ಕೃಷ್ಣನೀತಿ ಬೇಕು !

ಶ್ರೀ. ಶರದ ಪೋಂಕ್ಷೆ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ೭೦ ವರ್ಷಗಳಾದರೂ, ಇಂದಿಗೂ ಕಾಶ್ಮೀರ ಸಮಸ್ಯೆ ಮುಗಿದಿಲ್ಲ. ಈ ಸಮಸ್ಯೆ ಮುಗಿಯದಿರುವುದಕ್ಕೆ ಅಧಿಕಾರದಲ್ಲಿದ್ದ ಎಲ್ಲ ರಾಜಕೀಯ ಪಕ್ಷಗಳ ರಾಜಕಾರಣಿಗಳ ದೃಢ ನಿಶ್ಚಯವಿಲ್ಲದ ವೃತ್ತಿಯೇ ಕಾರಣವಾಗಿದೆ. ಅಯೋಗ್ಯ ಶಿಕ್ಷಣ ಪದ್ಧತಿಯಿಂದಾಗಿ ಭಾರತೀಯರ ಮೇಲೆ ಅಹಿಂಸಾವಾದಿ ವೃತ್ತಿಯನ್ನು ಅಂಗೀಕರಿಸಲು ಒತ್ತಡ ಹೇರಲಾಯಿತು. ಇದರ ಪರಿಣಾಮವನ್ನು ಭಾರತೀಯರು ಹೇಗೆ ಭೋಗಿಸುತ್ತಿದ್ದಾರೆ ಮತ್ತು ಭಾರತಿಯರು ‘ಗೀತೆಯ ಬೋಧನೆಯನ್ನು ಅಂಗೀಕರಿಸುವುದು ಏಕೆ ಆವಶ್ಯಕವಾಗಿದೆ’, ಎಂಬುದರ ವಿವೇಚನೆಯನ್ನು ಈ ಲೇಖನದಲ್ಲಿ ನೀಡಲಾಗಿದೆ.

೧. ನಾವು ಆರೋಪಿಸುವ ವ್ಯಕ್ತಿಯ ದೃಷ್ಟಿಕೋನದಲ್ಲಿ ಪ್ರವೇಶಿಸದೇ, ಅವನನ್ನು ದೋಷಿಯೆಂದು ನಿರ್ಧರಿಸಲು ಪ್ರಯತ್ನಿಸಿದರೆ ಸಮಸ್ಯೆಗಳು ಪ್ರಾರಂಭವಾಗುತ್ತವೆ !

‘ಪಾಪವೋ ಅಥವಾ ಪುಣ್ಯವೋ’ ಇದನ್ನು ಯಾರು ಮತ್ತು ಹೇಗೆ ನಿರ್ಧರಿಸುವುದು ? ಏಕೆಂದರೆ ಯಾವನು ಅದನ್ನು ಮಾಡಿದ್ದಾನೆಯೋ, ಅವನ ಜಾಗದಲ್ಲಿ ನಿಂತುಕೊಂಡು ಅದರೆಡೆ ನೋಡಬೇಕು. ಅಲ್ಲಿ ನಿಂತುಕೊಳ್ಳದ ಹೊರತು ಇದು ತಿಳಿಯಲಾರದು. ಯಾವುದಾದರೊಂದು ನಿಯಮ ಎಲ್ಲ ಕಡೆಗೆ ಅನ್ವಯಿಸುವುದಿಲ್ಲ, ಉದಾ. ಬಂದೂಕಿನಿಂದ ಗುಂಡು ಹಾರಿಸಿ ಒಬ್ಬ ಮನುಷ್ಯನನ್ನು ಕೊಲ್ಲುವುದು. ಯಾವಾಗ ಈ ಕ್ರಿಯೆಯನ್ನು ಸಮಾಜದಲ್ಲಿ ಯಾವುದಾದರೊಬ್ಬ ವ್ಯಕ್ತಿಯನ್ನು ಕೊಲ್ಲಲು ಮಾಡಲಾಗುತ್ತದೆಯೋ, ಆಗ ಅದು ಪಾಪವಾಗುತ್ತದೆ; ಆದರೆ ಅದೇ ಕ್ರಿಯೆಯನ್ನು ಸೈನಿಕನು ಗಡಿಯಲ್ಲಿ ಮಾಡಿದರೆ, ಆಗ ಅದು ಪುಣ್ಯವಾಗುತ್ತದೆ. ನಮ್ಮ ದೃಷ್ಟಿಕೋನ ಎಂದಿಗೂ ಹೀಗಿರುವುದಿಲ್ಲ. ನಾವು ನಮ್ಮ ಜಾಗದಲ್ಲಿಯೇ ನಿಂತುಕೊಂಡು ಎದುರಿನವನ ಮೇಲೆ ಆರೋಪವನ್ನು ಹೊರಿಸಿ ಅವನನ್ನು ದೋಷಿಯೆಂದು ನಿಶ್ಚಯಿಸಿಬಿಡುತ್ತೇವೆ; ನಾವು ಪೃಥ್ವಿಯ ಮೇಲಿನಿಂದ ನೋಡಿದರೆ ಸೂರ್ಯ ಮತ್ತು ಗ್ರಹಗಳು ಕಾಣಿಸುತ್ತವೆ; ಆದರೆ ಅದನ್ನೇ ಚಂದ್ರನ ಮೇಲಿನಿಂದ ನೋಡಿದರೆ, ಅವು ಕಾಣಿಸುವುದಿಲ್ಲ, ಆದುದರಿಂದ ನೀವು ಎಲ್ಲಿ ನಿಂತುಕೊಂಡು ನೋಡುತ್ತಿರುವಿರಿ, ಎಂಬುದು ಮಹತ್ವದ್ದಾಗಿದೆ. ಆ ಜಾಗವು ತಪ್ಪಿದರೆ, ಸಮಸ್ಯೆಗಳು ಪ್ರಾರಂಭವಾಗುತ್ತವೆ.

೨. ಅರ್ಜುನನಿಗೆ ಕರ್ಣನ ಮೇಲೆ ಕರುಣೆ ಉಕ್ಕಿ ಬಂದಾಗ ಶ್ರೀಕೃಷ್ಣನು ಮಾಡಿದ ಉಪದೇಶ !

ನಿಜಹೇಳಬೇಕೆಂದರೆ ಎಲ್ಲರೂ ಭಗವದ್ಗೀತೆಯನ್ನು ಓದಬೇಕು, ಅದರಿಂದ ಎಲ್ಲದರ ಕಡೆಗೆ ನೋಡುವ ಒಳ್ಳೆಯ ದೃಷ್ಟಿಕೋನ ಸಿಗುತ್ತದೆ; ಆದರೆ ನಾವು ಅದನ್ನು ಮಾಡುವುದಿಲ್ಲ. ಯಾವಾಗ ಕರ್ಣನ ರಥದ ಚಕ್ರವು ನೆಲದಲ್ಲಿ ಸಿಕ್ಕಿಕೊಂಡಿತೋ, ಆಗ ಅರ್ಜುನನು ಕರ್ಣನೊಂದಿಗಿನ ಯುದ್ಧವನ್ನು ನಿಲ್ಲಿಸಿದನು. ಅವನು, ‘ಕರ್ಣನ ಮೇಲೆ ಹೇಗೆ ಆಕ್ರಮಣ ಮಾಡಲಿ ? ಇದು ಯುದ್ಧನೀತಿಗೆ ವಿರುದ್ಧವಾಗಿದೆ, ಎಂದು ಹೇಳಿದನು. ಆ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಏನು ಹೇಳಿದನೋ, ಅದು ಬಹಳ ಮಹತ್ವದ್ದಾಗಿದೆ. ಶ್ರೀಕೃಷ್ಣನು, ‘ಕರ್ಣನು ಯಾವಾಗ ಕೌರವರ ಪಕ್ಷದಲ್ಲಿ ಹೋರಾಡಲು ನಿಂತುಕೊಂಡನೋ, ಆಗಲೇ ಅವನನ್ನು ಕೊಲ್ಲುವ ನೈತಿಕತೆಯ ಮಾರ್ಗ ಕೊನೆಗೊಂಡಿತು; ಏಕೆಂದರೆ ಅವನು ಅಧರ್ಮದ ಪಕ್ಷ ವಹಿಸಿದನು ಮತ್ತು ಅಧರ್ಮವನ್ನು ಯಾವುದೇ ಮಾರ್ಗದಿಂದ ಕೊನೆಗಾಣಿಸುವುದೇ ನಿಜವಾದ ಧರ್ಮವಾಗಿದೆ, ಎಂದನು.

೩. ರಾಕ್ಷಸರಲ್ಲಿ ಮನುಷ್ಯತ್ವವನ್ನು ನಿರ್ಮಾಣ ಮಾಡುವ ಗಾಂಧಿಜಿಯವರ ನೀತಿಯಿಂದಾಗಿರುವ ಹಾನಿ !

೩ ಅ. ಭಾರತವು ಪಾಕಿಸ್ತಾನದೊಂದಿಗೆ ಯಾವ ನೈತಿಕತೆಯ ಮಾರ್ಗದಿಂದ ಹೋರಾಡುತ್ತಿದೆಯೋ, ಆ ಮಾರ್ಗವು ಯೋಗ್ಯವಾಗಿದೆಯೇ ? : ಧರ್ಮವೆಂದರೆ ‘ರಿಲಿಜನ್’ ಅಲ್ಲ. ಧರ್ಮವೆಂದರೆ ಜನ್ಮದಿಂದ ಯಾವ ಸದ್ಗುಣಗಳೊಂದಿಗೆ ಮನುಷ್ಯನು ಜನ್ಮಕ್ಕೆ ಬರುತ್ತಾನೆಯೋ ಮತ್ತು ಅದಕ್ಕನುಸಾರ ಕರ್ಮಗಳನ್ನು ಮಾಡುತ್ತಾನೆಯೋ, ಅದೆಂದರೆ ಧರ್ಮ. ಇಸ್ಲಾಮ್ ಹಾಗೂ ಕ್ರೈಸ್ತ ಇವು ಧರ್ಮಗಳಲ್ಲ, ಅವು ಧರ್ಮಸಂಸ್ಥೆಗಳಾಗಿವೆ; ಏಕೆಂದರೆ ಅವುಗಳನ್ನು ಯಾವುದಾದರೂ ದೇವದೂತ ಅಥವಾ ಸಂತರು ಸ್ಥಾಪಿಸಿದ್ದಾರೆ. ಅವುಗಳ ನಿಯಮಗಳನ್ನು ಮಾಡಿದ್ದಾರೆ; ನಿಜವಾದ ‘ಧರ್ಮ’ ವೆಂದರೆ ನಿಸರ್ಗ ನಿಯಮಕ್ಕನುಸಾರ ವರ್ತಿಸುವುದು; ಮನುಷ್ಯಪ್ರಾಣಿಯೊಂದನ್ನು ಬಿಟ್ಟು ಉಳಿದೆಲ್ಲ ಜೀವಸೃಷ್ಟಿಯು ನಿಸರ್ಗ ನಿಯಮಕ್ಕನುಸಾರವೇ ನಡೆದುಕೊಳ್ಳುತ್ತವೆ. ಇದನ್ನು ಬರೆಯುವ ಉದ್ದೇಶವೇನೆಂದರೆ ನಾವು ಪಾಕಿಸ್ತಾನದೊಂದಿಗೆ ಕಳೆದ ೭೦ ವರ್ಷಗಳಿಂದ ನೈತಿಕತೆಯ ಮಾರ್ಗದಿಂದ ಹೋರಾಡುತ್ತಿದ್ದೇವೆ, ಈ ಮಾರ್ಗವು ನಿಜವಾಗಿಯೂ ಯೋಗ್ಯವಾಗಿದೆಯೇ ?

೩ ಆ. ಭಾರತದ ಅಹಿಂಸಾತ್ಮಕ ಧೋರಣೆಯಿಂದಾಗಿ ಪಾಕಿಸ್ತಾನಕ್ಕೆ ಅನುಕೂಲವಾಗಿದೆ ! : ಎದುರಿನ ವ್ಯಕ್ತಿಯ ಮನಸ್ಸಿನಲ್ಲಿ ಉತ್ತಮ ಮನುಷ್ಯನನ್ನು ಜಾಗೃತಗೊಳಿಸುವುದೆಂದರೆ, ಅವನಲ್ಲಿನ ರಾಕ್ಷಸಿ ವೃತ್ತಿಯ ಬಗ್ಗೆ ಅವನಿಗೆ ಅರಿವಾಗುವವರೆಗೆ ಕಾಯುವುದು. ಗಾಂಧಿಜಿಯವರ ಪರಾಕಾಷ್ಠೆಯ ಅಹಿಂಸಾ ಧರ್ಮವು ಇದನ್ನೇ ಹೇಳುತ್ತದೆ. ಈ ಅಹಿಂಸಾ ಧರ್ಮಕ್ಕನುಸಾರ ನಡೆದುಕೊಳ್ಳಲು ನಿರ್ಧರಿಸಿದರೆ ಕೆಟ್ಟ ವ್ಯಕ್ತಿಯಲ್ಲಿನ ರಾಕ್ಷಸಿವೃತ್ತಿಯ ಬಗ್ಗೆ ಅವನಿಗೆ ಅರಿವಾಗುವ ತನಕ ಲಕ್ಷಗಟ್ಟಲೇಯುವಕರನ್ನು ಅದರ ಬದಲಿಗೆ ಬಲಿ ಕೊಡುವುದು. ಇದೆಂತಹ ಅಹಿಂಸೆ ? ಅವನು ರಾಕ್ಷಸನೇ ! ನೀವು ಏನಾದರೂ ಮಾಡಿ ! ನಮ್ಮ ಅಹಿಂಸಾತ್ಮಕ ನಿಲುವಿನಿಂದಾಗಿ ಅವನು ಬಯಸಿದ್ದು ಅನಾಯಾಸ ಪೂರ್ಣವಾಗುತ್ತಿದೆ. ಈಗ ಅವನಲ್ಲಿನ ರಾಕ್ಷಸನು ನಾಶವಾಗುವುದಕ್ಕಿಂತ ಇನ್ನಷ್ಟು ಉನ್ಮತ್ತನಾಗುತ್ತಿದ್ದಾನೆ.

೩ ಇ. ರಾಕ್ಷಸನಿಗೆ ಕಠೋರ ಶಿಕ್ಷೆ ಮಾಡಿದರೆ ಮಾತ್ರ, ಲಕ್ಷಗಟ್ಟಲೇ ಜೀವಗಳು ಉಳಿಯುತ್ತವೆ ! : ‘ಅಹಿಂಸಾ ಪರಮೋ ಧರ್ಮಃ | ಎಂಬ ಶ್ಲೋಕವು ಇಲ್ಲಿಯೇ ಮುಗಿಯುವುದಿಲ್ಲ. ಅದರ ಮುಂದಿನ ನುಡಿಯು ‘ಧರ್ಮ ಹಿಂಸಾ ತಥೈವ ಚಃ |’ ಅಂದರೆ ಅಹಿಂಸೆಯು ಎಲ್ಲಕ್ಕಿಂತ ದೊಡ್ಡ ಧರ್ಮವಾಗಿದೆ; ಆದರೆ ಧರ್ಮದ ರಕ್ಷಣೆಗಾಗಿ ಹಿಂಸೆಯನ್ನು ಮಾಡುವುದು, ಅದಕ್ಕಿಂತಲೂ ಶ್ರೇಷ್ಠ ಧರ್ಮವಾಗಿದೆ. ರಾಕ್ಷಸನು ರಾಕ್ಷಸನೇ ಆಗಿರುತ್ತಾನೆ. ಅವನಲ್ಲಿನ ರಾಕ್ಷಸನನ್ನು ನಾಶಮಾಡುವುದಿದ್ದರೆ, ಅವನಿಗೆ ಕಠೋರ ಶಿಕ್ಷೆಯನ್ನೇ ಕೊಡಬೇಕಾಗುತ್ತದೆ, ಹೀಗೆ ಮಾಡಿದರೆ ಮಾತ್ರ ಅವನು ಸುಧಾರಿಸುತ್ತಾನೆ ಮತ್ತು ಸಮಾಜದಲ್ಲಿನ ಲಕ್ಷಗಟ್ಟಲೆ ಜೀವಗಳು ಉಳಿಯುತ್ತವೆ ಎಂದು ಶ್ರೀಕೃಷ್ಣನೇ ಹೇಳಿದ್ದಾನೆ. ಶ್ರೀಕೃಷ್ಣನು ಯಾವ ಭೂಮಿಯಲ್ಲಿ ಜನ್ಮತಾಳಿದನೋ, ಅದೇ ಭೂಮಿಯಲ್ಲಿ ಅವನ ವಿಚಾರಗಳ ಆಚರಣೆಯಾಗಬಾರದೆಂದರೆ, ಇದು ದುರ್ದೈವದ ಸಂಗತಿಯಾಗಿದೆ. ‘ರಘುಪತಿ ರಾಘವ ರಾಜಾರಾಮ’ ಎಂಬ ಭಜನೆಯನ್ನು ಹೇಳುವವರು ರಾಮಾಯಣವನ್ನು ಸರಿಯಾಗಿ ಓದಲೇ ಇಲ್ಲ; ಏಕೆಂದರೆ ರಾಮನು ಸಹ ಶಸ್ತ್ರವನ್ನು ಎತ್ತಿಕೊಂಡಿದ್ದನು ಮತ್ತು ರಾವಣನೆಂಬ ರಾಕ್ಷಸನ ಸಂಹಾರ ಮಾಡಿದ್ದನು.

೪. ಭಾರತೀಯರು ಸಾಮರ್ಥ್ಯಶಾಲಿಗಳಾದರೆ,ಮಾತ್ರ ಭಾರತಮಾತೆಯು ಪುನಃ ಅಭಿಮಾನದಿಂದ, ಗೌರವದಿಂದ ಎದ್ದು ನಿಲ್ಲುವಳು !

೪ ಅ. ಚುನಾವಣೆಯ ಮೊದಲು ಆಕ್ರಮಕ ನಿಲುವನ್ನು ತಾಳುವೆವು ಎಂದು ಆಶ್ವಾಸನೆಯನ್ನು ನೀಡುವ ರಾಜಕಾರಣಿಗಳು ಅನಂತರ ಆರಿಸಿ ಬಂದಾಗ ಅದನ್ನು ಮರೆಯುತ್ತಾರೆ ! : ನಾವು ಆಕ್ರಮಕರಾದರೆ, ನಮಗೆ ಅಂತರಾಷ್ಟ್ರೀಯ ಜಗತ್ತಿನ ಗುಮ್ಮನನ್ನು ಏಕೆ ತೋರಿಸಲಾಗುತ್ತದೆ ? ಅಮೇರಿಕಾ ಏಕೆ ವಿಚಾರ ಮಾಡುವುದಿಲ್ಲ ? ಚೀನಾ, ಜಪಾನ್, ಇಸ್ರೇಲ್ ಈ ರಾಷ್ಟ್ರಗಳು ಅಂತರಾಷ್ಟ್ರೀಯ ಜಗತ್ತಿನ ವಿಚಾರ ಮಾಡುತ್ತವೆಯೇ ? ಅವು ಏಕೆ ತಕ್ಷಣ ಹೋರಾಡಲು ಸಿದ್ಧವಾಗುತ್ತವೆ ? ಅವರಿಗೆ ಹೆದರಿಕೆ ಆಗುವುದಿಲ್ಲವೇನು ? ಮತ್ತು ಇದು ಕಾರಣವಾಗಿದ್ದರೆ, ಆರಿಸಿ ಬರುವ ಮೊದಲು ವಚನ, ಆಶ್ವಾಸನೆಗಳನ್ನು ನೀಡುವಾಗ ಇದರ ಬಗ್ಗೆ ರಾಜಕಾರಣಿಗಳು ಅಭ್ಯಾಸ ಮಾಡುವುದಿಲ್ಲವೇ ? ಅಭ್ಯಾಸ ಮಾಡದೇ ಮಾತನಾಡುತ್ತಿದ್ದಲ್ಲಿ ಅವರಿಗೆ ‘ಬಾಲಿಶ ರಾಜಕಾರಣಿಗಳು’ ಎಂದು ಹೇಳಬೇಕಾಗುತ್ತದೆ ಮತ್ತು ಈ ವಿಷಯ ಗೊತ್ತಿದ್ದರೂ ಮಾತನಾಡುತ್ತಿದ್ದರೆ, ಅವರಿಗೆ ‘ಸ್ವಾರ್ಥಿ ರಾಜಕಾರಣಿಗಳು’ ಎಂದು ಹೇಳಬೇಕು ಮತ್ತು ಗೊತ್ತಿದ್ದೂಹೆದರಿ ಏನೂ ಮಾಡದಿದ್ದರೆ, ಆಗ ಅವರನ್ನು ‘…ರಾಜಕಾರಣಿಗಳು’ ಎಂದು ಹೇಳಬೇಕಾಗುತ್ತದೆ.

೪ ಆ. ಮುಂದಿನ ಪೀಳಿಗೆಗಳಿಗೆ ಅನುಕೂಲವಾಗಲೆಂದು ನೆಹರೂರವರು ಕಾಶ್ಮೀರ ಸಮಸ್ಯೆಯನ್ನು ಏಕೆ ನೆನಗುದಿಯಲ್ಲಿಟ್ಟಿರಬಾರದು? : ೭೦ ವರ್ಷಗಳ ಕಾಲ ಏನೂ ಆಗಲಿಲ್ಲ. ನೆಹರೂರವರು ಬೇಕೆಂದೇ ಭವಿಷ್ಯದಲ್ಲಿನ ಪೀಳಿಗೆಗಳಿಗೆ ಅನುಕೂಲವಾಗಲು ಕಾಶ್ಮೀರದ ಸಮಸ್ಯೆಯನ್ನು ಹಾಗೆಯೇ ಏಕೆ ನೆನೆಗುದಿಯಲ್ಲಿಟ್ಟಿರಬಾರದು ? ಕೇವಲ ಸಂಶಯ ಬಂದಿತು; ಏಕೆಂದರೆ ಈಗ ಏನು ಘಟಿಸುತ್ತಿದೆಯೋ, ಅದೆಲ್ಲವೂ ಭಯಂಕರವಾಗಿದೆ ಮತ್ತು ದೇಶವು ಭ್ರಷ್ಟಾಚಾರದಿಂದ ಎಷ್ಟು ಟೊಳ್ಳಾಗಿದೆ ಎಂದರೆ ಅದನ್ನು ಕೇಳಲೇಬಾರದು. ‘ಒಂದು ರೂಪಾಯಿಯನ್ನು ಎಂದಿಗೂ ತೆಗೆದುಕೊಂಡಿಲ್ಲ (ಭ್ರಷ್ಟಾಚಾರ ಮಾಡಿಲ್ಲ)’, ಎಂಬಂತಹ ರಾಜಕೀಯ ನೇತಾರರು ಸಿಗುವುದು ಮಹಾಕಠಿಣ; ಆದುದರಿಂದ ಇಂತಹ ವಿಚಾರಗಳು ಬರುತ್ತವೆ. ಹಾಗೆ ಇರಲಿಕ್ಕೂ ಇಲ್ಲ; ಆದರೆ ಹಾಗೆ ವಿಚಾರಗಳು ಬರುತ್ತವೆ. ಕೆಲವೊಮ್ಮೆ ಏನಾಗುವುದಿದೆ ಒಮ್ಮೆ ಆಗಿ ಹೋಗಲಿ ಎಂದು ಅನಿಸುತ್ತದೆ. ನಾವು ಇದೆಂತಹ ಭೀಕರ ಜೀವನವನ್ನು ಜೀವಿಸುತ್ತಿದ್ದೇವೆ. ಹೆಚ್ಚೆಂದರೆ ನಾವು ಅದರಲ್ಲಿ ಸಾಯಬಹುದು ! ನಂತರ ಯಾರು ಉಳಿಯುತ್ತಾರೆಯೋ, ಅವರಾದರೂ ಸುಖವಾಗಿ ಜೀವಿಸಬಹುದು.

೪ ಇ. ಭಾರತವು ಪಾಕ್‌ನೊಂದಿಗೆ ಯುದ್ಧವನ್ನು ಘೋಷಿಸಿದರೆ ‘ಇತರ ದೇಶಗಳೂ ಯುದ್ಧದಲ್ಲಿ ಸೇರಿಕೊಳ್ಳಬಹುದು’, ಎಂಬ ಭಯ ಅನಾವಶ್ಯಕ ! : ನಮ್ಮ ಯುದ್ಧ ಪ್ರಾರಂಭವಾದರೆ, ಎಲ್ಲ ದೇಶಗಳು ಅದರಲ್ಲಿ ಸೇರಿಕೊಳ್ಳಬಹುದು ಎಂಬ ಭಯ ಸತತವಾಗಿರುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಅಮೇರಿಕಾ ಮತ್ತು ಇರಾನ್; ಅಮೇರಿಕಾ ಮತ್ತು ಇರಾಕ್; ಅಮೇರಿಕಾ ಮತ್ತು ವಿಯತನಾಮ್ ಹೀಗೆ ಯುದ್ಧಗಳು ನಡೆಯುತ್ತಲೇ ಇವೆಯಲ್ಲ ! ಆಗ ಉಳಿದ ದೇಶಗಳು ಏಕೆ ಯುದ್ಧದಲ್ಲಿ ಭಾಗವಹಿಸಲಿಲ್ಲ ? ಭಾರತವು ಸತತವಾಗಿ ಕೇವಲ ಎಚ್ಚರಿಕೆಯನ್ನು ನೀಡುತ್ತಿದೆ. ‘ಕೊನೆಯ ಎಚ್ಚರಿಕೆಯನ್ನು ಯಾವಾಗ ನೀಡುವುದು ?’, ಅದನ್ನು ಒಂದು ಬಾರಿ ನಿರ್ಧರಿಸಿರಿ. ಕೊನೆಯ ಎಚ್ಚರಿಕೆಯ ‘ಸೆಂಚುರಿ’ ಆಗಿ ಹೋಗಿದೆ. ‘ಸಹಿಸುವುದಿಲ್ಲ’, ಎನ್ನುತ್ತಾ ೭೦ ವರ್ಷಗಳವರೆಗೆ ಸಹನೆಯನ್ನು ಮಾಡುತ್ತಿದ್ದೇವೆ. ಅಮೇರಿಕಾವು ಪಾಕಿಸ್ತಾನದಲ್ಲಿ ನುಗ್ಗಿ ಲಾಡೆನ್‌ನನ್ನು ಸಾಯಿಸಿತು. ಸದ್ದಾಮ್‌ನನ್ನೂ ಮುಗಿಸಿತು. ನಾವು ಮಾತ್ರ ಸುಮ್ಮನೇ ಕುಳಿತುಕೊಂಡಿದ್ದೇವೆ. ಇದು ನಿಲ್ಲಬೇಕು. ಸಾಮಾನ್ಯವಾಗಿ ಮನುಷ್ಯನು ಈಗ ಸಾಮರ್ಥ್ಯಶಾಲಿಯಾಗಬೇಕು. ಆಗಲೇ ಭಾರತ ಮಾತೆಯು ಮತ್ತೊಮ್ಮೆಅಭಿಮಾನದಿಂದ, ಗೌರವದಿಂದ ಎದ್ದು ನಿಲ್ಲುವಳು. ಇಲ್ಲವಾದರೆ ಅವಳು ವಿಕಲಾಂಗವಾಗಿಯೇ ಇದ್ದಾಳೆ. ‘ಅವಳ ಸ್ಥಿತಿ ಇನ್ನೂ ಏನು ಆಗಬೇಕು ?’, ಇದರ ವಿಚಾರ ಮಾಡದೇ ಇರುವುದೇ ಒಳ್ಳೆಯದು.’ – ಶ್ರೀ. ಶರದ ಪೋಂಕ್ಷೆ, ಚಿತ್ರನಟ ಮತ್ತು ಹಿಂದುತ್ವನಿಷ್ಠರು