ಬುದ್ಧಿದಾತನೇ ಸಂಕಟವನ್ನು ದೂರಗೊಳಿಸು !

ಈ ವರ್ಷ (೨೦೧೯) ಸಪ್ಟೆಂಬರ ೨ ರಂದು ಶ್ರೀ ಗಣೇಶಚತುರ್ಥಿ ಇದೆ. ಮನೆಮನೆಗಳಲ್ಲಿ ಶ್ರೀ ಗಣೇಶನ ಆಗಮನವಾಗುವುದು. ಪ್ರತಿಯೊಬ್ಬರೂ ತಮ್ಮ ತಮ್ಮ ಭಾವಕ್ಕನುಸಾರ ಪೂಜೆಯನ್ನು ಸಲ್ಲಿಸುವರು. ತಮ್ಮ ಇಚ್ಛೆಗಳನ್ನು ಈಡೇರಿಸಲೆಂದು ಈಶ್ವರನ ಮುಂದೆ ಕೈಮುಗಿದು ಪ್ರಾರ್ಥನೆ ಮಾಡುವುದು, ಇದು ಹಿಂದೂಗಳ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ‘ಶ್ರದ್ಧೆಯಿಂದ ಮಾಡಿದ ಪ್ರಾರ್ಥನೆ ಈಶ್ವರನು ಈಡೇರಿಸುತ್ತಾನ’ ಎಂಬ ಅನುಭೂತಿಯನ್ನು ಸಾವಿರಾರು ವರ್ಷಗಳಿಂದ ಪ್ರತಿಯೊಬ್ಬ ಹಿಂದೂವು ಅನುಭವಿಸುತ್ತ ಬಂದಿದ್ದಾನೆ. ಶ್ರೀ ಗಣೇಶನು ಪ್ರತಿವರ್ಷ ಮನೆಮನೆಯಲ್ಲಿ ಆಗಮಿಸಿ ಆನಂದವನ್ನು ನೀಡುವವನಾಗಿದ್ದಾನೆ. ಇಂತಹ ಸಮಯದಲ್ಲಿ ತಮ್ಮ ವೈಯಕ್ತಿಕ ಇಚ್ಛೆಗಳನ್ನು ವ್ಯಕ್ತಪಡಿಸುವುದರೊಂದಿಗೆ ಘೋರ ಸಂಕಟದಲ್ಲಿ ಸಿಲುಕಿದ ಹಿಂದೂ ಸಮಾಜವನ್ನೂ ಸಂಕಟದಿಂದ ಪಾರು ಮಾಡಬೇಕೆಂದು ಪ್ರಾರ್ಥನೆ ಮಾಡುವುದು ಕಾಲಾನುಸಾರ ನಿಜವಾದ ಗಣೇಶಭಕ್ತಿಯಾಗಿದೆ !

ಬುದ್ಧಿವಾದದ ಸಂಕಟ !

ಶ್ರೀ ಗಣೇಶನು ಬುದ್ಧಿದಾತನಾಗಿದ್ದಾನೆ. ಶುಭಕಾರ್ಯದ ಆರಂಭದಲ್ಲಿ ಯಾವ ರೀತಿ ಗಣೇಶಪೂಜೆಯನ್ನು ಮಾಡಲಾಗುತ್ತದೆಯೋ, ಅದೇರೀತಿ ವಿದ್ಯಾಭ್ಯಾಸದ ಆರಂಭದಲ್ಲಿಯೂ ಬುದ್ಧಿದಾತ ಗಣೇಶನ ಪೂಜೆ ಮಾಡಲಾಗುತ್ತದೆ. ಶ್ರೀ ಗಣೇಶನ ಅನೇಕ ಕಾರ್ಯವೈಶಿಷ್ಟ್ಯಗಳಿದ್ದರೂ ‘ಬುದ್ಧಿದಾತಾ’ ಎಂದು ಕರೆಯಲು ಕಾರಣವೆಂದರೆ ಇಂದು ರಾಷ್ಟ್ರ ಮತ್ತು ಧರ್ಮ ಇವುಗಳ ಮೇಲೆ ಬುದ್ಧಿಜೀವಿಗಳ ಮತ್ತು ಬುದ್ಧಿಯ ಅಹಂಕಾರ ತುಂಬಿರುವ (ಅ)ವಿಚಾರವಂತರಿಂದ ಸಂಕಟ ನಿರ್ಮಾಣವಾಗಿದೆ. ಪ್ರಗತಿಪರರೆಂದು ಹೇಳಿಕೊಳ್ಳುವ ಈ ಸಮೂಹವು ಹಿಂದೂಗಳ ಸಾವಿರಾರು ವರ್ಷಗಳಿಂದ ನಡೆದುಬಂದ ಶ್ರದ್ಧೆಗಳ ಮೇಲೆ ಆಘಾತವನ್ನುಂಟು ಮಾಡಲು ಆಕಾಶ-ಪಾತಾಳ ಒಂದು ಮಾಡುತ್ತಿದೆ. ಅದಕ್ಕೆ ವೈಜ್ಞಾನಿಕ ಅರಿವುಗಳ ‘ಲೇಬಲ್’ ಹಚ್ಚಿ ಹಿಂದೂಗಳಿಗೆ ‘ಅವೈಜ್ಞಾನಿಕರು’ ಅಥವಾ ‘ವಿಜ್ಞಾನವಿರೋಧಿ’ಗಳು ಎಂದು ನಿರ್ಧರಿಸಲಾಗುತ್ತಿದೆ. ವಿದೇಶಿಯರನ್ನು ವೈಭವೀಕರಿಸಿ ‘ಹಿಂದೂ ಧರ್ಮ ಮತ್ತು ಆ ಮೂಲಕ ಹಿಂದೂಗಳ ದೇಶವಾಗಿರುವ ಭಾರತವು ಅದೆಷ್ಟು ಹಿಂದುಳಿದಿದೆ ಮತ್ತು ಕೊಳೆತಿದೆ’, ಎಂಬುವುದನ್ನು ಭಾರತೀಯರ ಮೇಲೆ ಹೇರಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಹಿಂದೂಗಳ ಹಬ್ಬಗಳು ಬರುತ್ತಿದ್ದಂತೆಯೆ, ಈ ಬುದ್ಧಿಜೀವಿಗಳಿಗೆ ಹುರುಪು ಬರುತ್ತದೆ. ಗಣೇಶೋತ್ಸವದಲ್ಲೂ ‘ನದಿಗಳಲ್ಲಿ ಮಾಲಿನ್ಯವಾಗುತ್ತದೆ’ ಎಂದು ಸುಳ್ಳು ಹೇಳಿ ಮೂರ್ತಿದಾನ ಮಾಡುವ ಧರ್ಮವಿರೋಧಿ ಕೃತಿ ಮಾಡಲು ಒತ್ತಾಯಿಸುವುದು, ಗಿಡಗಳ ಬೀಜಗಳಿಂದ ಮೂರ್ತಿ ಮಾಡಿ ವಿಸರ್ಜನೆಯ ನಂತರ ಅದರಿಂದ ಸಸಿಗಳು ಬೆಳೆಯುತ್ತವೆ, ಎಂಬ ವ್ಯವಸ್ಥೆ ಮಾಡುವುದು, ನೀರಿನ ಟ್ಯಾಂಕರ್‌ನಲ್ಲಿ ವಿಸರ್ಜನೆ ಮಾಡಿ ಎನ್ನುವುದು, ಬೇಳೆ, ಬಿಸ್ಕಿಟ್, ವೈದ್ಯಕೀಯ ಕಸ (ಉದಾ. ಖಾಲಿ ಸಲಾಯಿನ್ ಬಾಟಲಿ, ಸಿರಿಂಜ್) ಮುಂತಾದವುಗಳಿಂದ ಶ್ರೀ ಗಣೇಶನ ಮೂರ್ತಿ ಸಿದ್ಧಪಡಿಸುವುದು, ಹೀಗೆ ಹಿಂದೂಗಳ ಬುದ್ಧಿಭೇದ ಮಾಡುವ ವಿಧಗಳು ಕಳೆದ ಕೆಲವು ಸಮಯದಿಂದ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿದೆ.

ಹಿಂದೂಗಳ ಎಲ್ಲ ಹಬ್ಬಗಳಲ್ಲಿ ಇಂತಹ ಧರ್ಮವಿರೋಧಿ ತಪ್ಪು ಆಚರಣೆಗಳು ನಡೆಯುತ್ತಿರುತ್ತವೆ. ಇದು ಈಗ ಕೇವಲ ಹಬ್ಬ-ಸಮಾರಂಭಗಳಿಗೆ ಮಾತ್ರ ಸೀಮಿತವಾಗಿರದೇ ಈ ಬುದ್ಧಿಭೇದವು ಈಗ ವರ್ಷವಿಡಿ ನಡೆಯುತ್ತಿರುತ್ತದೆ. ಇಂದು ಸಾಮಾಜಿಕ ವಾತಾವರಣವು ಎಷ್ಟು ಧರ್ಮವಿರೋಧಿಯಾಗಿದೆ ಎಂದರೆ, ಯಾರಾದರು ಕೇವಲ ಕುಂಕುಮ ತಿಲಕವನ್ನು ಹಚ್ಚಿದರೂ, ಅವನು ‘ಕಟ್ಟರ ಹಿಂದೂ’ ಎಂದು ನಿರ್ಧರಿಸಲಾಗುತ್ತದೆ. ಯಾವುದೇ ಕಾರಣವಿಲ್ಲದಿರುವಾಗ ದೊಡ್ಡ ಹಿಂದೂ ವಿರೋಧಿ ಷಡ್ಯಂತ್ರವನ್ನು ರಚಿಸಲಾಗುತ್ತಿದೆ. ಈ ನಡುವೆ ಹಿಂದೂಗಳಿಗೆ ಭಯೋತ್ಪಾದನೆಯಂತಹ ಅಪರಾಧಗಳಲ್ಲಿ ಸಿಲುಕಿಸಿ ‘ಕೇಸರಿ ಭಯೋತ್ಪಾದನೆ’ಯನ್ನು ಸಿದ್ಧಗೊಳಿಸಲು ಪ್ರಯತ್ನಿಸಲಾಯಿತು. ಪ್ರಸಾರ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಇವುಗಳಿಂದ ಹಿಂದೂಗಳು ಕಟ್ಟರವಾದಿಗಳು ಹೇಗೆ ಸಿದ್ಧವಾಗುತ್ತಿದ್ದಾರೆ ಮತ್ತು ಅವರು ಜಾತ್ಯತೀತರು ಅಂದರೆ (ನಮ್ಮ ಭಾಷೆಯಲ್ಲಿ ಷಂಡರು) ಆಗಬೇಕು, ಎಂಬ ಕುರಿತು ಉಪದೇಶವನ್ನು ನೀಡಲಾಗುತ್ತಿದೆ. ಅದರೊಂದಿಗೆ ವಿದೇಶಿಯರ ತಿನ್ನುವುದು-ಕುಡಿಯುವುದು-ವಿಹರಿಸುವುದು ಇವುಗಳ ಬಗ್ಗೆ ರಸವತ್ತಾದ ವರ್ಣನೆ ಮಾಡಿ ಹಿಂದೂಗಳು ಯಾವ ರೀತಿ ಹಳೆಯ ಪದ್ಧತಿಯವರಾಗಿದ್ದಾರೆ, ಎಂಬ ಕುರಿತು ‘ಬ್ರೈನ್‌ವಾಶ್’ ಮಾಡಲಾಗುತ್ತಿದೆ. ಈಗ ಹಿಂದೂಗಳ ಬುದ್ಧಿಯ ಎಲ್ಲೆಡೆ ಸತ್ವಪರೀಕ್ಷೆ ಮಾಡಲಾಗುತ್ತಿದೆ. ಹಿಂದೂ ಧರ್ಮವನ್ನು ಮುಗಿಸುವ ಜಾತ್ಯತೀತರ ಮತ್ತು ಪ್ರಗತಿಪರರ ತೆರೆಮರೆಯ ಷಡ್ಯಂತ್ರವನ್ನು ಸೋಲಿಸಲು ಹಿಂದೂಗಳಿಗೆ ವೈಚಾರಿಕ ಮಟ್ಟದಲ್ಲಿ ದೊಡ್ಡ ಹೋರಾಟ ಮಾಡಬೇಕಾಗುತ್ತಿದೆ.

ಹಿಂದಿನ ಕಾಲದಲ್ಲಿ ಶಾರೀರಿಕ ಸ್ತರದ ಯುದ್ಧಗಳು ನಡೆಯುತ್ತಿದ್ದವು. ಈಗ ಕಾಲಾನುಸಾರ ಅದರ ಸ್ವರೂಪ ಬದಲಾಗಿದೆ. ಈಗ ಧರ್ಮ-ಅಧರ್ಮಗಳಲ್ಲಿನ ಹೋರಾಟವು ವೈಚಾರಿಕ ಹಾಗೂ ಬೌದ್ಧಿಕ ಸ್ತರದಲ್ಲಿ ಬಂದಿದೆ. ಇದು ಛಾಯಾ ಸಮರ (shadow war). ಶತ್ರುವು ಶಸ್ತ್ರಗಳನ್ನ ಹಿಡಿದು ಬಂದರೆ ‘ಅವನು ಶತ್ರು, ಅವನಿಂದ ದೂರ ಇರಬೇಕು’ ಎಂಬುದು ಗಮನಕ್ಕಾದರೂ ಬರುತ್ತದೆ. ಸಿಹಿ ಮಾತು, ಮೋಸ ಮಾಡುವ ಉದಾಹರಣೆ, ಆಧುನಿಕತೆಯ ಮುಸುಕು ಹೊದ್ದ ಮತ್ತು ಇಲ್ಲದಿರುವ ರಾಷ್ಟ್ರಭಕ್ತಿಯ ಕಳವಳ ಮಾಡಿದರೆ, ‘ಸಾಮಾನ್ಯ ಹಿಂದುವು ಸಹಜವಾಗಿ ಬಲೆಯಲ್ಲಿ ಸಿಲುಕುತ್ತಾನೆ’, ಎಂಬುದನ್ನು ಬೌದ್ಧಿಕ ಆಕ್ರಮಕರು ಗುರುತಿಸಿದ್ದಾರೆ. ಆದುದರಿಂದ ವ್ಯವಸ್ಥೆಯ ವಿರುದ್ಧ ಹೋರಾಡುವ ನೆಪದಲ್ಲಿ ನಕ್ಸಲವಾದವನ್ನು ಪೋಷಿಸುವುದು, ಅದನ್ನು ಬೆಂಬಲಿಸುವವರಿಗೆ ‘ವಿಚಾರವಂತರು’ ಎಂದು ಸಾಮಾಜಿಕ ಸಹಾನುಭೂತಿ ತೋರಿಸುವುದು, ಭಯೋತ್ಪಾದಕರನ್ನು ಕೊಂಡಾಡುವುದು, ಅವರ ಪರಿವಾರದವರನ್ನು ಭೇಟಿಯಾಗಿ ಆರ್ಥಿಕ ಸಹಾಯ ನೀಡುವುದು ಮುಂತಾದವುಗಳೂ ಈಗ ನಡೆಯುತ್ತಿವೆ. ಇದರ ವಿರುದ್ಧ ಮಾತನಾಡಿದರೆ ಅವರು ಮೂಲಭೂತವಾದಿಗಳೆಂದು ಹೇಳಲಾಗುತ್ತದೆ; ಏಕೆಂದರೆ ಈ ರಾಷ್ಟ್ರವಿರೋಧಿ ಕೃತ್ಯಗಳನ್ನು ಬೆಂಬಲಿಸಲು ಪ್ರಗತಿಪರರ, (ಅ)ವಿಚಾರವಂತರ ಸೈನ್ಯ ಸಿದ್ಧವಾಗಿರುತ್ತದೆ. ಅಸಹಿಷ್ಣುತೆಯ ಗುಮ್ಮವನ್ನು ತೋರಿಸಿ ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಭಾರತೀಯರನ್ನು ಕೀಳಾಗಿ ಕಾಣುವುದು, ಪ್ರಸಾರಮಾಧ್ಯಮಗಳನ್ನು ಬಳಸಿ ೨೪ ಗಂಟೆ ಹಿಂದೂವಿರೋಧಿ ವಿಚಾರಗಳನ್ನು ಬಿತ್ತರಿಸುವುದು, ಇದೂ ಕೂಡ ಇದೇ (ಅ)ವಿಚಾರವಂತರು ಹಿಂದೂಗಳ ಮಾರ್ಗದಲ್ಲಿ ಬಿಟ್ಟ ಮರಿಯಾಗಿದೆ.

ಅಲ್ಪಸಂಖ್ಯಾತರನ್ನು ಓಲೈಸುವವರು, ಮತಾಂತರ ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ವಿದೇಶಿ ಹಣ ದೊರಕಿಸುವ ತಥಾಕಥಿತ ಸಮಾಜಸೇವಿ ಸಂಘಟನೆಗಳು ಮತ್ತು ‘ನಾವು ತುಂಬಾ ಮುಂದುವರಿದವರು’, ಎಂದು ತೋರಿಸಲು ಬೇಕೆಂದಲೇ ಧರ್ಮವಿರೋಧಿ ಕೃತ್ಯಗಳನ್ನು ಮಾಡುವ ಪ್ರಗತಿಪರರು ಇದೇ ಸರಮಾಲೆಯ ಅಗ್ರ ಮಣಿಗಳಾಗಿದ್ದಾರೆ.

ದೊಡ್ಡ ಸವಾಲು !

ಈ ಬುದ್ಧಿಭೇದ ಮಾಡುವವರ ಮುಷ್ಠಿಯಿಂದ ಕೇವಲ ಧರ್ಮವೇ ಅಲ್ಲ, ರಾಷ್ಟ್ರವನ್ನೂ ಬಿಡಿಸುವುದು ಮತ್ತು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಿ ಅವರ ಬುದ್ಧಿಯನ್ನು ಸಾತ್ತ್ವಿಕ ಮಾಡುವುದು, ಇದೇ ಈಗ ಧರ್ಮಪ್ರೇಮಿಗಳ ಮುಂದಿರುವ ದೊಡ್ಡ ಸವಾಲಾಗಿದೆ. ಆದುದರಿಂದಲೇ ಈ ಬೌದ್ಧಿಕ ಮತ್ತು ವೈಚಾರಿಕ ಸವಾಲನ್ನು ಎದುರಿಸಲು ಮತ್ತು ಹಿಂದೂಗಳ ಬುದ್ಧಿಭೇದ ಮಾಡುವ ಷಡ್ಯಂತ್ರವನ್ನು ಬುಡಮೇಲು ಮಾಡಲು ಆ ಬುದ್ಧಿದಾತ ಗಣಪನಿಗೆ ಶರಣಾಗುವುದು ಪ್ರತಿಯೊಬ್ಬ ಧರ್ಮಪ್ರೇಮಿಯ ಕರ್ತವ್ಯವಾಗಿದೆ. ರಾಷ್ಟ್ರ ಮತ್ತು ಧರ್ಮ ಇವುಗಳ ಮೇಲೆ ಸುಳಿದಾಡುತ್ತಿರುವ ಈ ಬುದ್ಧಿವಾದದ ಸಂಕಟವನ್ನು ದೂರಗೊಳಿಸಿ ಹಿಂದೂಗಳಿಗೆ ಉತ್ತಮ ಬುದ್ಧಿ ನೀಡಬೇಕು, ಎಂದು ಆ ಬುದ್ಧಿದಾತಾ ಗಣೇಶನ ಚರಣಗಳಲ್ಲಿ ಪ್ರಾರ್ಥನೆ !

Leave a Comment