ಸನಾತನ ನಿರ್ಮಿತ ಸಾತ್ತ್ವಿಕ ಗಣೇಶ ಮೂರ್ತಿ

ಸನಾತನ ನಿರ್ಮಿಸಿದ ಶ್ರೀ ಗಣಪತಿಯ ಧೂಮ್ರ ಬಣ್ಣದ ಮೂರ್ತಿ

ವೈಶಿಷ್ಟ್ಯ ಮತ್ತು ಉಪಯೋಗ

ಸಾಧಕ ಶಿಲ್ಪಿಗಳು ಸೇವೆ ಎಂದು ತಯಾರಿಸಿದ ಮೂರ್ತಿ

ಸನಾತದ ಸಾಧಕ ಶಿಲ್ಪಿಗಳಾದ ಶ್ರೀ. ಗುರುದಾಸ ಸದಾನಂದ ಖಾಂಡೇಪಾರ್ಕರ, ಶ್ರೀ. ರಾಜು ಲಕ್ಷ್ಮಣ ಸುತಾರ ಮತ್ತು ಜ್ಞಾನೇಶ ಬಾಲಕೃಷ್ಣ ಪರಬ (ಈಗಿನ ಶ್ರೀ. ರಾಮಾನಂದ ಪರಬ) ಇವರು ಸನಾತನ ಸಂಸ್ಥೆಯ ಪ್ರೇರಣಾಸ್ಥಾನ ಪರಾತ್ಪರ ಗುರು ಡಾ. ಜಯಂತ ಆಠವಲೆ ಯವರ ಮಾರ್ಗದರ್ಶನದಲ್ಲಿ, ಅಧ್ಯಾತ್ಮಶಾಸ್ತ್ರಕ್ಕನುಸಾರ ಶ್ರೀ ಗಣೇಶ ಮೂರ್ತಿಯನ್ನು ತಯಾರಿಸಿದ್ದಾರೆ. ಇವರು ‘ಕೇವಲ ಕಲೆಯ ಪ್ರದರ್ಶನಕ್ಕಾಗಿ ಕಲೆಯ ಅಧ್ಯಯನ ಮಾಡದೆ, ಈಶ್ವರ ಪ್ರಾಪ್ತಿಗಾಗಿ ಕಲೆಯ ಅಧ್ಯಯನ ಮಾಡಿ’, ಸೇವಾಭಾವದಿಂದ ಈ ಮೂರ್ತಿಯನ್ನು ತಯಾರಿಸಿರುವುದರಿಂದ, ಈ ಮೂರ್ತಿಯು ಸಾತ್ತ್ವಿಕವಾಗಿದೆ. ಈ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ. ಇದನ್ನು ಆಚರಣೆಗೆ ತಂದು ಎಲ್ಲರಿಗು ಅತ್ಯಧಿಕ ಆಶೀರ್ವಾದಗಳು ಸಿಗುವಂತಾಗಲಿ ಎಂದು ಶ್ರೀ ಗಣಪತಿಯ ಚರಣಗಳಲ್ಲಿ ಪ್ರಾರ್ಥಿಸುತ್ತೇವೆ.

ಸಾತ್ತ್ವಿಕ ಶ್ರೀ ಗಣೇಶಮೂರ್ತಿಯನ್ನು ತಯಾರಿಸುವ ಬಗ್ಗೆ ಶ್ರೀ. ಗುರುದಾಸ ಖಾಂಡೇಪಾರ್ಕರ ಇವರಿಗೆ ಮಾರ್ಗದರ್ಶನ ಮಾಡುತ್ತಿರುವಾಗ ಪರಾತ್ಪರ ಗುರು ಡಾ. ಜಯಂತ ಆಠವಲೆ (೨೦೦೫)

ಸನಾತನದ ಸಾತ್ತ್ವಿಕ ಶ್ರೀ ಗಣೇಶಮೂರ್ತಿಯ ಅಳತೆ

ಸ್ಪಂದನಶಾಸ್ತ್ರದ ಪ್ರಕಾರ ಪ್ರತಿಯೊಂದು ಆಕೃತಿಯ ಸ್ಪಂದನಗಳು ಅದರ ಸತ್ತ್ವ, ರಜ ಮತ್ತು ತಮೋಗುಣಗಳ ಪ್ರಕಾರ ಬೇರೆ ಬೇರೆಯಾಗಿರುತ್ತವೆ. ಆಕೃತಿಯಲ್ಲಿ ಬದಲಾವಣೆಯಾದರೆ, ಅದರಲ್ಲಿರುವ ತ್ರಿಗುಣಗಳ ಪ್ರಮಾಣದಲ್ಲಿಯೂ ಬದಲಾವಣೆಯಾಗುತ್ತದೆ. ಶ್ರೀ ಗಣಪತಿಯ ಕೈಯ ಅಳತೆಯಿರಲಿ ಅಥವಾ ಕಿರೀಟದ ಮೇಲಿನ ವಿನ್ಯಾಸವಿರಲಿ, ಇವುಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸ್ಪಂದನಗಳು ಬದಲಾಗುತ್ತವೆ. ಆದುದರಿಂದಲೇ ಮೂರ್ತಿಯನ್ನು ತಯಾರಿಸುವಾಗ ಪ್ರತಿಯೊಂದು ಅವಯವದ ಸ್ಪಂದನಗಳನ್ನು ಅರಿತುಕೊಂಡ ಅವು ಮೂಲ ತತ್ತ್ವಕ್ಕೆ ಹೊಂದಿಕೊಳ್ಳುತ್ತವೆಯೇ ಎಂದು ಅಧ್ಯಯನ ಮಾಡಾಬೇಕಾಗುತ್ತದೆ, ಇದನ್ನೇ ಸನಾತನದ ಸಾಧಕ ಶಿಲ್ಪಿಗಳು ಮಾಡಿದ್ದಾರೆ.

ಅವರ ಅಧ್ಯಯನದಿಂದ ತಯಾರಾದ ಸಾತ್ವಿಕ ಶ್ರೀ ಗಣೇಶಮೂರ್ತಿಯ ಅಳತೆಗಳನ್ನು ಇಲ್ಲಿ ನೀಡುತ್ತಿದ್ದೇವೆ. ಇಲ್ಲಿ ೩೪.೫ ಸೆಂ.ಮೀ. ಎತ್ತರವಿರುವ ಮೂರ್ತಿಯ ಅಳೆತೆಯನ್ನು ನೀಡಲಾಗಿದೆ. ಭಕ್ತಾದಿಗಳು ತಮಗೆ ಬೇಕಾಗಿರುವ ಆಕಾರದ ಮೂರ್ತಿಯನ್ನು ಈ ಅಳತೆಗಳ ಆಧಾರದಲ್ಲಿ ತಯಾರಿಸಿಕೊಳ್ಳಬಹುದು.

Leave a Comment