ಗಣಕೀಯ ಆಟ (ವಿಡಿಯೋ ಗೇಮ್ಸ್) – ವ್ಯಕ್ತಿ ಮತ್ತು ಸಮಾಜವನ್ನು ನಾಶಗೊಳಿಸುವ ಸಿಹಿ ವಿಷ !

                       ಶ್ರೀ. ದೇಯಾನ ಗ್ಲೆಶ್ಚಿಚ್

೧. ಗಣಕೀಯ ಆಟ (ವಿಡಿಯೋ ಗೇಮ್ಸ್)ಗಳನ್ನು ಕಲಿತು ಅದನ್ನು ಆಡಬೇಕೆಂಬ ಆಸೆ ನಿರ್ಮಾಣವಾಗುವುದು ಮತ್ತು ತಾಯಿಯು ಚಿಕ್ಕಂದಿನಲ್ಲಿ ಅದನ್ನು ಆಡಲು ಕೊಡದಿದ್ದರಿಂದ ಸ್ವತಂತ್ರವಾಗಿದ್ದು ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆಯುವಾಗ ಆಡಬೇಕೆಂಬ ಸುಪ್ತ ಇಚ್ಛೆ ಪೂರ್ಣವಾಗುವುದು

ನಾನು ೧೦ ವರ್ಷದವನಿದ್ದಾಗ ಒಬ್ಬ ಸ್ನೇಹಿತನ ಮನೆಯಲ್ಲಿ ಗಣಕೀಯ ಆಟವನ್ನು ಪ್ರಥಮಬಾರಿಗೆ ನೋಡಿದೆನು ಹಾಗೂ ಆಟವನ್ನೂ ಆಡಿದೆನು. ಅಂದಿನಿಂದ ನನಗೆ ಗಣಕೀಯ ಆಟ ಆಡಬೇಕೆಂಬ ಪ್ರಬಲ ಇಚ್ಛೆ ನಿರ್ಮಾಣವಾಯಿತು. ಆದುದರಿಂದ ತಾಯಿ-ತಂದೆಯವರು ನನಗಾಗಿ ಗಣಕ ತೆಗೆಸಿ ಕೊಡಬೇಕು, ಅದರಿಂದ ನನಗೆ ಗಣಕೀಯ ಆಟ ಆಡುವುಕ್ಕೆ ಸಿಗಬಹುದು, ಎಂಬ ಅಪೇಕ್ಷೆ ನನಗೆ ಇರುತ್ತಿತ್ತು. ಅದೃಷ್ಟವಶಾತ್ ನನ್ನ ತಾಯಿಗೆ ಯೋಗ್ಯ ಮತ್ತು ಅಯೋಗ್ಯವೇನು ಎಂಬುದರ ಅರಿವು ಇದ್ದಿದ್ದರಿಂದ ಅವಳು ನನಗೆ ಆಡುವುದಕ್ಕೆ ಗಣಕವನ್ನು ಎಂದಿಗೂ ತೆಗೆದುಕೊಡಲಿಲ್ಲ; ಆದರೆ ಗಣಕೀಯ ಆಟ ಆಡಬೇಕೆಂಬ ನನ್ನ ಸುಪ್ತ ಇಚ್ಛೆ ಹಾಗೆಯೇ ಉಳಿದಿತ್ತು. ನಾನು ೧೮ ವರ್ಷದವನಾದ ನಂತರ, ಸ್ವತಂತ್ರವಾಗಿದ್ದು ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿದ್ದೆನು. ಆಗ ನನಗೆ ಸಿಗುವಂತಹ ಎಲ್ಲ ಖಾಲಿ ಸಮಯವನ್ನು ನಾನು ಗಣಕೀಯ ಆಟವನ್ನು ಆಡುವುದರಲ್ಲಿ ಕಳೆಯುತ್ತಿದ್ದೆನು.

೨. ಗಣಕೀಯ ಆಟದ ಚಟ ಹಿಡಿದಿದ್ದರಿಂದ ಊಟದ ಸಲುವಾಗಿಯೂ ಏಳದೇ ಸತತ ೧೫-೧೬ ಗಂಟೆ ಆಡುವುದು ಮತ್ತು ಆಟದಿಂದಾಗಿ ಪತ್ನಿಯ ಕಡೆಗೂ ದುರ್ಲಕ್ಷವಾಗಿದ್ದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸುವುದು

ಮುಂದೆ ಕೆಲವು ವರ್ಷಗಳವರೆಗೆ ಈ ಆಟದ ರೂಢಿ ಹೆಚ್ಚುತ್ತಲೇ ಹೋಯಿತು ಹಾಗೂ ಅವಕಾಶ ಸಿಕ್ಕಿದಾಗೆಲ್ಲ ಆಡುತ್ತಿದ್ದೆನು. ಆ ಆಟದ ಚಟ ಹಿಡಿದಿತ್ತು ಮತ್ತು ಇದರಿಂದಾಗಿ ನನ್ನ ಜೀವನದಲ್ಲಿ ಒಂದು ದೊಡ್ಡ ಸಮಸ್ಯೆ ಉದ್ಭವಿಸಿತು. ಕೆಲವು ಸಲ ವಾರದ ಕೊನೆಯ ರಜೆಯನ್ನು ನಾನು ಆಡುವುದರಲ್ಲಿಯೇ ಕಳೆಯುತ್ತಿದ್ದೆನು ಅಲ್ಲದೆ ಕೆಲವು ಸಲ ೧೫-೧೬ ಗಂಟೆಗಳ ಕಾಲ ಆಡುತ್ತಿದ್ದೆನು. ಆಗ ನಾನು ಊಟದ ಕಡೆಗೂ ಗಮನ ನೀಡುತ್ತಿರಲಿಲ್ಲ. ಸ್ವಲ್ಪ ಚಾಕಲೇಟ್ ತಿಂದು, ಹಾಲು ಕುಡಿದು ಆಟ ಮುಂದುವರಿಸುತ್ತಿದ್ದೆನು. ಕೆಲಸದ ದಿನಗಳಲ್ಲಿಯೂ ನಾನು ಆಡುತ್ತಿದ್ದೆನು. ರಾತ್ರಿ ಹೊತ್ತು ಅತ್ಯಂತ ಕಡಿಮೆ ಸಮಯ ಮಲಗುತ್ತಿದ್ದೆನು. ಕೆಲವೊಮ್ಮೆ ಇಡಿ ರಾತ್ರಿ ಆಡಿ ಬೆಳಗ್ಗೆ ದಣಿವಾಗಿದ್ದರೂ ಹಾಗೆಯೇ ಕೆಲಸಕ್ಕೆ ಹೋಗುತ್ತಿದ್ದೆನು. ನಾನು ನನ್ನ ಪತ್ನಿಯ ಕಡೆಗೂ ದುರ್ಲಕ್ಷ ಮಾಡುತ್ತಿರುವುದರಿಂದ ನನ್ನ ವೈವಾಹಿಕ ಜೀವನದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಿದವು. ಪತ್ನಿಯ ಸಲುವಾಗಿ ಸಮಯ ಕೊಡುವುದನ್ನು ಬಿಟ್ಟು ಗಣಕೀಯ ಆಟ ಆಡುವುದರೆಡೆಗೆ ನನ್ನ ಹೆಚ್ಚು ಒಲವು ಇತ್ತು.

೩. ಗಣಕೀಯ ಆಟವನ್ನು ಬಿಡಲು ಪ್ರಯತ್ನಿಸಿದರೂ ಅದರಿಂದ ಬಿಡುಗಡೆಯಾಗದಿರುವುದು, ಸತತ ಆಡುತ್ತಿದ್ದರಿಂದ ಮಧ್ಯಮಧ್ಯದಲ್ಲಿ ನಿರಾಸೆಯಲ್ಲಿರುವುದು ಮತ್ತು ವಾಸ್ತವವನ್ನು ಸ್ವೀಕರಿಸಲು ಕಠಿಣವಾಗಿ ಜನರಿಂದ ದೂರವಾಗಿರುವುದು

ಈ ಆಟ ಆಡುವುದನ್ನು ಬಿಡಬೇಕೆಂದು ನಾನು ತುಂಬಾ ಪ್ರಯತ್ನ ಮಾಡಿದೆನು. ನನ್ನಲ್ಲಿರುವ ಆಟದ ಎಲ್ಲ ವಿಡಿಯೋ ಸಿಡಿಗಳನ್ನು ನಾನು ಬಿಸಾಕುತ್ತಿದ್ದೆನು ಮತ್ತು ಗಣಕದಲ್ಲಿದ್ದ ಎಲ್ಲ ಗಣಕೀಯ ಆಟಗಳನ್ನು ಅಳಿಸಿ ಹಾಕುತ್ತಿದ್ದೆನು; ಆದರೆ ಸ್ವಲ್ಪ ಸಮಯದಲ್ಲಿಯೇ ನಾನು ಅಂಗಡಿಗೆ ಹೋಗಿ ಈ ಆಟದ ಇನ್ನಷ್ಟು ಸಿಡಿಗಳನ್ನು ಖರೀದಿ ಮಾಡಿ ತರುತ್ತಿದ್ದೆ. ಇದರಲ್ಲಿ ನನ್ನ ಸಾಕಷ್ಟು ಹಣ ಖರ್ಚಾಗುತ್ತಿತ್ತು. ಗಣಕೀಯ ಆಟವನ್ನು ಸತತವಾಗಿ ಆಡುವುದರಿಂದ ಮಧ್ಯ ಮಧ್ಯದಲ್ಲಿ ನಾನು ನಿರಾಸೆಯ ಸ್ಥಿತಿಗೆ ಹೋಗುತ್ತಿದ್ದೆ. ನನಗೆ ಜೀವನವು ಬೇಸರವಾಗಿ ವಾಸ್ತವವನ್ನು ಸ್ವೀಕರಿಸಲು ಕಠಿಣವಾಗಿತ್ತು. ಅನೇಕ ಸಲ ಈ ಆಟವೇ ನನ್ನ ಜೀವನವಾಗಿದೆ, ಎಂದು ನನಗೆ ಅನಿಸುತ್ತಿದ್ದರಿಂದ ಆಟದಲ್ಲಿಯೇ ಮೈಮರೆತು ಹೋಗುತ್ತಿದ್ದೆ. ಇದರಿಂದಾಗಿ ನಾನು ಜನರಿಂದ ಅಲಿಪ್ತನಾದೆನು.

೪. ಸಾಧನೆಯ ಪ್ರಾರಂಭವಾದ ನಂತರ ಗಣಕೀಯ ಆಟ ಆಡುವ ಇಚ್ಛೆ ಕಡಿಮೆಯಾಗಿ ೨ ವಾರದಲ್ಲಿ ಕೇವಲ ಒಮ್ಮೆ ೨ ಗಂಟೆ ಆಡುವುದು

ನಾನು ನನ್ನ ೨೧ ನೇ ಪ್ರಾಯದಲ್ಲಿ ಸಾಧನೆಯ ಪ್ರಾರಂಭ ಮಾಡಿದೆನು. ಆರಂಭದಲ್ಲಿ ಗಣಕೀಯ ಆಟವು ನನ್ನ ಸಾಧನೆಯಲ್ಲಿನ ಮುಖ್ಯ ಅಡಚಣೆಯಾಗಿತ್ತು; ಆದರೆ ಸಾಧನೆಯಲ್ಲಿ ನನ್ನ ಪ್ರಗತಿಯಾಗುತ್ತಿದ್ದಂತೆ ನನಗೆ ಒಳಗಿನಿಂದ ಶುದ್ಧ ಹಾಗೂ ಹೆಚ್ಚು ಸುಖಕರ ಅನಿಸುತ್ತಿತ್ತು. ಆದುದರಿಂದ ನನ್ನ ಗಣಕೀಯ ಆಟ ಆಡುವ ಬಯಕೆ ಕಡಿಮೆಯಾಗುತ್ತ ಹೋಯಿತು. ಪ್ರತಿದಿನ ಗಣಕೀಯ ಆಟ ಆಡುವ ಬದಲು ನಾನು ವಾರದಲ್ಲಿ ಸ್ವಲ್ಪ ಸಮಯ ಅಡತೊಡಗಿದೆನು. ನಂತರ ವಾರದಲ್ಲಿ ೨ ಬಾರಿಯೇ ಆಡುತ್ತಿದ್ದೆನು ಮತ್ತು ಆ ಬಳಿಕ ೨ ವಾರದಲ್ಲಿ ಕೇವಲ ಒಮ್ಮೆ ಆಡುತ್ತಿದ್ದೆನು, ಹಾಗೆಯೇ ಆಡುವ ಸಮಯವು ೧೦ ಗಂಟೆಯಿಂದ ನೇರ ೨ ಗಂಟೆಗೆ ಸೀಮಿತವಾಯಿತು.

ಕಳೆದ ೨ ವರ್ಷಗಳಲ್ಲಿ ನನ್ನ ಗಣಕೀಯ ಆಟ ಆಡುವ ಬಯಕೆ ತುಂಬಾ ಕಡಿಮೆಯಾಗಿದೆ. ಈಗ ಕೆಲವು ವಾರಗಳವರೆಗೆ ಅಥವಾ ತಿಂಗಳವರೆಗೆ ನಾನು ಗಣಕೀಯ ಆಟ ಆಡುವುದಿಲ್ಲ. ಕೆಲವು ನಿರ್ಧಿಷ್ಟ ಸಮಯದಲ್ಲಿ ಆಟ ಆಡುವ ಇಚ್ಛೆಯಾಗುತ್ತಿದ್ದರಿಂದ ನಾನು ಆಡುತ್ತಿದ್ದೆನು; ಆದರೆ ಇದು ಕೆಲ ದಿನಗಳವರೆಗೆ ಮಾತ್ರ ಉಳಿಯುತ್ತಿತ್ತು ನಂತರ ನಾನು ಆಡುವುದನ್ನು ನಿಲ್ಲಿಸುತ್ತಿದ್ದೆನು.

೫. ಗಣಕೀಯ ಆಟ ಆಡುವುದು ಕಡಿಮೆಯಾಗಿದ್ದರಿಂದ ಜೀವನದಲ್ಲಿ ದುಃಖ ನಿರ್ಮಿಸುವ ಒಂದು ದೊಡ್ಡ ಕಾರಣದಿಂದ ಮುಕ್ತನಾಗಿದ್ದರಿಂದ ಹಗುರ ಅನಿಸುತ್ತಿತ್ತು ಮತ್ತು ನಿರಾಸೆಯೂ ಇಲ್ಲದಂತಾಗುವುದು

ಒಂದು ಮಹತ್ವದ ಸಂಗತಿಯೆಂದರೆ ನನಗೆ ಆಧ್ಯಾತ್ಮಿಕ (ಅನಿಷ್ಟ ಶಕ್ತಿಗಳ) ತೊಂದರೆ ಇದೆ. ನನ್ನ ಆಧ್ಯಾತ್ಮಿಕ ತೊಂದರೆ ಹೆಚ್ಚಾದಂತೆ, ನನಗೆ ಗಣಕೀಯ ಆಟ ಅಡುವ ಇಚ್ಛೆ ಸಕ್ರಿಯವಾಗುತ್ತಿತ್ತು. ಪ್ರತ್ಯಕ್ಷ ಆ ಇಚ್ಛೆಯು ನನ್ನದಾಗಿರದೇ ಅದು ನನ್ನ ಮನದಲ್ಲಿ ಬಿಂಬಿಸಲಾಗಿದೆ ಮತ್ತು ಕೆಟ್ಟ ಶಕ್ತಿ ಅದನ್ನು ಹೆಚ್ಚಿಸುತ್ತಿದೆ ಎಂದು ನನಗೆ ಅನಿಸುತ್ತದೆ. ನಾನು ಅಡುವುದು ಕಡಿಮೆಯಾಗಿದ್ದರಿಂದ ನನಗೆ ಸಿಕ್ಕ ಖಾಲಿ ಸಮಯವನ್ನು ನಾನು ಸಾಧನೆಗಾಗಿ ಹೆಚ್ಚೆಚ್ಚು ಬಳಸತೊಡಗಿದೆ. ಆದುದರಿಂದ ನನಗೆ ಒಳಗಿನಿಂದ ತುಂಬಾ ಅನಂದದ ಅನುಭವವಾಗುತ್ತಿತ್ತು. ನನ್ನ ಜೀವನದಲ್ಲಿ ದುಃಖವನ್ನು ನಿರ್ಮಿಸುವ ಒಂದು ದೊಡ್ಡ ಕಾರಣದಿಂದ ನಾನು ಮುಕ್ತನಾಗಿದ್ದರಿಂದ ನನಗೆ ತುಂಬಾ ಹಗುರ ಅನಿಸುತ್ತಿತ್ತು. ನನ್ನ ನಿರಾಸೆಗಳು ಇಲ್ಲದಂತಾದವು. ನಾನು ವಾಸ್ತವಿಕ ಸುಖವನ್ನು ಅನುಭವಿಸಿ ಜೀವನದ ಯೋಗ್ಯತೆ ಏನೆಂಬುದನ್ನು ಗುರುತಿಸಿದೆನು.

೬. ಗಣಕೀಯ ಆಟದ ಚಟದಿಂದ ಶಾಶ್ವತವಾಗಿ ಹೊರಬೀಳಬೇಕೆಂದು ಅನಿಸುತ್ತಿರುವುದರಿಂದ ದೇವರಿಗೆ ಪ್ರಾರ್ಥನೆ ಮಾಡುವುದು ಮತ್ತು ಆ ಸಮಯದಲ್ಲಿ ಆಟದ ದುಷ್ಪರಿಣಾಮಗಳ ಸಂದರ್ಭದಲ್ಲಿ ಸೂಕ್ಷ್ಮದಲ್ಲಿ ದೃಶ್ಯಗಳು ಕಾಣಿಸುವುದು

ಸೆಪ್ಟೆಂಬರ ೨೦೧೪ ರಲ್ಲಿ ನನಗೆ ಕೆಟ್ಟ ಶಕ್ತಿಗಳ ತೊಂದರೆ ಹೆಚ್ಚಾಯಿತು. ಆದುದರಿಂದ ನನ್ನ ಮನದಲ್ಲಿ ಮತ್ತೆ ಗಣಕೀಯ ಆಟ ಆಡಬೇಕೆಂಬ ಆಸೆ ಹೆಚ್ಚಿದ್ದರಿಂದ ನಾನು ೨ ದಿನ ಅದನ್ನು ಆಡಿದೆನು. ಆಗ ನಾನು ಅದನ್ನು ಇಷ್ಟಪಟ್ಟು ಆಡಿರಲಿಲ್ಲ; ಆದರೆ ನಾನು ನನ್ನ ಮೇಲೆ ನಿಯಂತ್ರಣ ಇಡಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆಯ ಮೇಲೆ ಶಾಶ್ವತವಾದ ಉಪಾಯ ಮಾಡಬೇಕೆಂಬ ಇಚ್ಛೆ ಒಳಗಿಂದ ನಿರ್ಮಾಣವಾಯಿತು. ಆದುದರಿಂದ ನಾನು ಗಣಕೀಯ ಆಟಗಳಿಂದ ತನ್ನ ಮೇಲಾಗುವ ಪ್ರಭಾವವು ತೀವ್ರತೆಯು ನನಗೆ ತಿಳಿಯಲಿ, ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದೆನು. ಆ ಬಳಿಕ ಕೆಲವೇ ನಿಮಿಷಗಳಲ್ಲಿ ಆ ಸಂದರ್ಭದಲ್ಲಿ ಒಳಗಿನಿಂದಲೇ ತಿಳಿಯತೊಡಗಿತು ಮತ್ತು ಗಣಕೀಯ ಆಟಗಳಿಂದ ಯಾವ ರೀತಿಯ ಶಕ್ತಿ (ಸ್ಪಂದನಗಳು) ಪ್ರಕ್ಷೇಪಿತವಾಗುತ್ತವೆ, ಅದೇ ರೀತಿ ಆಡುವವನ ಶರೀರ ಮತ್ತು ಮನಸ್ಸು ಆ ಶಕ್ತಿಯನ್ನು ಯಾವ ರೀತಿ ಎಳೆದುಕೊಳ್ಳುತ್ತದೆ , ಎಂಬುದು ನನಗೆ ಸೂಕ್ಷ್ಮದಲ್ಲಿ ಕಾಣತೊಡಗಿತು. ಇದಲ್ಲದೇ ಆ ಕ್ಷಣ ದೇವರು ನನ್ನ ಮನಸ್ಸಿನಲ್ಲಿನ ಗಣಕೀಯ ಆಟವನ್ನು ಆಡುವ ಸಂಸ್ಕಾರವನ್ನೇ ಕಡಿಮೆ ಮಾಡಿದ್ದಾನೆ ಎಂದು ಒಳಗಿನಿಂದಲೇ ಅನಿಸುತ್ತಿತ್ತು. ಅಂದಿನಿಂದ ನನಗೆ ಆ ಆಟವನ್ನು ಆಡಲು ಹಿಡಿಸದಂತಾಯಿತು.

೬ ಅ. ಸೂಕ್ಷ್ಮದಲ್ಲಿ ಕಂಡ ದೃಶ್ಯಗಳ ವಿವರಗಳು

೬ ಅ ೧. ಗಣಕೀಯ ಆಟವನ್ನು ಆಡುವಾಗ ಮಾಯಾವಿ ಮತ್ತು ಆಕರ್ಷಣ ಶಕ್ತಿಗಳು ಗಣಕದ ಸುತ್ತಲೂ ಪ್ರಕ್ಷೇಪಿತಗೊಳ್ಳುವುದು : ಇದರಿಂದಾಗಿ ವ್ಯಕ್ತಿಗೆ ಆ ಆಟವನ್ನು ಆಡಬೇಕೆಂಬ ಆಕರ್ಷಣೆಯಾಗುತ್ತದೆ ಮತ್ತು ಅದರಿಂದ ಸುಖ ಸಿಗುತ್ತಿರುವಂತೆ ಭಾಸವಾಗುತ್ತದೆ.

೬ ಅ ೨. ಕಪ್ಪು ಮತ್ತು ಹಸಿರು ಬಣ್ಣದ ತೊಂದರೆದಾಯಕ ಶಕ್ತಿ ವಾತಾವರಣದಲ್ಲಿ ಮತ್ತು ಆಡುವ ವ್ಯಕ್ತಿಯತ್ತ ಪ್ರಕ್ಷೇಪಿತವಾಗುವುದು

೬ ಅ ೩. ಕಪ್ಪು ಮತ್ತು ಹಸಿರು ಬಣ್ಣದ ತೊಂದರೆದಾಯಕ ಶಕ್ತಿ ಗಣಕದ ಧ್ವನಿವರ್ಧಕದ (ಸ್ಪೀಕರ್ಸ) ಮೂಲಕ ಧ್ವನಿಯ ರೂಪದಲ್ಲಿ ಪ್ರಕ್ಷೇಪಿತವಾಗುವುದು.

೬ ಅ ೪. ವ್ಯಕ್ತಿಯ ಕಿವಿ ಮತ್ತು ಮನಸ್ಸಿನಲ್ಲಿ ಶೇಖರಿಸಲ್ಪಟ್ಟ ಕಪ್ಪು ಶಕ್ತಿಯ ಮೋಡಗಳಿಂದ ಆತನಿಗೆ ಏನೂ ತೋಚದಿರುವುದು ಮತ್ತು ಅವನು ವಾಸ್ತವಿಕತೆಯಿಂದ ದೂರ ಹೋಗುವುದು.

೬ ಅ ೫. ಕಪ್ಪು ಮತ್ತು ಹಸಿರು ಬಣ್ಣದ ತೊಂದರೆದಾಯಕ ಶಕ್ತಿ ಆಡುವವನ ಕಣ್ಣುಗಳಲ್ಲಿ ಜಮೆಯಾಗುವುದು : ಇದರಿಂದಾಗಿ ಅವನಿಗೆ ಆಡಲು ಶಕ್ತಿ (ಉರ್ಜೆ) ಸಿಗುತ್ತದೆ ಮತ್ತು ಅವನು ವಾಸ್ತವಿಕತೆಯಿಂದ ದೂರ ತಡೆಯಲ್ಪಡುತ್ತಾನೆ.

೬ ಅ ೬. ಗಣಕದೊಳಗಿನಿಂದ ಪ್ರಕ್ಷೇಪಿತಗೊಳ್ಳುವ ಹಸಿರು ಬಣ್ಣದ ತೊಂದರೆದಾಯಕ ಶಕ್ತಿಯು ವ್ಯಕ್ತಿಯ ಕೈಯಲ್ಲಿ ಮತ್ತು ಕಣ್ಣಲ್ಲಿ ಹೋಗಿ ಅವನಿಗೆ ಆಡುವುದಕ್ಕೆ ಶಕ್ತಿ ದೊರಕುತ್ತದೆ

೬ ಅ ೭. ವ್ಯಕ್ತಿಯ ತಲೆ ಮತ್ತು ಮನಸ್ಸುಗಳ ಸುತ್ತಲೂ ಕಪ್ಪು ತೊಂದರೆದಾಯಕ ಶಕ್ತಿಯ ನಿರ್ಮಾಣವಾಗುವುದು : ಈ ತೊಂದರೆದಾಯಕ ಶಕ್ತಿಯು ವ್ಯಕ್ತಿಯ ಮಾಧ್ಯಮದಿಂದ ಸೂಕ್ಷ್ಮರೂಪದಲ್ಲಿ ವಾತಾವರಣದಲ್ಲಿ ಹರಡುತ್ತದೆ.

೬ ಅ ೮. ವ್ಯಕ್ತಿಯ ಅಹಂನಲ್ಲಿ ಕಪ್ಪು ತೊಂದರೆದಾಯಕ ಶಕ್ತಿ ಜಮೆಯಾಗುವುದು : ಇದರಿಂದಾಗಿ ವ್ಯಕ್ತಿಯ ಅಹಂ ಹೆಚ್ಚುತ್ತದೆ.

೬ ಅ ೯. ವ್ಯಕ್ತಿಯ ತಲೆಯ ಸುತ್ತಲೂ ಇರುವ ಮಾಯಾವಿ ಶಕ್ತಿಯಿಂದಾಗಿ ಆತನಿಗೆ ಮಾಯಾವಿ ಆನಂದ ಸಿಗುವುದು

೬ ಅ ೧೦. ವ್ಯಕ್ತಿಯ ಹೃದಯ ಸ್ಥಾನದಲ್ಲಿರುವ ಮಾಯಾವಿ ಶಕ್ತಿಯಿಂದಾಗಿ ಆತನಲ್ಲಿ ಆಡುವ ಬಯಕೆ ಹೆಚ್ಚಾಗುವುದು

೬ ಅ ೧೧. ಮಜ್ಜಾತಂತುವಿನ ಜಾಲದಲ್ಲಿ ಶೇಖರಿಸಲ್ಪಟ್ಟ ಮಾಯಾವಿ ಮತ್ತು ಕಪ್ಪು ತೊಂದರೆದಾಯಕ ಶಕ್ತಿಯಿಂದಾಗಿ ಗಣಕೀಯ ಆಟ ಆಡುವ ಬಯಕೆಯು ಹೆಚ್ಚಾಗುವುದು.

೭. ಗಣಕೀಯ ಆಟ ಹಾನಿಕಾರ ಅಂತ ಅನಿಸದಿದ್ದರೂ, ಪ್ರತ್ಯಕ್ಷ ಅದು ಅಪಾಯಕಾರಿಯಾಗಿರುವುದು ಮತ್ತು ಇದರಿಂದ ಜನರಲ್ಲಿ ಸ್ವಭಾವ ದೋಷ ಮತ್ತು ಅಹಂಗಳು ಹೆಚ್ಚಾಗುವುದು

ಕಳೆದ ಕೆಲವು ವರ್ಷಗಳಿಂದ ಗಣಕೀಯ ಆಟಗಳು ತುಂಬಾ ಜನಪ್ರಿಯವಾಗಿವೆ. ೧೫ ವರ್ಷಗಳ ಹಿಂದೆ ತುಂಬಾ ಕಡಿಮೆ ಜನರು ಗಣಕೀಯ ಆಟ ಆಡುತ್ತಿದ್ದರು; ಆದರೆ ಇತ್ತೀಚೆಗೆ ಕಿರಿಯರು-ಹಿರಿಯರೊಂದಿಗೆ ಬಹುಸಂಖ್ಯೆ ಜನರಿಗೆ ಈ ಆಟವೆಂದರೆ ಹೊತ್ತು ಕಳೆಯುವ (ಮನೋರಂಜನೆಯ) ಸಾಧನೆವಾಗಿದೆ. ಇಷ್ಟೇ ಅಲ್ಲದೇ, ೨-೩ ವರ್ಷದ ಸಣ್ಣ ಮಕ್ಕಳೂ ಗಣಕೀಯ ಆಟ ಆಡುತ್ತಿರುತ್ತಾರೆ. ನಮ್ಮ ಸುತ್ತಮುತ್ತಲೂ ನೋಡಿದರೆ ಯಾರು ಒಬ್ಬರಾದರು ಈ ಆಟಗಳನ್ನು ಸಂಚಾರಿ ವಾಣಿಯಲ್ಲಿ ಆಡುತ್ತಿರುವುದು ಕಂಡುಬರುತ್ತದೆ. ಗಣಕೀಯ ಆಟಗಳು ನಿರುಪದ್ರವ ಎಂದೆನಿಸುತ್ತಿದ್ದರೂ, ಪ್ರತ್ಯಕ್ಷದಲ್ಲಿ ಅವುಗಳು ಅಪಾಯಕರವಾಗಿರುತ್ತವೆ. ಅವುಗಳು ಸೂಕ್ಷ್ಮದಿಂದ ಕ್ರಮೇಣ ದುಃಖದ ಕಡೆಗೆ ಒಯ್ಯುತ್ತವೆ; ಏಕೆಂದರೆ ಈ ಆಟಗಳು ಜನರಲ್ಲಿಯ ಸ್ವಭಾವದೋಷ ಮತ್ತು ಅಹಂಗಳನ್ನು ಹೆಚ್ಚಿಸುತ್ತವೆ.

೭ ಅ . ಸ್ವಭಾವದೋಷ ಮತ್ತು ಅಹಂ ಹೆಚ್ಚಾಗುವ ಪ್ರಕ್ರಿಯೆ

೭ ಅ ೧. ಗರ್ವವು ಹೆಚ್ಚಾಗುವುದು : ಕೆಲವು ಆಟಗಳಲ್ಲಿ ನಿರ್ಧಿಷ್ಟ ಅಂಕಗಳನ್ನು ಪಡೆಯಲಿಕ್ಕಿರುತ್ತದೆ. ಅದು ಪೂರ್ಣವಾದ ಬಳಿಕ ಜನರಿಗೆ ಅದರ ಗರ್ವವಾಗುತ್ತದೆ. ಆ ಅಂಕಗಳ ಸಂಖ್ಯೆಯನ್ನು ಇತರ ಜನರು ನೋಡಬೇಕೆಂದು, ಅದನ್ನು ಪ್ರಸಿದ್ಧಿಗೊಳಿಸಲಾಗುತ್ತದೆ ಅಥವಾ ಅವರ ಸ್ನೇಹಿತರಿಗೆ ತೋರಿಸುವುದಕ್ಕೆ ಫೇಸಬುಕ್ ಪ್ರೋಫಾಯಿಲ್ ಮೇಲೆ ಇಡುತ್ತಾರೆ. ಇದರಿಂದ ವ್ಯಕ್ತಿಯ ಗರ್ವವು ಹಚ್ಚಾಗುತ್ತದೆ.

೭ ಅ ೨. ಬಹಿರ್ಮುಖತೆ ಹೆಚ್ಚಾಗುವುದು : ಸತತ ಈ ಮಾಯಾವಿ ಜಗತ್ತಿನಲ್ಲಿರುವುದು, ಅಂತರ ನಿರೀಕ್ಷಣೆ ಮಾಡದಿರುವುದು, ಹಾಗೆಯೇ ಶಾಂತ ಸ್ಥಿತಿಯಲ್ಲಿ ಇಲ್ಲದಿರುವುದು ಮತ್ತು ತನ್ನಲ್ಲಿ ಸುಧಾರಣೆ ಮಾಡುವ ಕಡೆಗೆ ಗಮನ ನೀಡದಿರುವುದು, ಇವುಗಳಿಂದಾಗಿ ವ್ಯಕ್ತಿಯ ಬಹಿರ್ಮುಖತೆ ಹೆಚ್ಚಾಗುತ್ತದೆ.

೭ ಅ ೩. ಸಿಟ್ಟು ಮತ್ತು ಆಕ್ರಮಕ ವೃತ್ತಿಯು ಹೆಚ್ಚಾಗುವುದು : ಫರ್ಸ್ಟ ಪರ್ಸನ್ ಶೂಟರ ಆಟ ಅಥವಾ ಅದರಂತಹ ಹೊಡೆದಾಟದ ಆಟಗಳನ್ನು ಆಡುವುದರಿಂದ ಸಿಟ್ಟು ಮತ್ತು ಆಕ್ರಮಕ ವೃತ್ತಿ ಮುಂತಾದವುಗಳ ಮನಸ್ಸಿನಲ್ಲಿರುವ ಕೇಂದ್ರ ಮತ್ತು ಸಂಸ್ಕಾರಗಳು ಹೆಚ್ಚುತ್ತವೆ. ಅನೇಕ ಆಟಗಾರರು ಇರುವ ಆಟಗಳಲ್ಲಿ ಆಟಗಾರರು ಪರಸ್ಪರರಿಗೆ ಚುಚ್ಚಿ ಮಾತನಾಡುವುದು ಅಥವಾ ಬೇರೆಯವರ ಮನಸ್ಸು ನೋಯುವಂತೆ ಮಾತನಾಡುತ್ತಾರೆ. ಇದರಿಂದಲೂ ಸಿಟ್ಟಿನ ಕೇಂದ್ರವು ಬಲವಾಗುತ್ತದೆ.

೭ ಅ ೪. ಸ್ವಾರ್ಥವು ಹೆಚ್ಚಾಗುವುದು : ಈ ಆಟದಲ್ಲಿ ಧ್ಯೇಯ ಸಾಧ್ಯಗೊಳಿಸುವುದಕ್ಕೆ ಆಟಗಾರರು ಅಲ್ಪವಾಗಿಯೇ ಪರಸ್ಪರರಿಗೆ ಸಹಾಯ ಮಾಡುತ್ತಾರೆ. ಬಹುತೇಕ ಆಟಗಳಲ್ಲಿ ಪರಸ್ಪರರಲ್ಲಿ ಸ್ಪರ್ಧೆಯನ್ನೇ ಮಾಡಲಾಗುತ್ತದೆ. ಈ ಆಟದಲ್ಲಿ ಪರಸ್ಪರರ ಮೇಲೆ ದಾಳಿ ಮಾಡುವುದು, ಪರಸ್ಪರರ ವಸ್ತುಗಳನ್ನು ಕಳವು ಮಾಡುವುದು, ಹೀಗೆ ಆಗುತ್ತಿರುವುದರಿಂದ ಸ್ವಾರ್ಥದ ಸಂಸ್ಕಾರ ಪ್ರಬಲವಾಗುತ್ತವೆ. ಕೆಲವು ಸಲ ಒಂದು ಗುಂಪಿನಲ್ಲಿ ಕೆಲವು ಆಟಗಾರರು ಒಟ್ಟಿಗೆ ಆಡುತ್ತಾರೆ; ಆದರೆ ಅವರು ಬೇರೆ ಗುಂಪಿನ ಆಟಗಾರರ ಮೇಲೆ ದಾಳಿ ಮಾಡುತ್ತಾರೆ. ಆದುದರಿಂದ ಸ್ವಾರ್ಥವೃತ್ತಿ ಹಾಗೆಯೇ ಉಳಿಯುತ್ತದೆ.

೭ ಅ ೫. ಲೋಭ ಮತ್ತು ಮಾಯೆಯಲ್ಲಿನ ವಿಷಯಗಳ ಆಸಕ್ತಿ ಬೆಳೆಯುವುದು : ಹಣ ಗಳಿಸುವುದು, ದೊಡ್ಡ ಮನೆ ಕಟ್ಟುವುದು ಅಥವಾ ಹೊಲ ಗದ್ದೆಗಳನ್ನು ವಿಸ್ತರಿಸುವುದು ಇತ್ಯಾದಿ ಎಲ್ಲವೂ ಬಹುತೇಕ ಆಟಗಳ ಧ್ಯೇಯವಾಗಿರುತ್ತದೆ. ಆದುದರಿಂದ ಮನಸ್ಸಿನಲ್ಲಿಯ ಲೋಭದ ಸಂಸ್ಕಾರವು ಬೆಳೆಯುತ್ತದೆ ಮತ್ತು ಮಾಯೆಯಲ್ಲಿನ ವಸ್ತುಗಳ ಆಸಕ್ತಿಯೂ ಹೆಚ್ಚುತ್ತದೆ.

೮. ಗಣಕೀಯ ಆಟ ಇದು ನಾಲಿಗೆಗೆ ರುಚಿಕರವಾಗಿರುವ ವಿಷದಂತಿದ್ದು ಅಂತಿಮವಾಗಿ ಆ ವಿಷದಿಂದ ಶರೀರದ ನಾಶವಾಗುವುದು : ಯಾವುದೇ ದೋಷದ ಹೆಚ್ಚಳವು ದುಃಖಕ್ಕೆ ಕಾರಣವಾಗುತ್ತದೆ. ದೋಷಗಳಿಂದ ವ್ಯಕ್ತಿಯು ಇತರರಿಂದ ದೂರವಾಗುತ್ತಾನೆ ಅಥವಾ ಬೇರೆಯವರಿಗೆ ಅಪ್ರಿಯನಾಗುತ್ತಾನೆ, ಉದಾ. ಸ್ವಾರ್ಥಿ ವ್ಯಕ್ತಿಯು ಯಾರಿಗೂ ಇಷ್ಟವಾಗುವುದಿಲ್ಲ. ವ್ಯಕ್ತಿಯು ತನ್ನಲ್ಲಿನ ದೋಷಕ್ಕನುಸಾರ ವರ್ತಿಸುತ್ತಿದ್ದರೆ, ಅದರ ಪರಿಣಾಮದಿಂದ ಇತರ ವ್ಯಕ್ತಿಗಳಿಗೆ ನೋವಾಗುತ್ತದೆ. ಉದಾ. ಕೋಪಿಷ್ಟ ವ್ಯಕ್ತಿಯು ಕೆಲವರಿಗೆ ನೋವಾಗುವಂತೆ ಮಾತನಾಡುತ್ತಾನೆ. ಆದುದರಿಂದ ಈ ಆಟ ಕ್ಷಣಿಕ ಸುಖ ನೀಡಬಹುದು ಅಥವಾ ಒತ್ತಡ ಕಡಿಮೆ ಮಾಡುವುದೆಂದು ಎಂದೆನಿಸಿದರೂ, ಕಾಲಾಂತರದಲ್ಲಿ ಅದು ನಮ್ಮನ್ನು ದುಃಖದ ಕಡೆಗೆ ಒಯ್ಯುತ್ತದೆ. ಇದು ಒಂದು ಪ್ರಕಾರದ ರುಚಿಕರ ಅನಿಸುವ ವಿಷದಂತೆ ಇದ್ದು, ಕೊನೆಯಲ್ಲಿ ಆ ವಿಷವು ಶರೀರವನ್ನು ನಾಶವೇ ಮಾಡುತ್ತದೆ.

೯. ಜನರನ್ನು ಸತ್ಯದಿಂದ ದೂರ ಕೊಂಡೊಯ್ದು ಮಾಯಾವಿ ಸ್ಥಿತಿಯಲ್ಲಿ ಕಟ್ಟಿ ಇಡಲು ಕೆಟ್ಟ ಶಕ್ತಿಗಳು ಗಣಕೀಯ ಆಟಗಳ ನಿರ್ಮಾಣ ಮಾಡುವುದು : ಯಾವುದರಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತೊಂದರೆದಾಯಕ ಶಕ್ತಿ ಪ್ರಕ್ಷೇಪಿತವಾಗುತ್ತದೆ, ಹಾಗೆಯೇ ವ್ಯಕ್ತಿ ಮತ್ತು ಸಮಾಜದ ಹಾನಿಯನ್ನುಂಟು ಮಾಡಲು ಯಾವುದು ಕಾರ್ಯ ನಿರತವಾಗಿರುತ್ತದೆಯೊ, ಅದರ ನಿರ್ಮಿತಿಯು ಒಳ್ಳೆಯದರಿಂದಾಗಲು ಸಾಧ್ಯವೇ ಇಲ್ಲ. ಜನರಿಗೆ ಸತ್ಯ ಮತ್ತು ಜನ್ಮದ ನಿಜವಾದ ಉದ್ದೇಶದಿಂದ ದೂರ ಒಯ್ದು ಅವರನ್ನು ಮಾಯಾವಿ ಸ್ಥಿತಿಯಲ್ಲಿ ಸಿಲುಕಿಸಿ ಇಡಲು ಕೆಟ್ಟ ಶಕ್ತಿಗಳೇ ಅದನ್ನು ನಿರ್ಮಿಸಿರುತ್ತವೆ.

೧೦. ನಗುಮುಖವಿರುವ ಅಸುರಿ ಮುಖವಾಡಗಳು ಇದು ಆಟವನ್ನು ಸಿದ್ಧಗೊಳಿಸುವ ಸ್ಟೂಡಿಯೋದ ಸೂಚಕ ಗುರುತುಗಳಾಗಿರುವುದು ಮತ್ತು ಸಮಾಜಕ್ಕೆ ಮೋಸಗೊಳಿಸಿ ಇಚ್ಛಿತ ಪರಿಣಾಮಗಳನ್ನು ನೆರವೇರಿಸಿದ್ದರಿಂದ ಕೆಟ್ಟ ಶಕ್ತಿಗಳು ನಗುತ್ತ ಕಾಲದ ಲಕ್ಷಣಗಳನ್ನು ಸೂಚಿಸುತ್ತಿರುವಂತೆ ಅರಿವಾಗುವುದು : ಅನೇಕ ಆಟಗಳ ಕೊನೆಯಲ್ಲಿ ಆ ಆಟಗಳನ್ನು ನಿರ್ಮಿಸುವ ಸ್ಟೂಡಿಯೋದ ಸೂಚಕ ಗುರುತು (ಲೋಗೊ) ಇರುತ್ತದೆ. ಬಹುತೇಕ ಸ್ಟೂಡಿಯೋಗಳ ಸೂಚಕ ಗುರುಗಳು ಭೂತ ಅಥವಾ ಅಸುರಿ ಮುಖವಾಡಗಳಾಗಿರುವುದನ್ನು ಕಂಡು ನನಗೆ ಆಶ್ಚರ್ಯವಾಯಿತು. ಈ ಅಸುರಿ ಮುಖವಾಡಗಳು ನಗುತ್ತಿರುತ್ತವೆ. ಕೆಲವು ಸ್ಟೂಡಿಯೋಗಳ ಹೆಸರುಗಳೂ ಅಸುರಿಯಾಗಿರುತ್ತವೆ. ಕೆಟ್ಟ ಶಕ್ತಿಗಳು ಅವರಲ್ಲಿಯ ಗರ್ವ ಮತ್ತು ಉದ್ಧಟತನಗಳಿಂದ ಸಮಾಜಕ್ಕೆ ಮೋಸಗೊಳಿಸಿ ಇಚ್ಛಿತ ಪರಿಣಾಮಗಳನ್ನು ನೆರವೇರಿಸಿದ್ದರಿಂದ ನಕ್ಕು ಕಾಲದ (ಕೆಟ್ಟ) ಲಕ್ಷಣಗಳನ್ನು ಸೂಚಿಸುತ್ತವೆ, ಎಂಬ ಅರಿವು ನನಗಾಯಿತು.

– ಶ್ರೀ. ದೇಯಾನ ಗ್ಲೇಶ್ಚಿಚ್, ಯೂರೋಪ ( ೧೦.೧.೨೦೧೪)

Leave a Comment