ಆನ್‌ಲೈನ್ ಸತ್ಸಂಗ (11)

ಸ್ವಭಾವದೋಷ ನಿರ್ಮೂಲನಾ ತಖ್ತೆ

ನಾವು ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯ ದೃಷ್ಟಿಯಿಂದ ತಪ್ಪುಗಳನ್ನು ಹೇಗೆ ಬರೆಯಬೇಕು ಎಂಬುದನ್ನು ವಿವರವಾಗಿ ತಿಳಿಯೋಣ. ನಾವು ಪ್ರತಿದಿನ ನಮ್ಮಿಂದಾಗುವ ತಪ್ಪುಗಳನ್ನು ತಖ್ತೆಯಲ್ಲಿ ತೋರಿಸಿರುವಂತಹ ಶೀರ್ಷಿಕೆಗಳಡಿಯಲ್ಲಿ ಬರೆಯಬೇಕು. ನಾವು ಯಾವ ದಿನ ಬರೆಯುತ್ತಿದ್ದೇವೋ ಆ ದಿನಾಂಕವನ್ನು ದಿನಾಂಕ ಎಂಬ ಶೀರ್ಷಿಕೆಯಡಿಯಲ್ಲಿ ಬರೆಯುವುದು. ಮುಂದಿನ ಅನುಕ್ರಮ ಎಂಬ ಶೀರ್ಷಿಕೆಯಡಿಯಲ್ಲಿ ೧,೨,೩ ಹೀಗೆ ಅಂಕಿಗಳನ್ನು ಬರೆಯುವುದು.

ಅಯೋಗ್ಯ ಕೃತಿ/ ವಿಚಾರ/ಪ್ರತಿಕ್ರಿಯೆ ಇವುಗಳನ್ನು ತಖ್ತೆಯಲ್ಲಿ ಬರೆಯುವುದು

ಮುಂದಿನ ಮಹತ್ವದ ಶೀರ್ಷಿಕೆಯೆಂದರೆ ತಪ್ಪುಗಳು ಅರ್ಥಾತ್ ಅಯೋಗ್ಯ ಕೃತಿ, ವಿಚಾರ ಅಥವಾ ಪ್ರತಿಕ್ರಿಯೆ! ಈ ಶೀರ್ಷಿಕೆಯಡಿಯಲ್ಲಿ ಇಡೀ ದಿನದಲ್ಲಿ ತನ್ನಿಂದಾದ ಪ್ರತಿಯೊಂದು ಅಯೋಗ್ಯ ಕೃತಿ ಮತ್ತು ಮನಸ್ಸಿನಲ್ಲಿ ಮೂಡಿದ ಅಥವಾ ವ್ಯಕ್ತವಾದ ಅಯೋಗ್ಯ ಪ್ರತಿಕ್ರಿಯೆ ಹಾಗೂ ಅಯೋಗ್ಯ ವಿಚಾರ, ಭಾವನೆ ಇವನ್ನು ಇಲ್ಲಿ ಬರೆಯಬೇಕು. ಉದಾ: ಬೆಳಗ್ಗೆ ಎದ್ದಾಗ ಹೊದಿಕೆ ಮಡಚಿ ಇಡಲಿಲ್ಲ, ಬೈಠಕ್ ಗೆ ತಲುಪಲು ತಡವಾಯಿತು, ಪಲ್ಯ ಖಾರವಾಯಿತು, ಹಾಲು ಉಕ್ಕಿ ಹೋಯಿತು. ಅಥವಾ ಅಮ್ಮ ಬೇಗನೆ ಸಿದ್ಧವಾಗಲು ಹೇಳಿದಾಗ ನನಗೆ ಕೋಪ ಬಂದಿತು. ಕಛೇರಿಯಲ್ಲಿ ಮೇಲಧಿಕಾರಿಯು ಕೆಲಸದಲ್ಲಿನ ತಪ್ಪುಗಳನ್ನು ತೋರಿಸಿದಾಗ ‘ಇವರು ಸದಾ ತಪ್ಪು ಹುಡುಕುವುದಕ್ಕೇ ಕಾಯುತ್ತಿರುತ್ತಾರೆ’ ಎಂಬ ಪ್ರತಿಕ್ರಿಯೆ ಬಂದಿತು. ಕಛೇರಿಯಲ್ಲಿ ಸಹೋದ್ಯೋಗಿಯ ಪ್ರಶಂಸೆ ಆದಾಗ ‘ಕೆಲಸ ನಾವು ಮಾಡುವುದು ಪ್ರಶಂಸೆ ಮಾತ್ರ ಇವರದ್ದು’ ಎಂಬ ವಿಚಾರ ಬಂದು ಮನಸ್ಸು ಅಸ್ವಸ್ಥವಾಯಿತು. ನನ್ನ ಮಗುವಿಗೆ ಕೊರೋನಾ ಆಗುವುದಿಲ್ಲ ತಾನೇ ? ಎಂಬ ಚಿಂತೆ ಆಗುವುದು. ಈ ವಿಧವಾಗಿ ತಪ್ಪುಗಳ ಶೀರ್ಷಿಕೆಯಡಿಯಲ್ಲಿ ನಾವು ನಮ್ಮಿಂದಾದ ಅಯೋಗ್ಯ ಕೃತಿಗಳು, ಮನಸ್ಸಿಗೆ ಬಂದ ಅಯೋಗ್ಯ ವಿಚಾರಗಳು ಮುಂತಾದವನ್ನು ಬರೆಯಬೇಕು. ಉದಾಹರಣೆಗಳಿಗೆ ಇಲ್ಲಿ ನೋಡಿ –

ದಿನಾಂಕ ಅ. ಕ್ರ. ತಪ್ಪುಗಳು
(ಅಯೋಗ್ಯ ಕೃತಿ / ವಿಚಾರ / ಪ್ರತಿಕ್ರಿಯೆ)
ವರ್ಗೀಕರಣ
(ತನಗೆ ತಿಳಿಯಿತೋ ಇತರರಿಗೆ ತಿಳಿಯಿತೋ?
ಕಾಲಾವಧಿ ಸ್ವಭಾವದೋಷ ಸ್ವಯಂಸೂಚನೆ ಪ್ರಗತಿ
೧ ಜನವರಿ ಕಛೇರಿಯಲ್ಲಿ ಸಹೋದ್ಯೋಗಿಯ ಪ್ರಶಂಸೆ ಆದಾಗ ‘ಕೆಲಸ ಮಾಡುವುದು ನಾವು; ಪ್ರಶಂಸೆ ಮಾತ್ರ ಇತರರದ್ದು’ ಎಂಬ ವಿಚಾರ ಬಂದು ಮನಸ್ಸು ಅಸ್ವಸ್ಥವಾಯಿತು
ಬೈಠಕ್ ಗೆ ತಲುಪಲು ೧೦ ನಿಮಿಷ ತಡವಾಯಿತು.

ವರ್ಗೀಕರಣ

ಈ ಶೀರ್ಷಿಕೆಯಡಿಯಲ್ಲಿ ಆ ತಪ್ಪು ತನಗೇ ತಿಳಿಯಿತೋ ಅಥವಾ ಇತರರು ಹೇಳಿದರೋ ಎಂಬುದನ್ನು ಬರೆಯಬೇಕು. ತಪ್ಪು ಹೇಳಿದ ವ್ಯಕ್ತಿಯ ಹೆಸರನ್ನೂ ಬರೆಯಬೇಕು. ಉದಾ: ‘ಚಹಾ ಕುಡಿದ ನಂತರ ನಾನು ಲೋಟವನ್ನು ತೊಳೆಯದೆ ಹಾಗೆಯೇ ಮೇಜಿನ ಮೇಲೆ ಬಿಟ್ಟೆ’ ಎಂಬ ತಪ್ಪನ್ನು ಅಮ್ಮ ಗಮನಕ್ಕೆ ತಂದು ಕೊಟ್ಟಿದ್ದರೆ ವರ್ಗೀಕರಣ ಎಂಬ ಶೀರ್ಷಿಕೆಯಡಿಯಲ್ಲಿ ಅಮ್ಮ ಹೇಳಿದರು ಎಂದು ಬರೆಯಬೇಕು. ‘ಹಾಲನ್ನು ಕಾಯಿಸಲು ಇಟ್ಟು ಬೇರೆ ಕೆಲಸಗಳನ್ನು ಮಾಡತೊಡಗಿದರಿಂದ ಹಾಲಿನ ಕಡೆ ದುರ್ಲಕ್ಷವಾಗಿ ಅದು ಉಕ್ಕಿ ಹೋಯಿತು’ ಎಂಬ ತಪ್ಪು ನಮ್ಮಿಂದ ಆಗಿದ್ದು ನಮಗೇ ಗಮನಕ್ಕೆ ಬಂದಿದ್ದರೆ ವರ್ಗೀಕರಣ ಈ ಶೀರ್ಷಿಕೆಯಡಿಯಲ್ಲಿ ‘ನನಗೇ ತಿಳಿಯಿತು’ ಎಂದು ಬರೆಯಬೇಕು. ಉದಾಹರಣೆಗಳಿಗೆ ಇಲ್ಲಿ ನೋಡಿ –

ದಿನಾಂಕ ಅ. ಕ್ರ. ತಪ್ಪುಗಳು
(ಅಯೋಗ್ಯ ಕೃತಿ / ವಿಚಾರ / ಪ್ರತಿಕ್ರಿಯೆ)
ವರ್ಗೀಕರಣ
(ತನಗೆ ತಿಳಿಯಿತೋ ಇತರರಿಗೆ ತಿಳಿಯಿತೋ?
ಕಾಲಾವಧಿ ಸ್ವಭಾವದೋಷ ಸ್ವಯಂಸೂಚನೆ ಪ್ರಗತಿ
೧ ಜನವರಿ ಕಛೇರಿಯಲ್ಲಿ ಸಹೋದ್ಯೋಗಿಯ ಪ್ರಶಂಸೆ ಆದಾಗ ‘ಕೆಲಸ ಮಾಡುವುದು ನಾವು; ಪ್ರಶಂಸೆ ಮಾತ್ರ ಇತರರದ್ದು’ ಎಂಬ ವಿಚಾರ ಬಂದು ಮನಸ್ಸು ಅಸ್ವಸ್ಥವಾಯಿತು ಸ್ವತಃ ನನಗೆ ತಿಳಿಯಿತು
ಬೈಠಕ್ ಗೆ ತಲುಪಲು ೧೦ ನಿಮಿಷ ತಡವಾಯಿತು. ಮೇಲಾಧಿಕಾರಿಗಳು ತಿಳಿಸಿದರು

ಕಾಲಾವಧಿ

ತಖ್ತೆಯಲ್ಲಿ ಮುಂದಿನ ಶೀರ್ಷಿಕೆ – ಕಾಲಾವಧಿ. ತನ್ನಿಂದ ತಪ್ಪು ಆಗುವುದು ಮತ್ತು ಅದನ್ನು ಮಾಡಿದ ಅರಿವಾಗುವುದು ಇವುಗಳ ನಡುವಿನ ಕಾಲಾವಧಿಯನ್ನು ಇಲ್ಲಿ ಬರೆಯಬೇಕು.

ಉದಾ:, ‘ನಾನು ರಾತ್ರಿ ೧೧ ಗಂಟೆಗೆ ಗಣಕಯಂತ್ರವನ್ನು ಶಟ್ ಡೌನ್ ಮಾಡದೆಯೇ ಮಲಗಿ ಬಿಟ್ಟೆ’ ಎಂಬ ತಪ್ಪಾಗಿದ್ದು, ಬೆಳಗ್ಗೆ ೭ ಗಂಟೆಗೆ ಎದ್ದಾಗ ಅದು ನಮ್ಮ ಗಮನಕ್ಕೆ ಬಂದಿದ್ದರೆ ರಾತ್ರಿ ೧೧ ರಿಂದ ಬೆಳಗ್ಗೆ ೭ ಗಂಟೆಯ ವರೆಗಿನ ಕಾಲಾವಧಿಯನ್ನು ಇಲ್ಲಿ ಬರೆಯಬೇಕು. ಹಾಗಾದರೆ ಇಲ್ಲಿ ನಾವು ಏನು ಬರೆಯಬೇಕು ? ೮ ಗಂಟೆ ಎಂದು ಬರೆಯಬೇಕು. ಮತ್ತೊಂದು ಉದಾಹರಣೆಯನ್ನು ನೋಡೋಣ. ‘ಕಛೇರಿಯಲ್ಲಿನ ಮೇಲಧಿಕಾರಿಯು ನನಗೆ ಬೈದಾಗ ನನಗೆ ಅವರ ಮೇಲೆ ಕೋಪ ಬಂದಿತು’ ಎಂಬ ತಪ್ಪಿದ್ದರೆ ಆ ಪ್ರಸಂಗದಲ್ಲಿ ಬಂದಿದ್ದ ಕೋಪವು ಶಮನವಾಗುವವರೆಗಿನ ಕಾಲಾವಧಿಯನ್ನು ‘ಕಾಲಾವಧಿ’ ಈ ಶೀರ್ಷಿಕೆಯಡಿಯಲ್ಲಿ ಬರೆಯಬೇಕು. ಉದಾಹರಣೆಗಳಿಗೆ ಇಲ್ಲಿ ನೋಡಿ –

ದಿನಾಂಕ ಅ. ಕ್ರ. ತಪ್ಪುಗಳು
(ಅಯೋಗ್ಯ ಕೃತಿ / ವಿಚಾರ / ಪ್ರತಿಕ್ರಿಯೆ)
ವರ್ಗೀಕರಣ
(ತನಗೆ ತಿಳಿಯಿತೋ ಇತರರಿಗೆ ತಿಳಿಯಿತೋ?
ಕಾಲಾವಧಿ ಸ್ವಭಾವದೋಷ ಸ್ವಯಂಸೂಚನೆ ಪ್ರಗತಿ
೧ ಜನವರಿ ನಾನು ರಾತ್ರಿ ಮಲಗುವಾಗ ಗಣಕಯಂತ್ರ ಆಫ಼ ಮಾಡಲು ಮರೆತದ್ದರಿಂದ ಅದು ಆನ್ ಆಯೇ ಇತ್ತು ಅಮ್ಮ ಹೇಳಿದರು ೮ ಗಂಟೆ
ಕಛೇರಿಯಲ್ಲಿ ಮೇಲಧಿಕಾರಿ ನನ್ನನ್ನು ಬೈದ ಕಾರಣ ನನಗೆ ಅವರ ಮೇಲೆ ಕೋಪ ಬಂತು ತನಗೆ ತಿಳಿಯಿತು x ೧ ದಿನ

ಅಯೋಗ್ಯ ಕೃತಿಯ ಕಾಲಾವಧಿಯನ್ನು ನಿರ್ಧರಿಸುವಾಗ ಯಾವ ಹಂತಗಳಲ್ಲಿ ವಿಚಾರ ಮಾಡಬೇಕು ಎಂಬುದನ್ನು ನೋಡೋಣ.

೧. ಅಯೋಗ್ಯ ಕೃತಿಯಾದಾಗ ಇತರರು ಅರಿವು ಮಾಡಿಕೊಡುವುದು

೨. ಅಯೋಗ್ಯ ಕೃತಿಯಾದ ನಂತರ ತನಗೇ ಅರಿವಾಗುವುದು

೩. ಅಯೋಗ್ಯ ಕೃತಿಯಾಗುತ್ತಿರುವಾಗ ಅರಿವಾಗುವುದು

೪. ಅಯೋಗ್ಯ ಕೃತಿಯಾಗುವ ಮೊದಲೇ ತನಗೆ ಅರಿವಾಗುವುದು

೫. ಅಯೋಗ್ಯ ವಿಚಾರ ಮನಸ್ಸಿಗೆ ಬಂದಕೂಡಲೇ ತನಗೆ ಅರಿವಾದರೂ ಅಯೋಗ್ಯ ಕೃತಿಯಾಗುವುದು

೬. ಅಯೋಗ್ಯ ವಿಚಾರ ಮನಸ್ಸಿಗೆ ಬಂದ ಕೂಡಲೇ ಅರಿವಾಗಿ ಯೋಗ್ಯ ಕೃತಿಯಾಗುವುದು

ಈ ಅಂಶಗಳನ್ನು ಗಮನಿಸಿ ಅದರಂತೆ ‘ಕಾಲಾವಧಿ’ ಈ ಶೀರ್ಷಿಕೆಯಡಿಯಲ್ಲಿ ಬರೆಯುವುದು.

ಸ್ವಭಾವದೋಷ

ಸ್ವಭಾವದೋಷ ಈ ಶೀರ್ಷಿಕೆಯಡಿಯಲ್ಲಿ ಆ ತಪ್ಪು ಆಗುವುದಕ್ಕೆ ಕಾರಣೀಭೂತವಾದ ಸ್ವಭಾವದೋಷ ಯಾವುದು ಎಂಬುದನ್ನು ಬರೆಯುವುದಿರುತ್ತದೆ. ಸ್ವಭಾವದೋಷ ಯಾವುದು ಎಂಬುದನ್ನು ಕಂಡು ಹಿಡಿಯಲು ನಾವು ಏನು ಮಾಡಬೇಕೆಂದರೆ ತನಗೆ ತಾನೇ ಪ್ರಶ್ನೆಗಳನ್ನು ಕೇಳುವುದು. ಆ ಪ್ರಶ್ನೆಗಳ ಉತ್ತರಗಳಿಂದ ಸ್ವಭಾವದೋಷವು ನಮಗೆ ತಿಳಿಯುವುದು. ಉದಾ: ‘ನಾನು ಬೈಠಕ್ ಗೆ ೧೦ ನಿಮಿಷ ತಡವಾಗಿ ತಲುಪಿದೆ’ ಎಂಬ ತಪ್ಪನ್ನು ನಾವು ತಖ್ತೆಯಲ್ಲಿ ಬರೆದಿದ್ದರೆ ಅದರ ಹಿಂದಿನ ಕಾರಣೀಭೂತ ಸ್ವಭಾವದೋಷವನ್ನು ಗುರುತಿಸಲು ನಾವು ನಮ್ಮ ಮನಸ್ಸನ್ನೇ ಪ್ರಶ್ನಿಸಿಕೊಂಡು ನಿರ್ಧರಿಸುವುದಿರುತ್ತದೆ. ಮೇಲ್ನೋಟಕ್ಕೆ ಏನು ಕಾಣುತ್ತದೆ ಎಂದರೆ ನಿರ್ಧರಿಸಿದ ಸಮಯಕ್ಕೆ ತಡವಾಗಿ ತಲುಪುವ ಹಿಂದೆ ‘ಸಮಯ ಪರಿಪಾಲನೆಯ ಅಭಾವ’ ಎಂಬ ದೋಷವಿದೆ ಎಂದೆನಿಸುತ್ತದೆ. ಆದರೆ ಈ ತಪ್ಪು ಮಾಡುವ ಪ್ರತಿಯೊಬ್ಬನಲ್ಲಿಯೂ ಅದೇ ಸ್ವಭಾವದೋಷ ಕಾರಣೀಭೂತವಾಗಿರುವುದು ಎಂದೇನಿಲ್ಲ. ನಾನು ಬೈಠಕ್ ಗೆ ಹೋಗಲು ಏಕೆ ತಡವಾಯಿತು ಎಂಬುದಕ್ಕೆ ಬೇರೆಬೇರೆ ವ್ಯಕ್ತಿಗಳಲ್ಲಿ ಬೇರೆ ಬೇರೆ ಕಾರಣಗಳಿರಬಹುದು. ಉದಾ: ಬೈಠಕ್ ಇದೆ ಎಂಬುದೇ ನನಗೆ ಮರೆತು ಹೋಯಿತು ಅಥವಾ ಆ ಬೈಠಕ್ ಮಹತ್ವದ್ದಾಗಿದೆ ಎಂದೆನಿಸಲಿಲ್ಲ ಅಥವಾ ೧೦ ನಿಮಿಷ ತಡವಾಗಿ ಹೋದರೆ ನಡೆಯುತ್ತದೆ ಎಂಬ ವಿಚಾರವಿತ್ತು ಅಥವಾ ಬೈಠಕ್ ಗೆ ಹೋಗುವುದಕ್ಕಾಗಿ ಎಷ್ಟು ಗಂಟೆಗೆ ಹೊರಡಬೇಕು ಎಂಬುದರ ಆಯೋಜನೆಯನ್ನೇ ಮಾಡಿರಲಿಲ್ಲ ಅಥವಾ ‘ನಾನು ಬೈಠಕ್ ಗೆ ಸರಿಯಾದ ಸಮಯಕ್ಕೆ ತಲುಪಿಯೇ ತಲುಪುತ್ತೇವೆ’ ಎಂದೆನಿಸುತ್ತಿತ್ತು. ಹೀಗೆ ಬೇರೆ ಬೇರೆ ವಿಚಾರಪ್ರಕ್ರಿಯೆಗಳಿರಬಹುದು. ಈ ಪ್ರತಿಯೊಂದು ವಿಚಾರಕ್ಕನುಸಾರ ವ್ಯಕ್ತಿಯಲ್ಲಿ ಸಕ್ರಿಯವಾಗಿರುವ ಸ್ವಭಾವದೋಷವು ಬೇರೆಬೇರೆ ಆಗಿರುವುದು.

ತಪ್ಪು ಮತ್ತು ಅದರ ಚಿಂತನೆ

ತಪ್ಪು : ನಾನು ಬೈಠಕ್ ಗೆ ೧೦ ನಿಮಿಷ ತಡವಾಗಿ ತಲುಪಿದೆ

ವಿಚಾರಪ್ರಕ್ರಿಯೆ : ಬೈಠಕ್ ಇದೆ ಎಂಬ ವಿಷಯ ನನಗೆ ಮರೆತು ಹೋಗಿತ್ತು – ಸ್ವಭಾವದೊಷ : ಮರೆಯುವಿಕೆ

ವಿಚಾರಪ್ರಕ್ರಿಯೆ : ಬೈಠಕ್ ಗೆ ಸ್ವಲ್ಪ ತಡವಾಗಿ ತಲುಪಿದರೆ ನಡೆಯುತ್ತದೆ – ಸ್ವಭಾವದೊಷ : ಗಾಂಭೀರ್ಯತೆಯ ಅಭಾವ

ವಿಚಾರಪ್ರಕ್ರಿಯೆ : ಬೈಠಕ್ ಗೆ ಹೋಗುವುದಕ್ಕೆ ಎಷ್ಟು ಗಂಟೆಗೆ ಹೊರಡಬೇಕು ಎಂಬುದನ್ನು ನಿರ್ಧರಿಸಿರಲಿಲ್ಲ – ಸ್ವಭಾವದೊಷ : ಆಯೋಜನೆಯ ಕೊರತೆ

ವಿಚಾರಪ್ರಕ್ರಿಯೆ : ನಾನು ಬೈಠಕ್ ಗೆ ಸರಿಯಾದ ಸಮಯಕ್ಕೆ ತಲುಪಬಲ್ಲೆನು – ಸ್ವಭಾವದೋಷ : ಅತಿಯಾದ ಆತ್ಮವಿಶ್ವಾಸ

ಅಂದರೆ, ತಪ್ಪು ಒಂದೇ ಆಗಿದ್ದರೂ ಅದರ ಹಿಂದಿನ ವಿಚಾರಪ್ರಕ್ರಿಯೆಯು ಬೇರೆ ಬೇರೆ ವ್ಯಕ್ತಿಗಳಲ್ಲಿ ಬೇರೆ ಬೇರೆಯಾಗಿರಬಹುದು. ಸ್ವಭಾವದೊಷವನ್ನು ಈ ವಿಚಾರಪ್ರಕ್ರಿಯೆಗನುಸಾರ ಬರೆಯಬೇಕು.

ತಪ್ಪನ್ನು ಸರಿಯಾಗಿ ಬರೆಯುವುದು

ಇಲ್ಲಿ ನಾವು ಗಮನಕ್ಕೆ ತೆಗೆದುಕೊಳ್ಳಬೇಕಾದ ಎಲ್ಲಕ್ಕಿಂತ ಮಹತ್ವದ ಸಂಗತಿಯೇನೆಂದರೆ ಸ್ವಭಾವದೋಷವನ್ನು ಯೋಗ್ಯವಾಗಿ ಆರಿಸಿಕೊಳ್ಳುವುದಕ್ಕಾಗಿ ನಾವು ತಖ್ತೆಯಲ್ಲಿ ತಪ್ಪನ್ನು ಸರಿಯಾಗಿ ಬರೆಯಬೇಕು. ಬೈಠಕ್ ಗೆ ತಡವಾಗಿ ತಲುಪಿದ ಉದಾಹರಣೆಯನ್ನೇ ನೋಡಿದರೆ  ‘ನಾನು ಬೈಠಕ್ ಗೆ ೧೦ ನಿಮಿಷ ತಡವಾಗಿ ತಲುಪಿದೆ’ ಎಂದು ಬರೆಯುವ ಬದಲು ತನ್ನ ವಿಚಾರಪ್ರಕ್ರಿಯೆಗನುಸಾರ ನಾವು ಅದನ್ನು ವಿವರವಾಗಿಯೂ ನಿಖರವಾಗಿಯೂ ಬರೆಯಬೇಕು. ಉದಾ: ಮಧ್ಯಾಹ್ನ ಬೈಠಕ್ ಇದೆ ಎಂಬ ವಿಷಯವನ್ನು ನಾನು ಮರೆತು ಬಿಟ್ಟಿದ್ದೆ. ಕೊನೆಯ ಸಮಯಕ್ಕೆ ಗಮನಕ್ಕೆ ಬಂದಿದ್ದರಿಂದ ಸಿದ್ಧವಾಗಿ ಬೈಠಕ್ ಗೆ ತಲುಪಲು ೧೦ ನಿಮಿಷ ತಡವಾಯಿತು’ ಅಥವಾ ‘ಬೈಠಕ್ ಗೆ ಸ್ವಲ್ಪ ತಡವಾಗಿ ತಲುಪಿದರೆ ನಡೆಯುತ್ತದೆ’ ಎಂದು ವಿಚಾರ ಮಾಡಿ ನಾನು ಬೈಠಕ್ ಗೆ ೧೦ ನಿಮಿಷ ತಡವಾಗಿ ತಲುಪಿದೆ’ ಅಥವಾ ‘ಬೈಠಕ್ ಗೆ ಸರಿಯಾದ ಸಮಯಕ್ಕೆ ತಲುಪುವುದಕ್ಕಾಗಿ ನಾನು ಮನೆಯಿಂದ ಎಷ್ಟು ಗಂಟೆಗೆ ಹೊರಡಬೇಕು ಎಂಬುದರ ಆಯೋಜನೆ ಮಾಡದ ಕಾರಣ ಬೈಠಕ್ ಗೆ ತಲುಪಲು ೧೦ ನಿಮಿಷ ತಡವಾಯಿತು’ ಈ ವಿಧವಾಗಿ ತಪ್ಪು ಬರೆದರೆ ಅದರ ಹಿಂದೆ ಯಾವ ಸ್ವಭಾವದೋಷ ಕಾರಣವಾಗಿದೆ ಎಂಬುದು ನಮ್ಮ ಗಮನಕ್ಕೆ ಬರುವುದು ಅಲ್ಲವೇ ? ಸಂಕ್ಷಿಪ್ತವಾಗಿ ಸ್ವಭಾವದೋಷವನ್ನು ಸರಿಯಾಗಿ ಕಂಡು ಹಿಡಿಯುವುದಕ್ಕಾಗಿ ನಾವು ತಪ್ಪನ್ನು ಸರಿಯಾಗಿ ಬರೆಯುವುದು ಮಹತ್ವದ್ದಾಗಿದೆ.

ದಿನಾಂಕ ಅ. ಕ್ರ. ತಪ್ಪುಗಳು
(ಅಯೋಗ್ಯ ಕೃತಿ / ವಿಚಾರ / ಪ್ರತಿಕ್ರಿಯೆ)
ವರ್ಗೀಕರಣ
(ತನಗೆ ತಿಳಿಯಿತೋ ಇತರರಿಗೆ ತಿಳಿಯಿತೋ?
ಕಾಲಾವಧಿ ಸ್ವಭಾವದೋಷ ಸ್ವಯಂಸೂಚನೆ ಪ್ರಗತಿ
೧ ಜನವರಿ ಮಧ್ಯಹ್ನ ಬೈಠಕ್ ಇದೆ ಎಂಬುದು ಮರೆತು ಹೋಯಿತು. ಕೊನೆ ಸಮಯಕ್ಕೆ ಗಮನಕ್ಕೆ ಬಂದಿದ್ದರಿಂದ ಸಿದ್ಧವಾಗಿ ಬೈಠಕ್ ಗೆ ತಲುಪಲು ೧೦ ನಿಮಿಷ ತಡವಾಯಿತು. ತನಗೇ ತಿಳಿಯಿತು ೨೦ ನಿಮಿಷ ಮರೆವು

Leave a Comment