ಬೃಹತ್ಪ್ರಮಾಣದಲ್ಲಿ ಗೋಹತ್ಯೆಯಾಗಲು ಬಹುರಾಷ್ಟ್ರೀಯ ಕಂಪನಿಗಳೇ ಕಾರಣ !

೧. ಹಿಂದೂಗಳೇ, ಈ ಮುಂದಿನ ಪ್ರಶ್ನೆಗಳ ಉತ್ತರ ನೋಡಿ !

೧ ಅ. ಹಿಂದೂಗಳ ಬಾಯಿಗೆ ಎಲುಬಿನ ಪುಡಿಯನ್ನು ಯಾರು ಹಾಕಿದರು ? : ಟೂಥ್ ಪೇಸ್ಟ್ ಕಂಪನಿಗಳು
೧ ಆ. ಹಿಂದೂಗಳ ಶರೀರಕ್ಕೆ ಗೋವಿನ ಕೊಬ್ಬನ್ನು ಯಾರು ಹಚ್ಚಿದರು ? : ಸಾಬೂನಿನ ಕಂಪನಿಗಳು
೧ ಇ. ಹಿಂದೂಗಳಿಗೆ ಹಸುವಿನ ರಕ್ತವನ್ನು ಯಾರು ಕುಡಿಸುತ್ತಿದ್ದಾರೆ ? : ಆಯರ್ನ್ ಟಾನಿಕ್ ತಯಾರಿಸುವ ಕಂಪನಿಗಳು
೧ ಈ. ಹಿಂದೂಗಳನ್ನು ಯಾರು ಧರ್ಮಭ್ರಷ್ಟರನ್ನಾಗಿ ಮಾಡುತ್ತಿದ್ದಾರೆ ? : ದೊಡ್ಡದೊಡ್ಡ ಬಹುರಾಷ್ಟ್ರೀಯ ಕಂಪನಿಗಳು
ಉ. ಗೋಹತ್ಯೆ ಮಾಡುವ ಬಹುರಾಷ್ಟ್ರೀಯ ಕಂಪನಿಗಳ ಕೃತ್ಯಗಳನ್ನು ಯಾರು ಮುಚ್ಚಿಡುತ್ತಾರೆ ? : ಅವರ ರಾಜಕೀಯ ದಲಾಲರು
೨. ಬ್ರಿಟೀಶರ ಕಾಲದಲ್ಲಾದ ಪ್ರಚಂಡ ಗೋಹತ್ಯೆ ಕಟುಕರಿಗೆ ಒಂದು ಹಸುವನ್ನು ಹತ್ಯೆಗೊಳಿಸಿದರೆ ೨ ಸಾವಿರ ರೂಪಾಯಿಗಳು ಸಿಗುತ್ತದೆ ಹಾಗೂ ಗೋಹತ್ಯೆ ಮಾಡುವ ಕಂಪನಿಗಳಿಗೆ ೬೦ ಸಾವಿರ ರೂಪಾಯಿಗಳಷ್ಟು ಲಾಭ ಸಿಗುತ್ತದೆ; ಆದರೆ ಇಂದು ಈ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಆಂದೋಲನವಂತೂ ಇಲ್ಲ; ಅದರ ವಿಷಯದಲ್ಲಿ ಒಂದು ಶಬ್ದ ಸಹ ಮಾತನಾಡುವುದಿಲ್ಲ. ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿ ತನ್ನ ಸೈನಿಕರಿಗಾಗಿ ಮುಸಲ್ಮಾನ ಕಟುಕರಿಂದ ಹಸುಗಳನ್ನು ಹತ್ಯೆ ಮಾಡಿಸಿಕೊಳ್ಳುತಿತ್ತು. ಭಾರತದಲ್ಲಿ ಮೊದಲ ಹಿಂದೂ-ಮುಸ್ಲಿಮ್ ಗಲಭೆ ಇದೇ ಕಾರಣದಿಂದ ಆಗಿತ್ತು. ಇದರಿಂದ ಈ ಕಂಪನಿಗೆ ‘ಹಿಂದೂ-ಮುಸ್ಲಿಮ್‌ರಲ್ಲಿ ಗಲಭೆಯೆಬ್ಬಿಸಿ ಮತ್ತು ಯಾವುದೇ ಅಡಚಣೆಯಿಲ್ಲದೆ ಗೋಹತ್ಯೆ ಮಾಡಬಹುದು, ಎಂಬ ಹೊಸ ಸಂಶೋಧನೆಯಾಗಿತ್ತು. ಮೋಹನದಾಸ ಗಾಂಧಿಯವರ ಅಭಿಪ್ರಾಯಕ್ಕನುಸಾರ ೧೯೧೭ ರಲ್ಲಿ ಪ್ರತಿದಿನ ೩೦ ಸಾವಿರ ಗೋವುಗಳನ್ನು ಹತ್ಯೆಗೊಳಿಸಲಾಗುತಿತ್ತು. ಇದರ ಹಿಂದಿನ ಬಹುರಾಷ್ಟ್ರೀಯ ಕಂಪನಿಗಳ ತಂತ್ರವನ್ನು ನಾವು ತಿಳಿದುಕೊಂಡರೆ ಮಾತ್ರ ನಮಗೆ ಅರಿವಾಗಬಹುದು. ಬಿಸ್ಕಿಟ್, ಚಾಕಲೇಟ್, ಕುರಕುರೆ, ನೂಡಲ್ಸ್ ಇತ್ಯಾದಿಗಳಲ್ಲಿ ಉಪಯೋಗಿಸುವ ೩೨೨, ೪೭೧, ೪೭೨, ೪೮೧ ಇಂತಹ ಹೆಸರಿನಲ್ಲಿ ಗೋಮಾಂಸವಿರುವ ಘಟಕಗಳನ್ನು ಉಪಯೋಗಿಸಲಾಗುತ್ತದೆ. ಆದರೂ ಹೊದಿಕೆಯಲ್ಲಿ ಹಸಿರು ವರ್ತುಲವನ್ನು ತೋರಿಸಿ (ಅಂದರೆ ‘ಅದು ಶಾಕಾಹಾರಿಯಾಗಿದೆ ಎಂದು ತೋರಿಸಿ) ಇಂತಹ ಪದಾರ್ಥಗಳನ್ನು ಹಿಂದೂಗಳಿಗೆ ತಿನಿಸಲಾಗುತ್ತದೆ.

೩. ಗೋಮಾತೆಯ ವಿನಾಶಕ್ಕೆ ಕಾರಣವಾಗಿರುವ ಘಟಕಗಳು !

ನಮ್ಮನ್ನು ಸ್ವಾವಲಂಬಿಗಳನ್ನಾಗಿಸುವ ಹಸುವಿನ ವಿನಾಶಕ್ಕೆ ರಾಸಾಯನಿಕ ಗೊಬ್ಬರ, ಕೀಟನಾಶಕಗಳು, ಸಂಕರಣಗೊಳಿಸಿದ ಬೀಜಗಳು, ತಂಪು ಪಾನೀಯಗಳು, ಜಂಕಫುಡ್ ಇತ್ಯಾದಿಗಳ ಮೂಲಕ ಕಾರಣ ವಾಗಿರುವ ಹಾಗೂ ನಮ್ಮನ್ನು ಗುಲಾಮರನ್ನಾಗಿಸುವ ಬಹುರಾಷ್ಟ್ರೀಯ ಕಂಪನಿಗಳಿಗೆ ಅವರ ಬೆಳವಣಿಗೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಾಗರಿಕರ ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡುವುದಕ್ಕೆ ‘ವಿಕಾಸವೆಂದು ಹೇಳಲಾಗುತ್ತದೆ. ಯಾವ ರಾಜ್ಯಗಳಲ್ಲಿ ಗೋಹತ್ಯಾನಿಷೇಧ ಕಾನೂನು ಇದೆಯೊ, ಅಲ್ಲಿ ಸಹ ಗೋಹತ್ಯೆ ಕಡಿಮೆಯಾಗಿಲ್ಲ. ದೊಡ್ಡ ಪ್ರಮಾಣದಲ್ಲಿ ಗೋಮಾಳಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಈ ಷಡ್ಯಂತ್ರವನ್ನು ನಾವು ತಿಳಿದುಕೊಳ್ಳಬೇಕು. (ಆಧಾರ : ಅಜ್ಞಾತ)