ಆಪತ್ಕಾಲ ಏಕೆ ಬರುತ್ತದೆ ?

ಕಳೆದ ಒಂದು ದಶಕದಿಂದ ಇಡೀ ಜಗತ್ತಿನಲ್ಲಿ ನೈಸರ್ಗಿಕ ವಿಪತ್ತಿನ ತೀವ್ರತೆ ಹೆಚ್ಚಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಿಸರ್ಗದ ಭಯಾನಕ ಸಾಮರ್ಥ್ಯವನ್ನು ನಾವು ಅನುಭವಿಸುತ್ತಿದ್ದೇವೆ. ಕೆಲವು ವರ್ಷಗಳ ಹಿಂದೆ ದಕ್ಷಿಣ-ಏಶಿಯಾ ಹಾಗೂ ಜಪಾನಿನಲ್ಲಿ ಬಂದಂತಹ ಸುನಾಮಿ, ಅದೇ ರೀತಿ ಪಾಕಿಸ್ತಾನ, ಹೈತಿ ಹಾಗೂ ಚೀನಾದಲ್ಲಿ ಆದಂತಹ ಭೂಕಂಪ, ಅದರೊಂದಿಗೆ ‘ಕಟರಿನಾ’ ಹಾಗೂ ಉತ್ತರ ಮತ್ತು ಮಧ್ಯ ಅಮೇರಿಕಾದಲ್ಲಿ ಬಂದಿದ್ದ ಇತರ ಚಂಡಮಾರುತ ಇತ್ಯಾದಿ ನೈಸರ್ಗಿಕ ವಿಪತ್ತುಗಳನ್ನು ನಾವು ನೋಡಿದ್ದೇವೆ. ಅವುಗಳ ತೀವ್ರತೆಯಿಂದಾಗಿ ಉಂಟಾದ ಮಹಾಭಯಾನಕ ವಿಧ್ವಂಸ ಹಾಗೂ ಜೀವಹಾನಿ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ನಿಸರ್ಗದ ಈ ಪ್ರಕೋಪಕ್ಕೆ ಕಾರಣವೇನೆಂದು ಮೊದಲು ತಿಳಿದುಕೊಳ್ಳಬೇಕು.

ಅ. ಇಡೀ ವಿಶ್ವದಲ್ಲಿ ಜಾತ್ಯತೀತ ವಿಚಾರಧಾರೆಯ ಸೆಮೆಟಿಕ್ ವಿಚಾರಧಾರೆಯ ಪಂಥ : ಇಸ್ಲಾಂ ಹಾಗೂ ಕ್ರೈಸ್ತರಲ್ಲಿ ಪುಣ್ಯದ ಯಾವುದೇ ಸಂಕಲ್ಪನೆಯಿಲ್ಲ. ಅವರ ಪ್ರವಾದಿ ಹೇಳಿದ ಮಾರ್ಗದಲ್ಲಿ ಸಾಗುವುದೇ ಪುಣ್ಯಕರವಾಗಿದೆ ಹಾಗೂ ಅದರ ವಿರುದ್ಧ ಕೃತಿ ಮಾಡುವುದು ಪಾಪವಾಗಿದೆ ಎಂದು ಅವರು ತಿಳಿದಿದ್ದಾರೆ. ಈ ಪಂಥಗಳಲ್ಲಿ ಮಾನವನೇ ಸರ್ವಶ್ರೇಷ್ಠನಿದ್ದಾನೆ ಹಾಗೂ ಸಂಪೂರ್ಣ ಸೃಷ್ಟಿಯು ಅವನ ಭೋಗಕ್ಕಿದೆ ಎಂಬ
ವಿಚಾರಧಾರೆಯಿದೆ. ಇದರ ಪರಿಣಾಮವಾಗಿ ಪೃಕೃತಿಯನ್ನು ಬೇಕಾಬಿಟ್ಟಿಯಾಗಿ ಉಪಯೋಗಿಸಿ, ಮಾನವನು ಪ್ರಕೃತಿಯ ನಾಶಕ್ಕೆ ಕಾರಣನಾಗಿದ್ದಾನೆ. ಆದರೆ ಹಿಂದೂ ಧರ್ಮದಲ್ಲಿ ಪುರಾತನ ಕಾಲದಿಂದಲೂ ಪ್ರಕೃತಿ, ಮರ, ಗಿಡ, ಪ್ರಾಣಿ ಇವುಗಳಲ್ಲಿ ದೇವರು ಇದ್ದಾನೆ 
ಭಾವನೆ ಇದೆ. ಆದರೆ ದೌರ್ಭಾಗ್ಯದಿಂದ ಇಂದು ಭಾರತದಲ್ಲಿ ಹಿಂದೂ ಧರ್ಮ ಬಿಟ್ಟು, ಪಾಶ್ಚಾತ್ಯರ ಮತಕ್ಕೆ ರಾಜಾಶ್ರಯ ಇದೆ ಮತ್ತು ಅವರ ಶಿಕ್ಷಣ ಪದ್ದತಿಯನ್ನು ಹಿಂದೂ ಮಕ್ಕಳಿಗೆ ಕಲಿಸುತ್ತಿದ್ದೇವೆ. ಇದರ
 ಪರಿಣಾಮವಾಗಿ ಪರಿಸರವನ್ನು ಹಾಳು ಮಾಡುವುದು,
 ಪ್ರಾಣಿ-ಪಕ್ಷಿಗಳ ಹತ್ಯೆ ಮಾಡುವುದು, ಕೊಲೆ,
 ಅನೈತಿಕತೆ, ಅಪರಾಧ, ಗುಂಡಾಗಿರಿಯಂತಹ
 ತಾಮಸಿಕ ವೃತ್ತಿ ಹೆಚ್ಚಾಗುತ್ತಿವೆ. ಮನುಷ್ಯ ಕಾಡುಮೃಗವಾದರೆ, ಕಾಡಿನ ವನ್ಯಜೀವಿಗಳು ನಗರಗಳಲ್ಲಿ ಪ್ರವೇಶಿಸುತ್ತವೆ, ಮಳೆ-ಮಾರುತ
 ಮನುಷ್ಯನಿಗೆ ವಿರುದ್ಧವಾಗಿ ವರ್ತನೆ ಮಾಡುತ್ತದೆ.
ಅಂದರೆ ಮನುಷ್ಯನ ಈ ವೃತ್ತಿಯೇ ಈ ಆಪತ್ತುಗಳಿಗೆ ಆಮಂತ್ರಣ ನೀಡಿದೆ.

ಆ. ಮಾನವನ ಸ್ವಾರ್ಥ : ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಸಮುದ್ರ ಹಾಗೂ ನದಿಗಳನ್ನು ಕಲುಷಿತ ಮಾಡುವುದು, ಅಭಿವೃದ್ದಿಯ ಹೆಸರಿನಲ್ಲಿ ಸುಂದರ ಪರಿಸರ ಹಾಳು ಮಾಡುವುದು, ಪ್ರಾಣಿಗಳನ್ನು ಕೊಲ್ಲುವುದು, ಹಾಗೂ ರಾಸಾಯನಿಕಗಳಿಂದ ಭೂಮಿಯನ್ನು ಬರಡುಗೊಳಿಸಿರುವ ಕಾರಣ ಎಲ್ಲ ಆಪತ್ತುಗಳನ್ನು ಎದುರಿಸಬೇಕಾಗಿದೆ. ಉದಾಹರಣೆಗೆ ಇಂದು ಸಮುದ್ರದ ದಂಡೆಗಳಲ್ಲಿ ಉಪ್ಪು ನೀರಿನಲ್ಲಿ ಬೆಳೆಯುವ ಪ್ರಕೃತಿಯ ಸಂರಕ್ಷಣೆಯನ್ನು ಮಾಡುವ ಮ್ಯಾಂಗ್ರೋವ್ ಕಾಡುಗಳನ್ನು ತೆಗೆದು ಆ ಪ್ರದೇಶಗಳಲ್ಲಿ ಅತಿಕ್ರಮಣ ಮಾಡಲಾಗುತ್ತಿದೆ. ಅಲ್ಲಿ ಸುನಾಮಿಯ ಭಯಂಕರ ಪರಿಣಾಮವನ್ನು ನಾವು ಈ ಹಿಂದೆ ನೋಡಿದ್ದೇವೆ. ಸಮುದ್ರದಿಂದ ತಯಾರಿಸುವ ಉಪ್ಪಿನಲ್ಲಿಯೂ ಮಿಕ್ರೊ ಪ್ಲ್ಯಾಸ್ಟಿಕ್ಸ (ಪ್ಲ್ಯಾಸ್ಟಿಕಿನ ಅತಿ ಸೂಕ್ಷ್ಮ ಕಣಗಳು) ಕಂಡುಬರುತ್ತಿವೆ. ಸದ್ಯದ ಕಾಲದಲ್ಲಿನ ಕೊರೋನಾ ರೋಗಾಣುವಿನ ಮಹಾಮಾರಿಯೂ ಇದರ ಒಂದು ಉದಾಹರಣೆಯೇ ಆಗಿದೆ.

(ಕೊರೋನಾದಂತಹ ಸಾಂಕ್ರಾಮಿಕ ರೋಗ
ವಾಗಿರಬಹುದು ಅಥವಾ ಇತರ ನೈಸರ್ಗಿಕ ವಿಕೋಪವಾಗಿರಬಹುದು, ಪ್ರತಿಯೊಬ್ಬರೂ ತಮ್ಮದೇ ಪರಿ
ಯಲ್ಲಿ ಅದರ ಕಾರಣಗಳನ್ನು ಹುಡುಕುತ್ತಿದ್ದಾರೆ. ವಿಜ್ಞಾನಿಗಳಾಗಿದ್ದರೆ ‘ಈ ವಿಪತ್ತು ಎಲ್ಲಿಂದ ಬಂದಿತು ?, ಅದರ ಪರಿಣಾಮವೇನು ?’ ಎಂದು ಹುಡುಕುತ್ತಾರೆ. ಪತ್ರಕರ್ತರು ತಮ್ಮ ಯಾರ ಹೊಣೆಗಾರಿಕೆ ಎಂದು ಹುಡುಕುತ್ತಾರೆ; ಆದರೆ ವಿಪತ್ತಿಗೆ ಆಧ್ಯಾತ್ಮಿಕ ಕಾರಣಗಳೇನು
(ದೃಷ್ಟಿಕೋನ) ಎಂಬುದನ್ನು ತಿಳಿಯ ಬೇಕಿದೆ; ಏಕೆಂದರೆ ಆಧ್ಯಾತ್ಮಿಕ ದೃಷ್ಟಿಕೋನವಿಲ್ಲದೆ, ನೀವು ವಿಪತ್ತುಗಳ ನಿಜವಾದ ಕಾರಣವನ್ನು ಅರ್ಥಮಾಡಿಕೊಳ್ಳಲಾಗದು.)

ಆಧ್ಯಾತ್ಮಿಕ ದೃಷ್ಟಿಕೋನದಿಂದ
 ಜಾಗತಿಕ ಸಂಕಟಗಳು ಏಕೆ ಬರುತ್ತವೆ ?

ಅ. ಆಧ್ಯಾತ್ಮಿಕ ದೃಷ್ಟಿಕೋನದ ವೈಶಿಷ್ಟ್ಯಗಳು ! : ಯಾವುದೇ ದೇಶದ ಸರಕಾರ ಅಥವಾ ಆರ್ಥಿಕ ಮಹಾಶಕ್ತಿಗಳು ಸೃಷ್ಟಿಯ ಸಂಚಾಲನೆ ಮಾಡುವುದಿಲ್ಲ. ಸೃಷ್ಟಿಯನ್ನು ಪರಮಾತ್ಮನು ಸಂಚಾಲನೆ ಮಾಡುತ್ತಾನೆ. ಈ ಸಂಚಾಲನೆಯ ವಿಜ್ಞಾನವನ್ನು ನಾವು ತಿಳಿದುಕೊಳ್ಳದಿದ್ದರೆ, ಅದು ಜಾಗತಿಕ ವಿಪತ್ತು ಮತ್ತು ಅದಕ್ಕೆ ಸೂಕ್ತ ಉಪಾಯಗಳನ್ನು ಹೇಗೆ ಅರ್ಥಮಾಡಿಕೊಳ್ಳುವುದು ? ನಮ್ಮ ಸೌಭಾಗ್ಯವೆಂದರೆ ನಮ್ಮ (ಹಿಂದೂ) ಧರ್ಮಗ್ರಂಥಗಳಲ್ಲಿ ಸೃಷ್ಟಿಯ ವಿಷಯ ಮತ್ತು ಅದರ ಸಂಚಾಲನೆಯ ಸ್ಥೂಲ ಅಧ್ಯಯನದಿಂದ ಸೂಕ್ಷ್ಮವಾಗಿ ಮತ್ತು ಸ್ಪಷ್ಟವಾಗಿ ತಿಳಿಸಲಾಗಿದೆ. ‘ಕೌಶಿಕಪದ್ಧತಿ’ ಈ ಗ್ರಂಥದಲ್ಲಿ ವಿಪತ್ತಿನ ಕಾರಣಗಳ ವರ್ಣನೆ ಇದೆ.

ಆ. ಉತ್ಪತ್ತಿ, ಸ್ಥಿತಿ ಮತ್ತು ಲಯವು ಕಾಲಚಕ್ರದ ನಿಯಮಗಳು :
 ಯುಗಪರಿವರ್ತನೆಯು ಈಶ್ವರನಿರ್ಮಿತ ಸೃಷ್ಟಿಯ ಒಂದು ನಿಯಮವಾಗಿದೆ. ಅದರಲ್ಲಿ ಯಾವುದಾದರೂ ವಸ್ತುವು ಉತ್ಪತ್ತಿಯಾಗುತ್ತದೆ, ಅದು ಸ್ವಲ್ಪ ಸಮಯದವರೆಗೆ ಇರುತ್ತದೆ ಮತ್ತು ಅಂತಿಮವಾಗಿ ಅದು ನಾಶವಾಗುತ್ತದೆ. ಇದನ್ನು ಉತ್ಪತ್ತಿ, ಸ್ಥಿತಿ ಮತ್ತು ಲಯದ ನಿಯಮ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಹಿಮಾಲಯ ಪರ್ವತ ಶ್ರೇಣಿ ಹುಟ್ಟಿಕೊಂಡಿತು ಕೆಲವು ಕಾಲದ ವರೆಗೆ ಇರುತ್ತದೆ ಮತ್ತು ಅಂತಿಮವಾಗಿ ನಾಶವಾಗುತ್ತದೆ.

ಅಂದರೆ, ಈ ವಿಶ್ವದಲ್ಲಿ ಯಾವುದೇ ವಸ್ತು ಉತ್ಪತ್ತಿಯಾದಾಗ, ಸ್ವಲ್ಪ ಸಮಯ ಉಳಿದುಕೊಂಡ ನಂತರ ಅದು ಯಾವುದೇ ಕ್ಷಣದಲ್ಲಿ ನಾಶವಾಗಬಹುದು. ಸೃಷ್ಟಿಕರ್ತ ಮಾತ್ರ, ಅಂದರೆ ಈಶ್ವರ ಮಾತ್ರ ಚಿರಂತನ ಮತ್ತು ಅಪರಿವರ್ತನಿಯನಾಗಿದ್ದಾನೆ. ಈ ನಿಯಮದ ಪ್ರಕಾರ, ಪ್ರಸ್ತುತ ಉದ್ವಿಗ್ನತೆಯು ಕಾಲ ಚಕ್ರದ ಬದಲಾವಣೆಯ ಕಾಲವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ವಿಪತ್ತುಗಳು ಜಗತ್ತನ್ನು ಸಮತೋಲನದಲ್ಲಿಡುತ್ತವೆ.

ಅದರಲ್ಲಿನ ಒಂದು ಮಾರ್ಗವೆಂದರೆ ನೈಸರ್ಗಿಕ ವಿಪತ್ತು. ಈ ವಿನಾಶದ ಪ್ರಕ್ರಿಯೆಯಲ್ಲಿ ಮನುಕುಲವೂ ತನ್ನ ವರ್ತನೆ ಮತ್ತು ನಡವಳಿಕೆ ಮೂಲಕ ಸಹಕರಿಸುತ್ತದೆ, ಇದು ಯುದ್ಧದ ರೂಪದಲ್ಲಿ ನಾಶಪಡಿಸುತ್ತದೆ. ಇದು ಶೇ. ೭೦ ರಷ್ಟು ಇದೆ. ಈ ಚಕ್ರದ ಉತ್ಪತ್ತಿ-ಸ್ಥಿತಿ-ಲಯ (ವಿನಾಶ) ಈ ಕಾಲಚಕ್ರದ ನಿಯಮಗಳ ಪ್ರಕಾರ ರಜ-ತಮ ಪ್ರಧಾನ ಜೀವಗಳು ಅತ್ಯಧಿಕ ಪ್ರಮಾಣದಲ್ಲಿ ಜೀವಗಳು ಕಳೆದುಕೊಳ್ಳುತ್ತವೆ. ಇದರಿಂದ ವಾತಾವರಣವು ಒಂದು ರೀತಿಯಲ್ಲಿ ಶುದ್ಧವಾಗುತ್ತದೆ. ಅನೇಕ ಭವಿಷ್ಯಕಾರರು ತಮ್ಮ ಭವಿಷ್ಯದಲ್ಲಿ ಈ ಕಾಲದ ಬಗ್ಗೆ ನುಡಿದಿದ್ದಾರೆ.

ಇ. ಮನುಷ್ಯನ ಕರ್ಮ ಮತ್ತು ಸಮಷ್ಟಿ ಪ್ರಾರಬ್ಧ ! : ವರ್ತಮಾನ ಕಲಿಯುಗದಲ್ಲಿ ಮನುಷ್ಯನ 
ಶೇ. ೬೫ ರಷ್ಟು ಜೀವನವು ಪ್ರಾರಬ್ಧಕ್ಕನುಸಾರ ಮತ್ತು ಶೇ. ೩೫ ರಷ್ಟು ಕ್ರಿಯಮಾಣ ಕರ್ಮಕ್ಕನುಸಾರ ನಡೆಯುತ್ತದೆ. ಶೇ. ೩೫ ರಷ್ಟು ಕ್ರಿಯಮಾಣದ ಮೂಲಕ ಆಗುವ ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಫಲವನ್ನು ಪ್ರಾರಬ್ಧದ ರೂಪದಲ್ಲಿ ಅನುಭವಿಸಬೇಕಾಗುತ್ತದೆ. ವರ್ತಮಾನದಲ್ಲಿ ಧರ್ಮಶಿಕ್ಷಣ ಮತ್ತು ಧರ್ಮಾಚರಣೆಯ ಅಭಾವದಿಂದ ಸಮಾಜದ
 ಹೆಚ್ಚಿನ ಜನರಲ್ಲಿ ಸ್ವಾರ್ಥ ಅಥವಾ ತಮೋಗುಣವು ಹೆಚ್ಚಾಗುತ್ತಿರು
ವುದರಿಂದ ಸಮಾಜ, ರಾಷ್ಟ್ರ ಮತ್ತು ಧರ್ಮಹಾನಿಯ ಕಾರ್ಯ
ವಾಗುತ್ತಿದೆ. ಈ ಕೆಟ್ಟ ಕರ್ಮಗಳ ಫಲವನ್ನು ಸಂಪೂರ್ಣ ಸಮಾಜವು ಭೋಗಿಸಬೇಕಾಗುತ್ತದೆ; ಏಕೆಂದರೆ ಸಮಾಜವು ಅದನ್ನು ದುರ್ಲಕ್ಷಿಸುತ್ತದೆ. ಇದೇ ರೀತಿ ಸಮಷ್ಟಿಯ ಕೆಟ್ಟ ಕರ್ಮಗಳ ಫಲವನ್ನು ಸಹ ನೈಸರ್ಗಿಕ ಆಪತ್ತುಗಳ ರೂಪದಲ್ಲಿ ಸಹಿಸಬೇಕಾಗುತ್ತದೆ. ಹೇಗೆ ಬೆಂಕಿಯಲ್ಲಿ ‘ಒಣಗಿದ ಕಟ್ಟಿಗೆಯೊಂದಿಗೆ ಹಸಿ ಕಟ್ಟಿಗೆಯೂ ಸುಟ್ಟುಹೋಗುತ್ತದೆಯೋ’ ಇದು ಕೂಡ ಅದೇ ರೀತಿಯಾಗಿದೆ. ಈ ರೀತಿಯಲ್ಲಿ ಸಮಾಜ, ಧರ್ಮ ಮತ್ತು ರಾಷ್ಟ್ರ ಇವುಗಳ ಸಮಷ್ಟಿ ಪ್ರಾರಬ್ಧವನ್ನು ಸಹ ಪರಿಗಣಿಸಲಾಗಿದೆ. ಸಮಾಜದಲ್ಲಿ ಆಧ್ಯಾತ್ಮಿಕ ಅಪಾವಿತ್ರ್ಯ ಹೆಚ್ಚಾದುದರಿಂದ ೨೦೧೩ ರಿಂದ ೨೦೨೩ ರ ತನಕದ ಕಾಲಖಂಡದಲ್ಲಿ ಮನುಷ್ಯಕುಲವು ಕಠಿಣ ಸಮಷ್ಟಿ ಪ್ರಾರಬ್ಧವನ್ನು ಭೋಗಿಸಬೇಕಾಗುತ್ತದೆ.

ಈ. ಪ್ರಕೃತಿಯು ಹೇಗೆ ಕಾರ್ಯ ಮಾಡುತ್ತದೆ ? : ಸಮಾಜದಲ್ಲಿ ಎಲ್ಲೆಡೆ ಹರಡಿರುವ ಅಧರ್ಮ ಮತ್ತು ಸಾಧನೆಯ ಅಭಾವದಿಂದ ಮಾನವನಲ್ಲಿ ರಜ-ತಮ ಹೆಚ್ಚಾಗಿರುವುದರಿಂದ ವಾತಾವರಣದಲ್ಲಿ ಸಹ ರಜ-ತಮದಲ್ಲಿ ಹೆಚ್ಚಳವಾಗಿದೆ ಹಾಗೂ ಸೃಷ್ಟಿಯ (ಪ್ರಕೃತಿಯ) ರಕ್ಷಣೆಯಾಗುವುದಿಲ್ಲ. ರಜ-ತಮ ಹೆಚ್ಚಾದುದರ ಅರ್ಥವೇನೆಂದರೆ, ಸೂಕ್ಷ್ಮ ಸ್ತರದಲ್ಲಿ ಇಡೀ ವಿಶ್ವದಲ್ಲಿ ಬುದ್ಧಿಗೆ ಮೀರಿದ ಆಧ್ಯಾತ್ಮಿಕ ಪ್ರದೂಷಣೆಯಾಗುವುದು. ಹೇಗೆ ನಾವು ವಾಸಿಸುತ್ತಿರುವ ಮನೆಯಲ್ಲಿ ಧೂಳು-ಕಸ ಇದ್ದಲ್ಲಿ ಅದನ್ನು ನಾವು ಆಯಾ ಸಮಯದಲ್ಲಿ ಸ್ಥೂಲರೂಪದಲ್ಲಿ ತೆಗೆದುಹಾಕಿ ಸ್ವಚ್ಛ ಮಾಡುತ್ತೇವೆಯೋ ಅದೇ ರೀತಿಯಲ್ಲಿ ಸೃಷ್ಟಿ ಅಂದರೆ ಪ್ರಕೃತಿಯು ಸಹ ಸೂಕ್ಷ್ಮ ಸ್ತರದಲ್ಲಿ ವಾತಾವರಣದಲ್ಲಿನ ರಜ-ತಮದ ಪ್ರದೂಷಣೆಯನ್ನು ದೂರಗೊಳಿಸಲು ಮತ್ತು ಸ್ವಚ್ಛಗೊಳಿಸಲು ಕಾರ್ಯನಿರತವಾಗುತ್ತದೆ.

ವಾಸ್ತವದಲ್ಲಿ ಯಾವಾಗ ವಾತಾವರಣದಲ್ಲಿ ರಜ-ತಮದ ತಕ್ಕಡಿ ಭಾರವಾಗುತ್ತದೆಯೋ ಆಗ ಈ ಹೆಚ್ಚುವರಿ ರಜ-ತಮವು ಐದು ವೈಶ್ವಿಕ ತತ್ತ್ವಗಳ ಮೂಲಕ (ಪಂಚಮಹಾಭೂತಗಳ) ಪ್ರಭಾವವನ್ನು ಬೀರುತ್ತದೆ. ಈ ಪಂಚಮಹಾಭೂತಗಳ ಮಾಧ್ಯಮದಿಂದ ಭೂಕಂಪ, ನೆರೆ, ಜ್ವಾಲಾಮುಖಿ, ಸುಂಟರಗಾಳಿ ಮುಂತಾದ ಪ್ರಾಕೃತಿಕ ಸಂಕಟಗಳಲ್ಲಿ ವೃದ್ಧಿಯಾಗುತ್ತದೆ. ಮೂಲಭೂತ ಆಪತತ್ತ್ವ ಪ್ರಭಾವಿತವಾದಾಗ ನೀರಿನ ಮಟ್ಟ ಹೆಚ್ಚಳ (ನೆರೆ ಅಥವಾ ಹಿಮಪಾತವಾಗುವುದು ಇತ್ಯಾದಿ) ಆಗುತ್ತದೆ.

ಆಪತ್ತುಗಳ ಕಾರಣವು ಮನುಷ್ಯನ ಸ್ವಭಾವದಲ್ಲಿಯೇ ಅಡಗಿದೆ !

ವಿಶ್ವಕ್ಕಾಗಿ ನಾವು ಏನು ಮಾಡಬಹುದು, ಎಂದು ನಮಗೆ ಗೊತ್ತಿಲ್ಲ. ಆದರೆ ನಮ್ಮ ಆಚರಣೆಯಿಂದ ವಿಶ್ವದ ಸಮತೋಲನ ಹಾಳಾಗದಂತೆ ನಾವು ಪ್ರಯತ್ನಿಸಬಹುದು. ಪ್ರತಿಯೊಬ್ಬರ ಇಂತಹ ಪ್ರಯತ್ನವು ಸಮಾಜ ಮತ್ತು ಮುಂದೆ ದೇಶವನ್ನು ಸುಧಾರಿಸಬಹುದು. ಸ್ವಚ್ಛತಾ ಅಭಿಯಾನಕ್ಕಾಗಿ ಸಂಪೂರ್ಣ ದೇಶದಲ್ಲಿ ಹೇಗೆ ಪ್ರಯತ್ನ ಮಾಡಲಾಯಿತೋ ಅದರಂತೆ ಇದು ಸಹ ಆಗಲಿದೆ. ಇಂದು ವಿಶ್ವದ ಆಪತ್ತುಗಳಿಗೆ ನಮ್ಮಿಂದಾದ ಏನಾದರೊಂದು ತಪ್ಪು ಕೃತ್ಯದ ಪರಿಣಾಮವೇ ಕಾರಣವಾಗಿದೆ. ಜನರು ಪೃಥ್ವಿಯಲ್ಲಿ ಲಭ್ಯವಿರುವ ಸಾಧನಸಾಮಾಗ್ರಿಗಳನ್ನು ಹಿಂದೆ ಮುಂದೆ ಯೋಚಿಸದೇ ದುರುಪಯೋಗ ಮಾಡುತ್ತಿದ್ದಾರೆ. ಬಹಳ ಮಂದಿಗೆ ಇದು ಗೊತ್ತಿದ್ದರೂ ಅವರು ಈ ತಪ್ಪುಗಳನ್ನು ಮಾಡುತ್ತಾರೆ; ಏಕೆಂದರೆ ಅವರ ಅಹಂಕಾರ ಮತ್ತು ಸ್ವಾರ್ಥವು ಅವರಿಗೆ ಸಮಾಜದ ವಿಚಾರವನ್ನು ಮಾಡಲು ಬಿಡುತ್ತಿಲ್ಲ. ತೀವ್ರ ಅಹಂಕಾರ ಮತ್ತು ಸ್ವಾರ್ಥಿ ವೃತ್ತಿಯಿಂದ ಅವರು ಪ್ರಕೃತಿ, ಮನುಷ್ಯ ಹಾಗೂ ಇತರ ಜೀವಗಳಿಗೆ ಕಷ್ಟವನ್ನು ನೀಡಿ ಹೆಚ್ಚು ಹೆಚ್ಚು ಸಮಯವನ್ನು ತಮಗಾಗಿ ಸುಖ ಸಂಗ್ರಹಿಸಲು ನಿರತರಾಗಿದ್ದಾರೆ. ಸರಕಾರವು ಎಷ್ಟು ಪ್ರಯತ್ನ ಮಾಡಿದರೂ, ಎಷ್ಟು ಕಾನೂನು ಮಾಡಿದರೂ ವ್ಯಕ್ತಿ ತಾನಾಗಿ ತನ್ನ ಸಮಾಜಋಣವನ್ನು ತೀರಿಸುವ ವರೆಗೆ ಪರಿವರ್ತನೆ ಅಸಾಧ್ಯವಾಗಿದೆ.

ಸಮಾಜದಲ್ಲಿ ಪ್ರಕೃತಿ ಮತ್ತು ಸಮಾಜದ ವಿಚಾರ ಮಾಡುವ ಜನರು ಕೇವಲ ಬೆರಳೆಣಿಕೆಯಷ್ಟೇ ಇದ್ದಾರೆ. ಅವರ ಜೀವನವನ್ನು ಇಣುಕಿ ನೋಡಿದರೆ ಅವರು ಧರ್ಮಾಚರಣಿಗಳು, ದಯಾಮಯ ಸ್ವಭಾವದವರು, ಎಲ್ಲರಲ್ಲಿ ಪ್ರೇಮವನ್ನು ಇಡುವಂತಹವರಾಗಿದ್ದಾರೆ. ಅವರ ವ್ಯವಹಾರದಲ್ಲಿ ವ್ಯಾಪಕತೆಯಿದೆ. ಅವರ ಆಚರಣೆಯು ನಮ್ಮೆಲ್ಲರನ್ನು ಜನಕಲ್ಯಾಣದ ಕೃತ್ಯಗಳನ್ನು ಮಾಡಲು ಪ್ರೇರಣೆ ನೀಡುತ್ತದೆ. ಅವರಿಗೆ ಅಧರ್ಮದ ಪರಿಣಾಮವೇನೆಂದು ಗೊತ್ತಿದೆ. ಕಾನೂನಿನ ದಂಡಕ್ಕಿಂತ ವ್ಯಕ್ತಿಯ ಆತ್ಮಸಂಯಮವು ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು ಅವರಿಗೆ ಸರಿಯಾಗಿ ಗೊತ್ತಿದೆ. ಆತ್ಮಸಂಯಮವು ಧರ್ಮವನ್ನು ಅರಿತುಕೊಂಡು ಮತ್ತು ಅದನ್ನು ಜೀವನದಲ್ಲಿ ಅಳವಡಿಸುವುದರಿಂದಲೇ ಬರಲು ಸಾಧ್ಯವಿದೆ.

Leave a Comment