಅದು ಯಾವುದೇ ಕ್ಷಣದಲ್ಲಿ ಕದ ತಟ್ಟಬಹುದು. ಕಳೆದ ಒಂದು ವರ್ಷದಿಂದ ಜಗತ್ತನ್ನು ಆವರಿಸಿರುವ ಕೊರೋನಾ ಮಹಾಮಾರಿಯು ಆಪತ್ಕಾಲದ ಒಂದು ಸಣ್ಣ ತುಣುಕು ಅಷ್ಟೇ. ನಿಜವಾದ ಆಪತ್ಕಾಲವು ಇದಕ್ಕಿಂತ ಅನೇಕ ಪಟ್ಟು ಹೆಚ್ಚು ಭಯಾನಕ ಮತ್ತು ಅಮಾನವೀಯವಾಗಿರಲಿದೆ. ಮಾನವನಿರ್ಮಿತ ಇರಬಹುದು ನೈಸರ್ಗಿಕ ವಿಪತ್ತುಗಳ ರೂಪದಲ್ಲಿರಬಹುದು, ವಿಭಿನ್ನ ರೂಪಗಳಲ್ಲಿ ಆಪತ್ಕಾಲವು ಬಂದೆರಗಲಿದೆ. ಇವುಗಳಲ್ಲಿ ಕೆಲವನ್ನು ನಾವು ಈ ಲೇಖನ ಮಾಲೆಯಲ್ಲಿ  ನೋಡಲಿದ್ದೇವೆ. ಆಪತ್ಕಾಲದಲ್ಲಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲು ನೀವು ಏನು ಮಾಡಬಹುದು ಎಂಬುದರ ಕುರಿತು ಮಾಹಿತಿಯನ್ನು ನೀಡಲು ಈ ಲೇಖನವು ಪ್ರಯತ್ನಿಸುತ್ತದೆ. ಓದುಗರಿಗೆ ಈ ಮಾಹಿತಿಯ ಲಾಭವಾಗಬೇಕೆಂಬುವುದೇ ಈ ಲೇಖನ ಮಾಲೆಯನ್ನು ಪ್ರಕಟಿಸುವ ಉದ್ದೇಶವಾಗಿದೆ.

ಸಾಮಾನ್ಯವಾಗಿ ದೇಶದಲ್ಲಿ ಚಳಿಗಾಲದಲ್ಲಿ ಹಿಮ ಗಾಳಿ (cold wave, cold front) ಬೀಸುತ್ತದೆ. ಹಿಮಾಲಯದಲ್ಲಿಯಂತೂ ತಾಪಮಾನವು ಶೂನ್ಯ ಸೆಲ್ಸಿಯಸ್‌ಗಿಂತ ಕೆಳಗೆ, ಅಂದರೆ -4೦ ಸೆಲ್ಸಿಯಸ್ ವರೆಗೆ ಕಡಿಮೆಯಾಗಿರುತ್ತದೆ. ಸದ್ಯದ ಆಪತ್ಕಾಲದಲ್ಲಿ ಹಿಮ ಗಾಳಿ ಬರುವ ಸಾಧ್ಯತೆಯನ್ನು ನಿರಾಕರಿಸಲಾಗದು. 2021 ರಲ್ಲಿ ಅಮೇರಿಕಾದ ಟೆಕ್ಸಾಸ್‌ನಲ್ಲಿ ಭಾರಿ ಹಿಮಪಾತವಾಯಿತು. ಅದರಲ್ಲಿಯೇ ಅಲ್ಲಿನ ವಿದ್ಯುತ್ ಪೂರೈಕೆಯಲ್ಲಿ ದೊಡ್ಡ ವ್ಯತ್ಯಯವುಂಟಾದುದರಿಂದ ನಾಗರಿಕರಿಗೆ ಹೀಟರ್‌ಗಳನ್ನು ಬಳಸಲು ಆಗಲಿಲ್ಲ. ನಲ್ಲಿ ನೀರು ಮಂಜುಗಟ್ಟಿ ನೀರಿನ ಪೂರೈಕೆಯೂ ನಿಂತುಹೋಗಿತ್ತು. ಆಹಾರವನ್ನು ತಯಾರಿಸಲು ವಿದ್ಯುತ್ ಉಪಕರಣಗಳನ್ನು ಬಳಸಲು ಆಗದೇ ಜನರಿಗೆ ಕೆಲವು ದಿನ ತುಂಬಾ ತೊಂದರೆಯಾಯಿತು. ಇದನ್ನು ಆಪತ್ಕಾಲವೆಂದೇ ಹೇಳಬಹುದು. ಇಂತಹ ಸ್ಥಿತಿ ಎಲ್ಲ ಕಡೆಗೆ ಬಂದರೆ ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ಜೀವಹಾನಿಯಾಗಬಹುದು. ಹಿಮ ಗಾಳಿ ಬೀಸಿದರೆ ಸಾಮಾನ್ಯವಾಗಿ ಯಾವ ಉಪಾಯಯೋಜನೆಗಳನ್ನು ಮಾಡಬಹುದು, ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಭಾಗ 6

2. ನೈಸರ್ಗಿಕ ವಿಕೋಪಗಳು

2 ಈ. ಹಿಮ ಗಾಳಿ (cold wave)

2 ಈ 1. ಹಿಮ ಗಾಳಿ ಎಂದರೇನು ?

ಸಾಮಾನ್ಯವಾಗಿ ವಾತಾವರಣದ ತಾಪಮಾನವು ಕಡಿಮೆಯಾಗಿ ಶೂನ್ಯಕ್ಕಿಂತ ಕೆಳಗೆ ಮೈನಸ್ (minus) ಸೆಲ್ಸಿಯಸ್‌ವರೆಗೆ ಹೋದರೆ ಅದಕ್ಕೆ ‘ಹಿಮ ಗಾಳಿ’ ಎಂದು ಹೇಳುತ್ತಾರೆ.

2 ಈ 2. ಹಿಮ ಗಾಳಿಯಿಂದಾಗುವ ತೊಂದರೆ : ಹೈಪೋಥರ್ಮಿಯಾ

ಹೈಪೋಥರ್ಮಿಯಾದಿಂದ ಜಾಗರೂಕರಾಗಿರಬೇಕು ! : ಚಳಿ ಹೆಚ್ಚಾದಾಗ ಕೆಲವು ಜನರಿಗೆ ಹೈಪೋಥರ್ಮಿಯಾದ (hypothermia) ತೊಂದರೆಯಾಗಬಹುದು. ಪ್ರತಿಯೊಬ್ಬ ವ್ಯಕ್ತಿಯ ಶರೀರಕ್ಕೆ ಒಂದು ಸಾಮಾನ್ಯ ತಾಪಮಾನವಿರುತ್ತದೆ. ಅದನ್ನು ಶರೀರ ನಿಯಂತ್ರಿಸುತ್ತದೆ. ಶರೀರದ ತಾಪಮಾನವು ಈ ಸಾಮಾನ್ಯ ತಾಪಮಾನದ ಕೆಳಗೆ ಹೋದರೆ ಅದಕ್ಕೆ ‘ಹೈಪೋಥರ್ಮಿಯಾ’ ಎನ್ನುತ್ತಾರೆ. ಇದು ಪ್ರಾಣಘಾತಕವಾಗಬಹುದು; ಏಕೆಂದರೆ ಈ ತಾಪಮಾನವನ್ನು ಎದುರಿಸಲು ಆವಶ್ಯಕವಾಗಿರುವ ಉಷ್ಣತೆಯನ್ನು ಶರೀರವು ಉತ್ಪಾದಿಸಲು ವಿ‌ಫಲವಾಗುತ್ತದೆ. ವಿಶೇಷವಾಗಿ ಶಿಶುಗಳು ಮತ್ತು ವೃದ್ಧರಿಗೆ ಇದರಿಂದ ಹೆಚ್ಚು ಅಪಾಯವಿರುತ್ತದೆ. ಆದುದರಿಂದ ಯಾರಿಗಾದರೂ ಶರೀರವು ಹೆಚ್ಚು ತಣ್ಣಗಾಗಿ ನಡುಕು ಬಂದಿದ್ದರೆ, ಅವರಲ್ಲಿ ಉಷ್ಣತೆಯನ್ನು ಉತ್ಪಾದಿಸಲು ಹೆಚ್ಚು ಬಟ್ಟೆಗಳನ್ನು, ಸ್ವೇಟರ್, ಕಂಬಳಿ (ಬ್ಲ್ಯಾಂಕೇಟ್) ಮುಂತಾದವುಗಳನ್ನು ಅವರಿಗೆ ಕೊಡಬೇಕು. ಅವರ ಬಟ್ಟೆಗಳು ಹಸಿಯಾಗಿದ್ದರೆ, ಅವುಗಳನ್ನು ತಕ್ಷಣ ಬದಲಾಯಿಸಬೇಕು. ಉಷ್ಣತೆಯನ್ನು ಉತ್ಪಾದಿಸುವ ಪಾನೀಯಗಳನ್ನು (ಉದಾ. ಚಹಾ, ಕಾಫಿ) ಕುಡಿಸಬೇಕು. ಆವಶ್ಯಕತೆಗನುಸಾರ ಆಧುನಿಕ ವೈದ್ಯರ ಸಲಹೆಯನ್ನು ಪಡೆಯಬೇಕು.

2 ಈ 3. ಹಿಮ ಗಾಳಿಯಿಂದ ರಕ್ಷಿಸಿಕೊಳ್ಳಲು ಮಾಡಬೇಕಾದ ಪೂರ್ವ ಸಿದ್ಧತೆ

ಚಳಿಗಾಲದಲ್ಲಿ ಧರಿಸುವಂತಹ ಬಟ್ಟೆಗಳ ಸಾಕಷ್ಟು ಸಂಗ್ರಹ ಮಾಡಿಟ್ಟುಕೊಳ್ಳಬೇಕು. ಉದಾ. ಸ್ವೆಟರ್ ಅಥವಾ ಜ್ಯಾಕೇಟ್, ಮಫಲರ್, ಶಾಲು, ಕಿವಿ ಮುಚ್ಚುವ ಟೊಪ್ಪಿಗೆ, ಕೈ ಗವಸಗಳು ಮತ್ತು ಕಾಲುಚೀಲಗಳು, ಕೌಂದಿ, ರಜಯೀ, ಕಂಬಳಿ (ಬ್ಲ್ಯಾಂಕೇಟ್) ಮುಂತಾದವುಗಳು. ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ ಅವು ಸಾಕಾಗುವಷ್ಟಿರಬೇಕು. ವೃದ್ಧರಿಗೆ ಚಳಿಯಿಂದ ಹೆಚ್ಚು ತೊಂದರೆಯಾಗಬಹುದು; ಆದುದರಿಂದ ಅವರಿಗೆ ಸಾಕಷ್ಟು ಬಟ್ಟೆಗಳು ಇವೆಯಲ್ಲ ಎಂಬುದರ ಕಡೆಗೆ ಗಮನ ನೀಡಬೇಕು.

2 ಈ 4. ಪ್ರತ್ಯಕ್ಷ ಹಿಮ ಗಾಳಿ ಬೀಸುವಾಗ ಏನು ಮಾಡಬೇಕು ?

ಅ. ಚಳಿಯಿಂದಾಗಿ ನೀರಿನ ಕೊಳವೆಗಳಲ್ಲಿ ನೀರು ಮಂಜುಗಟ್ಟುವ ಸಾಧ್ಯತೆ ಇರುವುದರಿಂದ ಇಂತಹ ಸಮಯದಲ್ಲಿ ಮನೆಯಲ್ಲಿ ಸಾಕಷ್ಟು ನೀರನ್ನು ಸಂಗ್ರಹಿಸಿಡಬೇಕು.

ಆ. ಒದ್ದೆ ಬಟ್ಟೆಗಳನ್ನು ಧರಿಸಬಾರದು. ಯಾವುದೇ ಕಾರಣದಿಂದ ಬಟ್ಟೆಗಳು ಒದ್ದೆಯಾಗಿದ್ದರೆ, ಅವುಗಳನ್ನು ಬದಲಾಯಿಸಿ ಒಣಗಿರುವ ಬಟ್ಟೆಗಳನ್ನು ಧರಿಸಬೇಕು.

ಇ. ನಿಯಮಿತವಾಗಿ ಉಷ್ಣ ಪಾನೀಯ ಮತ್ತು ಪದಾರ್ಥಗಳನ್ನು ಸೇವಿಸಬೇಕು.

ಈ. ಸರಾಯಿ ಕುಡಿಯಬಾರದು. ಸರಾಯಿ ಕುಡಿಯುವುದರಿಂದ ತಾತ್ಕಾಲಿಕವಾಗಿ ಮೈಬೆಚ್ಚಗೆನಿಸಿದರೂ ಶರೀರದಲ್ಲಿನ ಉಷ್ಣತೆ ಇನ್ನೂ ಕಡಿಮೆಯಾಗುತ್ತದೆ.

ಉ. ಚಳಿಯಿಂದ ಕೈಕಾಲುಗಳ ಬೆರಳುಗಳು, ಕಿವಿಗಳ ಹಾಲೆಗಳು, ಮೂಗಿನ ತುದಿ ಮುಂತಾದವುಗಳು ಮರಗಟ್ಟಬಹುದು ಆದುದರಿಂದ ಅವುಗಳ ಕಡೆಗೆ ಗಮನ ಕೊಡಬೇಕು ಮತ್ತು ಅವುಗಳಿಗೆ ಉಷ್ಣತೆಯು ಹೇಗೆ ಸಿಗಬಹುದು ಎಂಬುದನ್ನು ನೋಡಬೇಕು.

ಊ. ಚಳಿಯಿಂದ ಮರಗಟ್ಟಿದ ಭಾಗಗಳನ್ನು ತಿಕ್ಕಬಾರದು. ತಿಕ್ಕಿದರೆ ಅಪಾಯವಾಗಬಹುದು.

ಎ. ಮರಗಟ್ಟಿದ ಭಾಗಗಳನ್ನು, ಉದಾ. ಕೈಕಾಲುಗಳನ್ನು ಬೆಚ್ಚಗಿನ (ಅತಿ ಬಿಸಿ ಅಲ್ಲ) ನೀರಿನಲ್ಲಿ ಮುಳುಗಿಸಿಡಬಹುದು.

ಏ. ಶೀತ ಲಹರಿಗಳ ಕಾಲದಲ್ಲಿ ಸಾಧ್ಯವಿದ್ದಷ್ಟು ಮನೆಯ ಹೊರಗೆ ಹೋಗಬಾರದು. ಹೊರಗಡೆ ಹೋದ ನಂತರ ನಡುಕ ಬರುತ್ತಿದ್ದರೆ ತಕ್ಷಣ ಮನೆಗೆ ಹಿಂದಿರುಗಬೇಕು.

ಐ. ಆದಷ್ಟು ಮನೆಯಲ್ಲಿ ಹಿಟರ್‌ನ್ನು ಬಳಸಬೇಕು.

ಒ. ದೂರದರ್ಶನ ಅಥವಾ ಆಕಾಶವಾಣಿ (radio) ಇವುಗಳಲ್ಲಿನ ಹವಾಮಾನದ ಮಾಹಿತಿ, ಹಾಗೆಯೇ ಆ ಕುರಿತು ನೀಡಲಾಗುವ ಸೂಚನೆಗಳ ಕಡೆಗೆ ಗಮನ ನೀಡಿ ಅವುಗಳನ್ನು ಪಾಲಿಸಬೇಕು.

(ಆಧಾರ : Pocketbook-do-dont-hindi)

Leave a Comment