ಭೀಕರ ಆಪತ್ಕಾಲದ ತೀವ್ರತೆ, ಅದರ ಸ್ವರೂಪ ಮತ್ತು ಈಶ್ವರನು ಸಹಾಯ ಮಾಡುವುದು, ಇದರ ಬಗ್ಗೆ ಲಭಿಸಿದ ಸೂಕ್ಷ್ಮಜ್ಞಾನ

ಮುಂಬರುವ ಆಪತ್ಕಾಲದಲ್ಲಿ ಈಶ್ವರನ ವಿವಿಧ ರೂಪಗಳಿಂದ ವಿವಿಧ ಸ್ತರದಲ್ಲಿ ಸಹಾಯ ಲಭಿಸಲು ಎಲ್ಲರೂ ಇಂದಿನಿಂದ ಅಲ್ಲ; ಈ ಕ್ಷಣದಿಂದಲೇ ಸಾಧನೆಗೆ ಪ್ರಾರಂಭಿಸಬೇಕು ಮತ್ತು ಯಾರು ಮೊದಲಿನಿಂದಲೂ ಸಾಧನೆಯನ್ನು ಮಾಡುತ್ತಿರುವರೋ, ಅವರು ತಮ್ಮ ಸಾಧನೆಯನ್ನು ಗುಣಾತ್ಮಕ ದೃಷ್ಟಿಯಿಂದ ಹೆಚ್ಚಿಸಲು ಪ್ರಯತ್ನಿಸಬೇಕು.

ಆಪತ್ಕಾಲ ಏಕೆ ಬರುತ್ತದೆ ?

ಕಳೆದ ಒಂದು ದಶಕದಿಂದ ಇಡೀ ಜಗತ್ತಿನಲ್ಲಿ ನೈಸರ್ಗಿಕ ವಿಪತ್ತಿನ ತೀವ್ರತೆ ಹೆಚ್ಚಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಿಸರ್ಗದ ಭಯಾನಕ ಸಾಮರ್ಥ್ಯವನ್ನು ನಾವು ಅನುಭವಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಆಪತ್ಕಾಲ ಏಕೆ ಬರುತ್ತದೆ ಎಂದು ತಿಳಿದುಕೊಳ್ಳೋಣ.